Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ಇಂಗ್ಲಿಷ್ ಅಂತೂ ಆತನಿಗೆ ಗೊತ್ತೇ ಇಲ್ಲ ಎಂದು ಟೀಕೆ ಮಾಡುವ ಜನರೇ ಒಂದು ಬಾರಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

Posted on October 6, 2022 By Kannada Trend News No Comments on ದರ್ಶನ್ ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ಇಂಗ್ಲಿಷ್ ಅಂತೂ ಆತನಿಗೆ ಗೊತ್ತೇ ಇಲ್ಲ ಎಂದು ಟೀಕೆ ಮಾಡುವ ಜನರೇ ಒಂದು ಬಾರಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ನಾಯಕ ನಟರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. 2000 ರ ಇಸವಿಯಲ್ಲಿ ಎಲ್ಲರ ಫೇವರೆಟ್ ನಟ ಅಂದರೆ ಅದು ದರ್ಶನ್ ಅಂತಾನೆ ಹೇಳ ಬಹುದು ತುಂಬಾನೇ ಕಷ್ಟಪಟ್ಟು ಸಿನಿಮಾರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡು ತಮ್ಮ ಸ್ವಂತ ಪ್ರತಿಭೆಯಿಂದಲೇ ಬೆಳೆದು ಬಂದಂತಹ ನಟ ದರ್ಶನ್. ಹೌದು ಮೆಜೆಸ್ಟಿಕ್ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯ ಮಾಡುವುದರ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದರು‌.

ಈ ಸಿನಿಮಾದ ನಂತರ ದಾಸ, ಧ್ರುವ ನಿನಗಾಗಿ, ಸುಂಟರಗಾಳಿ, ಕೆಂಚ ಶೌರ್ಯ, ಸ್ನೇಹನ ಪ್ರೀತಿನ, ಚಕ್ರವರ್ತಿ, ಪ್ರಿನ್ಸ್, ಯಜಮಾನ, ಬುಲ್ ಬುಲ್, ಕುರುಕ್ಷೇತ್ರ, ರಾಬರ್ಟ್ ಹೀಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇಲ್ಲಿಯವರೆಗೂ ಕೂಡ ದರ್ಶನ್ ಅವರು ಸುಮಾರು 55ಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ‌. ಇದೆಲ್ಲ ಒಂದು ಕಡೆಯಾದರೆ ದರ್ಶನ ಬರುವ ಬಗ್ಗೆ ಯಾವಾಗಲೂ ಕೂಡ ಒಂದು ಮಾತು ಕೇಳಿ ಬರುತ್ತಿತ್ತು ದರ್ಶನ್ ಅವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಅದರಲ್ಲಿಯೂ ಕೂಡ ಇಂಗ್ಲೀಷ್ ನಲ್ಲಿ ಮಾತನಾಡುವುದಕ್ಕೆ ಬಹಳ ಭಯ ಪಡುತ್ತಾರೆ ಅಂತ.

ಇದಕ್ಕೆ ಸಾಕ್ಷಿಯಾಗಿ ದರ್ಶನ್ ಅವರನ್ನು ಮಾಧ್ಯಮದವರು ಇಂಗ್ಲಿಷ್ ನಲ್ಲಿ ಮಾತನಾಡಿ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇದಕ್ಕೆ ಉತ್ತರಿಸಿದಂತಹ ದರ್ಶನವರು ನಾನ್ಯಾಕೆ ಇಂಗ್ಲಿಷ್ ನಲ್ಲಿ ಮಾತನಾಡಲಿ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡುವುದು ಅಂತ ಹೇಳುತ್ತಾರೆ. ಅಷ್ಟೇ ಅಲ್ಲದೆ ಒಂದೇ ಮಾತಿಗೆ ನನಗೆ ಇಂಗ್ಲಿಷ್ ಬರಲ್ಲ ಸ್ವಾಮಿ ನಾನು ಕಾರ್ಪೊರೇಟ್ ಸ್ಕೂಲಿನಲ್ಲಿ ಓದಿದವನು ಎಂದು ಟಂಗ್ ಕೊಡುತ್ತಾರೆ. ಇದರಿಂದ ಸಾಕಷ್ಟು ಜನ ದರ್ಶನ್ ಅವರಿಗೆ ಇಂಗ್ಲಿಷ್ ಬರುವುದಿಲ್ಲ ಎಂದು ಹೀನಾಯವಾಗಿ ಟೀಕೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಆದರೆ ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳು ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ ದರ್ಶನವರಿಗೆ ನಿಜವಾಗಿಯೂ ಕೂಡ ಇಂಗ್ಲೀಷ್ ಬರುವುದಿಲ್ಲ ಅಂತ ಎಲ್ಲರೂ ತಿಳಿದುಕೊಳ್ಳುತ್ತಾರೆ ಆದರೆ ವಾಸ್ತವವಾಗಿ ದರ್ಶನ್ ಅವರಿಗೂ ಕೂಡ ಇಂಗ್ಲೀಷ್ ಬರುತ್ತದೆ. ಆದರೆ ಅದನ್ನು ಅವರು ಬಳಕೆ ಮಾಡುವುದಿಲ್ಲ ಇದಕ್ಕೆ ಸಾಕ್ಷಿಯಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನವರು ಇಂಗ್ಲಿಷ್ನಲ್ಲಿ ಮಾತನಾಡಿದಂತಹ ವಿಡಿಯೋ ಒಂದು ವೈರಲ್ ಆಗಿದೆ‌. ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳು ಹಾಗೂ ದರ್ಶನ್ ಅವರನ್ನು ಟೀಕೆ ಮಾಡಿದಂತಹ ನೆಟ್ಟಿದರು ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ.

2016ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಂತಹ ಗ್ಲೋಬಲ್ ಆಕ್ಟರ್ ಅವಾರ್ಡನ್ನು ನಟ ದರ್ಶನ್ ಅವರು ಪಡೆದರು ಈ ಸಮಯದಲ್ಲಿ ದರ್ಶನ್ ಅವರು ಪ್ರಶಸ್ತಿಯನ್ನು ಸ್ವೀಕಾರ ಮಾಡುವುದಕ್ಕಿಂತ ಮುಂಚೆ ಇಂಗ್ಲಿಷ್ ನಲ್ಲಿಯೇ ಭಾಷಣ ಮಾಡುತ್ತಾರೆ. ದರ್ಶನ್ ಅವರ ಭಾಷಣ ಮಾಡುತ್ತಿರುವಂತಹ ವಿಡಿಯೋ ಇದೀಗ ವೈರಲ್ ಆಗಿದೆ ಈ ವಿಡಿಯೋವನ್ನು ನೋಡಿದರೆ ದರ್ಶನ್ ಅವರಿಗೆ ಇಂಗ್ಲಿಷ್ ಬರಲ್ಲ ಅಂತ ಹೇಳುವುದಕ್ಕೆ ಸಾಧ್ಯನೇ ಇಲ್ಲ. ಏಕೆಂದರೆ ಅಷ್ಟು ಸ್ಪಷ್ಟವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತಾರೆ ದರ್ಶನ್ ಅವರು ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೂ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕಾಗಿ ಒಬ್ಬ ನಟನನ್ನು ಅವಮಾನಿಸಿದ್ದು ಎಷ್ಟು ಸರಿ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಹಂಚಿಕೊಳ್ಳಿ.

Entertainment Tags:Challenging star darshan, D Boss, Darshan
WhatsApp Group Join Now
Telegram Group Join Now

Post navigation

Previous Post: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಅನಿಕಾ & ಶಂಭು ಮದುವೆ ಮನೆಯಲ್ಲೇ ಮಾಡಿದ ಭರ್ಜರಿ ಡ್ಯಾನ್ಸ್ ನೋಡಿ.
Next Post: ಸಂತಸದ ಸುದ್ದಿ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಏನದು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore