Sunday, June 4, 2023
HomeEntertainmentನಮ್ಮಪ್ಪ 5 ಎಕ್ರೆ ಜಮೀನು ಇಟ್ಟಿದ್ರೆ ಸಾಕಿತ್ತು, ನೆಮ್ದಿ ಆಗಿ ಹಸು, ಹಂದಿ ಸಾಕೊಂಡು ಜೀವ್ನ...

ನಮ್ಮಪ್ಪ 5 ಎಕ್ರೆ ಜಮೀನು ಇಟ್ಟಿದ್ರೆ ಸಾಕಿತ್ತು, ನೆಮ್ದಿ ಆಗಿ ಹಸು, ಹಂದಿ ಸಾಕೊಂಡು ಜೀವ್ನ ಮಾಡ್ತಿದ್ದೆ, ಇಂಡಸ್ಟ್ರಿಗೆ ಬರೋ ಕರ್ಮನೆ ಇರ್ತಾ ಇರ್ಲಿಲ್ಲ ವಿವಾದಗಳಿಂದ ಬೇಸತ್ತ ದರ್ಶನ್ ಮಾತು.

 

ನನ್ನ ತಂದೆ ಐದು ಎಕರೆ ಜಮೀನು ಇಟ್ಟಿದ್ದರು ಸಾಕಾಗುತ್ತಿತ್ತು, ಇಂಡಸ್ಟ್ರಿ ಕಡೆಗೆ ತಲೆಯೂ ಹಾಕುತ್ತಿರಲಿಲ್ಲ ಎಂದ ದರ್ಶನ್, ವಿವಾದಗಳಿಂದ ಮನನೊಂದು ದರ್ಶನ್ ಈ ರೀತಿ ಹೇಳಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ (Darshan) ಅವರು ಬಾಕ್ಸ್ ಆಫೀಸ್ ನ ಸುಲ್ತಾನ, ಚಾಲೆಂಜ್ ಮಾಡಿ ಇಂಡಸ್ಟ್ರಿಗೆ ಬಂದು ಚಾಲೆಂಜಿಂಗ್ ಸ್ಟಾರ್ ಟೈಟಲ್ ಪಡೆದವರು. ಈಗ ಕ್ರಾಂತಿ ಸಿನಿಮಾ ಅವರಿಗೆ ಅತಿ ದೊಡ್ಡ ಸವಾಲು ಹಾಕಿದ್ದು ಇಷ್ಟು ದಿನ ಇದ್ದ ಅಡೆತಡೆ ಎಲ್ಲಾ ಮೆಟ್ಟಿ ನಿಂತು ಒಳ್ಳೆ ಕಲೆಕ್ಷನ್ ಕೂಡ ಗಳಿಸುತ್ತಿದೆ.

ಇಂತಹ ಸಮಯದಲ್ಲಿ ದರ್ಶನ್ ಅವರು ಒಂದು ಶಾ.ಕಿಂ.ಗ್ ಹೇಳಿಕೆ ನೀಡಿದ್ದಾರೆ. ನನ್ನ ತಂದೆ ಐದು ಎಕರೆ ಜಮೀನು ಮಾಡಿದ್ದರೂ ಸಾಕಾಗಿತ್ತು ಹಸು ಹಂದಿ ಸಾಕಿಕೊಂಡು ಇರುತ್ತಿದ್ದೆ ಎಂದಿದ್ದಾರೆ. ಅವರು ಈ ರೀತಿ ಮಾತಾಡಲು ಹಿಂದಿರುವ ಕಾರಣ ಏನೆಂದರೆ ದರ್ಶನ್ ಅವರಿಗಿರುವ ಪ್ರಾಣಿಗಳ ಕ್ರೇಝ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಅವರು ಟಿ ನರಸೀಪುರ ಬಳಿ ಹಳೆ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಒಂದು ಫಾರಂ ಹೌಸ್ (Farm house) ನಿರ್ಮಿಸಿದ್ದಾರೆ. ಅದು ಈಗ ಒಂದು ಮಿನಿ ಝೂ ತರಹ ಆಗಿದೆ ಎನ್ನಬಹುದು.

ಅಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಸಾಗುತ್ತಿದ್ದಾರೆ ಮತ್ತು ಸಮಯ ಸಿಕ್ಕಾಗೆಲ್ಲಾ ಹೆಚ್ಚು ಅಲ್ಲಿನ ಪ್ರಾಣಿ ಪಕ್ಷಿಗಳ ಜೊತೆ ಕಾಲ ಕಳೆಯುವ ಇವರು ಅವರ ಇಷ್ಟದ ವೃತ್ತಿ ಯಾವುದು ಎಂದು ಕೇಳಿದಾಗ ಝೂ ಅಲ್ಲಿ ಏನು ಕೆಲಸ ಕೊಟ್ಟರು ಮಾಡುತ್ತೇನೆ ಅಂತಲೂ ಒಮ್ಮೆ ಹೇಳಿಕೊಂಡಿದ್ದರು. ಇಷ್ಟು ಪ್ರಾಣಿಗಳನ್ನು ಇಷ್ಟಪಡುವ ಇವರಿಗೆ ಆ ಆಸಕ್ತಿ ಎಲ್ಲಿಂದ ಹುಟ್ಟಿಕೊಂಡಿತು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ ಇದರ ಹಿಂದಿನ ಕಥೆಯನ್ನು ದರ್ಶನ್ ಅವರೀಗ ಹೇಳಿಕೊಂಡಿದ್ದಾರೆ.

ದರ್ಶನ್ ಚಿಕ್ಕವರಿದ್ದಾಗ ಅವರ ಮನೆಯಲ್ಲಿ ರಾಜು ಗೌಡ ಎನ್ನುವವರು ಇದ್ದರಂತೆ. ಅವರ ಮಗ ವಿಕ್ಕಿ ದರ್ಶನ್ ಅವರ ಜೊತೆ ಯಾವಾಗಲೂ ಆಟವಾಡುತ್ತಿದ್ದರಂತೆ. ಪ್ರತಿದಿನ ಸಂಜೆ ಬಂದು ವಿಕ್ಕಿಯನ್ನು ಫಾರ್ಮ್ ಹೌಸಿಗೆ ಹೋಗೋಣ ಬಾ ಎಂದು ಅವರು ಕರೆದುಕೊಂಡು ಹೋಗುತ್ತಿದ್ದರಂತೆ. ಅವರ ಜೊತೆ ಹೋಗಿ ಹೋಗಿ ಫಾರ್ಮ್ ಹೌಸ್ ನೋಡಿ ದರ್ಶನವರೆಗೂ ಕೂಡ ನಾನು ಇದೇ ರೀತಿ ತೋಟ ಮಾಡಿ ಪ್ರಾಣಿ ಪಕ್ಷಿಗಳನ್ನು ಸಾಕಬೇಕು ಎನ್ನುವ ಹಂಬಲ ಬಾಲ್ಯದಿಂದಲೇ ಹುಟ್ಟಿಕೊಂಡಿತ್ತಂತೆ.

ಆದರೆ ಆರ್ಥಿಕವಾಗಿ ಆಗ ದರ್ಶನ್ ಕುಟುಂಬ ಸಂಕಷ್ಟದಲ್ಲಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಆದರೆ ಆ ಸಮಯದಲ್ಲಿ ಅವರು ಹಸುಗಳನ್ನು ಸಾಕುತ್ತಿದ್ದರು. ಒಂದು ಸಮಯಕ್ಕೆ ಅವರ ಕುಟುಂಬ ನಿರ್ವಹಣೆಗೆ ಆ ಹಸುಗಳೇ ಸಹಾಯ ಮಾಡಿದ್ದು ಎಂದರು ಸಹ ಹೇಳಬಹುದು. ಇತ್ತೀಚೆಗೆ ದರ್ಶನ್ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಯುಟ್ಯೂಬ್ ಚಾನೆಲ್ ಗೆ ಅವರ ಫಾರ್ಮ್ ಟೂರ್ ಮಾಡಿ ಇಂಟರ್ವ್ಯೂ ಕೊಟ್ಟಿದ್ದರು. ಹಾಗೇ ಈ ಮಾತುಗಳನ್ನು ಹೇಳಿಕೊಂಡರು ಫಾರ್ಮ್ ಹೌಸ್ ಮಾಡಬೇಕು ಎನ್ನುವ ಆಸೆ ಇಂಡಸ್ಟ್ರಿಗೆ ಬರುವ ಮುಂಚೆನೆ ಇತ್ತು.

ಆದರೆ ವಿಧಿ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂತು. ಒಂದು ಸಮಯದಲ್ಲಿ ತೋಟ ಖರೀದಿಸಿ ಹಸು ಹಂದಿ ಸಾಕುವುದಕ್ಕೂ ಕೂಡ ನಿರ್ಧಾರ ಮಾಡಿದ್ದೆ. ನನ್ನ ತಂದೆ ಐದೇ ಐದು ಎಕರೆ ಜಮೀನು ಮಾಡಿದ್ದರೆ ನಾನು ಇಂಡಸ್ಟ್ರಿ ಕಡೆಗೆ ತಲೆಹಾಕುತ್ತಲೇ ಇರಲಿಲ್ಲ ಹಸು ಹಂದಿ ಸಾಕಿಕೊಂಡು ಆರಾಮಾಗಿ ಇರುತ್ತಿದ್ದೆ.

ಹೇಗೂ ಹಸುಗಳನ್ನು ಕಟ್ಟುತ್ತಿದ್ದೆ ಹೋಟೆಲ್‌ಗಳ ಮುಂದೆ ಡಸ್ಟ್ಬಿನ್ ಇಟ್ಟರೆ ಆಹಾರ ಹಂದಿಗಳಿಗೆ ಆಗುತ್ತದೆ ಹೇಗೋ ಜೀವನ ಸಾಗುತ್ತದೆ ಬಿಡು ಎಂದು ನಿರ್ಧಾರ ಮಾಡಿ ಬಿಟ್ಟಿದ್ದೆ. ಆದರೆ ಬಣ್ಣದ ಋಣ ಇಲ್ಲಿಯವರೆಗೂ ಕರೆದು ತಂದಿದೆ ನಾನು ಫಾರ್ಮ್ ಹೌಸ್ ಅನ್ನು ಶಾಸ್ತ್ರಿ ಸಿನಿಮಾದ ಸಮಯದಲ್ಲೇ ಕೊಂಡುಕೊಂಡಿದ್ದು ನನ್ನ ಆಸೆಯಂತೆ ಈಗ ಅಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಗುತ್ತಿದ್ದೇನೆ ಎಂದು ತಮ್ಮ ಫಾರ್ಮ್ ಹೌಸ್ ಕಥೆ ಹೇಳಿಕೊಂಡಿದ್ದಾರೆ.