ಡಿ ಬಾಸ್ ದಿನಚರಿ
ದರ್ಶನ್ ಅವರಿಗೆ ಫ್ಯಾನ್ಸ್ ಸಪೋರ್ಟ್ ಹೇಗಿದೆ ಎಂದರೆ ಮೀಡಿಯಾ ಬ್ಯಾನ್ ಮಾಡಿದರು ಕೂಡ ಇಂದು ಕರ್ನಾಟಕದ ಕಡೆ ಹಳ್ಳಿಯ ದರ್ಶನ್ ಅಭಿಮಾನಿಗೂ ತಲುಪುವ ಹಾಗೆ ಕ್ರಾಂತಿ ಸಿನಿಮಾದ ಪ್ರಚಾರವನ್ನು ಮೀಡಿಯಾಗೆ ತೊಡೆ ತಟ್ಟಿ ಅಭಿಮಾನಿಗಳೇ ಮಾಡುತ್ತಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಕ್ರಾಂತಿ ಸಿನಿಮಾವು ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿ ಮುಕ್ತಾಯಗೊಂಡಿದ್ದು ಪ್ರಚಾರ ಕಾರ್ಯದಲ್ಲಿ ಎಲ್ಲರೂ ಬಿಸಿ ಆಗಿದ್ದಾರೆ. ಅದರಲ್ಲೂ ನಾಯಕ ನಟ ಆದ ದರ್ಶನ್ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಅನೇಕ ಯೂಟೂಬ್ ಚಾನಲ್ಗಳಿಗೆ ತಮ್ಮ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಈ ಸಂದರ್ಶನದಲ್ಲಿ ಅವರು ಮಾತನಾಡುತ್ತಿರುವ ಕೆಲವು ವಿಷಯಗಳು ವಿವಾದವನ್ನು ಕೂಡ ಸೃಷ್ಟಿಸುತ್ತಿದೆ. ಈಗಷ್ಟೇ ಮೊನ್ನೆ ಮೊನ್ನೆ ಅದೃಷ್ಟ ಲಕ್ಷ್ಮಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವ ವಿಚಾರಕ್ಕೆ ಹಲವು ಮಂದಿ ಇವರ ಮೇಲೆ ಬೇಸರ ಪಟ್ಟಿಕೊಂಡಿದ್ದಾರೆ. ಆದರೆ ದರ್ಶನ್ ಅವರು ಬಹಳ ನೇರ ನುಡಿ ಹೊಂದಿರುವವರು. ಇದ್ದದ್ದನ್ನು ಇದ್ದ ಹಾಗೆ ಮುಖದ ಮೇಲೆ ಹೇಳಿಬಿಡುವ ಇವರು ರಿಯಾಲಿಟಿ ಕಿಂಗ್.
ಯಾಕೆಂದರೆ ಆಡು ಬಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಯಾವುದೇ ಫಿಲ್ಟರ್ ಇಲ್ಲದೆ ಸಾಮಾನ್ಯ ಜನ ಮಾತನಾಡುವಂತೆ ಸತ್ಯವನ್ನು ಮಾತನಾಡಿ ಬಿಡುತ್ತಾರೆ. ಇದೇ ನೆಪ ಹೇಳಿ ಅವರನ್ನು ಎಷ್ಟೋ ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಆದರೆ ನಿಧಾನವಾಗಿ ವಿಚಾರ ಮಾಡಿ ನೋಡಿದಾಗ ಈತ ಎಷ್ಟೇ ಸ್ಟ್ರೈಟ್ ಫಾರ್ವರ್ಡ್ ಆಗಿದ್ದರು ಮಾತುಗಳಲ್ಲಿ ನಿಜ ಇದೆ ಎಂದು ಅರ್ಥವಾಗಿ ಈತನನ್ನು ಪ್ರೀತಿಸಲು ಶುರು ಮಾಡುತ್ತಾರೆ.
ಇಂತಹದೇ ಒಂದು ಮಾತನ್ನು ಕ್ರಾಂತಿ ಸಂದರ್ಶನದ ಹೇಳಿ ದರ್ಶನ್ ಅವರು ಎಲ್ಲರಿಗೂ ಶಾಕ್ ಉಂಟು ಮಾಡಿದ್ದಾರೆ. ಯಾಕೆಂದರೆ ಹೀರೋಗಳು ಎಂದರೆ ಸಾಮಾನ್ಯವಾಗಿ ಎಲ್ಲರೂ ಅವರನ್ನು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ. ಡಾಕ್ಟರ್ ರಾಜಕುಮಾರ್ ಕಾಲದಿಂದಲೂ ಈ ರೀತಿ ನಡೆದುಕೊಂಡು ಬಂದಿದ್ದು ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮ ನೋಡಿ ಎಷ್ಟೋ ಮಂದಿ ಸಿಟಿ ತೊರೆದು ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ಆರಂಭಿಸಿದ್ದರು.
ಹಾಗಾಗಿ ನಮ್ಮಲ್ಲಿ ಹೀರೋ ಎಂದರೆ ಪಾಸಿಟಿವ್ ಒಳ್ಳೆಯತನ ಒಳ್ಳೆಯ ವ್ಯಕ್ತಿತ್ವ ಹಾಗೂ ಗುಣ ಎನ್ನುವುದೇ ನಮ್ಮ ತಲೆಯಲ್ಲಿ ಓಡುತ್ತಿದೆ ಆದರೆ ಅವರಿಗೂ ಸಹ ಒಂದು ಪರ್ಸನಲ್ ಲೈಫ್ ಇರುತ್ತದೆ. ತೆರೆ ಮೇಲೆ ಅವರು ಒಂದು ಪಾತ್ರವನ್ನಷ್ಟೇ ನಿಭಾಯಿಸುತ್ತಾರೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಹಾಗೆ ದರ್ಶನ್ ಅವರ ದಿನಚರಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ದರ್ಶನ್ ಅವರು ಸಂದರ್ಶಕ ಕೇಳಿದ ನಿಮ್ಮ ದಿನ ಹೇಗೆ ಶುರುವಾಗುತ್ತದೆ ಎನ್ನುವ ಪ್ರಶ್ನೆಗೆ.
ಬೆಳಗ್ಗೆ ನಾನು 4:30 ಇಂದ 5:00 ಎದ್ದು ಬಿಡುತ್ತೇನೆ ರಾತ್ರಿ ಎಷ್ಟೇ ಲೇಟಾಗಿ ಮಲಗಿದರೂ ಕೂಡ ನನಗೆ ಬೇಗ ಏಳುವ ಅಭ್ಯಾಸ ಇದೆ. ಜಾಸ್ತಿ ಹೊತ್ತು ನಿದ್ದೆ ಮಾಡುವುದೇ ಇಲ್ಲ ಎದ್ದ ಕೂಡಲೇ ಎರಡು ಸಿಗರೇಟ್ ಹೊಡೆಯುತ್ತೇನೆ. ನಂತರ ನನ್ನ ಟ್ರೈನಿಂಗ್ ಬರುತ್ತಾರೆ ಎಂಟು ವರ್ಷಗಳಿಂದ ಹೇಮಂತ್ ಎನ್ನುವವರೇ ನನಗೆ ಕೋಚ್ ಆಗಿದ್ದಾರೆ. ಅವರ ಜೊತೆ ಜೋಶ್ ಆಗಿ ವರ್ಕ್ ಔಟ್ ಮಾಡಲು ಹೋಗುತ್ತೇನೆ ಅದಕ್ಕೂ ಮುನ್ನ ಟೀ ಕುಡಿದು ನಂತರ ಪ್ರೋಟಿನ್ ಸಹ ಕುಡಿಯುತ್ತೇನೆ ಆಮೇಲೆ ನಾನು ಮತ್ತೆ ಸಿಗರೇಟ್ ಹೊಡೆಯಲೇಬೇಕು ಎಂದು ಹೇಳಿ ಕೊಂಡಿದ್ದಾರೆ.
https://www.instagram.com/reel/Cl9FvEOr1qv/?igshid=MDJmNzVkMjY=
ಇದನ್ನು ಕೇಳಿದ ಜನತೆ ಅದರಲ್ಲೂ ದರ್ಶನ್ ಅಭಿಮಾನಿಗಳು ಈ ರೀತಿ ತಮಗಿರುವ ಒಂದು ಕೆಟ್ಟ ಅಭ್ಯಾಸದ ಬಗ್ಗೆ ರಾಜ ರೋಷವಾಗಿ ಮೀಡಿಯಾ ಮುಂದೆ ಹೇಳಿಕೊಳ್ಳಲು ಎಲ್ಲ ಹೀರೋಗಳಿಗೂ ಧೈರ್ಯ ಇರುವುದಿಲ್ಲ. ನಮ್ಮ ಬಾಸ್ ಇದ್ದದ್ದು ಇದ್ದ ಹಾಗೇನೆ ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.