Friday, June 9, 2023
HomeViral News5 ವರ್ಷ ಪ್ರೀತಿಸಿ, ಬ್ರೇಕಪ್ ಆಗಿ ಡಿಪ್ರೆಶನ್ ಗೆ ಹೋಗಿದ್ದ ಹರಿಪ್ರಿಯಾ ಆ ನೋವಿನಿಂದ ಹೊರಬಂದು...

5 ವರ್ಷ ಪ್ರೀತಿಸಿ, ಬ್ರೇಕಪ್ ಆಗಿ ಡಿಪ್ರೆಶನ್ ಗೆ ಹೋಗಿದ್ದ ಹರಿಪ್ರಿಯಾ ಆ ನೋವಿನಿಂದ ಹೊರಬಂದು ವಸಿಷ್ಠನಾ ಮತ್ತೆ ಪ್ರೀತಿಸಿ ಮದ್ವೆ ಆಗಿದ್ದು ಹೇಗೆ ಗೊತ್ತ.? ಯಾವ ಸಿನಿಮಾಗೂ ಕಮ್ಮಿ ಇಲ್ಲ ಇವರ ಲೈಫ್ ಸ್ಟೋರಿ

ಹರಿಪ್ರಿಯ (Haripriya) ಸದ್ಯಕ್ಕೆ ಕನ್ನಡದಲ್ಲಿ ಜನಪ್ರಿಯ ನಟಿ. ಹಾಗೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಚಿಕ್ಕಮಗಳೂರಿನವರಾದ ಇವರು ಶಾಲಾ ಶಿಕ್ಷಣವನ್ನು ಅಲ್ಲೇ ಮುಗಿಸಿ ಬೆಂಗಳೂರಿನ ಕಡೆಗೆ ಬರುತ್ತಾರೆ. ಆದರೆ ಆ ಸಮಯದಲ್ಲಿ ಇವರು ಇಂಡಸ್ಟ್ರಿಗೆ ಹೋಗುತ್ತೇನೆ ಎಂದು ಅಂದುಕೊಂಡೆ ಇರಲಿಲ್ಲವೇ. ಭರತನಾಟ್ಯ ಕಲಾವಿದೆ ಆಗಿದ್ದ ಇವರಿಗೆ ತುಳು ಸಿನಿಮಾದ ನಿರ್ದೇಶಕರು ಒಬ್ಬರು ತಮ್ಮ ಸಿನಿಮಾಗೆ ನಾಯಕಿ ಆಗುವಂತೆ ಆಫರ್ ನೀಡುತ್ತಾರೆ.

 

ಮೊದಲ ಬಾರಿಗೆ ನಾಯಕಿಯಾಗಿ ತುಳು ಭಾಷೆಯ ಬಡಿ (Buddy) ಸಿನಿಮಾಗೆ ಹರಿಪ್ರಿಯಾ ಆಯ್ಕೆ ಆಗುತ್ತಾರೆ. ನಂತರ ಕನ್ನಡದ ಮನಸುಗಳ ಮಾತು ಮಧುರ (manasigala mathu madhura) ಎನ್ನುವ ಸಿನಿಮಾದಲ್ಲಿ ಈಕೆಗೆ ನಟಿಸುವ ಅವಕಾಶ ಸಿಗುತ್ತದೆ, ಆಗಿ ಇನ್ನೂ 17 ವರ್ಷದವರಾಗಿರುತ್ತಾರೆ. ಹರಿಪ್ರಿಯಾ ಅವರ ನಿಜವಾದ ಹೆಸರು ಶ್ರುತಿ ಚಂದ್ರಸೇನಾ (Shruthi Chandrasena) ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಅವರ ಹೆಸರನ್ನು ಹರಿಪ್ರಿಯಾ ಎಂದು ಬದಲಾಯಿಸಲಾಗುತ್ತದೆ.

ಇವರ ಕಳ್ಳರ ಸಂತೆ ಎನ್ನುವ ಸಿನಿಮಾ ಕೂಡ ಫಿಲಂ ಅವಾರ್ಡ್ ಅಲ್ಲಿ ನಾಮಿನೇಟ್ ಆಗುತ್ತದೆ. ಯಶ್ ಅವರು ಈ ಸಿನಿಮಾದಲ್ಲಿ ಹರಿಪ್ರಿಯವರಿಗೆ ನಾಯಕಿ ಆಗಿರುತ್ತಾರೆ. ಅವಕಾಶಗಳ ಕೊರತೆಯಿಂದ ಬೇರೆ ಭಾಷೆ ಸಿನಿಮಾಗಳಲ್ಲಿ ಅಭಿನಯಿಸಲು ಹೋಗುತ್ತಾರೆ. ನಂತರ ಈಕೆಗೇ ಕನ್ನಡದಲ್ಲಿ ದೊಡ್ಡ ಮಟ್ಟಿಗೆ ಬ್ರೇಕ್ ಕೊಟ್ಟಿದ್ದು ಅಂದರೆ 2014ರಲ್ಲಿ ರಿಲೀಸ್ ಉಗ್ರಂ (Ugram) ಸಿನಿಮಾ.

ಉಗ್ರಂ ಸಿನಿಮಾ ನಿರ್ದೇಶಕರಾದ ಪ್ರಶಾಂತ್ ನೀಲ್, ನಾಯಕರಾದ ಮುರಳಿ ಹಾಗೂ ಹರಿಪ್ರಿಯ ಅವರ ಬದುಕಿನ ತಿರುವನ್ನೇ ಬದಲಾಯಿಸಿ ಬಿಟ್ಟಿತು. ಆನಂತರ ಸಾಲು ಸಾಲು ಸಿನಿಮಾ ಆಫರ್ ಗಳು ಹರಿಪ್ರಿಯಾ ಅವರನ್ನು ಹುಡುಕಿಕೊಂಡು ಬರುತ್ತವೆ ದರ್ಶನ್ ಅವರೊಂದಿಗೆ ಕುರುಕ್ಷೇತ್ರ, ಸುದೀಪ್ ಅವರೊಂದಿಗೆ ರನ್ನ ಧ್ರುವ ಸರ್ಜಾ ಅವರೊಂದಿಗೆ ಭರ್ಜರಿ, ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್, ರಕ್ಷಿತ್ ಶೆಟ್ಟಿ ಜೊತೆ ರಿಕ್ಕಿ, ನೀನಾಸಂ ಸತೀಶ್ ಅವರೊಂದಿಗೆ ಪೆಟ್ರೋಮ್ಯಾಕ್ಸ್ ಜಗ್ಗೇಶ್ ಅವರೊಂದಿಗೆ ನೀರ್ ದೋಸೆ ಹೀಗೆ ಕನ್ನಡದ ಬಹುತೇಕ ಎಲ್ಲಾ ಹೆಸರಾಂತ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತಾರೆ ಹರಿಪ್ರಿಯ.

ಇದೆಲ್ಲ ಆಗುವುದರ ನಡುವೆ ಪ್ರೀತಿ ವಿಷಯದಲ್ಲೂ ಕೂಡ ಮೋಸ ಹೋಗಿ ಆಕೆ ಬಹಳ ನೊಂದು ಹೋಗಿರುತ್ತಾರೆ ಈ ವಿಷಯವನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ಐದು ವರ್ಷಗಳ ನಂಬಿಕೆಯನ್ನು ಮುರಿದುಕೊಂಡು ಬ್ರೇಕ್ ಅಪ್ ಮಾಡಿಕೊಂಡೆ. ಆನಂತರ ಅದರಿಂದ ಆಚೆ ಬರಲು ಬಹಳ ಕಷ್ಟ ಪಟ್ಟೆ, ಆಗ ನನಗೆ ಕಾಣಿಸಿದ್ದು ಒಂದೇ ದಾರಿ ವರ್ಕ್ ಮಾಡಬೇಕು ಎಂದು ಸತತವಾಗಿ ಸಿನಿಮಾಗಳ ಅಭಿನಯಿಸಲು ಶುರು ಮಾಡಿದೆ ಎಷ್ಟರ ಮಟ್ಟಿಗೆ ಎಂದರೆ ಒಂದೇ ವರ್ಷದಲ್ಲಿ 17 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.

ಆ ರೀತಿ ನಾನು ಬ್ಯುಸಿ ಆದ ಕಾರಣ ಅದರಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅಂದು ನಟಿ ಮಾಡಿದ ಆ ನಿರ್ಧಾರದಿಂದ ಇಂದು ವಸಿಷ್ಠ ಸಿಂಹ ನಂತಹ ಉತ್ತಮ ವ್ಯಕ್ತಿತ್ವವುಳ್ಳ ಹುಡುಗನ ಕೈ ಹಿಡಿಯುವ ಭಾಗ್ಯ ಪಡೆದುಕೊಂಡಿದ್ದಾರೆ. 2016ರಲ್ಲಿ ವಸಿಷ್ಠ ಸಿಂಹ (Vasista Simha) ಅವರ ಪರಿಚಯವಾಗಿ ಲಾಕ್ಡೌನ್ ಅವಧಿಯಲ್ಲಿ ಅದು ಪ್ರೀತಿಯಾಗಿ ಬದಲಾಗಿರುತ್ತದೆ.

ಮತ್ತು ಕಳೆದ ಡಿಸೆಂಬರ್ ಅಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಈ ವರ್ಷದ ಆರಂಭದಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ. ಮೊದಲ ಪ್ರೀತಿಯೇ ಎಲ್ಲವೂ ಅಲ್ಲ ಅದರಿಂದ ನೊಂದುಕೊಂಡು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ದೇವರು ಅದಕ್ಕಿಂತ ಉತ್ತಮವಾದದ್ದನ್ನು ಅದರ ಮುಂದೆ ಕೊಡುತ್ತಾ.ನೆ ಧೈರ್ಯದಿಂದ ಆಚೆ ಬನ್ನಿ ಎನ್ನುವ ಸಂದೇಶವನ್ನು ಹರಿಪ್ರಿಯಾ ಅವರ ಸ್ಟೋರಿ ನೀಡುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.