Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

Posted on August 5, 2022August 5, 2022 By Kannada Trend News No Comments on ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

ಕ್ರಾಂತಿಯ ಪ್ರಮೋಷನ್ ಅನ್ನು ಕನ್ನಡದ ಯಾವುದೇ ನ್ಯೂಸ್ ಚಾನೆಲ್ ಗಳು ಪ್ರಮೋಟ್ ಮಾಡದೇ ಇದ್ದಾಗ ಕ್ರಾಂತಿಯ ಪ್ರಮೋಷನ್ ಭಾರವನ್ನು ಕ್ರಾಂತಿಕಾರಿಯಾಗಿಯೇ ತೆಗೆದುಕೊಂಡು ಡಿ ಬಾಸ್ ಅಭಿಮಾನಿಗಳು ಶಿಖರದ ಉತ್ತುಂಗಕ್ಕೆ ಕೊಂಡೋಯ್ದು ಇಡೀ ಕರ್ನಾಟಕಕ್ಕೆ ಕಾಣುವ ಹಾಗೆ ಪ್ರಚಾರ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ಕ್ರಾಂತಿಯ ಶೂಟಿಂಗ್ ಕೂಡ ಮುಗಿದಿದ್ದು ಇತ್ತೀಚೆಗೆ ಡಿ ಬಾಸ್ ಅವರು ಕ್ರಾಂತಿಯ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಕ್ರಾಂತಿ ಚಿತ್ರವನ್ನು ವಿ ಹರಿಕೃಷ್ಣ ಅವರು ನಿರ್ದೇಶಿಸುತ್ತಿದ್ದು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಬಾಬು ಅವರು ನಿರ್ಮಾಣದ ಭಾರವನ್ನು ಹೊತ್ತಿದ್ದು ನಾಯಕಿಯಾಗಿ ರಚಿತಾ ರಾಮ್ ಹಾಗೂ ಪ್ರಮುಖ ಪಾತ್ರದಲ್ಲಿ ವಿ ರವಿಚಂದ್ರನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಅವರ 55 ನೇ ಚಿತ್ರವಾದ ಕ್ರಾಂತಿ ಚಿತ್ರತಂಡ ತನ್ನ ಅಫೀಷಿಯಲ್ ಪೋಸ್ಟರ್ ಒಂದನ್ನು ಇಂದು ಬಿಡುಗಡೆಗೊಳಿಸಿದೆ.

ವರಮಹಾಲಕ್ಷ್ಮಿ ಹಬ್ಬದ ಈ ದಿನದಂದು ಕ್ರಾಂತಿ ಚಿತ್ರದ ಅಫೀಷಿಯಲ್ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು ಅಭಿಮಾನಿಗಳಿಗೆ ಸಂತಸವನ್ನು ನೀಡಿದೆ. ಅಲ್ಲದೇ ಈ ಪೋಸ್ಟರ್ ಅಲ್ಲಿ ಒಂದು ಅದ್ಭುತವಾದ ಸಾಲನ್ನು ಉಲ್ಲೇಖಿಸಿದ್ದು ಅಭಿಮಾನಿಗಳಿಗೆ ಸಂತಸವನ್ನು ಉಂಟು ಮಾಡಿದೆ. ಲರ್ನ್ ಟು ಫೈಟ್ ಅಲೋನ್ ಎನ್ನುವ ಉಲ್ಲೇಖದೊಂದಿಗೆ ದರ್ಶನ್ ಅವರ ಖಡಕ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗುವುದರ ಜೊತೆಗೆ ಇನ್ನೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡು ಅಭಿಮಾನಿಗಳಿಗೆ ಡಬಲ್ ಧಮಾಕವನ್ನು ನೀಡಿದ್ದಾರೆ. ಹೌದು ದರ್ಶನ್ ಅವರು ಕ್ರಾಂತಿ ಚಿತ್ರದ ಡಬ್ಬಿಂಗ್ ಮುಗಿಸಿದ ಬೆನ್ನಲ್ಲೇ ಇನ್ನೊಂದು ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುತ್ತಿದ್ದು ಈ ಚಿತ್ರದ ನಿರ್ದೇಶನವನ್ನು ತರುಣ್ ಸುಧೀರ್ ಮಾಡುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. ಸಾಮಾನ್ಯವಾಗಿ ದರ್ಶನ್ ಅವರು ಒಂದು ಸಿನಿಮಾ ಬಿಡುಗಡೆ ಆದ ನಂತರವಷ್ಟೇ ಇನ್ನೊಂದು ಸಿನಿಮಾಗೆ ಮುಂದಡಿ ಇಡುತ್ತಿದ್ದರು. ಆದರೆ ಕ್ರಾಂತಿ ಬಿಡುಗಡೆಗೂ ಮುನ್ನವೇ ತಮ್ಮ 56 ನೇ ಚಿತ್ರಕ್ಕೆ ಕ್ಷಣ ಗಣನೆ ಆರಂಭಿಸಿರುವುದು ಕುತೂಹಲಕರವಾಗಿದೆ.

ಸದ್ಯಕ್ಕೆ ಡಿ ಬಾಸ್ ಅವರ 56 ನೇ ಚಿತ್ರದ ಟೈಟಲ್ “ಕಾಟೇರ” ಎನ್ನಲಾಗುತ್ತಿದ್ದು ಚಿತ್ರತಂಡವಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ. ಕಾಟೇರ ಚಿತ್ರದ ಪೋಸ್ಟರ್ ಅನ್ನು ಕೂಡ ಇಂದು ಬಿಡುಗಡೆ ಮಾಡಿದ್ದು ಹಿಂದಿರುವವರಿಗೆ ದಾರಿ ಮುಂದಿರುವವರದ್ದು ಜವಾಬ್ದಾರಿ ಎನ್ನುವ ಉಲ್ಲೇಖದೊಂದಿಗೆ ಕುರಿಗಳ ಹಿಂಡನ್ನು ಕಾಯುತ್ತಿರುವ ನಾಯಿಯ ಪೋಸ್ಟರ್ ಒಂದನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಡಿ ಬಾಸ್ ಪರಭಾಷಾ ನಟಿಯರನ್ನು ತಮ್ಮ ಚಿತ್ರದಲ್ಲಿ ನಾಯಕಿಯಾಗಿ ಆರಿಸಿಕೊಳ್ಳುವುದು ಬಹಳ ಕಡಿಮೆ ಅವರ ಉದ್ದೇಶವೇನೆಂದರೆ ನಮ್ಮ ಕನ್ನಡದ ಹೆಣ್ಣು ಮಕ್ಕಳನ್ನು ಬೆಳೆಸೋಣ ಎನ್ನುವ ಕಾರಣದಿಂದ ತಮ್ಮ ಪ್ರತಿ ಚಿತ್ರದಲ್ಲೂ ಕನ್ನಡದ ನಟಿಯರನ್ನೇ ಆರಿಸಿಕೊಳ್ಳುತ್ತಾರೆ ಅದರಲ್ಲೂ ಹೆಚ್ಚಾಗಿ ಹೊಸ ಪ್ರತಿಭೆಗಳನ್ನು ಬೆಳೆಸುತ್ತಾರೆ. ಇದೇ ರೀತಿ ತಮ್ಮ 56 ನೇ ಚಿತ್ರ ಕಾಟೇರದಲ್ಲಿ ಹೊಸ ಕನ್ನಡದ ನಾಯಕಿಯನ್ನು ಆರಿಸಿಕೊಂಡಿದ್ದಾರೆ.

ಹೌದು ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಅನನ್ಯ ಅವರನ್ನು ಕಾಟೇರದಲ್ಲಿ ನಾಯಕಿ ನಟಿಯಾಗಿ ಆರಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಉತ್ತಮ ನಟಿಯಾಗಿ ಕನ್ನಡಿಗರ ಮನ ಗೆದ್ದಿದ್ದ ಮಾಲಾಶ್ರೀ ಅವರು ಇಂದು ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡು ಕುಟುಂಬವನ್ನು ನಿಭಾಯಿಸಲು ತೊಂದರೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಪುತ್ರಿಯಾದ ಅನನ್ಯ ಅವರನ್ನು ಪ್ರಪ್ರಥಮವಾಗಿ ರಾಧನಾ ರಾಮ್ ಎಂಬ ಹೊಸ ನಾಮಕರಣದೊಂದಿಗೆ ಕಾಟೇರ ಚಿತ್ರದ ಮೂಲಕ ಪರಿಚಯಿಸಲು ಸಜ್ಜಾಗಿದ್ದು ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.

Entertainment Tags:Ananya, Challenging star darshan, D Boss, D56, Darshan, Malashree ramu
WhatsApp Group Join Now
Telegram Group Join Now

Post navigation

Previous Post: ರಶ್ಮಿಕಾ ಮಂದಣ್ಣ ಅಭಿನಯದ “ಸೀತಾರಾಮಂ” ಸಿನಿಮಾ ಬ್ಯಾನ್ ಆಗಿದೆ, ಈ ವಿಚಾರ ಕೇಳಿ ಕಂಗಾಲದ ರಶ್ಮಿಕಾ
Next Post: ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore