ದಿನದಿಂದ ದಿನಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಕ್ರಾಂತಿ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ವಿಚಾರವನ್ನು ಕೇಳುತ್ತಿದ್ದ ಹಾಗೆ ಇದರ ಅತಿರೇಕದ ವರ್ತನೆ ಹೆಚ್ಚಾಗುತ್ತದೆ. ಹೌದು ದರ್ಶನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಂತಹ ಸಮಯದಲ್ಲಿ ಆಯತಪ್ಪಿ ಅಪ್ಪು ಅವರ ಬಗ್ಗೆ ಹೇಳಿದಂತಹ ಹೇಳಿಕೆಯೊಂದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಅಂತಾನೆ ಹೇಳಬಹುದು.
ದರ್ಶನ್ ಅವರು ಅಪ್ಪು ಅವರ ಬಗ್ಗೆ ಯಾವುದೇ ರೀತಿಯಾದಂತಹ ವೈ ಮನಸನ್ನು ಹೊಂದಿಲ್ಲ ಆದರೆ ಕೆಲ ಅಭಿಮಾನಿಗಳು ದರ್ಶನ್ ಅವರು ತಮ್ಮ ಹೇಳಿದಂತಹ ಹೇಳಿಕೆಯನ್ನು ತಿರುಚಿ ಹಾಕಿದ್ದಾರೆ. ಹಾಗಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಗೊಂದಲವನ್ನು ಉಂಟು ಮಾಡಿದೆ ಈ ಗೊಂದಲ ಕ್ರಾಂತಿ ಸಿನಿಮಾವನ್ನು ಸೋಲಿಸಬೇಕು ಎಂಬುವಷ್ಟರ ಮಟ್ಟಿಗೆ ತಲುಪಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಹೌದು ಹೊಸಪೇಟೆಗೆ ಹೋದಾಗ ದರ್ಶನ್ ಅವರಿಗೆ ಚಪ್ಪಲಿಯಲ್ಲಿ ಹೊಡೆದು ನಿಂದಿಸಿದರು.
ಅದಾದ ನಂತರ ಕ್ರಾಂತಿ ಸಿನಿಮಾ ಬಿಡುಗಡೆಯಾಗುವ ದಿನಾಂಕ ಕರ್ನಾಟಕವನ್ನು ಬಂದ್ ಮಾಡುತ್ತೇವೆ ಎಂದು ಹೇಳಿದರು ಇದಿಷ್ಟು ಸಾಲದಕ್ಕೆ ಫಿಲಂ ಚೇಂಬರ್ ಹೋಗಿ ಹೋರಾಟ ಮಾಡಿ ದರ್ಶನ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂಬ ಹೋರಾಟವನ್ನು ಮಾಡಿದರು. ಒಂದಲ್ಲ ಒಂದು ರೀತಿಯಾಗಿ ದರ್ಶನ್ ಅವರು ಸಾಕಾಷ್ಟು ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಕ್ರಾಂತಿ ಸಿನಿಮಾ ಬಿಡುಗಡೆಯಾದ ನಂತರ ಹೊಸದೊಂದು ವರಸೆಯನ್ನು ತೆಗೆದಿದ್ದಾರೆ ಅಂತ ಹೇಳಬಹುದು.
ಹೌದು ಅಪ್ಪು ಆಗಲಿ ಒಂದು ವರ್ಷವಾಗಿದೆ, ಕಳೆದ ಒಂದು ವರ್ಷದಿಂದ ಬಿಡುಗಡೆಯಾದಂತಹ ಎಲ್ಲಾ ಸಿನಿಮಾದಲ್ಲಿಯೂ ಕೂಡ ಅಪ್ಪು ಅವರ ಫೋಟೋವನ್ನು ಹಾಕಿ ಅವರಿಗೆ ಟ್ರಿಬ್ಯೂಟ್ ಕೊಡುತ್ತಾರೆ ತದನಂತರ ಸಿನಿಮಾ ಪ್ರಾರಂಭವಾಗುತ್ತದೆ. ಆದರೆ ಕ್ರಾಂತಿ ಸಿನಿಮಾದಲ್ಲಿ ಮಾತ್ರ ಎಲ್ಲಿಯೂ ಅಪ್ಪು ಫೋಟೋ ಇಲ್ಲ ಅಷ್ಟೇ ಅಲ್ಲದೆ ಅವರಿಗೆ ಟ್ರಿಬ್ಯೂಟ್ ಕೊಟ್ಟಿಲ್ಲ. ಇವೆಲ್ಲವನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ ದರ್ಶನ್ ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಪ್ಪು ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವಿಚಾರ ಹೊರ ಬರುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಕೂಡ ಇದೀಗ ಅಪ್ಪು ಅಭಿಮಾನಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಹೌದು, ಅದೇನೆಂದರೆ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾದಂತಹ ಸಮಯದಲ್ಲಿ ಚಿರು ಹಾಗೂ ಸಂಚಾರಿ ವಿಜಯ್ ಅವರು ವಿ.ಧಿ.ವ.ಶ.ರಾಗಿದ್ದರು. ಹಾಗಾಗಿ ಯುವರತ್ನ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಚಿರು & ಸಂಚಾರಿ ವಿಜಯ್ ಅವರ ಫೋಟೋ ಯಾಕೆ ಹಾಕಿಲ್ಲ.? ಅಷ್ಟೇ ಅಲ್ಲದೆ ಅವರಿಗೆ ಟ್ರಿಬ್ಯೂಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.
ಜೊತೆಗೆ ನೀವು ಯಾವ ರೀತಿ ವಿಜಯ ಅವರಿಗೆ ಟ್ರಿಬ್ಯೂಟ್ ಕೊಟ್ಟಿಲ್ಲ ಅದೇ ರೀತಿ ನಾವು ಅಪ್ಪು ಅವರಿಗೂ ಕೂಡ ಟ್ರಿಬ್ಯೂಟ್ ಕೊಟ್ಟಿಲ್ಲ ಅಲ್ಲಿಗೆ ಸರಿ ಹೋಯಿತು ನಿಮಗೊಂದು ನ್ಯಾಯ ನಮಗೊಂದು ನ್ಯಾಯಾನ ಎಂದು ಯೋಚನೆ ಮಾಡಿದ್ದಾರೆ. ದಚ್ಚು ಅಭಿಮಾನಿಗಳು ಕೇಳಿದಂತಹ ಪ್ರಶ್ನೆಗೆ ಉತ್ತರ ಕೊಡಲಾಗದೆ ಅಪ್ಪು ಅಭಿಮಾನಿಗಳು ಸುಮ್ಮನಾಗಿದ್ದಾರೆ.
ಆದರೂ ಕೂಡ ಈ ಫ್ಯಾನ್ ವಾರ್ ಎಂಬುವುದು ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಅಂದರೆ ಪ್ರತಿಯೊಂದು ಚಿಕ್ಕಪುಟ್ಟ ವಿಚಾರದಲ್ಲೂ ಕೂಡ ತಪ್ಪನ್ನೇ ಹುಡುಕುವಂತಹ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ ಅಂತ ಹೇಳಬಹುದು. ಇನ್ನು ಮುಂದೆಯಾದರೂ ಇವೆಲ್ಲವನ್ನೂ ಮರೆತು ಸಹಬಾಳ್ವೆಯಿಂದ ಜೀವನ ನಡೆಸಿದರೆ ಒಳಿತು ಎಂಬುವುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ