ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಂತೆ ಚಾಲೆಂಜ್ ಮಾಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಠಕ್ಕೆ ಬಿದ್ದು ಅಂದುಕೊಂಡಿದ್ದನ್ನು ಸಾಧಿಸಿ ಇಂದು ಬಾಕ್ಸ್ ಆಫೀಸ್ ಸುಲ್ತಾನ ಆಗಿರುವವರು. ಜೊತೆಗೆ ಸೆಲೆಬ್ರಿಟಿಗಳ ಪ್ರೀತಿಯ ದಚ್ಚು, ಡಿ ಬಾಸ್ ಆಗಿ ಮೆರೆಯುತ್ತಾ ಇರುವ ಇವರು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೇರೆ ಯಾರಿಗೂ ಇಲ್ಲದಷ್ಟು ದೊಡ್ಡ ಫ್ಯಾನ್ ಬೇಸ್ ಹೊಂದಿರುವ ಖ್ಯಾತಿಗೆ ಗುರಿಯಾಗಿದ್ದಾರೆ.
ಈಗ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಕ್ಷಣಗಣನೆ ಮಾಡುತ್ತಿದ್ದಾರೆ. ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ, ಅದರ ಪ್ರಯುಕ್ತ ಪ್ರಚಾರ ಕಾರ್ಯದಲ್ಲಿ ತೊಡಗಿರುವ ದರ್ಶನ್ ಅವರು ಈಗಾಗಲೇ ಹಲವು ಸಂದರ್ಶನಗಳನ್ನು ಕೊಟ್ಟಿದ್ದಾರೆ.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲೂ ಕೂಡ ದರ್ಶನ್ ಅವರು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದು ಅವರಿಗೆ ತಮ್ಮ ತೋಟವನ್ನು ಕೂಡ ಪರಿಚಯಿಸಿ ಕೊಟ್ಟಿದ್ದಾರೆ. ಮೈಸೂರಿನ ಬಳಿ ವಿನೀಶ್ ದರ್ಶನ್ ಹೆಸರಿನಲ್ಲಿ ಫಾರ್ಮ್ ಮಾಡಿರುವ ದರ್ಶನ್ ರವರು ಶೂಟಿಂಗ್ ಇಲ್ಲದ ಸಮಯದಲ್ಲಿ ಅತಿ ಹೆಚ್ಚು ಅಲ್ಲೇ ಸಮಯ ಕಳೆಯುತ್ತಾರೆ.
ಈಗ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಕೂಡ ತಮ್ಮದೇ ಫಾರ್ಮ್ ಅಲ್ಲಿ ತಮ್ಮ ಪ್ರಾಣಿಗಳ ಜೊತೆ ಆಚರಿಸಿರುವ ದರ್ಶನ್ ಅವರು ಅಲ್ಲೇ ಸಂದರ್ಶನ ಕೊಟ್ಟು ಸಂದರ್ಶನ ಕಾರರಿಗೆ ತೋಟ ಹಾಗೂ ಪ್ರಾಣಿಗಳ ಬಗ್ಗೆ ಕೂಡ ಪರಿಚಯ ಮಾಡಿಕೊಟ್ಟಿದ್ದಾರೆ. ಇದೇ ಸಂದರ್ಶನದಲ್ಲಿ ದರ್ಶನವರು ಸಿನಿಮಾ ಜೊತೆ ಸಿನಿಮೇತರ ವಿಷಯದ ಬಗ್ಗೆ ಕೂಡ ಮಾತನಾಡಿ ತಮ್ಮ ವೈಯಕ್ತಿಕ ಜೀವನದ ವಿವಾದಗಳ ಕುರಿತು ಕೂಡ ಮನಬಿಚ್ಚಿ ಮಾತನಾಡಿದ್ದಾರೆ.
ದರ್ಶನ್ ಅವರು ಮೊದಲಿಗೆ ಸೆಲೆಬ್ರಿಟಿಗಳ ಕುರಿತು ಮಾತನಾಡಿ ಹೀಗೆ ಹೇಳಿದ್ದಾರೆ. ಜನ ನನ್ನನು ಯಾಕೆ ಇಷ್ಟಪಡುತ್ತಾರೆ ಎಂದು ಗೊತ್ತಿಲ್ಲ ನನ್ನನ್ನು ನಾನಾಗಿಯೇ ಕಂಡು ಅವರು ಇಷ್ಟ ಪಟ್ಟಿದ್ದಾರೆ ಮತ್ತೆ ನನ್ನ ಹಾಗೂ ಸೆಲೆಬ್ರಿಟಿಗಳ ನಡುವೆ ಯಾವುದೇ ಫಿಲ್ಟರ್ ಇಲ್ಲ ಅದೇ ಅವರಿಗೆ ಇಷ್ಟ ಆಗಿರಬಹುದು. ಈಗ ನಾನು ಇಂಟರ್ವ್ಯೂ ಗೆ ಬರಬೇಕು ಎಂದಿದ್ದರೆ ಟಿಪ್ ಟಾಪ್ ಆಗಿ ರೆಡಿಯಾಗಿ ಬರಬೇಕಿತ್ತು.
ಆದರೆ ನನಗೆ ತುಂಬಾ ಸಹಜವಾಗಿರಲು ಇಷ್ಟ ಹಾಗಾಗಿ ಬ್ರಷ್ ಕೂಡ ಮಾಡದೆ ಹೀಗೆ ಬಂದಿದ್ದೇನೆ ಎಂದಿದ್ದಾರೆ. ದರ್ಶನ್ ಅವರು ಈ ಸಂದರ್ಶನಕ್ಕಾಗಿ ಏನು ರೆಡಿಯಾಗದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಮುಂದುವರೆದು ತಮ್ಮ ಮೇಲೆ ಬರುತ್ತಿರುವ ವಿವಾದಗಳ ಬಗ್ಗೆ ಕೂಡ ಮಾತನಾಡಿದ ದರ್ಶನ್ ಅವರು ನಾನು ನೇರವಾಗಿ ಮಾತನಾಡುವುದಕ್ಕೆ ಈ ರೀತಿ ಆಗುತ್ತಿದೆಯೋ ಏನೋ ಗೊತ್ತಿಲ್ಲ.
ಆದರೆ ಎಲ್ಲರಿಗೂ ಕೂಡ ಬ್ಲಾಕ್ ಮಾರ್ಕ್ ಇರುತ್ತದೆ ಆದರೆ ನನ್ನಷ್ಟು ಬ್ಲಾಕ್ ಮಾರ್ಕ್ ಯಾರ ಮೇಲೂ ಇಲ್ಲ ಅದು ನನ್ನ ಬ್ಯಾಡ್ ಲಕ್ಕೋ ಏನೋ ಗೊತ್ತಿಲ್ಲ ಎಂದಿದ್ದಾರೆ ದರ್ಶನ್ ದರ್ಶನ್ ಅವರ ಬಗ್ಗೆ ಸದಾ ಒಂದಿಲ್ಲ ಒಂದು ವಿವಾದ ಆಗುತ್ತಲೇ ಇರುತ್ತದೆ. ಈಗಾಗಲೇ ಪತ್ನಿ ಜೊತೆಗೆ ಜಗಳದ ವಿಚಾರ ಮತ್ತು ಮೈಸೂರಿನ ಹೋಟೆಲ್ ಒಂದರಲ್ಲಿ ಸಿಬ್ಬಂದಿ ಜೊತೆ ಗಲಾಟೆ.
ಈಗ ಕ್ರಾಂತಿ ಸಿನಿಮಾದ ರಿಲೀಸ್ ವೇಳೆ ಆದ ಹಲ್ಲೆ ಈ ರೀತಿ ಸಾಲು ಸಾಲು ವಿವಾದಗಳು ಒಂದು ರೀತಿ ದರ್ಶನ್ ಅವವನ್ನೇ ಹುಡುಕೊಂಡು ಬರುತ್ತಿದೆಯೇನೋ ಏನೋ ಎಂದು ಬೇಸರ ಕಟ್ಟಿಕೊಳ್ಳುವಂತೆ ಇದೆ .ಆದರೆ ಇದೆಲ್ಲವನ್ನು ಮೀರಿ ಅವರ ಸಂಪಾದಿಸಿರುವ ಅಭಿಮಾನಿಗಳ ಪ್ರೀತಿ ಹಾರೈಕೆ ವಿಶ್ವಾಸ ಅವರ ಮೇಲಿದ್ದು ಈಗ ಎಲ್ಲರ ಚಿತ್ತ ಕ್ರಾಂತಿ ಸಿನಿಮಾದ ಕಡೆ ಇದೆ.
https://youtu.be/TIsz6Udu_D8