ನನ್ನ ಮೊದಲ ಲವ್ ಬ್ರೇಕ್ ಅಪ್ ಗೆ ಗಣೇಶ್ ಕಾರಣ ಎಂದ ಡಾರ್ಲಿಂಗ್ ಕೃಷ್ಣ.

 

ಕನ್ನಡಿಗರಿಂದ ಡಾರ್ಲಿಂಗ್ ಕೃಷ್ಣ ಎಂದೇ ಕರೆಸಿಕೊಂಡಿರುವ ಲವರ್ ಬಾಯ್ ಇಮೇಜ್ ಗೆ ಹೇಳಿ ಮಾಡಿಸಿದ ರೀತಿ ಇರುವ ಡಾರ್ಲಿಂಗ್ ಕೃಷ್ಣ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದಿಲ್ಲದೆ ಕಾರುಬಾರು ಶುರು ಮಾಡಿದ್ದಾರೆ. ನಿರ್ಮಾಪಕನಾಗಿ ಮತ್ತು ನಾಯಕ ನಟನಾಗಿ ಕೂಡ ಹಿಟ್ ಆಗುತ್ತಿರುವ ಡಾರ್ಲಿಂಗ್ ಕೃಷ್ಣ ಅವರ ಸಿನಿಮಾಗಳು ಕನ್ನಡಿಗಕ್ಕೆ ರುಚಿಸುತ್ತಿವೆ. ಅದರಲ್ಲೂ ತಮ್ಮ ರಿಯಲ್ ಲೈಫ್ ಪಾರ್ಟ್ನರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುವ ಸಿನಿಮಾಗಳಂತೂ ತಪ್ಪದೇ ಹಿಟ್ ಆಗುತ್ತದೆ. ಲವ್ ಮಾಕ್ಟೇಲ್ ಸಿನಿಮಾ ಇಂದಲೂ ಕೂಡ ಇದು ಮುಂದುವರೆದಿದ್ದು ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ವರ್ಕ್ ಹಾಕುವುದರಿಂದ ಜನಕ್ಕೆ ಇವರಿಬ್ಬರು ಪಕ್ಕದ ಮನೆಯ ಜೋಡಿಗಳಂತೆ ಭಾಸವಾಗುತ್ತಾರೆ.

ಇದೀಗ ಇವರಿಬ್ಬರ ಕಾಂಬಿನೇಷನ್ ಮತ್ತೊಂದು ಚಿತ್ರ ಲವ್ ಬರ್ಡ್ಸ್ ರಿಲೀಸ್ ಹಂತಕ್ಕೆ ಬಂದಾಗ ಬಿಡುಗಡೆ ಮಾಡಿದ್ದ ಟ್ರೈಲರ್ ಎಲ್ಲರನ್ನು ಆಶ್ಚರ್ಯಗೊಳಿಸಿತು. ಕಡಿಮೆ ಸಮಯದಲ್ಲಿ ಸಿನಿಮಾ ತಯಾರಾಗಿ ಬಹಳ ಬೇಗ ಜನರಿಗೆ ನೋಡಲು ಸಿಕ್ಕಿದ್ದು ಅಲ್ಲದೆ ಯಾರು ಊಹಿಸದ ರೀತಿ ಮತ್ತೊಮ್ಮೆ ಇವರಿಬ್ಬರೇ ತೆರೆ ಮೇಲೆ ಜೋಡಿಗಳಾಗಿ ಕಾಣಿಸಿಕೊಂಡಿದ್ದು ಕನ್ನಡಿಗರಿಗೆ ಖುಷಿಗೆ ಕಾರಣವಾಯಿತು. ಸಿನಿಮಾ ರಿಲೀಸ್ ಗಾಗಿ ನಿರ್ಮಾಪಕರಾದ ಮತ್ತು ನಾಯಕ ನಾಯಕಿಯಾದ ಡಾರ್ಲಿಂಗ್ ಕೃಷ್ಣ ದಂಪತಿಗಳು ಪ್ರಚಾರ ಕಾರ್ಯಕ್ರಮ ಏರ್ಪಡಿಸಿದ್ದರು. ಸಿನಿಮಾಗೆ ಬೆಂಬಲಿಡುವ ಸಲುವಾಗಿ ಗಣೇಶ್ ಅವರು ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ತೋರಿದ ಗಣೇಶ್ ಮತ್ತು ಅಶ್ವಿನಿ ಅವರನ್ನು ಕುರಿತು ಮಾತನಾಡುವಾಗ ಡಾರ್ಲಿಂಗ್ ಕೃಷ್ಣ ಅವರು ಗಣೇಶ್ ರಿಂದ ತಮ್ಮ ಜೀವನದಲ್ಲಾದ ಒಂದು ಘಟನೆ ಬಗ್ಗೆ ಹೇಳಿಕೊಂಡರು

ನಾನು ಎಲ್ಲರನ್ನೂ ನೋಡುವುದಕ್ಕಿಂತ ಗಣೇಶ್ ಅವರನ್ನು ಸ್ವಲ್ಪ ಡಿಫ್ರೆಂಟ್ ಆಗಿ ನೋಡುತ್ತೇನೆ. ಆದರೆ ಅವರಿಗೆ ಅದು ಗೊತ್ತಿಲ್ಲ ಅನ್ಸುತ್ತೆ ಅದಕ್ಕೆ ಕಾರಣ ಇದೆ. ಯಾಕೆಂದರೆ ಗಣೇಶ್ ಅವರಿಂದ ನನ್ನ ಲವ್ ಬ್ರೇಕ್ ಅಪ್ ನೆನಪು ಜಾಸ್ತಿ ಆಗುತ್ತದೆ ಎಂದಾಗ ಗಣೇಶ್ ಅವರು ಮಧ್ಯೆ ಮಾತನಾಡಿ ಕ್ಲಾರಿಟಿ ಕೊಡಪ್ಪ ಜನ ತಪ್ಪು ತಿಳಿದುಕೊಳ್ಳುತ್ತಾರೆ ಎಂದಿದ್ದಾರೆ. ಆಗ ಡಾರ್ಲಿಂಗ್ ಕೃಷ್ಣ ಅವರು ನನ್ನ ಮೊದಲ ಲವ್ ಬ್ರೇಕ್ ಅಪ್ ಆದ ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಸಿನಿಮಾ ರಿಲೀಸ್ ಆಯ್ತು. ನಾನು ಸಿನಿಮಾ ನೋಡಿದಾಗ ಒಂದು ಕಡೆ ಪೂಜಾ ಗಾಂಧಿ ಅವರು ಗಣೇಶ್ ಅವರನ್ನು ಬಿಟ್ಟು ಹೋಗುತ್ತಿದ್ದರು, ಮತ್ತೊಂದೆಡೆ ಅದೇ ಸಮಯದಲ್ಲಿ ನನ್ನ ಹುಡುಗಿ ನನ್ನನ್ನು ಬಿಟ್ಟು ಹೋಗಿದ್ದಳು. ಇದೆರಡು ಮಿಕ್ಸ್ ಆಗಿ ಆ ನೆನಪುಗಳು ಅಚ್ಚಳಿಯದೆ ಗಣೇಶ್ ಅವರ ಮುಂಗಾರು ಮಳೆ ಸಿನಿಮಾ ಜೊತೆ ಸೇರಿ ನನ್ನ ಮನಸ್ಸಿನಲ್ಲಿ ಕೂತಿಬಿಟ್ಟಿದೆ. ಹೀಗಾಗಿ ಅವರನ್ನು ನೋಡಿದಾಗಲೆಲ್ಲ ಅದೆಲ್ಲ ನೆನಪಾಗುತ್ತದೆ ಎಂದು ಹೇಳಿ ಸ್ಪಷ್ಟನೆ ಕೊಟ್ಟಿದ್ದಾರೆ.

ಪುನೀತ್ ರಾಜಕುಮಾರ್ ಅವರ ಬಗ್ಗೆ ಕೂಡ ಮಾತನಾಡಿ ನಾನು ಸಿನಿಮಾ ಜರ್ನಿ ಶುರು ಮಾಡಿದ್ದೇ ಜಾಕಿ ಚಿತ್ರದಿಂದ. ಅಲ್ಲಿಂದ ನಾನು ಅವರ ಬದುಕಿನ ಭಾಗವಾದೆ ಎನ್ನುವುದು ಖುಷಿ. ಅವರ ಮಾನ್ಯರಿಸಂ, ಬಾಡಿ ಲ್ಯಾಂಗ್ವೇಜ್ ಎಲ್ಲರನ್ನು ಅಬ್ಸರ್ವ್ ಮಾಡುತ್ತಿದ್ದೆ ಧಾರಾವಾಹಿ ದಿನಗಳಲ್ಲೂ ನಾನು ಅವರನ್ನೇ ಅನ್ವಯಿಸುವುದಕ್ಕೆ ಪ್ರಯತ್ನಪಡುತ್ತಿದ್ದೆ, ಅವರು ಮಾಡಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಿಕೊಂಡು ಮಾಡುತ್ತಿದ್ದೆ. ಇಂದು ಅವರಿಲ್ಲ ಎನ್ನುವುದು ತುಂಬಾ ನೋವಾಗುತ್ತಿದೆ, ಆದರೂ 16 ವರ್ಷಗಳ ಕಾಲ ಅವರ ಜೊತೆ ನನಗೆ ಸ್ನೇಹವಿತ್ತು, ಸಮಯ ಕಳೆಯುವ ಅವಕಾಶ ಸಿಕ್ಕಿತ್ತು ಎನ್ನುವುದೇ ಸಮಾಧಾನ ಇಂದು ಆ ಕಾರ್ಯಕ್ರಮದಲ್ಲಿ ಮಾತನಾಡಿದರು.

Leave a Comment