ಕೈನಲ್ಲಿ ಮೊಣಕಟ್ಟಿನ ಜಾಯಿಂಟ್ ಹತ್ತಿರ (Wrist joint) ಕೆಲವರಿಗೆ ಗಂಟುಗಳು ಇರುತ್ತವೆ. ಇದು ಕೂಡ ಒಂದು ರೀತಿ ಸಮಸ್ಯೆಯೇ ಇದಕ್ಕೆ ಮೆಡಿಕಲ್ ಭಾಷೆಯಲ್ಲಿ ಗ್ಯಾಂಗ್ಲಿಯನ್ ಸಿಸ್ಟ್ (Ganglion cyst) ಎಂದು ಹೇಳುತ್ತಾರೆ.
ಈ ಸಮಸ್ಯೆ ಯಾಕೆ ಆಗುತ್ತದೆ? ಯಾರಲ್ಲಿ ಆಗುತ್ತದೆ ಮತ್ತು ಇದಕ್ಕೆ ಪರಿಹಾರ ಏನು? ಇದು ಗಂಭೀರ ಸಮಸ್ಯೆಯೇ? ಯಾವಾಗ ಇದು ಸಮಸ್ಯೆಯಾಗಿ ಬದಲಾಗುತ್ತದೆ? ಆಪರೇಷನ್ ಅಗತ್ಯವಿದೆಯೇ? ಈ ಗಂಟುಗಳನ್ನು ಹಾಗೆ ಬಿಟ್ಟರೆ ಕ್ಯಾನ್ಸರ್ ಆಗುತ್ತಿದೆ ಎನ್ನುವ ಭ’ಯ ಮತ್ತು ಸಾಕಷ್ಟು ಪ್ರಶ್ನೆಗಳು ಹಲವರಲ್ಲಿ ಇರುತ್ತವೆ.
ಇದಕ್ಕೆಲ್ಲ ಉತ್ತರವನ್ನು ಈ ಲೇಖನದಲ್ಲಿ ಕೊಡಲು ಬಯಸುತ್ತಿದ್ದೇವೆ. ತಪ್ಪದೇ ಈ ಆರೋಗ್ಯ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಈ ಗಂಟುಗಳು ಕ್ಯಾನ್ಸರ್ ಕಾರಕವಲ್ಲ ಎನ್ನುವುದು ಸಮಾಧಾನಕರ ವಿಷಯ. ಕೈ ಬೆರಳುಗಳವರೆಗೆ ಹೋಗುವ ಟೆಂಡನ್ ಶೀಥ್ ಗಳಲ್ಲಿ ಘರ್ಷಣೆ ಉಂಟಾಗಿ ಅದು ಮಡಿಕೆ ಆದಾಗ ಅಲ್ಲಿ ಒಂದು ರೀತಿಯ ಜಲ್ಲಿ ಅಂಶ ತುಂಬುತ್ತದೆ.
ಈ ಸುದ್ದಿ ಓದಿ:- ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!
ಇದು ಮೃದು ಆಗುತ್ತದೆ ಇದಕ್ಕೆ ಗ್ಯಾಂಗ್ಲಿಯನ್ ಸಿಸ್ಟ್ ಎನ್ನುತ್ತಾರೆ. ಈ ರೀತಿ ಆಗಲು ಮುಖ್ಯ ಕಾರಣ ಎಂದರೆ ಪದೇಪದೇ ಅತಿಯಾದ ಒತ್ತಡ ಕೈಗಳ ಮೇಲೆ ಬೀಳುವುದು ಎಂದು ಹೇಳುತ್ತಾರೆ. ಅದಕ್ಕಾಗಿ ಮೊಣಕೈ ಜಾಯಿಂಟ್ ಬಳಿಯೇ ಈ ರೀತಿ ಗಂಟು ಉಂಟಾಗುತ್ತದೆ ಮತ್ತು 25 ರಿಂದ 40 ವರ್ಷದ ವಯೋಮಾದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸುತ್ತಿದೆ.
ಆರಂಭದಲ್ಲಿ ಇದು ಬಟಾಣಿ ಗಾತ್ರದಲ್ಲಿ ಇದ್ದಾಗ ಕೈ ನೇರವಾಗಿ ಇಟ್ಟಾಗ ಕಾಣುವುದೇ ಇಲ್ಲ ಕೆಲಸ ಮಾಡುವಾಗ ಬೆಂಡ್ ಆದಾಗ ಮಾತ್ರ ತಿಳಿಯುತ್ತದೆ ಆದರೆ ಗೋಲಿ ಗಾತ್ರಕ್ಕೆ ಆದ ನಂತರ ಸಮಸ್ಯೆ ಗಂಭೀರತೆ ಗೋಚರವಾಗುತ್ತದೆ ಮತ್ತೊಂದು ವಿಚಾರನೆಂದರೆ ಒಂದೇ ಗಂಟು ದೊಡ್ಡದಾಗಿ ಕಾಣಿಸಿಕೊಳ್ಳಬಹುದು ಅಥವಾ ಎರಡು ಮೂರು ಗಂಟುಗಳು ದೊಡ್ಡದಾಗಿ ಒಂದು ಕಡೆ ಕೂಡಿಕೊಂಡು ದೊಡ್ಡದಾಗಬಹುದು.
ಇದು ದೊಡ್ಡದಾಗುತ್ತಾ ಹೋದಂತೆ ವಿಪರೀತವಾಗಿ ನೋವು ಬರುತ್ತದೆ. ಕೈ ಮೂಮೆಂಟ್ ಮಾಡಲು ಆಗುವುದಿಲ್ಲ ಮೊಣಕೈ ಟರ್ನ್ ಮಾಡಲು ಮಡಿಚಲು ಆಗುವುದಿಲ್ಲ ಮತ್ತು ಕೈನ ಬಿಗಿದ ತಪ್ಪುತ್ತದೆ. ಇಷ್ಟೆಲ್ಲ ಹಂತಕ್ಕೆ ತಲುಪುವವರೆಗೂ ಕಾಯದೆ ಆರಂಭದಲ್ಲಿಯೇ ಗುರುತಿಸಿ ವೈದ್ಯರ ಬಳಿ ಹೋಗುವುದು ಸೂಕ್ತ ಆದರೆ ವೈದ್ಯರು ಇದನ್ನು ಇದೇ ಆರೋಗ್ಯ ಸಮಸ್ಯೆಯೇ ಎಂದು ಹೇಗೆ ಗುರುತಿಸುತ್ತಾರೆ ಎನ್ನುವುದೇ ಚಾಲೆಂಜಿಂಗ್.
ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!
ಆದರೆ ಇದು ಇರುವ ಲಕ್ಷಣ ಮತ್ತು ಗ್ಯಾಂಗ್ಲಿಯನ್ ಸಿಸ್ಟ್ ಉಂಟಾಗುವ ಜಾಗದಿಂದಲೇ 90% ಇದು ಇದೇ ಸಮಸ್ಯೆ ಎಂದು ವೈದ್ಯರು ನಿಖರವಾಗಿ ಹೇಳುತ್ತಾರೆ. ಒಂದು ವೇಳೆ ಅಕ್ಕಪಕ್ಕದ ರಕ್ತನಾಳಗಳಿಗೆ ನರಗಳಿಗೆ ಇದರ ಪ್ರಭಾವ ಇದ್ದಾಗ ಅದನ್ನು ತಿಳಿದುಕೊಳ್ಳುವ ಕಾರಣಕ್ಕಾಗಿ ಅಲ್ಟ್ರಾ ಸೌಂಡ್ ಮತ್ತು MRI ಸ್ಕ್ಯಾನ್ ಗಳು ಆಗುತ್ತವೆ.
ಸಾಮಾನ್ಯವಾಗಿ ತುಂಬಾ ಚಿಕ್ಕದಾಗಿದ್ದಾಗ ಇದನ್ನು ಕಾದು ನೋಡಿ ಎಂದೇ ವೈದ್ಯರು ಹೇಳುತ್ತಾರೆ. ಒಂದು ವೇಳೆ ದೊಡ್ಡದಾಗುತ್ತ ಬಂದಿದೆ ಎಂದರೆ ಒಂದು ನೀಡಲ್ ನಿಂದ ಆಸ್ಪಿರೇಷನ್ ಚಿಕಿತ್ಸೆ ಮೂಲಕ ಒಳಗಿರುವ ಜೆಲ್ಲಿಯನ್ನು ಹೊರಗೆ ತೆಗೆಯುವ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಇದು ಸಂಪೂರ್ಣವಾದ ಚಿಕಿತ್ಸೆ ಆಗುವುದಿಲ್ಲ.
ಪದರ ಹಾಗೆ ಉಳಿಯುವುದರಿಂದ ಆ ಜಾಗದಲ್ಲಿ ಇದೇ ರೀತಿ ಮತ್ತೆ ಮತ್ತೆ ಫಾರ್ಮೇಶನ್ ಆಗುವ ಸಾಧ್ಯತೆ ಇರುತ್ತದೆ. ಇನ್ನು ಮಿತಿ ಮೇಲೆ ವಿಪರೀತವಾದ ಉರಿಯೂತ ಇದೆ ನೋ’ವು ಇದೆ ಬಹಳ ಕಷ್ಟವಾಗುತ್ತಿದೆ ಎಂದರೆ ಸ್ಟಿರಾಯ್ಡ್ ಇಂಜೆಕ್ಷನ್ ಕೊಟ್ಟು ಗಂಟಿನ ಪ್ರಮಾಣ ಸಿಂಕ್ ಆಗುವಂತೆ ಮತ್ತು ನೋ’ವು ಶಮನವಾಗುವಂತೆ ಮಾಡಲಾಗುತ್ತದೆ. ಈ ಸಮಸ್ಯೆ ಬಗ್ಗೆ ಇನ್ನಷ್ಟು ಆಳವಾದ ವಿಚಾರವನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.