e-KYC ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಹೆಚ್ಚಾಗಿ ಕೇಳಿ ಬರುತ್ತಿರುವ ವಿಚಾರವಾಗಿದೆ. ನಾವು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣವನ್ನು (Annabhagya and Gruhalakshmi) ಪಡೆಯಬೇಕು dbt ಮೂಲಕ ಖಾತೆಗಳಿಗೆ ಪಡೆಯಬೇಕು ಎಂದರೆ ರೇಷನ್ ಕಾರ್ಡ್ e-KYC ಆಗಿರಬೇಕು. ಬ್ಯಾಂಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿ, ಆಧಾರ್ ಕಾರ್ಡ್ e-KYC ಆಗಿರಬೇಕು ಇಲ್ಲವಾದಲ್ಲಿ ಹಣ ಪಡೆಯಲಾಗುವುದಿಲ್ಲ.
ಈಗ ಮುಂದುವರೆದು ಅದನ್ನು LPG ಸಬ್ಸಿಡಿ ಪಡೆಯುವುದಕ್ಕೂ ಕೂಡ ಕಡ್ಡಾಯಗೊಳಿಸಲಾಗಿದೆ. ಯಾರೆಲ್ಲ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PMUY) ಉಚಿತ ಗ್ಯಾಸ್ ಸಂಪರ್ಕ ಪಡೆದು ಪ್ರತಿ ತಿಂಗಳ ಗ್ಯಾಸ್ ಬುಕಿಂಗ್ ಗೆ ಸಬ್ಸಿಡಿ (Subsidy) ಪಡೆಯುತ್ತಿದ್ದಾರೆ ಅವರು ಇನ್ನು ಮುಂದೆ ತಮ್ಮ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ಪಡೆಯಬೇಕಾದರೆ ಈ ಕೂಡಲೇ ಅವರ ಗ್ಯಾಸ್ ಕನೆಕ್ಷನ್ e-KYC ಮಾಡಿಸಿರಬೇಕು.
ಆದರೆ ಇದಕ್ಕೆ ಕಡೆ ದಿನಾಂಕ 31 ಡಿಸೆಂಬರ್, 2023 ಎಂದು ಎಲ್ಲೆಡೆ ಜನರು ಗೊಂದಲಕ್ಕೊಳಗಾಗಿ ತಮ್ಮ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸುವುದಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಇದರ ಕುರಿತು ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆ ಈಗ ಸ್ಪಷ್ಟತೆ ಕೊಟ್ಟಿದೆ.
ಅದೇನೆಂದರೆ, ಕೇಂದ್ರ ಸರ್ಕಾರವು ಈ ರೀತಿ ಮಾಡುವುದಕ್ಕೆ ಯಾವುದೇ ಕಡೆ ದಿನಾಂಕ ಎಂದು ಘೋಷಿಸಿಲ್ಲ ಹಾಗಾಗಿ ಯಾವುದೇ ರೀತಿಯ ಗೊಂದಲ ಸೃಷ್ಟಿಸಿಕೊಳ್ಳದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಂಪರ್ಕ ಪಡೆದವರಷ್ಟೇ ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಆದರೆ ತಪ್ಪದೇ ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ಪೂರ್ತಿ ಗೊಳಿಸಬೇಕು ಎಂದು ಸ್ಪಷ್ಟತೆ ನೀಡಿದೆ.
ಇದರ ಜೊತೆಗೆ ಈ ಬಗ್ಗೆ ಮತ್ತೊಂದು ಮುಖ್ಯವಾದ ವಿಷಯವೇನೆಂದರೆ LPG e-KYC ಮಾಡಿಸಿಕೊಳ್ಳಲು ತಮ್ಮ ಏಜೆನ್ಸಿಗಳಿಗೆ ಹೋಗುವುದರಿಂದ ಉಂಟಾಗುವ ಜನದಟ್ಟಣೆ ತಪ್ಪಿಸಲು ಗ್ಯಾಸ್ ಡೆಲಿವರಿ ಕೊಡಲು ಬಂದಾಗ ಆ ಸಮಯದಲ್ಲೂ ಕೂಡ ಇ-ಕೆವೈಸಿ ಮಾಡಿಸಿಕೊಳ್ಳಲು ಅನುಕೂಲತೆ ಮಾಡಿಕೊಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಆನ್ಲೈನ್ ಮೂಲಕವೇ ತಮ್ಮ ವ್ಯವಹಾರಗಳನ್ನು ಮನೆಯಲ್ಲೇ ಕುಳಿತು ತಮ್ಮ ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕ ಮಾಡಿಕೊಳ್ಳುತ್ತಿರುವುದರಿಂದ ಇದಕ್ಕೂ ಕೂಡ ಅವಕಾಶ ಮಾಡಿಕೊಟ್ಟು Bharath, Indane ಅಥವಾ HP ಈ ಯಾವುದೇ ಕಂಪನಿಯ ಗ್ಯಾಸ್ ಕನೆಕ್ಷನ್ ಪಡೆದಿದ್ದರು ಕೂಡ ಆಯಾ ವೆಬ್ಸೈಟ್ಗಳಿಗೆ ಹೋಗಿಸಲು e-KYC ಪೂರ್ತಿಗೊಳಿಸಲು ಅನುಮತಿ ನೀಡಲಾಗಿದೆ.
ಒಂದು ವೇಳೆ ಇದನ್ನು ಮಾಡಲಾಗದೆ ಇದ್ದರೆ ಬಹಳ ಸರಳವಾಗಿ ಪ್ಲೇ ಸ್ಟೋರ್ ಗಳಿಗೆ ಹೋಗಿ ಆಯಾ ಕಂಪನಿಯ ನಿಗದಿಪಡಿಸಿರುವ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು.
ಮುಖ್ಯವಾಗಿ ಆಧಾರ್ ಅಥೆಂಟಿಕೇಶನ್ (Aadhar authentication) ಮೂಲಕ ಇ-ಕೆವೈಸಿ ಮಾಡಿಸಬೇಕಾಗುತ್ತದೆ, ಇದಕ್ಕೆ ಗ್ಯಾಸ್ ಸಂಪರ್ಕಕ್ಕೆ ಕೊಟ್ಟಿರುವ ಮೊಬೈಲ್ ಸಂಖ್ಯೆ ಬೇಕಾಗಿರುತ್ತದೆ ಮತ್ತು ಆ ಸಂಖ್ಯೆಯೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಸರಳ. ಇದರೊಂದಿಗೆ ಫೇಸ್ ಡಿಟೆಕ್ಷನ್ ಮಾಡಿ LPG e-KYC ಆಗುತ್ತದೆ.
Bharath ಗ್ರಾಹಕರು hello BPCL, Indane ಗ್ರಾಹಕರು Indian oil One, HP ಗ್ರಾಹಕರು Vitran HP ಈ ಆಪ್ ಗಳನ್ನು ಪ್ಲೇ ಸ್ಟೋರ್ ಗೆ ಹೋಗಿ ಡೌನ್ಲೋಡ್ ಮಾಡಿಕೊಳುವ ಮೂಲಕ ಮನೆಯಲ್ಲಿಯೇ ಮೊಬೈಲ್ ಮೂಲಕ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.