ಎಲ್ಲರ ಮನೆಯಲ್ಲಿಯೂ ಪೊರಕೆಯನ್ನು ಬಳಕೆ ಮಾಡುತ್ತೇವೆ. ಆದರೆ ಜ್ಯೋತಿಷ್ಯದಲ್ಲಿ ಪೊರಕೆ ಬಳಸಲು ಕೆಲ ನಿಯಮಗಳಿದೆ. ನಾವು ಆ ನಿಯಮಗಳನ್ನ ಮೀರಿದರೆ ಅನೇಕ ಸಮಸ್ಯೆಗಳನ್ನ ಅನುಭವಿಸ ಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಅಪಾರ ಪ್ರಾಮುಖ್ಯತೆ ಇದೆ. ಇದರಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಪೊರಕೆಯನ್ನ ನಾವು ಕಾಲಿನಿಂದ ಮುಟ್ಟುವುದಿಲ್ಲ ಅಥವಾ ಅದನ್ನ ಬಳಕೆ ಮಾಡುವಾಗ ಕೆಲ ವಿಚಾರಗಳನ್ನ ಪಾಲಿಸುತ್ತೇವೆ.
* ಮುಖ್ಯವಾಗಿ ನಾವು ಕಸ ಗುಡಿಸುವಾಗ ಯಾರಾದರೂ ಮನೆಯಿಂದ ಹೊರ ಹೊರಟಿದ್ದರೆ ಅದನ್ನು ಅಲ್ಲಿಯೇ ಅರ್ಧಕ್ಕೆ ನಿಲ್ಲಿಸಬೇಕು. ನಿಮಗೆ ಅವರು ಹೋಗುವ ವಿಚಾರ ಮೊದಲೇ ಗೊತ್ತಿದ್ದರೆ ಅವರು ಹೊರಡುವ ಮೊದಲು ಅಥವಾ ನಂತರವೇ ಗುಡಿಸುವುದು ಸೂಕ್ತ.
* ಏಕೆಂದರೆ ಯಾರಾದರೂ ಹೊರಗೆ ಹೋಗುವಾಗ ಮನೆ ಗುಡಿಸುವು ದರಿಂದ ಅವರು ಮಾಡಲು ಹೊರಟ ಕೆಲಸದಲ್ಲಿ ಸಮಸ್ಯೆ ಆಗುತ್ತದೆ. ಇದರ ಜೊತೆಗೆ ಅವರಿಗೆ ತೊಂದರೆ ಮಾಡಿದ ಕಾರಣದಿಂದ ನಿಮಗೂ ಆರ್ಥಿಕ ಸಮಸ್ಯೆಗಳಾಗುತ್ತದೆ ಎನ್ನಲಾಗುತ್ತದೆ.
ಈ ಸುದ್ದಿ ಓದಿ:-ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಮನೆಯಿಂದ ಹೊರಗೆ ಹೋಗುವಾಗ ಹೇಗೆ ಕಸ ಗುಡಿಸಬಾರದೋ ಹಾಗೆಯೇ ಯಾವುದೇ ಕಾರಣಕ್ಕೂ ಪೊರಕೆಯನ್ನು ಅಡ್ಡ ಇಡಬಾರದು. ಮನೆಯಿಂದ ಹೊರಗೆ ಹೋಗುವವರು ಮುಂದೆ ಪೊರಕೆ ಕಾಣಿಸಬಾರದು ಎನ್ನಲಾಗುತ್ತದೆ.
* ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ. ಗುರುವಾರ ಶ್ರೀಮನ್ನಾರಾಯಣ ಮತ್ತು ಶುಕ್ರವಾರ ಲಕ್ಷ್ಮೀ ದೇವಿಯ ದಿನವಾಗಿದೆ. ಈ ದಿನ ಮನೆಯಿಂದ ಹೊರಕೆ ಹೊರ ಗಿಟ್ಟರೆ ಲಕ್ಷ್ಮೀ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.
* ಪೊರಕೆ ಖರೀದಿಗೂ ದಿನ ಇದೆ, ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭ ದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆಯಂತೆ ಸಂಪತ್ತು ಸಮೃದ್ಧಿಯಾಗಿರುತ್ತದೆಯಂತೆ.
ಈ ಸುದ್ದಿ ಓದಿ:-ಈ ರಾಶಿಯವರಿಗೆ ಗಜಕೇಸರಿ ರಾಜಯೋಗ ಪ್ರಾರಂಭ..!
* ವಾಸ್ತು ಪಂಡಿತರ ಪ್ರಕಾರ ಕೃಷ್ಣ ಪಕ್ಷದಲ್ಲೇ ಹೊಸ ಪೊರಕೆ ಖರೀದಿಸ ಬೇಕಂತೆ, ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಸರಿಯಲ್ಲವಂತೆ.
* ಪೊರಕೆ ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಮನೆಯಲ್ಲಿ ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಪೊರಕೆ ಇಡಬೇಕು.
* ಯಾವತ್ತಿಗೂ ಕೂಡ ಹಾಸಿಗೆ ಕೆಳಗಡೆ ಪೊರಕೆ ಇಡುವ ಪರಿಪಾಠ ಇಟ್ಟುಕೊಳ್ಳಬೇಡಿ .
* ಸೂರ್ಯಾಸ್ತದ ಬಳಿಕ ಯಾವತ್ತಿಗೂ ಪೊರಕೆ ಬಳಸಬಾರದು ಎಂದು ಹೇಳುತ್ತಾರೆ.
* ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದುಬಿಡುತ್ತಾರೆ ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಲೇಬೇಡಿ.
* ಪೊರಕೆಯನ್ನು ಕಾಲಿನಿಂದ ತುಳಿಯಬೇಡಿ ಅಥವಾ ಕಾಲಿನಿಂದ ಸರಿಸುವುದನ್ನು ಮಾಡಬೇಡಿ. ಪೊರಕೆಯನ್ನು ದಾಟಬಾರದು ಇವೆಲ್ಲಾ ನಿಶಿದ್ಧ.
* ಅಡುಗೆ ಮನೆ ಗುಡಿಸಲು ಪ್ರತ್ಯೇಕ ಪೊರಕೆ ಇಟ್ಟುಕೊಳ್ಳಿ ಇದು ತುಂಬಾ ಶುಭ ಎನ್ನಲಾಗುತ್ತದೆ.
* ಮನೆ ಒಳಗೆ ಮತ್ತು ಹೊರಗಡೆ ಗುಡಿಸಲು ಒಂದೇ ಪೊರಕೆ ಬಳಸಲೇ ಬೇಡಿ.
* ಯಾರಾದರೂ ಮನೆಯಿಂದ ಹೊರಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು ಕಾರಣ ಇದು ಯಾವುದೇ ಅಪಾಯಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ.
ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
* ನೀವು ಮನೆಯನ್ನು ಬದಲಾಯಿಸಿದರೆ ಹೊಸ ಮನೆಯಲ್ಲಿ ಬಳಸಲು ಹೊಸ ಪೊರಕೆಯನ್ನು ಬಳಸಿ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ಉತ್ತಮ ಹೆಜ್ಜೆ.
* ಮನೆಯಲ್ಲಿ ಕಸ ಗುಡಿಸುವ ಪೊರಕೆಯಿಂದ ನಿಮ್ಮ ಕಾಲುಗಳ ಧೂಳನ್ನು ಒರೆಸುವುದನ್ನು ತಪ್ಪಿಸಿ. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾರೆ ಎಂದು ನಂಬಲಾಗಿದೆ.
* ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿ ಪರ್ವದಲ್ಲಿ ಪೊರಕೆಯನ್ನು ಖರೀದಿಸುವ ನಂಬಿಕೆಯೂ ಇದೆ.