ಪ್ರತಿ ತಿಂಗಳಿನಲ್ಲೂ ಕೂಡ ಎರಡು ಏಕಾದಶಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ ಹಾಗೂ ಶುಕ್ಲ ಪಕ್ಷದಲ್ಲಿ ಒಂದು ಏಕಾದಶಿ ಬರುತ್ತದೆ. ದಕ್ಷಿಣಾಯಣ ಮುಗಿದು ಉತ್ತರಾಯಣ ಆರಂಭವಾಗುವಾಗ ಬರುವ ಈ ವೈಕುಂಠ ಏಕಾದಶಿಯು ಉಳಿದ ಏಕಾದಶಿ ಗಳಿಗಿಂತ ಬಹಳ ಶ್ರೇಷ್ಠ ಎನಿಸುತ್ತದೆ.
ಯಾಕೆಂದರೆ ಉಳಿದ 23 ಏಕಾದಶಿಗಳನ್ನು ಮಾಡಿದ ಪುಣ್ಯವು ಈ ವೈಕುಂಠ ಏಕಾದಶಿ ಆಚರಿಸುವುದರಿಂದ ಸಿಗುತ್ತದೆ. ಯಾಕೆಂದರೆ ವೈಕುಂಠ ಏಕಾದಶಿ ದಿನದಂದು ವಿಷ್ಣು ಯೋಗ ನಿದ್ರೆಯಿಂದ ಏಳುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ವೈಕುಂಠ ಏಕಾದಶಿ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎನ್ನುವುದು ನಂಬಿಕೆ ಈ ವರ್ಷ ಡಿಸೆಂಬರ್ 23ರಂದು ವೈಕುಂಠ ಏಕಾದಶಿ ಬಂದಿದೆ.
ಇಂದು ಏಕಾದಶಿ ಆಚರಿಸುವವರು ಕೆಲವು ನಿಯಮಗಳನ್ನು ಪಾಲಿಸಿದರೆ ಇನ್ನು ಹೆಚ್ಚಿನ ಫಲಗಳು ದೊರೆಯುತ್ತದೆ ವೈಕುಂಠ ಏಕಾದಶಿಯ ದಿನ ಎದ್ದು ಸ್ನಾನ ಮಾಡಿ ಮಡಿಯುಟ್ಟು ಉಪವಾಸ ಆಚರಿಸಬೇಕು. ಯಾವುದೇ ಕಾರಣಕ್ಕೂ ಈ ದಿನ ಅನ್ನದಿಂದ ಮಾಡಿದ ಯಾವುದೇ ಆಹಾರ ಪದಾರ್ಥಗಳು ಸೇವಿಸಬಾರದು.
ಯಾಕೆಂದರೆ ಮುರಾ ಎನ್ನುವ ರಾಕ್ಷಸನು ವಿಷ್ಣುವಿನಿಂದ ತಪ್ಪಿಸಿಕೊಳ್ಳಲು ಅಕ್ಕಿಯಲ್ಲಿ ಅಡಗಿಕೊಂಡಿರುತ್ತಾನೆ ಹಾಗಾಗಿ ಇಂತಹ ದಿನ ಅಕ್ಕಿ ತಿಂದರೆ ಹುಳಗಳನ್ನು ತಿಂದದ್ದಕ್ಕೆ ಸಮ ಎಂದು ಹೇಳಲಾಗುತ್ತದೆ, ಮತ್ತು ಅವರಲ್ಲಿ ರಾಕ್ಷಸತ್ವದ ಗುಣಗಳು ನ’ಕಾ’ರಾ’ತ್ಮ’ಕ ಗುಣಗಳು ಹೆಚ್ಚಾಗುತ್ತವೆ. ಹಾಗಾಗಿ ಅಕ್ಕಿಯನ್ನಾಗಲಿ ಅಥವಾ ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನಾದರೂ ಈ ದಿನ ಸೇವಿಸಬೇಡಿ.
ಈ ದಿನ ಪೂರ್ತಿ ಉಪವಾಸ ಇದ್ದು ದ್ವಾದಶಿ ದಿನ ಉಪವಾಸ ಬಿಡಬೇಕು. ಈ ದಿನ ಹಳದಿ ಬಟ್ಟೆ ಧರಿಸಿದರೆ ಬಹಳ ಒಳ್ಳೆಯದು ಯಾಕೆಂದರೆ ವಿಷ್ಣುವಿಗೆ ಕೂಡ ಹಳದಿ ಬಣ್ಣ ಪ್ರಿಯವಾದ ಬಣ್ಣ ಆಗಿರುವುದರಿಂದ ಹಳದಿ ಬಣ್ಣವನ್ನು ಧರಿಸಿ ವಿಷ್ಣು ಅಥವಾ ವೆಂಕಟೇಶ್ವರನ ದೇವಸ್ಥಾನಕ್ಕೆ ಹೋಗಿ ತಪ್ಪದೆ ವಿಷ್ಣುವಿನ ದರ್ಶನವನ್ನು ಪಡೆಯಿರಿ.
ಎಲ್ಲಾ ದೇವಸ್ಥಾನದಲ್ಲೂ ಕೂಡ ಈ ದಿನ ಉತ್ತರದ ದಿಕ್ಕಿಗೆ ಇರುವ ದ್ವಾರವನ್ನು ತೆಗೆದಿರುತ್ತಾರೆ. ಎಲ್ಲ ದೇವಸ್ಥಾನದಲ್ಲೂ ಕೂಡ ವೈಕುಂಠ ದ್ವಾರವನ್ನು ನಿರ್ಮಿಸಿರುತ್ತಾರೆ. ಈ ಉತ್ತರದ ದ್ವಾರದ ಕೆಳಗೆ ನಡೆದು ಹೋದರೆ ನಮ್ಮ ಪಾಪಗಳು ಕಳೆದು ಮುಕ್ತಿಗೆ ದಾರಿ ಸಿಗುತ್ತದೆ ನಮಗೆ ಸ್ವರ್ಗ ಪಾಪ್ತಿಯಾಗುತ್ತದೆ ಎನ್ನುವ ನಂಬಿಕೆ.
ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕೂಡ ಕರೆಯುತ್ತಾರೆ. ಇದರ ಅರ್ಥ ಮುನ್ನೂರು ಕೋಟಿ ಏಕಾದಶಿ ಮಾಡಿದ ಪುಣ್ಯ ಬರುತ್ತದೆ ಎನ್ನುವುದು ಹಾಗೂ ಈ ದಿನ ವಿಷ್ಣು ತನ್ನ ಜೊತೆ ಮುನ್ನೂರೂ ಕೋಟಿ ದೇವತೆಗಳ ಸಮೇತವಾಗಿ ಭೂಲೋಕಕ್ಕೆ ಒಂದು ತನ್ನ ದರ್ಶನ ಮಾಡಿದವರನ್ನು ಹರಸುತ್ತಾರೆ ಎನ್ನುವ ಮಾತು ಸಹ ಇದೆ. ಇದೇ ದಿನದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ಎಂದು ಸಹ ಹೇಳಲಾಗುತ್ತದೆ.
ಈ ದಿನ ಪೂರ್ತಿ ವಿಷ್ಣುವಿನ ದ್ಯಾನದಲ್ಲಿದ್ದು ವಿಷ್ಣುವಿನ ಸ್ತೋತ್ರಗಳನ್ನು ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಬೇಕು, ಸಾಧ್ಯವಾದಷ್ಟು ವಿಷ್ಣುವಿನ ಅವತಾರಗಳ ಬಗ್ಗೆ ಇರುವ ಕಥೆಗಳನ್ನು ತಿಳಿದುಕೊಳ್ಳುವುದು. ಒಟ್ಟಿನಲ್ಲಿ ವಿಷ್ಣುವೀನ ಧ್ಯಾನ ಮಾಡಬೇಕು. ಈ ದಿನ ಹಳದಿ ಧಾನ್ಯಗಳನ್ನು, ಹಳದಿ ಬಣ್ಣದ ವಸ್ತುಗಳನ್ನು ಹಾಗೂ ಹಳದಿ ಹೂವುಗಳನ್ನು ಅರ್ಹರಿಗೆ ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ.
ಈ ರೀತಿ ವಿಷ್ಣುವಿನ ಮೇಲೆ ಬಹಳ ನಂಬಿಕೆ ಇಟ್ಟು ನೀವು ಏಕಾದಶಿ ಆಚರಿಸಿದರೆ ಅದರಲ್ಲೂ ವೈಕುಂಠ ಏಕಾದಶಿ ಆಚರಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ನಿಮ್ಮ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ ಆಯಸ್ಸು ಐಶ್ವರ್ಯ ಎಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ. ಭಗವಂತನ ಆಶೀರ್ವಾದದಿಂದ ನಿಮಗೆ ಮುಕ್ತಿಯು ದೊರೆಯುತ್ತದೆ. ಆದರೆ ಯಾವುದೇ ಕಾರಣಕ್ಕೂ 5 ವರ್ಷದ ಒಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವರು ಮತ್ತು ಗರ್ಭಿಣಿಯರ ಹಾಗೂ ಬಾಣಂತಿಯರು ವೈಕುಂಠ ಏಕಾದಶಿ ಆಚರಿಸಬಾರದು.