Home Entertainment ಜ್ಯೋತಿರ್ಭಿಮಾ ಅಮಾವಾಸ್ಯೆಯ ಪ್ರಯುಕ್ತ ನಟ ಪ್ರೇಮ್ ಹೆಂಡತಿ ಪತಿಗೆ ಪಾದಪೂಜೆ ಮಾಡಿದ ಈ ಸುಂದರ ಕ್ಷಣಗಳನ್ನೊಮ್ಮೆ ನೋಡಿ.

ಜ್ಯೋತಿರ್ಭಿಮಾ ಅಮಾವಾಸ್ಯೆಯ ಪ್ರಯುಕ್ತ ನಟ ಪ್ರೇಮ್ ಹೆಂಡತಿ ಪತಿಗೆ ಪಾದಪೂಜೆ ಮಾಡಿದ ಈ ಸುಂದರ ಕ್ಷಣಗಳನ್ನೊಮ್ಮೆ ನೋಡಿ.

0
ಜ್ಯೋತಿರ್ಭಿಮಾ ಅಮಾವಾಸ್ಯೆಯ ಪ್ರಯುಕ್ತ ನಟ ಪ್ರೇಮ್ ಹೆಂಡತಿ ಪತಿಗೆ ಪಾದಪೂಜೆ ಮಾಡಿದ ಈ ಸುಂದರ ಕ್ಷಣಗಳನ್ನೊಮ್ಮೆ ನೋಡಿ.

ಆಷಾಢ ಮಾಸಾ ಮುಕ್ತಾಯವಾಗಿ ಇಂದು ಜ್ಯೋತಿರ್ಭೀಮಾ ಅಮಾವಾಸ್ಯೆ ಪ್ರಾರಂಭವಾಗಿದೆ ಈ ಅಮಾವಾಸ್ಯೆಗೆ ಬಹಳ ವಿಶೇಷ ಮತ್ತು ಪ್ರಾಧ್ಯನತೆಯನ್ನು ನಮ್ಮ ಹಿಂದೂ ಧರ್ಮದಲ್ಲಿ ನೀಡಲಾಗುತ್ತದೆ. ಈ ಅಮಾವಾಸ್ಯೆಯ ದಿನ ಯಾರೂ ತಮ್ಮ ಪತಿಗೆ ಪಾದ ಪೂಜೆಯನ್ನು ಮಾಡುತ್ತಾರೋ ಅಂತವರ ಆಯಸ್ಸು ಆರೋಗ್ಯ ದೀರ್ಘಕಾಲದವರೆಗೂ ಕೂಡ ವೃದ್ಧಿಯಾಗುತ್ತದೆ ಎಂಬ ಪ್ರತಿತಿ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ಕಾರಣಕ್ಕಾಗಿ ನಮ್ಮಲ್ಲಿ ಬಹಳಷ್ಟು ಮಹಿಳೆಯರು ಮದುವೆಯಾದ ನಂತರ ತಮ್ಮ ಪತಿಯರಿಗೆ ಪಾದ ಪೂಜೆಯನ್ನು ಮಾಡುತ್ತಾರೆ. ಇದು ಒಂದು ಕಡೆಯಾದರೆ ಇನ್ನು ಮದುವೆ ಆಗದೆ ಇರುವಂತಹ ಅವಿವಾಹಿತ ಯುವತಿಯರು ಶಿವ ಮತ್ತು ಪಾರ್ವತಿಯ ಪೂಜೆಯನ್ನು ಈ ದಿನದಂದು ಮಾಡಿದರೆ ಅವರ ಬಾಳ ಸಂಗಾತಿಯಾಗಿ ಬರುವಂತಹ ವ್ಯಕ್ತಿ ಒಳೆಯ ವ್ಯಕ್ತಿಯಾಗಿರುತ್ತಾರೆ ಎಂಬ ಪ್ರತಿತಿ ಇದೆ. ಈ ಕಾರಣಕ್ಕಾಗಿಯೇ ಜ್ಯೋತಿರ್ಭಿಮ ಅಮಾವಾಸ್ಯೆ ಬಂದರೆ ಸಾಕಷ್ಟು ಮಹಿಳೆಯರು ಈ ಪೂಜೆಯ ವ್ರತವನ್ನು ಪಾಲಿಸುತ್ತಾರೆ.

ಅದೇ ರೀತಿ ಇದೀಗ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಅವರ ಪತ್ನಿಯು ಕೂಡ ತಮ್ಮ ಪತಿಗೆ ಪಾದ ಪೂಜೆಯನ್ನು ಮಾಡಿದ್ದಾರೆ ಸದ್ಯಕ್ಕೆ ಪ್ರೇಮ್ ಅವರ ಪತ್ನಿ ಪಾದ ಪೂಜೆ ಮಾಡಿದಂತಹ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ಮತ್ತು ವಿಡಿಯೋ ಇಷ್ಟೊಂದು ವೈರಲ್ ಆಗುವುದಕ್ಕೆ ಇದಕ್ಕೆ ಕಾರಣವೂ ಕೂಡ ಇದೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಪಾಲಿಸುವುದು ತೀರಾ ಕಡಿಮೆ ಆದರೆ ಪ್ರೇಮ್ ಹಾಗೂ ಅವರ ಧರ್ಮಪತ್ನಿ ನಮ್ಮ ಹಿಂದೂ ಧರ್ಮದ ಸಂಪ್ರದಾಯವನ್ನು ಪಾಲಿಸುತ್ತಿದ್ದು. ಈ ಜ್ಯೋತಿರ್ ಭೀಮಾ ಅಮಾವಾಸ್ಯೆಯ ದಿನ ತಮ್ಮ ಪ್ರತಿಕೆ ಪಾದ ಪೂಜೆಯನ್ನು ಮಾಡಿ ಅವರ ಆಯಸ್ಸು ಆರೋಗ್ಯ ಕೀರ್ತಿ ಇನ್ನಷ್ಟು ಹೆಚ್ಚಾಗಲಿ ಎಂದು ದೇವರ ಬಳಿ ಪ್ರಾರ್ಥಿಸಿಕೊಂಡಿದ್ದಾರೆ ಇದನ್ನು ನೋಡುವುದಕ್ಕೆ ನಿಜಕ್ಕೂ ಕೂಡ ಎರಡು ಕಣ್ಣುಗಳು ಸಾಲುವುದಿಲ್ಲ.

ವೈಜ್ಞಾನಿಕತೆ ತಾಂತ್ರಿಕತೆ ಬೆಳೆದಂತೆ ನಮ್ಮ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ಎಲ್ಲವನ್ನು ಮರೆಯುತ್ತಿರುವಂತಹ ಇಂತಹ ಕಾಲದಲ್ಲೂ ಕೂಡ ನಟನಾಗಿದ್ದರೂ ಕೂಡ ನಮ್ಮ ಆಚರಣೆಗೆ ಪದ್ಧತಿಗೆ ಪ್ರೇಮ ಅವರು ಬೆಲೆ ಕೊಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ. ಅಷ್ಟೇ ಅಲ್ಲದೆ ಅವರ ಧರ್ಮಪತ್ನಿ ಮಾಡುತ್ತಿರುವಂತಹ ಈ ಪೂಜೆಯನ್ನು ನೋಡಿದರೆ ದೇವರ ಮುಂದೆ ಎಲ್ಲರೂ ಕೂಡ ತಲೆಬಾಗಲೇ ಬೇಕು ದೇವರಿಗಿಂತ ದೊಡ್ಡದು ದೇವರಿಗಿಂತ ದೊಡ್ಡವರು ಯಾರು ಇಲ್ಲ ಎಂಬುದು ತಿಳಿದು ಬರುತ್ತದೆ. ಈ ಜ್ಯೋತಿರ್ಭಿಮಾ ಅಮಾವಾಸ್ಯೆಯ ದಿನ ನೀವು ಯಾವುದೇ ಕೋರಿಕೆ ಕೋರಿಕೊಂಡರು ಕೂಡ ಅದು ನೆರವೇರುತ್ತದೆ ಎಂಬ ಪ್ರತಿತಿ ಇದೆ ಈ ಕಾರಣಕ್ಕಾಗಿ ಬಹಳಷ್ಟು ಹೆಣ್ಣು ಮಕ್ಕಳು ಈ ಒಂದು ಜ್ಯೋತಿರ್ಭೀಮಾ ಅಮಾವಾಸ್ಯೆಯನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಸದ್ಯಕ್ಕೆ ನಟ ಪ್ರೇಮ್ ಅವರು ಹಲವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ ಅಷ್ಟೇ ಅಲ್ಲದೆ ಜೋಡಿ ನಂಬರ್ ಒನ್ ಎಂಬ ರಿಯಾಲಿಟಿ ಶೋ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಕಿರುತರೆ ಬೆಳ್ಳಿತೆರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಇರುವಂತಹ ಪ್ರೇಮ ಅವರು ಒಬ್ಬ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು. ತಮ್ಮ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಮಕ್ಕಳು ತಮ್ಮ ಪತಿಯೊಡನೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಅದಕ್ಕೆ ಈ ಅಮಾವಸ್ಯೆಯಲ್ಲಿ ಪೂಜೆಯಲ್ಲಿ ನಿರತರಾಗಿರುವಂತಹ ಈ ಸುಂದರ ಕ್ಷಣಗಳನ್ನು ನೋಡಿದರೆ ತಿಳಿಯುತ್ತದೆ. ಈಗಿನ ಯುವತಿಯರು ಮಾರ್ಡನ್ ಲೋಕ ಅಂತ ಪೂಜೆ ಪುನಸ್ಕಾರವನ್ನು ಮರೆಯುತ್ತಿರುವಂತಹ ಸಮಯದಲ್ಲಿ ನಟನ ಹೆಂಡತಿಯಾಗಿದ್ದರು ಕೂಡ ತಮ್ಮ ಆದ್ಯತೆ ಮತ್ತು ಕರ್ತವ್ಯಗಳನ್ನು ಪರಿಪಾಲಿಸುತ್ತಿರುವ ನಟ ಪ್ರೇಮ್ ಅವರ ಹೆಂಡತಿಗೆ ನಮ್ಮದೊಂದು ಸಲಾಂ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.

LEAVE A REPLY

Please enter your comment!
Please enter your name here