ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಆದಂತಹ ಮನೋರಂಜನ್ ಅವರು ಮುಂದಿನ ತಿಂಗಳು ಆಗಸ್ಟ್ 20 ಮತ್ತು 21ಕ್ಕೆ ಸಂಗೀತ ದೀಪಕ್ ಎಂಬ ಯುವತಿಯನ್ನು ಮದುವೆಯಾಗಲಿದ್ದಾರೆ, ಸಂಗೀತ ಅವರು ಮೂಲತಃ ವೈದ್ಯಕೀಯ ವೃತ್ತಿಯಲ್ಲಿ ಇದ್ದಾರೆ ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಇವರ ಮೂಲ ನಿವಾಸವಾಗಿದೆ ಇದೊಂದು ಪಕ್ಕ ಅರೇಂಜ್ ಮ್ಯಾರೇಜ್. ಈಗಾಗಲೇ ಮದುವೆಗೆ ಸಕಲ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗಿದೆ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ಬಹಳ ವಿಭಿನ್ನವಾದ ಮತ್ತು ವಿಶಿಷ್ಟ ರೀತಿಯಲ್ಲಿ ಮಾಡುತ್ತಾರೆ. ಇದರ ಬಗ್ಗೆ ನಾವು ಹೆಚ್ಚಾಗಿ ಏನು ಹೇಳಬೇಕಾದ ಅಗತ್ಯವಿಲ್ಲ ಏಕೆಂದರೆ ನೀವು ರವಿಚಂದ್ರನ್ ಅವರ ಸಿನಿಮಾವನ್ನು ನೋಡೇ ಇರುತ್ತೀರ ಅವರ ಸಿನಿಮಾದಲ್ಲಿ ವಿಜುವಲ್ ಎಫೆಕ್ಟ್ ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ ಯಾವುದಾದರೂ ಒಂದು ವಸ್ತುವನ್ನು ವಿಭಿನ್ನ ರೀತಿಯಲ್ಲಿ ಬಳಕೆ ಮಾಡಿ ಅದನ್ನು ಹೊರ ತರುವುದೇ ಇವರ ಕಲೆ.
ಇದೇ ಕಾರಣಕ್ಕಾಗಿ ತಮ್ಮ ಮಗಳು ಗೀತಾಂಜಲಿ ಮದುವೆಯನ್ನು ಕೂಡ ಬಹಳ ಅದ್ದೂರಿಯಾಗಿ ಅರಮನೆ ಮೈದಾನದಲ್ಲಿ ಮಾಡಿದರು ಈ ಮದುವೆಗೆ ಯಾರೂ ಕೂಡ ಊಹೆ ಮಾಡಿರದಂತ ಅದ್ದೂರಿ ಸೆಟ್ ಗಳನ್ನು ಹಾಕಿಸಲಾಗಿತ್ತು. ಅದೇ ಸಾಲಿನಲ್ಲಿ ಇದೀಗ ಅವರ ಮಗ ಆದಂತಹ ಮನೋರಂಜನ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ವಿನ್ಯಾಸವನ್ನು ಕೂಡ ಮಾಡಿದ್ದಾರೆ. ಈ ಮದುವೆಯ ಆಮಂತ್ರ ಪತ್ರದ ಡಿಸೈನ್ ಮತ್ತು ಇದರ ಬೆಲೆ ಕೇಳಿದರೆ ನಿಜಕ್ಕೂ ಕೂಡ ಒಂದು ಕ್ಷಣ ನೀವು ದಂಗಾಗಿ ಹೋಗಬಹುದು. ಹೌದು ಯಾವಾಗಲೂ ಕೂಡ ವಿಭಿನ್ನತೆಯನ್ನು ಹುಡುಕುವಂತಹ ರವಿಚಂದ್ರನ್ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ಕೂಡ ವಿಭಿನ್ನ ಮಾದರಿಯ ಕಾನ್ಸೆಪ್ಟನ್ನು ಒಳಗೊಂಡಿದ್ದಾರೆ. ಈ ಲಗ್ನ ಪತ್ರಿಕೆಯನ್ನು ನೋಡಿದರೆ ಯಾರಿಗೂ ಕೂಡ ಇದು ವಿವಾಹ ಲಗ್ನಪತ್ರಿಕೆ ಅಂತ ಅನಿಸುವುದಿಲ್ಲ ಅಷ್ಟು ಅದ್ದೂರಿಯಾಗಿ ಇದನ್ನು ಸಿದ್ದಪಡಿಸಿದ್ದಾರೆ.
ಈ ಮದುವೆ ಪತ್ರಿಕೆ ಹಲವು ವಿಶೇಷತೆಗಳಿವೆ ಈ ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರಾರಾಜಿಸುತ್ತಿದ್ದಾರೆ ಹೃದಯದ ಸಿಂಹಾಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿದ್ದಾರೆ ಕ್ರೇಜಿಸ್ಟಾರ್ ವಿಭಿನ್ನ ಫೋಟೋವನ್ನು ಇಲ್ಲಿ ಕೆತ್ತಲಾಗಿದೆ ಸಿಂಹಾಸದನ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮಧುಮಗ-ಮಧಮಗಳ ಹೆಸರು ಮತ್ತು ಮದುವೆಯ ಬಗ್ಗೆ ಮಾಹಿತಿ ಇದೆ ಈ ಪತ್ರಿಕೆಯ ಪ್ರಕಾರ ಆಗಸ್ಟ್ 20 ಮತ್ತು 21ರಂದು ಮದುವೆ ನಡೆಯಲಿದೆ. ಪತ್ರಿಕೆಯ ಕೆಳಭಾಗದಲ್ಲಿ ರವಿಚಂದ್ರನ್ ಅವರ ಧರ್ಮಪತ್ನಿ, ಸುಮತಿ ಹಾಗೂ ರವಿಚಂದ್ರನ್ ಎಂಬ ಹೆಸರನ್ನು ಕೂಡ ಪ್ರಕಟಿಸಲಾಗಿದೆ ಇಷ್ಟು ಅದ್ದೂರಿಯಾಗಿ ಮೂಡಿ ಬಂದಿರುವ ಈ ಒಂದು ಮದುವೆಯ ಲಗ್ನಿ ಪತ್ರಿಕೆಯ ಖರ್ಚು ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟ ಜನರಿಗೆ ಇದೆ.
ಒಂದು ಲಗ್ನ ಪತ್ರಿಕೆಯ ಬೆಲೆ ಬರೋಬ್ಬರಿ 3000 ಹೌದು ನಿಮಗೆ ಆಶ್ಚರ್ಯ ಅನಿಸಿದರೂ ಕೂಡ ಇದು ಸತ್ಯ ವಿಭಿನ್ನ ಮಾದರಿಯಲ್ಲಿ ರವಿಚಂದ್ರನ್ ಅವರ ಫೋಟೋವನ್ನು ಕೆತ್ತಲಾಗಿರುವಂತಹ ಈ ಲಗ್ನಪತ್ರಿಕೆಯ ಬೆಲೆ ರೂ.3,000 ಅಂದ ಹಾಗೆ ಕೇವಲ ಒಂದೇ ಒಂದು ಪತ್ರಿಕೆಗೆ ರೂ.3,000 ಅಂದರೆ ನೀವೇ ಊಹೆ ಮಾಡಿ ನೋಡಿ ಸಾವಿರ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿದರೆ ಅದರ ಬೆಲೆ ಎಷ್ಟಿರಬಹುದು ಅಂತ ಬರೋಬ್ಬರಿ ಮೂರು ಕೋಟಿ ರೂಪಾಯಿ. ಕೇವಲ ಲಗ್ನ ಪತ್ರಿಕೆಗೆ ಇಷ್ಟು ಖರ್ಚು ಮಾಡುತ್ತಿರುವ ರವಿಚಂದ್ರನ್ ಇನ್ನೂ ಮಗನ ಮದುವೆಯನ್ನು ಇನ್ನೆಷ್ಟು ಅದ್ದೂರಿಯಾಗಿ ಮಾಡಬಹುದು.? ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಇಲ್ಲಿಯವರೆಗೂ ಕೂಡ ಯಾರೂ ಕೂಡ ಮಾಡಿರಾದಂತಹ ವಿಭಿನ್ನ ಮಾದರಿಯ ಮದುವೆಯನ್ನು ರವಿಚಂದ್ರನ್ ಮಾಡಲಿದ್ದಾರೆ ಎಂಬುದು ಈ ಲಗ್ನಪತ್ರಿಕೆಯ ಮೂಲಕವೇ ತಿಳಿದು ಬರುತ್ತಿದೆ. ನಿಮ್ಮ ಪ್ರಕಾರ ಈ ಲಗ್ನ ಪತ್ರಿಕೆಗೆ ಇಷ್ಟ ಹಣ ಖರ್ಚು ಮಾಡುವ ಅವಶ್ಯಕತೆ ಇತ್ತ ಅಥವಾ ಇಲ್ಲವೇ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.