ದರ್ಶನ್ ಅವರು ನೇರ ನುಡಿಗೆ ಬಾಜಿನಾರಾದಂತಹ ವ್ಯಕ್ತಿ ಕೆಲವೊಮ್ಮೆ ಇವರು ಹೇಳುವಂತಹ ನೇರ ನುಡಿಗಳಿಂದಲೇ ಹಲವಾರು ಕಾಂಟ್ರವರ್ಸಿ ಹುಟ್ಟಿಕೊಳ್ಳುತ್ತದೆ. ಆದರೆ ದರ್ಶನ್ ಅವರು ಎಷ್ಟೇ ವಿವಾದವಾದರೂ ಕೂಡ ಕಾಂಟ್ರವರ್ಸಿ ಹುಟ್ಟಿಕೊಂಡರೂ ಕೂಡ ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾದರೂ ಕೂಡ ಅದ್ಯಾವುದರ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ವಿಚಾರವನ್ನು ಹೇಳಬೇಕಾದರೂ ಕೂಡ ಅದನ್ನು ಬಹಳ ಸ್ಪಷ್ಟವಾಗಿ ನಿಖರವಾಗಿ ಆ ವ್ಯಕ್ತಿಗೆ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ ಎಲ್ಲಿಯೂ ಕೂಡ ಇವರು ತಮ್ಮ ಮಾತಿನಲ್ಲಿ ಫಿಲ್ಟರ್ ಮಾಡುವುದಿಲ್ಲ. ಇತ್ತೀಚಿಗಷ್ಟೇ ನಟ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯಕಾಗಿ ಯೂಟ್ಯೂಬರ್ ಚಾನೆಲ್ ಒಂದರ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು ಈ ಸಮಯದಲ್ಲಿ ನಿರೂಪಕಿ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾದ ಬಗ್ಗೆ ಪ್ರಶ್ನೆ ಎಂದನ್ನು ಕೇಳುತ್ತಾರೆ.
ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ಈ ಸಿನಿಮಾ ಮೂಡಿ ಬರುತ್ತದೆಯಾ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿದಂತಹ ದರ್ಶನ ಅವರವ ನಾನು ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅಥವಾ ಬೇರೆ ಸಿನಿಮಾ ಇಂಡಸ್ಟ್ರಿಯವರ ಬಳಿ ಹೋಗಿ ಕಾಕಾ ಹಿಡಿಯುವ ಕೆಲಸವನ್ನು ಮಾಡುವುದಿಲ್ಲ. ಸಿನಿಮಾ ಗೋಸ್ಕರ ಯಾರಿಗೂ ಬಕೆಟ್ ಹಿಡಿಯುವಂತಹ ಕೆಲಸ ಆಗಿರಬಹುದು ಅಥವಾ ಇನ್ಯಾರದೋ ಕಾಲಿಗೆ ಬೀಳುವಂತಹ ಕೆಲಸವನ್ನಾಗಲಿ ನಾನು ಮಾಡುವುದಿಲ್ಲ. ನನಗೆ ನನ್ನದೇ ಆದಂತಹ ಒಂದು ಟೆರಿಟರಿ ಅಥವಾ ಬೌಂಡರಿ ಇದೆ ನಾನು ಆ ಬೌಂಡರಿಯನ್ನು ಬಿಟ್ಟು ಎಂದಿಗೂ ಕೂಡ ಆಚೆ ಹೋಗುವುದಿಲ್ಲ.
ನಾನು ಕನ್ನಡ ಭಾಷೆಯಲ್ಲಿ ಮಾತ್ರ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಎಲ್ಲಾ ಕೆಲಸವನ್ನು ಮಾಡಿಕೊಡುತ್ತೇನೆ ಅಷ್ಟೇ ಅಲ್ಲದೆ ಎಷ್ಟೇ ಪ್ರಮೋಷನ್ ಕಾರ್ಯವಿರಲಿ ಅಥವಾ ಸಿನಿಮಾ ಬಿಡುಗಡೆ ಕಾರ್ಯಕ್ರಮ ಇದರಲ್ಲಿ ಎಲ್ಲ ಕೂಡ ನಾನು ಭಾಗವಹಿಸುತ್ತೇನೆ. ಎಲ್ಲದರ ಕೆಲಸವನ್ನು ಕೂಡ ನಾನು ಅಷ್ಟೇ ನಿಷ್ಠೆಯಿಂದ ಮಾಡುತ್ತೇನೆ ನಾನು ಕನ್ನಡಕ್ಕೆ ಮಾತ್ರ ಸೀಮಿತ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಯಲ್ಲೂ ಕೂಡ ನನ್ನ ಸಿನಿಮಾ ರಿಲೀಸ್ ಆಗುತ್ತದೆ ಡಬ್ಬಿಂಗ್ ಆಗುತ್ತದೆ. ಆದರೆ ಬೇರೆ ಬೇರೆ ರಾಜ್ಯಕ್ಕೆ ಹೋಗಿ ನನ್ನ ಸಿನಿಮಾದ ಬಗ್ಗೆ ಪ್ರಚಾರ ಮಾಡುವುದು ಇರಲಿ ಅಥವಾ ಬೇರೆಯವರ ಬಳಿ ಹೋಗಿ ವಿನಮ್ರತೆಯಿಂದ ಕೇಳಿಕೊಳ್ಳುವುದಾಗಲಿ ಅಥವಾ ಅವರಿಗೆ ಬಕೆಟ್ ಹಿಡಿಯುವುದಾಗಲಿ ಅಥವಾ ಅವರನ್ನು ಒಲಿಸಿಕೊಳ್ಳುವುದಕ್ಕೆ ನಾನಾ ರೀತಿಯಾದಂತಹ ಪ್ರಯತ್ನ ಮಾಡುವುದಾಗಲಿ ಇದು ಯಾವುದನ್ನು ಕೂಡ ನಾನು ಮಾಡುವುದಿಲ್ಲ. ಸಿನಿಮಾವನ್ನು ಡಬ್ಬಿಂಗ್ ಮಾಡಿ ಕೊಡುತ್ತೇವೆ ನನ್ನ ಸಿನಿಮಾ ಅವರು ನೋಡಲಿ ಚೆನ್ನಾಗಿದ್ದರೆ ಬಿಡುಗಡೆ ಮಾಡಲಿ ಇಲ್ಲದಿದ್ದರೆ ಇಲ್ಲ ಅಷ್ಟೇ ಎಂದು ಖಡಕ್ಕಾಗಿ ಹೇಳಿದ್ದಾರೆ.
ಸದ್ಯಕ್ಕೆ ಯೌಟ್ಯೂಬ್ ವಾಹಿನಿ ಒಂದರಲ್ಲಿ ನಟ ದರ್ಶನ್ ಅವರು ಹೇಳಿದಂತಹ ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದು ಬೇರೊಬ್ಬ ಸ್ಟಾರ್ ನಟನಿಗೆ ಟಂಗ್ ಕೊಡುವ ಮಾದರಿಯಲ್ಲಿ ಅಥವಾ ಟಕ್ಕರ್ ಕೊಡುವ ಮಾದರಿಯಲ್ಲಿ ಇದೆ ಎಂಬುದು ಕೆಲವು ಸಿಹಿ ರಸಿಕರ ಅಭಿಪ್ರಾಯವಾಗಿದೆ. ಏಕೆಂದರೆ ಈಗಾಗಲೇ ತೆರೆಕಟ್ಟಿರುವಂತಹ ಕೆಜಿಎಫ್ ಸಿನಿಮಾ ಆಗಿರಬಹುದು ಅಥವಾ ವಿಕ್ರಂತ್ ರೋಣ ಸಿನಿಮಾ ಆಗಿರಬಹುದು ಇವೆರಡು ಕೂಡ ಪ್ಲಾನ್ ಇಂಡಿಯಾ ಸಿನಿಮಾ. ಅಷ್ಟೇ ಅಲ್ಲದೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಡಬ್ಬಿಂಗ್ ಆಗಿದೆ. ಈ ಎಲ್ಲಾ ಡಬ್ಬಿಂಗ್ ಕೆಲಸಕ್ಕೂ ಹಾಗೂ ಸಿನಿಮಾ ಬಿಡುಗಡೆ ಕಾರ್ಯಕ್ರಮ ಮತ್ತು ಪ್ರಮೋಷನ್ ಕಾರ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ ಸುದೀಪ್ ಅವರು ಹೋಗಿದ್ದಾರೆ. ಎಲ್ಲಾ ಕಡೆಯಲ್ಲೂ ಕೂಡ ಭರ್ಜರಿ ಪ್ರಚಾರವನ್ನು ಮಾಡಿದ್ದಾರೆ ಹಾಗಾಗಿ ಈ ಇಬ್ಬರು ನಟರಿಗೆ ಏನಾದರೂ ದರ್ಶನ್ ಅವರು ಈ ರೀತಿ ಟಂಗ್ ಕೊಟ್ಟಿರಬಹುದ ಎಂಬ ಹಲವಾರು ಅನುಮಾನಗಳಿಗೆ ದರ್ಶನವರು ಕೊಟ್ಟಿರುವಂತಹ ಈ ಹೇಳಿಕೆ ಹೆಡೆ ಮಾಡಿಕೊಟ್ಟಿದೆ.
ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾ ಭಾರತದಲ್ಲಿಯೇ ಒಂದು ದೊಡ್ಡ ಕ್ರಾಂತಿಯನ್ನು ಹುಟ್ಟು ಹಾಕಬಹುದು ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಬಹುದು ಎಂಬ ನೀರಿಕ್ಷೆಯಲ್ಲಿ ಇದ್ದರೂ. ಆದರೆ ಇದೀಗ ನಟ ದರ್ಶನ್ ಅವರೆ ಸ್ವತಃ ಕ್ರಾಂತಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಏಕೆಂದರೆ ನಾನು ಕನ್ನಡಕ್ಕೆ ಮಾತ್ರ ಸೀಮಿತ ನಾನು ಕನ್ನಡಿಗರ ಪ್ರಮೋಷನ್ ಕಾರ್ಯದಲ್ಲಿ ಮಾತ್ರ ಭಾಗವಹಿಸುತ್ತೆನೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇದಲ್ಲದೆ ಕ್ರಾಂತಿ ಸಿನಿಮಾಗೆ ಯಾವುದೇ ಮಾಧ್ಯಮಗಳ ಸಪೋರ್ಟ್ ಇಲ್ಲ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಇವೆಲ್ಲದರ ಬೆನ್ನಲ್ಲೇ ನಟ ದರ್ಶನ್ ಅವರು ಇದ್ದಕ್ಕಿದ್ದ ಹಾಗೆ ಇಂತಹದೊಂದು ನಿರ್ಧಾರವನ್ನು ತೆಗೆದುಕೊಂಡಿರಬಹುದು. ಇನ್ನು ಸಂದರ್ಶನದಲ್ಲಿ ಮಾತನಾಡುವಾಗ ದರ್ಶನ್ ಅವರು ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ಭಾವುಕಾರಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ.