ಹಿಂದೂ ಧರ್ಮದಲ್ಲಿ ಪೂಜೆ ಇಲ್ಲದೆ ನಮ್ಮ ದಿನಚರಿ ಪ್ರಾರಂಭವಾಗು ವುದೇ ಇಲ್ಲ ಪೂಜಾ ನಿಯಮಗಳನ್ನು ಪಾಲಿಸಿ ಅಗತ್ಯವಿರುವಷ್ಟು ಪೂಜೆ ಮಾಡುವುದು ಕೂಡ ಬಹಳ ಮುಖ್ಯ. ಪೂಜೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ದಿನನಿತ್ಯ ಮಾಡುವ ಪೂಜೆ ಪುನಸ್ಕಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಸಲ್ಲಿಸಿದ ಪೂಜೆಗೆ ತಕ್ಕ ಪ್ರತಿಫಲ ಸಿಗುತ್ತದೆ.
ಹಾಗಾದರೆ ನಾವು ನಿತ್ಯ ಪೂಜೆ ಮಾಡುವಾಗ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ನಾವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
* ಪ್ರತಿನಿತ್ಯ ಸ್ನಾನ ಮಾಡುವುದು ದೇವರ ಮುಂದೆ ತಲೆ ಬಾಗುವುದು ಕಡ್ಡಾಯವೆಂದು ಪರಿಗಣಿಸಲಾಗಿದೆ.
* ಪ್ರತಿ ತಿಂಗಳು ಹಿಂದೂ ಕ್ಯಾಲೆಂಡರ್ನಲ್ಲಿ ಕೆಲವು ವಿಶೇಷ ದಿನಾಂಕ ಗಳನ್ನು ಅಂದರೇ ದೇವರ ಪೂಜೆ ಹಬ್ಬಹರಿ ದಿನಗಳಿಗಾಗಿಯೇ ಅಗತ್ಯವೆಂದು ಮೀಸಲಿಡಬೇಕು.
* ದೇವರನ್ನು ಅಥವಾ ನಿಮಗಿಂತ ದೊಡ್ಡ ವ್ಯಕ್ತಿಯನ್ನು ಎಂದಿಗೂ ಒಂದು ಕೈಯಿಂದ ಆರಾಧಿಸಬೇಡಿ.
* ಮಲಗಿರುವ ವ್ಯಕ್ತಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಬಾರದು ಎನ್ನುವುದು ನೆನಪಿರಲಿ.
* ಪೂಜಿಸಿದ ನಂತರ ಹಿರಿಯರ ಆಶೀರ್ವಾದ ತೆಗೆದುಕೊಳ್ಳುವಾಗ ಹಿರಿಯರ ಬಲಗಾಲನ್ನು ನಿಮ್ಮ ಬಲಗೈಯಿಂದ, ಹಿರಿಯರ ಎಡಗಾಲನ್ನು, ನಿಮ್ಮ ಎಡಗೈಯಿಂದ ಸ್ಪರ್ಶಿಸುವ ಮೂಲಕ ಹಿರಿಯರ ಆಶೀರ್ವಾದ ವನ್ನು ಪಡೆದುಕೊಳ್ಳಿ.
* ಮನೆಯ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನಿಸಿಕೊಂಡ ನಂತರವೇ ದೇವರ ಪೂಜೆಯನ್ನು ಮಾಡಬೇಕು.
* ಜಪ ಮಾಡುವಾಗ ನಾಲಿಗೆ ಅಥವಾ ತುಟಿಗಳು ಚಲಿಸದಂತೆ ನೋಡಿಕೊಳ್ಳಿ. ಇದನ್ನು ಉಪಾಂಶು ಜಪ ಎಂದು ಕರೆಯಲಾಗುತ್ತದೆ. ಇದರ ಫಲಿತಾಂಶ ನೂರು ಪಟ್ಟು.
* ಜಪದ ಹಾರವನ್ನು ಪಠಿಸುವಾಗ ಬಲಗೈಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು ಅಥವಾ ಹಸುವಿನ ಹಾಲನ್ನು ಕೈಗೆ ಹಚ್ಚಿಕೊಳ್ಳ ಬೇಕು.
* ಜಪಿಸಿದ ನಂತರ ಪೀಠದ ಕೆಳಗಿರುವ ಭೂಮಿಯನ್ನು ಅಥವಾ ನೆಲವನ್ನು ಕಣ್ಣುಗಳಿಂದ ಮುಟ್ಟಿ ನಮಸ್ಕರಿಸಬೇಕು ಇದರೊಂದಿಗೆ ಜಪ ಮಾಡುವ ಪೂರ್ಣ ಫಲಿತಾಂಶಗಳನ್ನು ಪಡೆಯಬಹುದು.
* ಪ್ರತಿದಿನ ಮಧ್ಯಾಹ್ನ 12 ಗಂಟೆ ಅಥವಾ 12 ಗಂಟೆಯ ನಂತರ ತುಳಸಿ ಯನ್ನು ಮುಟ್ಟುವುದು ಅಥವಾ ತುಳಸಿಯನ್ನು ಕೀಳುವುದು ಮಾಡಬಾರದು.
* ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ದೀಪವನ್ನು ಬೆಳಗಿಸ ಬೇಕೇ ಹೊರತು ತುಳಸಿಯನ್ನು ಮುಟ್ಟಬಾರದು.
* ಶ್ರಾದ್ಧ ಕಾರ್ಯಕ್ರಮವನ್ನು ಮಾಡುವಾಗ ಬಿಳಿ ಎಳ್ಳನ್ನು ಬಳಸಬಾರದು ಬದಲಾಗಿ ಕಪ್ಪು ಎಳ್ಳನ್ನು ಬಳಸಬೇಕು.
* ಅರಳಿ ಮರಕ್ಕೆ ಪ್ರತೀ ಶನಿವಾರ ನೀರು ಅರ್ಪಿಸಿ 7 ಸುತ್ತು ಪ್ರದಕ್ಷಿಣೆ ಹಾಕಬೇಕು.
* ಯಾವುದೇ ವಸ್ತು ಅಥವಾ ದಾನವನ್ನು ಬಲಗೈಯಿಂದ ನೀಡಬೇಕು. ಬಲಗೈಯಿಂದಲೇ ತೆಗೆದುಕೊಳ್ಳಬೇಕು.
* ಇನ್ನಿತರ ದಿನಗಳನ್ನು ಬಿಟ್ಟು ವಿಶೇಷವಾಗಿ ಏಕಾದಶಿ, ಅಮಾವಾಸ್ಯೆ, ಕೃಷ್ಣ ಚತುರ್ದಶಿ, ಪೌರ್ಣಮಿ ಉಪವಾಸ ಮತ್ತು ಶ್ರಾದ್ಧ ದಿನದಂದು ಕ್ಷೌರ ಮಾಡಬಾರದು.
* ಜನಿವಾರ ಧರಿಸದೆ ಮಾಡುವ ಯಾವುದೇ ಪೂಜೆಯನ್ನು ಫಲಪ್ರದವ ಲ್ಲವೆಂದು ಪರಿಗಣಿಸಲಾಗುತ್ತದೆ.
* ಭಗವಾನ್ ಶಿವನು ಬಿಲ್ವ ಪತ್ರೆಯನ್ನು ಪ್ರೀತಿಸುತ್ತಾನೆ, ಭಗವಾನ್ ವಿಷ್ಣು ತುಳಸಿಯನ್ನು, ಗಣೇಶನು ದುರ್ವಾ ಅಥವಾ ಗರಿಕೆಯನ್ನು, ಲಕ್ಷ್ಮಿಯು ಕಮಲವನ್ನು ಪ್ರೀತಿಸುತ್ತಾಳೆ.
* ಸಾಮಾನ್ಯವಾಗಿ ಶಿವರಾತ್ರಿ ಹೊರತುಪಡಿಸಿ ಬೇರೆ ಯಾವುದೇ ದಿನವೂ ಶಿವನಿಗೆ ಕುಂಕುಮವನ್ನು ಹಚ್ಚುವುದಿಲ್ಲ.
* ಶಿವನಿಗೆ ಕಾಕಾಡ ಮಲ್ಲಿಗೆ ಹೂವನ್ನು, ವಿಷ್ಣುವಿಗೆ ಧಾತುರವನ್ನು, ಸೂರ್ಯದೇವನಿಗೆ ಸುಗಂಧಿ ಹೂವುಗಳನ್ನು ಅರ್ಪಿಸಬಾರದು.
* ನಿಮ್ಮ ಎಡಭಾಗದಲ್ಲಿ ತುಪ್ಪದ ದೀಪವನ್ನು, ಬಲಭಾಗದಲ್ಲಿ ಎಣ್ಣೆಯ ದೀಪವನ್ನು ಇಟ್ಟು ಪೂಜೆ ಮಾಡಬೇಕು.
* ಅಕ್ಕಿಯ ಮೇಲೆ ದೀಪವನ್ನು ಇಟ್ಟು, ದೀಪ ಬೆಳಗಿಸುವುದು ತುಂಬಾ ಶ್ರೇಷ್ಠ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.