
ಕೆಲವೊಬ್ಬರು ಊಟ ಮಾಡಿದ ನಂತರ ಕೆಲವೊಂದಷ್ಟು ಆರೋಗ್ಯವನ್ನು ಹಾಳು ಮಾಡುವ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದು ತುಂಬಾ ತಪ್ಪು ಅದು ಅವರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಆದ್ದರಿಂದ ಊಟ ಆದ ನಂತರ ಕೆಲವೊಂದಿಷ್ಟು ತಪ್ಪುಗಳನ್ನು ಮಾಡದೇ ಇರುವುದು ಒಳ್ಳೆಯದು ಇಲ್ಲವಾದರೆ ಅದರಿಂದ ನೀವು ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾಗಾದರೆ ಈ ದಿನ ಊಟ ಮಾಡಿದ ನಂತರ ಪ್ರತಿಯೊಬ್ಬರು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಹಾಗೂ ಆ ರೀತಿ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಕೆಲವರು ಊಟದ ನಂತರ ಸ್ನಾನ ಮಾಡಿದರೆ ಕೆಲವರು ಊಟ. ಕೆಲ ವರು ಊಟದ ನಂತರ ಚಹಾ ಕುಡಿಯುತ್ತಾರೆ. ಈ ಎಲ್ಲಾ ಅಭ್ಯಾಸಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಊಟದ ನಂತರ ಯಾವು ದನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿದುಕೊಳ್ಳೋಣ. ಅನೇಕ ಬಾರಿ ಆರೋಗ್ಯಕರ ಆಹಾರವನ್ನು ಸೇವಿಸಿದ ನಂತರವೂ ಆರೋಗ್ಯ ‘ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ.
ಕೆಲವು ಅಭ್ಯಾಸಗಳು ಸಹ ಇದಕ್ಕೆ ಕಾರಣವಾಗಬಹುದು. ಊಟ ಮಾಡಿದ ತಕ್ಷಣ ನಾವು ತಿಳಿಯದೆ ಅಂತಹ ತಪ್ಪನ್ನು ಮಾಡುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತೆ. ಇದಲ್ಲದೆ ಊಟದ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳಿವೆ ಅದರ ಬಗ್ಗೆ ತಿಳಿದುಕೊಳ್ಳೋಣ.
• ಆಹಾರ ಸೇವಿಸಿದ ನಂತರ ಕಿರು ನಿದ್ದೆ ಮಾಡುವುದು ಅಹ್ಲಾದಕರ ಅನುಭವ ನೀಡುತ್ತೆ. ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಊಟವಾದ ತಕ್ಷಣ ಮಲಗೋದು ಆಸಿಡ್ ರೆಫ್ಲೆಕ್ಟ್ ಮತ್ತು ಎದೆ ಉರಿಗೆ ಕಾರಣವಾಗಬಹುದು. ಆದ್ದರಿಂದ ಆಹಾರ ಸೇವಿಸಿದ ಸ್ವಲ್ಪಸಮಯದ ನಂತರ ನಡೆಯಿರೆ ಅದು ಜೀರ್ಣಕ್ರಿಯೆಗೆ ಉತ್ತಮ.
• ಹೆಚ್ಚು ಆಹಾರ ಸೇವಿಸಿದ ನಂತರ ಎಂದಿಗೂ ಸ್ನಾನ ಮಾಡಬೇಡಿ ಏಕೆಂದರೆ ಇದು ಆಹಾರವನ್ನು ತಡವಾಗಿ ಜೀರ್ಣಿಸಿಕೊಳ್ಳಲು ಕಾರಣ ವಾಗುತ್ತೆ. ಹೀಗೆ ಮಾಡುವುದರಿಂದ ಸ್ನಾನದ ಸಮಯದಲ್ಲಿ ದೇಹದ ಸುತ್ತಲೂ ರಕ್ತ ಹರಿವು ಹೆಚ್ಚಾಗುತ್ತೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.
• ಅನೇಕ ಜನರು ಊಟ ತಿಂದ ತಕ್ಷಣ ಚಹಾ ಕುಡಿಯಲು ಇಷ್ಟಪಡು ತ್ತಾರೆ ಆದರೆ ನಿಮಗೆ ತಿಳಿದಿರಲಿ ಇದು ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು. ಊಟದ ನಂತರ ಚಹಾ ಸೇವಿಸುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
• ಊಟವಾದ ತಕ್ಷಣ ನೀವು ಹೆಚ್ಚು ನೀರು ಕುಡಿದರೆ ಅದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಊಟವಾದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಬೇಕು ಊಟ ಮಾಡಿದ 30 ನಿಮಿಷಗಳ ನಂತರ ಮಾತ್ರ ನೀರು ಕುಡಿಯುವುದು ಉತ್ತಮ.
• ಊಟ ಮಾಡಿದ ನಂತರ ಸಿಗರೇಟ್ ಸೇದುವ ಚಟವನ್ನು ಹೊಂದಿದ್ದರೆ ಅದು ತುಂಬಾ ಅಪಾಯಕಾರಿ ಊಟದ ನಂತರ ಸಿಗರೇಟ್ ಸೇದೋ ದ್ರಿಂದ ಜೀರ್ಣಕಾರಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯವನ್ನು ಇದು ಹೆಚ್ಚಿಸುತ್ತದೆ.
• ಕಿತ್ತಳೆ ದ್ರಾಕ್ಷಿ ಮತ್ತು ಇತರ ಹಣ್ಣುಗಳನ್ನು ಆಹಾರ ಸೇವಿಸಿದ ತಕ್ಷಣ ತಿನ್ನೋದನ್ನು ತಪ್ಪಿಸಿ ಇದು ಆಸಿಡ್ ರಿಫ್ಲೆಕ್ಸ್ ಮತ್ತು ಎದೆ ಉರಿಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳನ್ನು ನೀವು ತಿನ್ನಲು ಬಯಸುವುದಾದರೆ ಅವುಗಳನ್ನು ಊಟದ ಮೊದಲು ಅಥವಾ ಊಟದ ನಡುವೆ ಸೇವಿಸುವುದು ಉತ್ತಮ.