Friday, June 9, 2023
HomeViral Newsಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು...

ಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು ಉಮಾಶ್ರೀ ತಿರಸ್ಕರಿಸಿದ್ದೇಕೆ ಗೊತ್ತ.? ಗುಟ್ಟು ರಟ್ಟು ಮಾಡಿದ ಉಮಾಶ್ರೀ

 

ಡಾಕ್ಟರ್ ರಾಜಕುಮಾರ್ ಎಂದರೆ ಎಂತಹ ನಟ ಕಲಾ ಕಂಠೀರವ, ನಟನೆಯ ಮೇರು ಪರ್ವತ. ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾದಲ್ಲಿ ಒಂದೇ ಒಂದು ಚಿಕ್ಕ ಪಾತ್ರ ಸಿಗುತ್ತದೆ ಎಂದರು ಕೂಡ ಎಂತಹದೇ ದೊಡ್ಡ ಸಿನಿಮಾ ಇದ್ದರು ಆ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಎಲ್ಲರೂ ಅಣ್ಣಾವ್ರ ಸಿನಿಮಾದಲ್ಲಿರಲು ಆಸೆ ಪಡುತ್ತಿದ್ದ ಕಾಲವದು.

ಜೊತೆಗೆ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗುವುದು ಕೂಡ ಅಷ್ಟೇ ಗರ್ವದ ವಿಚಾರ ಆಗಿತ್ತು. ಮತ್ತು ಆ ಸಮಯದಲ್ಲಿ ಅಣ್ಣಾವ್ರು ಒಂದು ಮಾತು ಹೇಳುತ್ತಿದ್ದಾರೆ ಎಂದರೆ ಅದಕ್ಕೆ ಅಷ್ಟೇ ತೂಕ ಇರುತ್ತಿತ್ತು. ಯಾರು ಸಹ ಅದಕ್ಕೆ ಚಕಾರವೆತ್ತದೆ ಅದನ್ನು ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಅಣ್ಣಾವ್ರು ಎಲ್ಲರಿಂದಲೂ ಪ್ರೀತಿ ಹಾಗೂ ಗೌರವ ಗಳಿಸಿದ್ದರು.

ಇಂತಹ ಅಣ್ಣಾವ್ರ ಸಿನಿಮಾದಲ್ಲಿ ನಾಯಕಿ ಆಗುವಂತೆ ಅಣ್ಣಾವ್ರು ಮತ್ತು ಪಾರ್ವತಮ್ಮ ಅವರೇ ಹೇಳಿದರು ಉಮಾಶ್ರೀ ಅವರು ಮಾತ್ರ ನಟಿಸಲಿಲ್ಲವಂತೆ. ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉಮಾಶ್ರೀ ಅವರು ಬೇಸರಿಸಿಕೊಂಡು ಉತ್ತರಿಸಿದ್ದಾನೆ. ಅದೇನೆಂದರೆ ಉಮಾಶ್ರೀ ಅವರು ಮೂಲತಃ ರಂಗಭೂಮಿಯಿಂದ ಬಂದವರು. ಅಣ್ಣಾವ್ರು ಸಹ ರಂಗಭೂಮಿ ಕಲಾವಿದರೆ ಆದ್ದರಿಂದ ರಂಗಭೂಮಿ ಅಲ್ಲಿ ನಟಿಸುವವರು ಎಂದರೆ ಅಣ್ಣಾವರಿಗೆ ವಿಶೇಷ ಪ್ರೀತಿ.

ಬಿಡುಡು ಆದಾಗಲೆಲ್ಲ ನಾಟಕಗಳನ್ನು ನೋಡುತ್ತಿದ್ದ ಅಣ್ಣಾವ್ರು ಉಮಾಶ್ರೀ ಅವರ ಒಡಲಾಳ ಎನ್ನುವ ನಾಟಕವನ್ನು ನೋಡಿ ಅವರ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದರಂತೆ. ಜೊತೆಗೆ ಪಾರ್ವತಮ್ಮ ಅವರನ್ನು ಕರೆದು ಆ ಕಲಾವಿದರಿಗೆ ಬಹಳ ಟ್ಯಾಲೆಂಟ್ ಇದೆ ನಮ್ಮ ಸಿನಿಮಾಗೂ ಹಾಕಿಕೊಳ್ಳೋಣ ಕೇಳು ಎಂದು ಹೇಳಿದರಂತೆ. ಪಾರ್ವತಮ್ಮ ಅವರು ಅಣ್ಣಾವ್ರ ಮಾತಿಗೆ ಎಂದು ಎದುರು ಉತ್ತರ ನೀಡುತ್ತಿರಲಿಲ್ಲ.

ಉಮಾಶ್ರೀ ಅವರನ್ನು ಸಂಪರ್ಕಿಸಿ ಆಫರ್ ಕೊಟ್ಟಾಗ ಉಮಾಶ್ರೀ ಅವರು ನಟಿಸುವುದಿಲ್ಲ ಎಂದು ಹೇಳಿದರಂತೆ. ಆದರೆ ಉಮಾಶ್ರೀ ಅವರು ಅದಕ್ಕೆ ಕೊಟ್ಟ ಕಾರಣ ಏನು ಗೊತ್ತಾ ಉಮಾಶ್ರೀ ಅವರಿಗೆ ಆ ಅವಕಾಶ ಸಿಕ್ಕ ಸಮಯದಲ್ಲಿ ಆಗಷ್ಟೇ ಅವರು ಕಾಶಿನಾಥ್ ಅವರ ಅನುಭವ ಸಿನಿಮಾದಿಂದ ಸಿನಿಮಾಲೋಕಕ್ಕೆ ಬಂದಿದ್ದರು ಅನುಭವ ಸಿನಿಮಾದಲ್ಲಿ ಅವರು ನಟಿಸಿದ್ದ ಪಾತ್ರದ ರೀತಿಯೇ ಹೆಚ್ಚು ಅವರಿಗೆ ಬೇಡಿಕೆ ಇತ್ತು.

ಹಾಗಾಗಿ ನಂತರದ ಸಿನಿಮಾ ಪಾತ್ರಗಳು ಕೂಡ ಅದೇ ಜೋನರ್ ನಲ್ಲಿ ಕೂಡಿರುತ್ತಿದ್ದವು ಹೀಗಾಗಿ ಇಂತಹ ಪಾತ್ರಗಳಲ್ಲಿ ಮಾಡಿರುವ ನಾನು ರಾಜ್ ಕುಮಾರ್ ಅವರಿಗೆ ನಾಯಕಿಯಾಗಲು ಹೇಗೆ ಸಾಧ್ಯ. ಅವರ ಸಿನಿಮಾಗಳಿಗೆ ಒಂದು ಅರ್ಥ ಇರುತ್ತದೆ ತತ್ವ ಇರುತ್ತದೆ ಘನತೆ ಕೂಡ ಇರುತ್ತದೆ. ನಾನು ಈಗಾಗಲೇ ಬೇರೆ ಜೋನರ್ ಇಂದ ಕಾಣಿಸಿಕೊಳ್ಳುತ್ತಿದ್ದೇನೆ ಹಾಗಾಗಿ ನಾನು ಅಣ್ಣಾವ್ರಿಗೆ ನಾಯಕಿ ಆಗುವುದು ಬೇಡ ಎನ್ನುವುದು ಉಮಾಶ್ರೀ ಅವರ ನಿಲುವಾಗಿತ್ತಂತೆ.

ಈಗ ಅವರ ಆ ನಿರ್ಧಾರದ ಬಗ್ಗೆ ಉಮಾಶ್ರೀ ಅವರು ಪಶ್ಚಾತಾಪ ಪಡುತ್ತಿದ್ದಾರೆ ನಾನು ಒಂದು ವೇಳೆ ಆ ರೀತಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದರೆ ಅಣ್ಣಾವ್ರ ಒಂದು ಸಿನಿಮಾಗಾದರೂ ನಾಯಕಿ ಆಗಿರುತ್ತಿದ್ದೆ ಎಂದು ಆ ದಿನಗಳನ್ನು ನೆನೆಸಿಕೊಂಡಿದ್ದಾರೆ. ಉಮಾಶ್ರೀ ಅವರು ಅಣ್ಣಾವ್ರ ಸಿನಿಮಾಗಳಿಗೆ ನಾಯಕಿ ಆಗಿದ್ದರೆ ಯಾವ ಸಿನೆಮಾಗೆ ಆಗುತ್ತಿದ್ದರು ಎನ್ನುವ ಕುತೂಹಲ ಈಗ ಕನ್ನಡಿಗರಲ್ಲಿ ಮನೆ ಮಾಡಿದೆ. ನೀವು ಸಹ ಇದುವರೆಗೆ ಉಮಾಶ್ರೀ ಅವರ ಅದ್ಭುತ ಅಭಿನಯವನ್ನು ನೋಡಿದ್ದೀರಿ ಹಾಗೂ ಅಣ್ಣಾವರ ಸಿನಿಮಾಗಳನ್ನು ನೋಡಿದ್ದೀರಿ. ಅಣ್ಣಾವ್ರ ಯಾವ ಸಿನಿಮಾದಲ್ಲಿ ಉಮಾಶ್ರೀ ಇರುತ್ತಿದ್ದರು ಎನ್ನುವುದನ್ನು ಗೆಸ್ ಮಾಡಿ ಕಮೆಂಟ್ ಮೂಲಕ ಉತ್ತರಿಸಿ.