ನೇರ ನಡೆ ನೇರ ನುಡಿಯ ಮುಖಾಂತರ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಗೆದ್ದಿರುವಂತಹ ಡಿ ಬಾಸ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಜನಪ್ರಿಯ ರಾಗಿದ್ದಾರೆ ಇವರ ಚಿತ್ರಗಳು ಎಂದರೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಟಿಯರು ಒಂದಲ್ಲ ಒಂದು ವಿಚಾರಕ್ಕಾಗಿ ಚರ್ಚೆ ಆಗುತ್ತಲೇ ಇದ್ದಾರೆ ಹಾಗೆ ನಮ್ಮ ದರ್ಶನ್ ಅವರು ಕೂಡ ಒಂದಲ್ಲ ಒಂದು ವಿಷಯಕ್ಕೆ ಆಗಾಗ ಚರ್ಚೆ ಆಗುತ್ತಾ ಇರುತ್ತಾರೆ.
ದರ್ಶನ್ ಅವರಿಗೆ ಎಷ್ಟು ಅಭಿಮಾನಿ ಬಳಗ ಇದೆಯೋ ಅದೇ ರೀತಿಯಲ್ಲಿ ಒಂದಷ್ಟು ಜನರು ವಿರೋಧವನ್ನು ಸಹ ವ್ಯಕ್ತಪಡಿಸುತ್ತಾರೆ. ಇವರ ನೇರ ನಡೆ ಮತ್ತು ನುಡಿ ಕೆಲವರಿಗೆ ಇಷ್ಟ ಆಗದೇ ಇರಬಹುದು ದರ್ಶನ್ ಅವರ ಮಾತುಗಳಿಗೆ ಕೆಲವೊಂದಷ್ಟು ಟೀಕೆಗಳನ್ನು ಸಹ ನೀಡಿದ್ದಾರೆ. ನಟ ದರ್ಶನ್ ಅವರಿಗೆ ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇದಕ್ಕೆ ಉದಾಹರಣೆ ಎನ್ನುವಂತೆ ಇವರು ಮೈಸೂರಿನ ಹತ್ತಿರ ಒಂದು ಫಾರ್ಮ್ ಹೌಸ್ ಅನ್ನು ಸಹ ನಿರ್ಮಾಣ ಮಾಡಿ ಅಲ್ಲಿ ಹಲವಾರು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಾಕುತ್ತಾ ಇದ್ದಾರೆ. ಇವರು ಪ್ರಾಣಿ ಹಿಂ.ಸೆಯನ್ನು ಖಂ.ಡಿ.ಸುತ್ತಾರೆ.
ಎಲ್ಲೇ ಪ್ರಾಣಿಗಳು ಅಥವಾ ಗೋಶಾಲೆಗಳು ಯಾವುದಾದರು ತೊಂದರೆಯಲ್ಲಿ ಇದೆ ಎಂದರೆ ಅಲ್ಲಿಗೆ ಸಹಾಯ ಮಾಡುವಂತಹ ಒಂದು ಒಳ್ಳೆಯ ಮನಸ್ಸನ್ನು ಇವರು ಒಳಗೊಂಡಿದ್ದಾರೆ. ಚಿತ್ರರಂಗದಲ್ಲಿ ಇರುವಂತಹ ಹಲವರು ಸಾಮಾನ್ಯವಾಗಿ ಪ್ರಾಣಿ ಮತ್ತು ಪಕ್ಷಿಗಳ ಮೇಲೆ ದಯೆಯನ್ನು ತೋರಿಸುವುದಿಲ್ಲ ಕೇವಲ ಕಷ್ಟ ಎಂದು ಬಂದವರಿಗೆ ಸಹಾಯವನ್ನು ಮಾಡುತ್ತಾರೆ ಆದರೆ ಡಿ ಬಾಸ್ ದರ್ಶನ್ ಅವರು ಮೂಕ ಪ್ರಾಣಿಗಳ ಮನಸ್ಸನ್ನು ಸಹ ಅರ್ಥ ಮಾಡಿಕೊಳ್ಳುವಂತಹ ಒಂದು ಉತ್ತಮ ವ್ಯಕ್ತಿತ್ವವಾಗಿದೆ.
ಕೊರೋನದ ಕಾರಣದಿಂದಾಗಿ ಇಡಿ ವಿಶ್ವದಲ್ಲೇ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ದರ್ಶನ್ ಅವರು ಪ್ರಾಣಿಗಳಿಗೆ ಸಹಾಯ ಮಾಡಿ ಅವುಗಳನ್ನು ಸಂರಕ್ಷಿಸಿ ಎಂದು ಎಲ್ಲರಿಗೂ ಸಹ ಮನವಿ ಮಾಡಿ ಕೇಳಿಕೊಂಡಿದ್ದರು. ಇತ್ತೀಚೆಗೆ ಪ್ರವಾಹ ಹೆಚ್ಚಾಗಿ ನೀರು ಎಲ್ಲಾ ಕಡೆ ಸುತ್ತುವರೆದ ಕಾರಣದಿಂದಾಗಿ ಗೋ ಶಾಲೆಯಲ್ಲಿ ಹಸುಗಳು ಸಾಯುವಂತಹ ಪರಿಸ್ಥಿತಿಗೆ ಬಂದಿರುತ್ತದೆ ಅಂತಹ ಸಂದರ್ಭದಲ್ಲಿ ಅವುಗಳಿಗೆ ಆಹಾರದ ಅಭಾವ ಉಂಟಾಗಿ ಆ ಪ್ರಾಣಿಗಳು ತಿನ್ನಲು ಸಹ ಏನು ಇರಲಿಲ್ಲ ಅಂತಹ ಸಂದರ್ಭದಲ್ಲಿ ನಟ ದರ್ಶನ್ ಅವರು 40 ಟ್ರ್ಯಾಕ್ಟರ್ ನಲ್ಲಿ ಹಸುಗಳಿಗೆ ಪ್ರಾಣಿಗಳಿಗೆ ತಿನ್ನಲು ಆಹಾರವನ್ನು ನೀಡಿ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.
ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಹಸುಗಳು, ಕುದುರೆಗಳು ಹಾಗೆ ಅನೇಕ ಪಕ್ಷಿಗಳು ಸಹ ಇದ್ದು ಇವರು ಮೈಸೂರಿನ ಜೂನ್ ನಿಂದ ಕೆಲವೊಂದಷ್ಟು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ರೀತಿಯಾಗಿ ಪ್ರಾಣಿಗಳನ್ನು ಕಾಪಾಡಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿರುವವರು ನಮ್ಮ ಚಿತ್ರರಂಗದಲ್ಲಿ ದರ್ಶನ್ ಅವರು ಒಬ್ಬರೇ ಅನ್ನಿಸುತ್ತದೆ. ನಮ್ಮ ಚಿತ್ರರಂಗದಲ್ಲಿ ಈ ರೀತಿಯಾದಂತಹ ವ್ಯಕ್ತಿತ್ವವನ್ನು ಉಳ್ಳಂತಹವರು ಇರಬೇಕು ಆಗಿದ್ದಲ್ಲಿ ನಮ್ಮ ದೇಶದಲ್ಲಿ ಕೆಲವೊಂದಷ್ಟು ಬದಲಾವಣೆಗಳು ಅಂದರೆ ಉತ್ತಮವಾದಂತಹ ಕೆಲಸಗಳು ನಡೆಯುತ್ತದೆ. ದರ್ಶನ್ ಅವರ ಈ ಒಂದು ಒಳ್ಳೆಯ ಗುಣ ನಿಮಗೂ ಸಹ ಇಷ್ಟವಾದರೆ ತಪ್ಪದೆ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.