ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್

ಕಾಂತ್ರಿ ಸಿನಿಮಾ ಸಂದರ್ಶನ

ಸದ್ಯಕ್ಕೆ ಎಲ್ಲಾ ಕಡೆ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದೆ. ಮಾಧ್ಯಮಗಳು ದರ್ಶನವರ ಕುರಿತಾಗ ಯಾವುದೇ ವರದಿ ಪ್ರಸಾರ ಮಾಡುವುದಿಲ್ಲ ಎಂದು ಬ್ಯಾನ್ ಮಾಡಿದ್ದರೂ ಕೂಡ ದರ್ಶನ್ ಅಭಿಮಾನಿಗಳಿಗಾಗಿ ಯುಟ್ಯೂಬ್ ಚಾನೆಲ್ ಗಳು ದರ್ಶನ್ ಅವರ ಸಂದರ್ಶನ ನಡೆಸುತ್ತಿವೆ. ಈ ಸಂದರ್ಶನಗಳಿಂದ ಯೂಟ್ಯೂಬ್ ಚಾನೆಲ್ ಗಳು ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವುದಂತೂ ಸುಳ್ಳಲ್ಲ.

ದರ್ಶನ್ ಅವರು ಸಹ ಎಲ್ಲ youtube ಚಾನೆಲ್ ಗಳಿಗೂ ಸಂದರ್ಶನ ಕೊಡುವುದಾಗಿ ಹೇಳಿ ಚಿತ್ರತಂಡ ಸಮೇತವಾಗಿ ಹಾಗೂ ವೈಯಕ್ತಿಕವಾಗಿ ಕೂಡ ಈ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲಿ ಕೇಳುತ್ತಿರುವ ಸಿನಿಮಾ ಕುರಿತ ಪ್ರಶ್ನೆಗಳು ಹಾಗೂ ವೈಯಕ್ತಿಕ ವಿಚಾರದ ಪ್ರಶ್ನೆಗಳಿಗೂ ಕೂಡ ತುಂಬಾ ವಿವೇಕದಿಂದ ವಿಚಾರ ಮಾಡಿ ಮತ್ತು ತಮ್ಮ ಅನುಭವಗಳ ಸಾರವನ್ನು ಸೇರಿಸಿ ಉತ್ತರಿಸುತ್ತಿರುವ ದರ್ಶನ್ ಅವರ ಪ್ರತಿ ಮಾತು ಕೂಡ ಸಿನಿಮಾ ಮೇಲಿನ ಕುತೂಹಲ ಹಾಗೂ ದರ್ಶನ ಮೇಲಿನ ಅಭಿಮಾನ ಎರಡನ್ನು ಹೆಚ್ಚಿಸುತ್ತಿದೆ.

ಹೀಗೆ ಸಿನಿಬಝ್ ಎನ್ನುವ ಯೂ ಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ದರ್ಶನ್ ಅವರಿಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ. ಸದ್ಯಕ್ಕೆ ಕರ್ನಾಟಕದಲ್ಲಿ ಎಲ್ಲರೂ ಕಂಡಂತೆ ಡಾಕ್ಟರ್ ರಾಜಕುಮಾರ್ ಅಂತಹ ಮೇರುನಟನಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇತ್ತು. ಅವರನ್ನು ಸಾಕಷ್ಟು ಜನ ಆದರ್ಶವಾಗಿ ತೆಗೆದುಕೊಂಡಿದ್ದರು ಇಂದು ಅವರು ಇಲ್ಲವಾಗಿದ್ದರೂ ಕೂಡ ಅನೇಕ ಮಂದಿ ಅವರಿಗೆ ಅಭಿಮಾನಿಗಳಾಗಿದ್ದಾರೆ.

ಹಾಗೆ ಈಗ ಎಲ್ಲರೂ ಮಾತನಾಡುತ್ತಾರೆ ರಾಜಕುಮಾರ್ ಅವರನ್ನು ಬಿಟ್ಟರೆ ದರ್ಶನ್ ಅವರಿಗೆ ಅತಿ ಹೆಚ್ಚು ಫ್ಯಾನ್ಸ್ ಇರುವುದು ಎಂದು ಈ ಬಗ್ಗೆ ನೀವೇನಂತೀರಾ ಅಂದಾಗ ಪ್ರಶ್ನೆಯನ್ನು ಪೂರ್ತಿ ಮಾಡಲು ಕೂಡ ಬಿಡದ ದರ್ಶನ್ ಅವರು ಇದನ್ನು ಇಲ್ಲಿಗೆ ಸ್ಟಾಪ್ ಮಾಡು ಎಂದು ಹೇಳುತ್ತಾರೆ. ಯಾಕೆ ಎಂದು ದರ್ಶನ್ ಅದಕ್ಕೆ ಉತ್ತರ ಕೂಡ ಹೇಳುತ್ತಾರೆ ಅಭಿಮಾನಿಗಳ ವಿಚಾರದಲ್ಲಿ ದೊಡ್ಡ ಅಭಿಮಾನಿ ಬಳಗ, ಚಿಕ್ಕ ಅಭಿಮಾನಿ ಬಳಗ ಅಥವಾ ಅಭಿಮಾನಿಗಳ ಸಂಖ್ಯೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ.

ಅಭಿಮಾನಿಗಳು ಎಷ್ಟು ಜನ ಇದ್ದರೂ ಕೂಡ ಅಭಿಮಾನಿಗಳೇ ಒಬ್ಬೇ ಒಬ್ಬ ಅಭಿಮಾನಿಯನ್ನು ಸಹ ಅಷ್ಟು ಈಜಿಯಾಗಿ ಸಂಪಾದಿಸಲು ಆಗುವುದಿಲ್ಲ ಅದನ್ನು ಅವರು ಕಷ್ಟಪಟ್ಟು ಸಂಪಾದಿಸಿರುತ್ತಾರೆ. ಹೀಗಾಗಿ ಅಭಿಮಾನಿಗಳು ಎನ್ನುವುದೇ ದೊಡ್ಡ ವಿಷಯ ನಾನು ಸಹ ನನ್ನ ಜೀವನದಲ್ಲಿ ಅವರನ್ನು ಸೆಲೆಬ್ರೆಟಿಗಳು ಎಂದೇ ಕರೆಯುತ್ತೇನೆ. ಅವರ ಬಗ್ಗೆ ಅಪಾರವಾದ ಪ್ರೀತಿ ಇದೆ. ಹಾಗೆ ನನಗೆ ಇರುವಷ್ಟು ಅಭಿಮಾನಿಗಳು ಎಲ್ಲಾ ನಟರಿಗೂ ಸಹ ಇದ್ದಾರೆ.

ಈ ವಿಚಾರದಲ್ಲಿ ಲೆಕ್ಕ ಹಾಕಿ ತಾರತಮ್ಯ ಮಾಡಿ ಹೆಚ್ಚು ಕಡಿಮೆ ಎಂದು ಹೇಳುವುದೇ ತಪ್ಪು. ನೀವು ಕೇಳುತ್ತಿರುವ ಪ್ರಶ್ನೆ ತಪ್ಪು ಹಾಗಾಗಿ ನಿಲ್ಲಿಸಿ ಎಂದಿದ್ದಾರೆ. ದಚ್ಚುವಿನ ಈ ಮಾತು ಎಲ್ಲರಿಗೂ ಬಹಳ ಮೆಚ್ಚುಗೆ ಆಗಿದ್ದು ದರ್ಶನ್ ಅವರು ಒಪ್ಪದಿದ್ದರೂ ಸಹ ಸದ್ಯಕ್ಕೆ ಕರ್ನಾಟಕದಲ್ಲಿ ಸ್ಟಾರ್ ನಟರ ಪಟ್ಟಿಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಂಬರ್ ನಟ ದರ್ಶನ್ ಅವರೇ ಆಗಿದ್ದಾರೆ.

ಇದೇ ಸಂದರ್ಶನದಲ್ಲಿ ಮುಂದುವರೆದು ನೀವು ಬಹಳ ಚೆನ್ನಾಗಿ ಮಿಮಿಕ್ರಿ ಮಾಡುತ್ತೀರಾ ಸದಾ ಸುತ್ತ ನಡೆಯುವುದರ ಬಗ್ಗೆ ಗಮನ ಹರಿಸುವವರಿಗೆ ಮಾತ್ರ ಇಂಥಹ ಟ್ಯಾಲೆಂಟ್ ಇರಲು ಸಾಧ್ಯ ಹಾಗಾಗಿ ನೀವು ಎಲ್ಲವನ್ನು ಗಮನಿಸುತ್ತೀರಾ ಎಂದು ಕೇಳಿದ ನಿರೂಪಕಿ ಪ್ರಶ್ನೆಗೆ ನನಗೆ 360 ಡಿಗ್ರಿ ಸೆಲ್ಸಿಯಸ್ ಕಣ್ಣು ಇದೆ. ನಾನು ಇಲ್ಲಿ ಕುಳಿತು ನಿಮ್ಮ ಜೊತೆ ಮಾತನಾಡುತ್ತಿದ್ದರೂ ನನ್ನ ಸುತ್ತಮುತ್ತ ಏನಾಗುತ್ತಿದೆ ಎನ್ನುವುದರ ಅರಿವು ನನಗಿರುತ್ತದೆ ಖಂಡಿತವಾಗಿಯೂ ನಾನು ಅಂತಹ ಸೂಕ್ಷ್ಮ ವ್ಯಕ್ತಿ ಎಂದು ದರ್ಶನ್ ಉತ್ತರಿಸಿದ್ದಾರೆ.

Leave a Comment

WhatsApp Group Join Now
Telegram Group Join Now