ಬಡವರ ಮಕ್ಳು ಬೆಳಿಬೇಕು ಕಣ್ರಯ್ಯ
ನಟ ಡಾಲಿ ಧನಂಜಯ್ ಅವರು ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ಕಳೆದ ಒಂದು ದಶಕಗಳು ಕೂಡ ಡಾಲಿ ಧನಂಜಯ್ ಅವರು ಕನ್ನಡದಲ್ಲಿ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿ, ಖಳ ನಾಯಕನಾಗಿ ಮತ್ತು ಪೋಷಕ ಪಾತ್ರದಲ್ಲಿ ಹಾಗೂ ಸಹ ಕಲಾವಿದನ ಪಾತ್ರದಲ್ಲಿ ಹೀಗೆ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ.
ಕನ್ನಡ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ತಮ್ಮ ಕಮಲ್ ಅನ್ನು ಸೃಷ್ಟಿ ಮಾಡಿದ್ದಾರೆ ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಡ್ ಬುಶ್ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಕಂಟ್ರವರ್ಸಿಗೂ ಕೂಡ ಗುರಿಯಾಗಿದ್ದರು. ಈ ಸಮಯದಲ್ಲಿ ನನ್ನನ್ನು ತುಳಿಯುವುದಕ್ಕಾಗಿ ಕೆಲವು ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ “ಬಡವರ ಮಕ್ಕಳು ಬೆಳೀಬೇಕು ಕಂಡ್ರಯ್ಯ” ಎಂಬ ಡೈಲಾಗ್ ಹೊಡೆಯುವುದರ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದರು.
ಇನ್ನು ಡಾಲಿ ಧನಂಜಯ್ ಅವರು ಚಿತ್ರರಂಗಕ್ಕೆ ಬಂದಿರುವುದು ತಮ್ಮ ಸ್ವಂತ ಪರಿಶ್ರಮದಿಂದ ಯಾವುದೇ ರೀತಿಯಾದಂತಹ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಪ್ರತಿಭೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ. ಹೊಸಬರಿಗೆ ಹಾಗೂ ಪ್ರತಿಭೆ ಇರುವಂತಹ ವ್ಯಕ್ತಿಯನ್ನು ಹುಡುಕಿ ಅವರಿಗೆ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಅದರಲ್ಲಿಯೂ ಕೂಡ ಚಿತ್ರರಂಗದ ಬ್ಯಾಕ್ ಗ್ರೌಂಡ್ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಹೆಚ್ಚು ಸಹಾಯ ಮಾಡುತ್ತಾರೆ.
ಈ ಒಳ್ಳೆಯ ಗುಣದಿಂದಲೇ ಡಾಲಿ ಧನಂಜಯ್ ಅವರು ಹೆಚ್ಚು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು. ನುಡಿದಂತೆ ನಡೆಯುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಕಳೆದ ಒಂದು ವಾರದಿಂದ ದಾಳಿ ಧನಂಜ ಯ್ ಅವರ ಬಗ್ಗೆ ಇದೀಗ ಅಪಸ್ವರ ಒಂದು ಎತ್ತಿದೆ. ಹೌದು ಅದೇನೆಂದರೆ ಧನಂಜಯ್ ಅವರು ಹೇಳುವ ಮಾತಿಗೂ ಮಾಡುವಂತಹ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುತ್ತಿದ್ದರೆ.
ಏಕೆಂದರೆ ಡಾಲಿ ಪಿಚ್ಚರ್ಸ್ ಅಡಿಯಲ್ಲಿ ಟಗರು ಪಲ್ಯ ಎಂಬ ಸಿನಿಮಾ ಒಂದು ನಿರ್ಮಾಣವಾಗುತ್ತಿದೆ ಈ ಸಿನಿಮಾಗೆ ಧನಂಜಯ ಅವರೇ ಸ್ವತಃ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ. ಈ ಸಿನಿಮಾದ ನಾಯಕ ನಟಿಯಾಗಿ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆಯಷ್ಟೇ ಪ್ರೆಸ್ ಮೀಟ್ ಒಂದನ್ನು ನಡೆಸಿ ನಮ್ಮ ಸಿನಿಮಾಗೆ ನಾಯಕ ನಟಿಯಾಗಿ ಅಮೃತ ಪ್ರೇಮ್ ಅವರು ಆಯ್ಕೆಯಾಗಿದ್ದಾರೆ ಎಂಬ ವಿಚಾರವನ್ನು ಹೇಳಿಕೊಳ್ಳುತ್ತಾರೆ.
ಈ ವಿಚಾರ ಒಂದು ಕಡೆ ಖುಷಿ ತಂದಿದ್ದರೆ ಮತ್ತೊಂದು ಕಡೆ ವಿವಾದವನ್ನು ಸೃಷ್ಟಿಸಿದೆ ಹೌದು ಅದೇನೆಂದರೆ ಧನಂಜಯ್ ಅವರು ಬಡವರ ಮಕ್ಕಳು ಬೆಳಿಬೇಕು ಕಂಡ್ರಯ್ಯ ಎಂದು ಹೇಳಿದ್ದರು. ಈ ಮಾತಿನ ಅರ್ಥ ಹೊಸಬರಿಗೆ ಹಾಗೂ ಬಡವರಿಗೆ ಹಾಗೂ ಪ್ರತಿಭೆ ಇರುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಚಾನ್ಸ್ ಕೊಡಬೇಕಿತ್ತು. ಆದರೆ ಲವ್ಲಿ ಸ್ಟಾರ್ ಪ್ರೇಮ್ ಈಗಾಗಲೇ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಒಂದಷ್ಟು ಆಸ್ತಿಯನ್ನು ಸಂಪಾದಿಸಿದ್ದಾರೆ.
ಅಷ್ಟೇ ಅಲ್ಲದೆ ಸ್ಟಾರ್ ಪುತ್ರಿ ಕೂಡ ಹೌದು ಇಷ್ಟೆಲ್ಲಾ ಬ್ಯಾಗ್ರೌಂಡ್ ಇದ್ದರೂ ಅವರಿಗೆ ಧನಂಜಯ್ ಅವರು ತಮ್ಮ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವುದಕ್ಕೆ ಚಾನ್ಸ್ ಕೊಟ್ಟಿರುವುದು ನಿಜಕ್ಕೂ ಕೂಡ ತಪ್ಪು ಎಂಬುದು ಕೆಲವೊಂದು ಅಭಿಪ್ರಾಯವಾಗಿದೆ. ಈ ಕಾರಣಕ್ಕಾಗಿ ಡಾಲಿ ಧನಂಜಯ್ ಅವರನ್ನು ಇದೀಗ ಎಲ್ಲರು ಧುಶಿಸುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುತ್ತಿದ್ದರೆ. ಆದರೆ ಧನಂಜಯ್ ಅವರು ಮಾತ್ರ ಈಗಲೂ ತಾವು ಹೇಳಿದಂತಹ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ವೈರಲ್ ಆಗುತ್ತಿದ್ದ ಹಾಗೆ ಧನಂಜಯ್ ಅವರು ಇದೀಗ ಪ್ರೇಮ್ ಅವರ ಮಗಳನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ಬಿಟ್ಟರೆ ಇನ್ನು ಎಲ್ಲರೂ ಕೂಡ ಹೊಸಬರೇ ಹಾಗೂ ಬಡವರ ಹಾಗಾಗಿ ಅವರಿಗೆ ಬದುಕು ಕಟ್ಟಿಕೊಡುವುದಕ್ಕಾಗಿ ಇಂಥದೊಂದು ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.