ಕ್ರಾಂತಿ ಸಿನಿಮಾ ಸಂದರ್ಶನದ ಸಮಯ
ನಟ ದರ್ಶನವರು ಕಳೆದ ಒಂದು ತಿಂಗಳಿನಿಂದ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ. ಬ್ಯಾನ್ ಮಾಡಿದ ಪರಿಣಾಮ ಕ್ರಾಂತಿ ಸಿನಿಮಾಗೆ ಸರಿಯಾದ ರೀತಿಯ ಪ್ರಮೋಷನ್ ದೊರೆಯುತ್ತಿಲ್ಲ ಹಾಗಾಗಿ ಸ್ವತಃ ದರ್ಶನ್ ಅವರೇ ಇದೀಗ ಪ್ರತಿನಿತ್ಯವೂ ಕೂಡ ಒಂದೊಂದು ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುವುದರ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಕ್ರಾಂತಿ ಸಿನಿಮಾದಲ್ಲಿ ಇರುವಂತಹ ಕೆಲವೊಂದು ವಿಚಾರವನ್ನು ಹೇಳಿ ತಮ್ಮ ಅಭಿಮಾನಿಗಳಿಗೆ ಈ ಸಿನಿಮಾವನ್ನು ಯಾಕೆ ನೋಡಬೇಕು. ಈ ಸಿನಿಮಾ ಮಾಡಿರುವ ಉದ್ದೇಶವಾದರೂ ಏನು ಎಂಬುದರ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಭಿಮಾನಿಗಳಿಗೆ ತಿಳಿಯದ ಸಾಕಷ್ಟು ವಿಚಾರವನ್ನು ದರ್ಶನವರು ಈ ಒಂದು ಸಂದರ್ಶನದ ಮೂಲಕ ತಿಳಿಸಿದ್ದಾರೆ.
ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಆದರೆ ಈ ಸಿನಿಮಾವನ್ನು ಐದು ಭಾಷೆಯಲ್ಲಿ ಡಬ್ಬಿಂಗ್ ಮಾಡುತ್ತೇವೆ ಐದು ರಾಜ್ಯದಲ್ಲಿಯೂ ಕೂಡ ಬಿಡುಗಡೆ ಮಾಡುತ್ತೇವೆ. ಇಷ್ಟ ಇರುವಂತಹ ವ್ಯಕ್ತಿಗಳು ಹೋಗಿ ನೋಡಬಹುದು ಆದರೆ ನಾನು ಯಾವುದೇ ಕಾರಣಕ್ಕೂ ಕೂಡ ಬೇರೆ ರಾಜ್ಯಕ್ಕೆ ಹೋಗಿ ಪ್ರಚಾರ ಮಾಡುವುದಿಲ್ಲ ಎಂದು ದರ್ಶನ್ ಖಡಕ್ಕಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳನ್ನು ತಿಳಿಸಿದ್ದಾರೆ ಜೊತೆಗೆ ನಾನ್ಯಾಕೆ ಹೋಗಿ ಬೇರೆ ರಾಜ್ಯದಲ್ಲಿ ಪ್ರಚಾರ ಮಾಡಬೇಕು. ನನ್ನ ರಾಜ್ಯದಲ್ಲಿ ನಾನೇ ರಾಜ ನನ್ನ ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಾರೆ ಗೌರವಿಸುತ್ತಾರೆ ಇಷ್ಟೆಲ್ಲ ಪ್ರೀತಿ ಗೌರವ ಸಿಗುವಾಗ ಬೇರೆ ರಾಜ್ಯಕ್ಕೆ ಹೋಗಿ ನಾನ್ಯಾಕೆ ಕಾಕಾ ಹಿಡಿಯಬೇಕು ಎಂದು ಹೇಳಿದ್ದಾರೆ.
‘ಕ್ರಾಂತಿ’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗ್ತಿದೆ. ಆದರೆ ದರ್ಶನ್ “ನಾನು ಕರ್ನಾಟಕ ಬಿಟ್ಟು ಬೇರೆ ಕಡೆ ಹೋಗಿ ಪ್ರಚಾರ ಮಾಡಲ್ಲ. ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ’ ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಬೇರೆ ಭಾಷೆಗೆ ಡಬ್ ಮಾಡಿ ಕೊಡ್ತೀನಿ. ಅವರು ಹಾಕಿದ್ರು ಖುಷಿ ಹಾಕದೇ ಇದ್ದರೂ ಖುಷಿ” ಎಂದು ದರ್ಶನ್ ಹೇಳಿದ್ದರು. ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಅನ್ನೋದ್ರ ಬಗ್ಗೆ ಮತ್ತೆ ಮಾತನಾಡಿದ್ದಾರೆ.
“ಈಗ ಇರುವ ಲೆವೆಲ್ ಚೆನ್ನಾಗಿದೆ ಅಲ್ವಾ. ದೊಡ್ಡ ಲೆವೆಲ್ ಅಂದರೆ ಏನು? ಸಾಮಾನ್ಯವಾಗಿ ಅಂದುಕೊಳ್ಳಬಹುದು. ನಾನು ಬಾವಿಯಲ್ಲಿರುವ ಕಪ್ಪೆ ಅಂತ. ಹೌದು ನಾನು ಬಾವಿಯಲ್ಲಿರುವ ಕಪ್ಪೆನೇ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ನ್ಯಾಷನಲ್ ಇಶ್ಯೂ ತೆಗೆದುಕೊಳ್ಳಬೇಕು. ಆಗ ಕರ್ನಾಟಕದ ವಿಚಾರ ಹೇಳಲು ಸಾಧ್ಯವಿಲ್ಲ. ನಾರ್ಥ್ ಅವರಿಗೆ ಕನೆಕ್ಟ್ ಮಾಡಬೇಕು, ಈ ಕಡೆ ಮತ್ಯಾರಿಗೋ ಕನೆಕ್ಟ್ ಮಾಡಬೇಕು ಎಂದಾಗ ನ್ಯಾಷನಲ್ ಇಶ್ಯುಗೆ ಹೋಗಬೇಕು. ಎಷ್ಟೋ ಜನಕ್ಕೆ ನ್ಯಾಷನಲ್ ಇಶ್ಯುಗಳೇ ಗೊತ್ತಿರಲ್ಲ”
ಇತ್ತೀಚೆಗೆ ದೆಹಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಡಿಯೋ ನೋಡ್ತಿದ್ದೆ. ತುಂಬಾ ಚೆನ್ನಾಗಿದೆ. ಅಲ್ಲಿ ಸರ್ಕಾರಿ ಶಾಲೆಗಳೆಲ್ಲಾ ಅಪ್‌ಗ್ರೇಡ್ ಆಗಿದೆ. ತುಂಬಾ ಚೆನ್ನಾಗಿದೆ. ಹೈಟೆಕ್ ಶಾಲೆಗಳ ರೀತಿ ಇದೆ. ‘ಕ್ರಾಂತಿ’ ಸಿನಿಮಾ ಕೊಟ್ಟರೆ ಅಲ್ಲಿ ನೋಡುತ್ತಾರಾ? ಅವರು ಅಯ್ಯೋ ನಮ್ಮ ಶಾಲೆಗಳು ಇದಕ್ಕಿಂತ ಚೆನ್ನಾಗಿದೆ. ಇವನೇನು ಹೇಳೋಕೆ ಹೋಗ್ತಿದ್ದಾನೆ ಅಂತಾರೆ.
ನಾನು ಮಾಡುತ್ತಿರುವುದು ಕನ್ನಡ ಸಿನಿಮಾ. ಕನ್ನಡ ಪ್ರೇಕ್ಷಕರು ಕನೆಕ್ಟ್ ಆಗುತ್ತಾರೆ. ಮಾತೃಭೂಮಿ ಮೊದಲು. ಉಳಿದಿದ್ದೆಲ್ಲಾ ಆಮೇಲೆ ನೋಡಿಕೊಳ್ಳೋಣ” ಎಂದು ದರ್ಶನ್ ಹೇಳಿದ್ದಾರೆ. ಸುಜುಕಿ ದರ್ಶನ್ ಅವರು ಹೇಳಿರುವ ಈ ಮಾತಿಗೆ ದರ್ಶನ್ ಅಭಿಮಾನಿಗಳು ಮೆಚ್ಚಿದೆ ಎಂದು ವ್ಯಕ್ತಪಡಿಸಿದರೆ.
ಇನ್ನು ಕೆಲವು ಅಭಿಮಾನಿಗಳು ನಿಮಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಅದಕ್ಕೆ ಹೀಗೆ ಹೇಳುತ್ತಿದ್ದೀರಾ ಎಂದು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇನೇ ಆಗಲಿ ಸದ್ಯಕ್ಕೆ ಕ್ರಾಂತಿ ಸಿನಿಮಾದ ಬರುವಿಕೆಗಾಗಿ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಸತ್ಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.