ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ ಶ್ರೇಷ್ಠವಾದದ್ದು ಅನ್ನ. ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಕೂಡ ಕರೆಯುತ್ತಾರೆ. ಯಾಕೆಂದರೆ, ನಮಗೆ ಹೆಚ್ಚು ಹಸಿವಿದ್ದಾಗ ಅನ್ನ ತಿಂದಾಗ ಸಿಗುವ ನೆಮ್ಮದಿ ಬೇರೆ ಏನನ್ನು ತಿಂದಾಗಲೂ ಸಿಗಲಾರದು. ಹಾಗಾಗಿ ಇಂತಹ ಅನ್ನವನ್ನು ಪ್ರತಿಯೊಬ್ಬರ ಗೌರವಿಸಬೇಕು ಮತ್ತು ಇದನ್ನು ತಾತ್ಸಾರ ಮಾಡುವುದಾಗಲಿ, ಅನ್ನಕ್ಕೆ ಅಗೌರವ ತೋರುವುದಾಗಲಿ ಮಾಡಬಾರದು.
ಎಷ್ಟು ಪವಿತ್ರ ಆಹಾರವಾದ ಅನ್ನದಿಂದ ಒಂದು ಸುಲಭ ಉಪಾಯ ಮಾಡಿ ನಿಮ್ಮ ಜೀವನದ ಎಲ್ಲಾ ರೀತಿಯ ಕ’ಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಅನ್ನಕ್ಕೆ ಆ ಶಕ್ತಿ ಇದೆ ಅದರಲ್ಲೂ ರಾತ್ರಿ ಉಳಿದ ಅನ್ನಕ್ಕೆ ಈ ಶಕ್ತಿ ಇದೆ ಎಂದರೆ ನೀವು ಆಶ್ಚರ್ಯಗೊಳ್ಳುತ್ತೀರಿ. ಇದರ ಬಗ್ಗೆ ತಿಳಿದುಕೊಳ್ಳಲು ಹಾಗೂ ಇದನ್ನು ಪಾಲಿಸಲು ಅಂಕಣವನ್ನು ಕೊನೆಯವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ.
ಸಾಮಾನ್ಯವಾಗಿ ನಾವು ಎಷ್ಟು ಬೇಕೋ ಅಷ್ಟೇ ಅಡುಗೆ ಮಾಡುತ್ತೇವೆ. ಊಟ ಮಾಡಿ ಪಾತ್ರೆಗಳನ್ನು ತೊಳೆದಿಟ್ಟು ಮಲಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ರಾತ್ರಿ ಸಮಯ ಎಲ್ಲಾ ಅಡಿಗೆ ಖಾಲಿ ಮಾಡಿ, ಒಂದು ತುತ್ತು ಅನ್ನ ಇಲ್ಲದಂತೆ ಮಾಡಿ ಮಲಗಬೇಡಿ ಇದೇ ನಿಮ್ಮ ಜೀವನದ ನೂರೆಂಟು ಸಮಸ್ಯೆಗಳಿಗೆ ಕಾರಣ ಆಗಿರುತ್ತದೆ.
ಬದಲಾಗಿ ರಾತ್ರಿ ಹೊತ್ತು ಅಡುಗೆ ಆದ ತಕ್ಷಣವೇ ಒಂದು ಸ್ಟೀಲ್ ಬೌಲ್ ನಲ್ಲಿ ಒಂದು ಹಿಡಿ ಅಥವಾ ಎರಡು ಸ್ಪೂನ್ ಅನ್ನ ಎತ್ತಿಟ್ಟು ಅದಕ್ಕೆ ಪ್ಲೇಟ್ ಮುಚ್ಚಿ ನಿಮಗೆ ಗ್ಯಾಸ್ ಸ್ಟವ್ ಬಳಿ ಇಡಿ. ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಎಂಜಲು ಪಾತ್ರೆಗಳನ್ನು ಹಾಗೆ ಇಟ್ಟು ಮಲಗಬೇಡಿ, ಅಡುಗೆ ಮಾಡಿದ ಪಾತ್ರೆಗಳನ್ನು ಹಾಗೂ ನಿಮ್ಮ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಗ್ಯಾಸ್ ಮೇಲೆ ನೀಟಾಗಿ ಕ್ಲೀನ್ ಮಾಡಿ ನೀವು ಬೌಲ್ ನಲ್ಲಿ ಎತ್ತಿಟ್ಟಿದ್ದ ಅನ್ನವನ್ನು ಗ್ಯಾಸ್ ಪಕ್ಕ ಇಟ್ಟು ಮಲಗಿ.
ಯಾಕೆಂದರೆ ನಮ್ಮ ನಂಬಿಕೆಗಳ ಪ್ರಕಾರ ರಾತ್ರಿ ಹೊತ್ತು ನಾವು ಮಲಗಿದ ಮೇಲೆ ಹಿರಿಯರು ಬಂದು ಅಡುಗೆ ಮನೆಗೆ ನೋಡುತ್ತಾರೆ. ಆ ಸಮಯದಲ್ಲಿ ನಾವು ಒಂದು ತುತ್ತು ಕೂಡ ನನ್ನ ಉಳಿಸಿಲ್ಲ ಎಂದರೆ ಅವರು ನಮ್ಮ ಮಕ್ಕಳಿಗೆ ಸಮಸ್ಯೆಯಾಗಿದೆ, ಅವರಿಗೆ ಊಟಕ್ಕೂ ಕೂಡ ಕ’ಷ್ಟವಾಗುತ್ತಿದೆ ಎಂದುಕೊಂಡು ಹೋಗುತ್ತಾರೆ.
ಈ ರೀತಿ ಹಿರಿಯರಿಗೆ ನೋವುಂಟು ಮಾಡಬಾರದು ಹಾಗಾಗಿ ನೀವು ಸ್ವಲ್ಪ ಅನ್ನ ಎತ್ತಿಟ್ಟಿದ್ದರೆ ಸಮೃದ್ಧಿಯಾಗಿದ್ದಾರೆ ಎಂದು ಹರಸಿ ನೆಮ್ಮದಿಯಾಗಿ ಹೋಗುತ್ತಾರೆ. ನಿಮಗಿದ್ದ ಪಿತೃ ದೋಷಗಳು ಈ ರೀತಿ ಹಿರಿಯರ ಸಂತೋಷಗೊಳ್ಳುವುದರಿಂದ ನಿವಾರಣೆಯಾಗುತ್ತವೆ. ಅದಕ್ಕೆ ನಿಂತಿದ್ದ ನಿಮ್ಮ ಎಲ್ಲಾ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನೆಮ್ಮದಿ ಇರುತ್ತದೆ.
ತಾಯಿ ಮಹಾಲಕ್ಷ್ಮಿಯು ಕೂಡ ರಾತ್ರಿ ಹೊತ್ತು ಸಂಚಾರ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರ ಅಡುಗೆಮನೆಗೂ ಬಂದು ನೋಡುತ್ತಾರೆ. ನೀವು ಅಡುಗೆ ಮನೆಯಲ್ಲಿ ಗಲೀಜಾಗಿ ಇಟ್ಟುಕೊಂಡಿದ್ದರೆ ಮತ್ತು ಒಂದು ತುತ್ತು ಅನ್ನ ಬಿಡದೆ ಖಾಲಿ ಮಾಡಿದ್ದರೆ ಅವರು ಕೋಪಗೊಳ್ಳುತ್ತಾರೆ. ನಾನು ಎಷ್ಟೇ ಕೊಟ್ಟಿದ್ದರೂ ಕೂಡ ಇವರು ದರಿದ್ರ ಮಾಡುತ್ತಾರೆ ಎಂದು ಬೇಸರ ಮಾಡಿಕೊಡುತ್ತಾರೆ.
ಆದ ಕಾರಣದಿಂದಾಗಿ ಅನ್ನ ಎತ್ತಿಡಿ. ಆಗ ಇದೇ ರೀತಿ ಅನ್ನ ಅಕ್ಷಯವಾಗಲಿ ಎಂದು ಹಾರೈಸುತ್ತಾರೆ ಮತ್ತು ನಿಮಗೆ ತಾಯಿ ಅನ್ನಪೂರ್ಣೇಶ್ವರಿ ಆಶೀರ್ವಾದವು ಕೂಡ ಸಿಗುತ್ತದೆ. ಆದ ಕಾರಣಕ್ಕಾಗಿ ಇವತ್ತಿನಿಂದಲೇ ಈ ಅಭ್ಯಾಸ ಮಾಡಿ ಮರುದಿನ ಎದ್ದು ಯಾವುದೇ ಕಾರಣಕ್ಕೂ ಕಸದ ಬುಟ್ಟಿಗೆ ಆ ಅನ್ನವನ್ನು ಹಾಕಬೇಡಿ. ನಿಮ್ಮ ಮನೆಯ ಸುತ್ತ ಬರುವ ಪಕ್ಷಿಗಳಿಗೆ ಹಾಕಿ ಅಥವಾ ಮೂಕ ಪ್ರಾಣಿಗಳಿಗೆ ಹಾಕಿ.
ಹೀಗೆ ಮಾಡುವುದರಿಂದ ಅವುಗಳ ಹಸಿವು ನೀಗುತ್ತದೆ ಅವುಗಳು ಕೂಡ ನಿಮಗೆ ಒಳ್ಳೆಯದಾಗಲಿ ಎಂದು ಹರಸುತ್ತವೆ. ಕೇವಲ ಒಂದು ವಾರ ಈ ರೀತಿ ಅಭ್ಯಾಸ ಮಾಡಿ ನೋಡಿ ಫಲಿತಾಂಶ ನಿಮಗೆ ತಿಳಿಯುತ್ತದೆ. ನಂತರ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.