ಕ್ರಾಂತಿ ಚಿತ್ರದ ಸಲುವಾಗಿ ನಟ ದರ್ಶನ್ ರವರು ಈಗಾಗಲೇ ಬಿಜಿ ಇದ್ದಾರೆ. ಇವರು ಕೆಲಸದಲ್ಲಿ ಬಿಜಿ ಇದ್ದರೂ ಕೂಡ ತಮ್ಮ ಸಂಸಾರಕ್ಕಾಗಿ ಕೆಲವು ಸಮಯವನ್ನು ಎತ್ತಿಡುತ್ತಾರೆ. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ರವರು ತಮ್ಮ ಮಗ ವಿನಿಷ ಹಾಗೂ ಪತ್ನಿ ವಿಜಯ ಲಕ್ಷ್ಮಿಯವರ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆದರೆ ಈವರೆಗೂ ಯಾವುದೇ ಕಾರ್ಯಕ್ರಮಗಳಾಗಲಿ, ವೇದಿಕೆಗಳ ಮೇಲೆ ಆಗಲಿ ತಮ್ಮ ಕುಟುಂಬದ ಬಗ್ಗೆ ಎಲ್ಲಿಯೂ ದರ್ಶನ್ ರವರು ಮಾತನಾಡಿಲ್ಲ.
ಆದರೆ ಇತ್ತೀಚಿಗೆ ಕ್ರಾಂತಿ ಚಿತ್ರದ ಬಗ್ಗೆ ಸಂದರ್ಶನವನ್ನು ನೀಡುವಾಗ ಡಿ ಬಾಸ್ ದರ್ಶನ್ ರವರು ತಮ್ಮ ಮಗನ ಬಗ್ಗೆ ಮಾತನಾಡಿರುವುದು ವಿಶೇಷ ಎನಿಸಿದೆ. ತಮ್ಮ ಮಗನ ಬಗ್ಗೆ ಕೆಲವೊಂದು ವಿಷಯಗಳನ್ನು ಮೀಡಿಯಾಗಳ ಮುಂದೆ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕ್ರಾಂತಿ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಮಾತನಾಡಿದ ದರ್ಶನ್ ರವರು ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕ್ರಾಂತಿ ಚಿತ್ರವು ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ ಈ ಬಗ್ಗೆ ಪ್ರಶ್ನೆಗಳನ್ನೂ ದರ್ಶನ್ ರವರ ಅಭಿಮಾನಿಗಳು ಕೂಡ ಸಂತೋಷ ಪಟ್ಟಿದ್ದಾರೆ.
ದರ್ಶನ್ ರವರಿಗೆ ಅಭಿಮಾನಿಗಳು ದೊಡ್ಡಮಟ್ಟದಲ್ಲಿದ್ದಾರೆ, ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕ ನಟ ಎಂದರೆ ದರ್ಶನ್ ರವರು. ಇನ್ನು ಕ್ರಾಂತಿ ಚಿತ್ರದ ಪ್ರೇಸ್ ಮೀಟನ್ನು ಮಾಡಿ ಮಾತನಾಡುವಾಗ ದರ್ಶನ್ ರವರು ತಮ್ಮ ಶಾಲೆಯ ಜೀವನದ ಬಗ್ಗೆ ನೆನೆಸಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದರು. ದರ್ಶನ್ ರವರು ಶಾಲೆಗೆ ಹೋಗುತ್ತಿರುವಾಗ 40 ರಿಂದ 60 ಪೈಸೆ ಪ್ಲೀಸ್ ಗಳನ್ನು ಪ್ರತಿ ದಿವಸ ಕಟ್ಟುತ್ತಿದ್ದರಂತೆ.
ಆದರೆ ಈಗಿನ ಕಾಲದ ಮಕ್ಕಳಿಗೆ ಯಾವುದೇ ತರಹದ ಕಷ್ಟವಿಲ್ಲ ಜೊತೆಗೆ ಲಕ್ಷಾಂತರ ರೂಪಾಯಿಗಳನ್ನು ಬರಿ ವಿದ್ಯೆಗಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಹೇಳುವಾಗ ತಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಿದ ವೆಚ್ಚವನ್ನು ದರ್ಶನ್ ರವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮಗನ ಸ್ಕೂಲ್ ಫೀಸ್ ಬಗ್ಗೆ ಮಾತನಾಡಿದ ದರ್ಶನ್ ಅವರು ವಿನಿಶ್ ಸ್ಕೂಲಿಗೆ ಫೀಸ್ ಗಾಗಿ ಸುಮಾರು ಎಂಟು ಲಕ್ಷವನ್ನು ಪ್ರತಿವರ್ಷ ಕಟ್ಟುತ್ತಾರೆ.
ದರ್ಶನ್ ರವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕದ ಎಲ್ಲೆಡೆ ನಿರೀಕ್ಷೆಗಳನ್ನು ಹೆಚ್ಚು ಮಾಡಿದೆ ಈ ಬಗ್ಗೆ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ. ಹೌದು ಸ್ನೇಹಿತರೆ ಕ್ರಾಂತಿ ಚಿತ್ರದ ಬಗ್ಗೆ ಹೆಚ್ಚು ಕುತೂಹಲವಿದ್ದು ನಿರೀಕ್ಷೆಗಳು ಕೂಡ ಹೆಚ್ಚಾಗಿದೆ. ಇನ್ನು ವಿನಿಶ್ ರವರು ಕನ್ನಡ ಚಿತ್ರರಂಗಕ್ಕೆ ತರುತ್ತೀರಾ ಎಂದು ಜನರು ಕೇಳಿದ ಪ್ರಶ್ನೆಗೆ ದರ್ಶನ್ ರವರು ಹೀಗೆ ಉತ್ತರಿಸಿದ್ದಾರೆ.
ವಿನಿಶ್ ಇನ್ನು ಚಿಕ್ಕವನು ಅವನಿನ್ನು ಓದಬೇಕಾಗಿದೆ ಅವನನ್ನು ಈಗಲೇ ಚಿತ್ರರಂಗಕ್ಕೆ ತರಲು ಇಷ್ಟವಿಲ್ಲ ನನ್ನ ಹಾಗೆ ನನ್ನ ಮಗನು ಓದುವುದನ್ನು ಅರ್ಧಕ್ಕೆ ನಿಲ್ಲಿಸುವುದು ನನಗೆ ಇಷ್ಟವಿಲ್ಲ ಅವರು ನಮ್ಮ ಹಾಗೆ ಕಷ್ಟ ಅನುಭವಿಸುವುದು ಇಷ್ಟವಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಡಿ ಬಾಸ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ಪುತ್ರನಾದ ವಿನೀಶ್ ರವರು ಈಗಾಗಲೇ ಕೆಲವು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಾರೆ.
ದರ್ಶನ್ ಅಭಿಮಾನಿಗಳು ವಿನೀಶ್ ನನ್ನು ಚೋಟ ಬಾಸ್ ಎಂದು ಕರೆಯುತ್ತಾರೆ. ಇನ್ನು ಈಗಾಗಲೇ ಕ್ರಾಂತಿ ಚಿತ್ರದ ಬಿಡುಗಡೆಯ ಡೇಟ್ ಅನ್ನು ಈಗಾಗಲೇ ರಿವಿಲ್ ಆಗಿದ್ದು ಕರ್ನಾಟಕ ಜನತೆ ಸಿನಿಮಾಗಾಗಿ ಕಾಯುತ್ತಿದೆ. ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ ನಡುವಿನ ವ್ಯತ್ಯಾಸವನ್ನು ತೋರಿಸಲಾಗಿದೆ ಹಾಗಾಗಿ ಕೆಲವು ಅಭಿಮಾನಿಗಳು ಈ ಸಿನಿಮಾ ಮಾಡಿರುವ ನೀವು ನಿಮ್ಮ ಮಗನನ್ನು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಏಕೆ ಸೇರಿಸಬಾರದು ಎಂದು ಪ್ರಶ್ನೆ ಕೇಳಿದ್ದಾರೆ. ಈ ವಿಚಾರದ ಬಗ್ಗೆ ದರ್ಶನವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಮುಂದಿನ ದಿನದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.