ಇತ್ತೀಚಿನ ದಿನಗಳಲ್ಲಿ ಕೆಲ ನಟಿ ಮಣಿಯರು ಅವರ ಸಿನಿಮಾ ಹಾಗೂ ಕೆರಿಯರ್ ವಿಚಾರ ಬಿಟ್ಟು ಅವರು ಧರಿಸಿರುವ ಬೋರ್ಲ್ಡ್ ಅವತಾರದ ಬಟ್ಟೆಗಳು ಹಾಗೂ ನೀಡುವ ಹಾಟ್ ಲುಕ್ ಇಂದ ಹೆಚ್ಚಿ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ಮಣಿಯರು ಎನಿಸಿಕೊಂಡವರು ಇಂತಹ ವಿಷಯಗಳಲ್ಲಿ ಹೆಚ್ಚಿಗೆ ಚರ್ಚೆ ಆಗುತ್ತಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅವತಾರ ತೋರುವ ಹುಡುಗಿಯರನ್ನೆಲ್ಲ ನಟಿ ಉರ್ಫಿ ಜಾವೇದ್ ಗೆ ಹೋಲಿಸಿ ಮಾತನಾಡಲಾಗುತ್ತಿದೆ.
ಈಗ ಅವರ ಸಾಲಿಗೆ ಮತ್ತೊಬ್ಬ ನಟಿ ಸೇರುತ್ತಿದ್ದು ಅವಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಅವರಿಗೆ ಟಫ್ ಕಾಂಪಿಟೇಟರ್ ಆಗುತ್ತದೆ ಎನ್ನುವ ತೆಗಳಿಕೆ ಮಾತುಗಳನ್ನು ಕೇಳುತ್ತಿದ್ದಾರೆ. ಬಟ್ಟೆ ವಿಚಾರವಾಗಿ ಈ ರೀತಿ ಉರ್ಫಿ ಜಾವೇದ್ ಅಕ್ಕ ಎಂದು ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿರುವ ಈ ನಟಿ ಯಾರು ಗೊತ್ತಾ? ದಿಶಾ ಪಠಾನಿ ಈ ಹೆಸರನ್ನು ಕ್ರಿಕೆಟ್ ಪ್ರೇಮಿಗಳು ಯಾರು ಮರೆಯಲು ಸಾಧ್ಯವಿಲ್ಲ.
ಯಾಕೆಂದರೆ ಈಕೆ ಕ್ರಿಕೆಟ್ ಅಲ್ಲಿ ಏನು ಭಾಗವಹಿಸಿಲ್ಲ ಅಥವಾ ಯಾವ ತಂಡದ ರಾಯಭಾರಿಯು ಆಗಿಲ್ಲ. ಆದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆ ಎನಿಸಿರುವ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಮಹೇಂದ್ರ ಸಿಂಗ್ ಧೋನಿ ದಿ ಅನ್ ಟೋಲ್ಡ್ ಲವ್ ಸ್ಟೋರಿ ಸಿನಿಮಾದ ಮೂಲಕ ಗಮನ ಸೆಳೆದಿದ್ದಾರೆ. ಬಾಲಿವುಡ್ ಅಲ್ಲಿ ತಯಾರಾದ ಬೆಸ್ಟ್ ಸಿನಿಮಾ ಎಂದು ಕರೆಸಿಕೊಂಡ ಈ ಸಿನಿಮಾದಲ್ಲಿ ಉತ್ತಮ ಅಭಿನಯ ಮತ್ತು ಒಳ್ಳೆಯ ಪಾತ್ರ ಗಿಟ್ಟಿಸಿಕೊಂಡಿದ್ದ ಈ ನಟಿ ದಕ್ಷಿಣದ ಕಡೆಗೂ ದಂಡಯಾತ್ರೆ ಆರಂಭಿಸಿದ್ದರು.
ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ಆಗಿರುವ ವರುಣ್ ತೇಜ್ ಅವರ ಲೋಫರ್ ಸಿನಿಮಾದಲ್ಲಿ ಕೂಡ ನಾಯಕ ನಟಿ ಆಗಿ ಮಿಂಚಿದ್ದರು. ಬಳಿಕ ಚೀನಿ ಭಾಷೆಯ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ಸ್ಪೆಷಲ್ ಎನಿಸಿದವರು, ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾ ಬದಲಾಗಿ ಅವರ ಫ್ಯಾಷನ್ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆಂದರೆ ಇತ್ತೀಚೆಗೆ ದಿಶಾ ಪಠಾನಿಯವರು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಆಗಿ ಫೋಟೋಶೂಟ್ಗಳನ್ನು ಮಾಡಿಸಿಕೊಂಡು ಅದನ್ನು ಅಪ್ಲೋಡ್ ಮಾಡುತ್ತಿದ್ದಾರೆ.
ಇದುವರೆಗೂ ಶೋಲ್ಡರ್ ಲೆಸ್ ಡ್ರೆಸ್, ಮಿನಿ ಸ್ಕರ್ಟ್ ಧರಿಸಿ ಡಿಫರೆಂಟ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡು ಪಡ್ಡೆ ಹೈಕಳೆ ನಿದ್ದೆಗೆಡಿಸುತ್ತಿದ್ದ ಈಕೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬಟನ್ ಲೆಸ್ ಪ್ಯಾಂಟ್ ಹಾಕಿಕೊಂಡು ಒಳ ಉಡುಪು ಕಾಣುವ ರೀತಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನು ಕಂಡ ಕೆಲಜನ ಈಕೆಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಕೆಲ ಪೇಜ್ ಗಳು ಈಕೆಯ ಫೋಟೋವನ್ನು ಟ್ರೋಲ್ ಕೂಡ ಮಾಡುತ್ತಿವೆ.
ಇನ್ನು ಕೆಲವರು ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಈಕೆ ಯಾವುದೋ ಬ್ರಾಂಡಿನ ಒಳ ಉಡುಪಿಗೆ ಅಂಬಾಸಿಡರ್ ಆಗಿರಬೇಕು ಅಥವಾ ಅದರ ಜಾಹಿರಾತಿನಲ್ಲಿ ಕಾಣಿಸಿಕೊಂಡಿರಬೇಕು ಅಷ್ಟೇ ಬಿಡಿ ಎನ್ನುತ್ತಿದ್ದಾರೆ. ಆದರೆ ಏನು ಮಾಹಿತಿ ನೀಡದೆ ದಿಢೀರ್ ಎಂದು ಈಕೆ ಹಾಕಿರುವ ಈ ಫೋಟೋ ನೋಡಿ ನೆಟ್ಟಿಗರ ಕಣ್ಣು ಕೆಂಪಾಗಿರುವುದಂತೂ ನಿಜ.
ಯಾಕೆಂದರೆ ಇತ್ತೀಚೆಗೆ ಅವಕಾಶಗಳು ಕಡಿಮೆ ಆದಂತೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಆಕ್ಟಿವ್ ಆಗಿರುವ ನಟಿಮಣಿಯರು ಈ ರೀತಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿ ಹಾಕಿಕೊಂಡು ಆ ಮೂಲಕ ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಘೀಳಿಗೆ ಇಳಿದಿದ್ದಾರೆ. ದಿಶಾ ಪಟಾನಿ ಪ್ರತಿಭಾನ್ವಿತ ನಟಿ, ಆಕೆ ಕೂಡ ಇದೆ ಹಾದಿ ತುಳಿದು ಬಿಟ್ಟರೆ ಎನ್ನುವುದು ನೆಟ್ಟಿಗರ ಆತಂಕಕ್ಕೆ ಕಾರಣ.