ಬಟ್ಟೆಗಳ ಮೇಲಿನ ಅರಿಶಿನದ ಕಲೆ ತೆಗೆಯುವುದು ಒಂದು ದೊಡ್ಡ ಟೆನ್ಶನ್. ಅದರಲ್ಲೂ ಬಿಳಿ ಬಟ್ಟೆ ಮೇಲೆ ಈ ರೀತಿ ಅರಿಶಿಣದ ಕಲೆ ಹಾಕಿಬಿಟ್ಟರೆ ಅದನ್ನು ಕ್ಲೀನ್ ಮಾಡುವುದು ಅಷ್ಟು ಸುಲಭ ಅಲ್ಲ. ಬಿಳಿ ಮಾತ್ರ ಅಲ್ಲ ಲೈಟ್ ಕಲರ್ ಬಟ್ಟೆಗಳ ಮೇಲೂ ಕೂಡ ಅರಿಶಿಣದ ಬಣ್ಣ ಎದ್ದು ಕಾಣುತ್ತದೆ.
ನಾವು ದೇವಸ್ಥಾನಕ್ಕೆ ಹೋದಾಗ ಅಥವಾ ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕಿಕೊಂಡು ಪೂಜೆ ಮಾಡುವಾಗ, ಮದುವೆ ಮನೆ ಫಂಕ್ಷನ್ ಗಳಲ್ಲಿ ಓಡಾಡುವಾಗ ಹೀಗೆ ದುಬಾರಿ ಸೀರೆಗಳ ಮೇಲೆಲ್ಲಾ ಈ ರೀತಿ ಅರಿಶಿಣದ ಕಲೆ ಆಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಗಂಡಸರು ಹೆಚ್ಚಾಗಿ ಬಿಳಿ ಬಟ್ಟೆಯನ್ನೇ ಉಪಯೋಗಿಸುವುದರಿಂದ ಅವರ ಪಂಚೆ, ಶಲ್ಯ ಎಲ್ಲಾ ಹಳದಿಮಯವಾಗಿರುತ್ತದೆ.
ಈ ಸುದ್ದಿ ಓದಿ:- ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!
ನಿಮಗೂ ಕೂಡ ಈ ರೀತಿ ಬಿಳಿ ಬಟ್ಟೆ ಮೇಲಿನ ಅರಿಶಿಣದ ಕಲೆ ಅಥವಾ ಇನ್ಯಾವುದೇ ಬಟ್ಟೆ ಮೇಲಿನ ಕಲೆ ತೆಗೆಯುವುದು ಕಷ್ಟ ಆಗಿದ್ದರೆ ನಿಮಗಾಗಿ ಒಂದು ಸುಲಭ ಟ್ರಿಕ್ ಹೇಳಿಕೊಡುತ್ತಿದ್ದೇವೆ. ನೀವೇನಾದರೂ ಈಗ ನಾವು ಹೇಳುವ ಈ ವಿಧಾನ ಬಳಸಿ ಬಿಳಿ ಬಟ್ಟೆ ಕ್ಲೀನ್ ಮಾಡಿದರೆ ಅದರ ಮೇಲೆ ಅರಿಶಿಣದ ಕಲೆ ಇತ್ತೋ ಇಲ್ಲವೋ ಎನ್ನುವಷ್ಟರ ಮಟ್ಟಿಗೆ ಇದು ಪೂರ್ತಿ ಕ್ಲೀನ್ ಆಗುತ್ತದೆ.
ಇದಕ್ಕಾಗಿ ಯಾವುದೋ ದುಬಾರಿ ಬೆಲೆಯ ಡಿಟರ್ಜೆಂಟ್ ಆಗಲಿ ಸ್ಪೆಷಲ್ ಪ್ರಾಡಕ್ಟ್ ಆಗಲಿ ಕೊಂಡು ಬಳಸುವ ಅಗತ್ಯ ಇಲ್ಲವೇ ಇಲ್ಲ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಹೆಚ್ಚು ಶ್ರಮ ಕೂಡ ಪಡೆದೆ ಸಲೀಸಾಗಿ ಇದನ್ನು ಕ್ಲೀನ್ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
ಮೊದಲಿಗೆ ನೀವು ಯಾವ ಬಟ್ಟೆಯಲ್ಲಿ ಕಲೆ ತೆಗಿಯಬೇಕು ಅದನ್ನು ತೆಗೆದುಕೊಳ್ಳಿ ಮತ್ತು ಹಳದಿ ಕಲೆ ಆಗಿರುವುದರ ಮೇಲೆ ನೀರು ಹಾಕಿ ಈ ರೀತಿ ಮಾಡಿದಾಗ ಇದು ಸ್ಪ್ರೆಡ್ ಆಗುತ್ತದೆ ಅಲ್ಲವೇ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು. ಹೌದು, ಹಳದಿ ಆಗಿರುವ ಜಾಗಕ್ಕೆ ನೀರು ಹಾಕಿದಾಗ ಅದು ಇನ್ನಷ್ಟು ಹರಡುತ್ತದೆ.
ಆದರೆ ತೊಂದರೆ ಇಲ್ಲ ಈ ರೀತಿ ಹಾಕಿದ ಮೇಲೆ ನಿಮ್ಮ ಮನೆಯಲ್ಲಿ ಬಳಸುವ ಯಾವುದಾದರೂ ಒಂದು ಸೋಪ್ ತೆಗೆದುಕೊಳ್ಳಿ. ಆ ಬಟ್ಟೆಯಲ್ಲಿ ಕಲೆ ಆಗಿರುವ ಜಾಗದ ಸುತ್ತ ಚೆನ್ನಾಗಿ ಉಜ್ಜಿ ಸ್ಪ್ರೆಡ್ ಮಾಡುವುದು ಮಾತ್ರವಲ್ಲ ನೊರೆ ಬರುವ ರೀತಿ ಚೆನ್ನಾಗಿ ಉಜ್ಜಬೇಕು.
ಈ ಸುದ್ದಿ ಓದಿ:- ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!
ಈಗ ಇದನ್ನು ಬ್ರಷ್ ಮಾಡಲು ಅಥವಾ ಒಗೆಯಲು ಹೋಗಬೇಡಿ ಇದನ್ನು ಬಿಸಿಲಿನಲ್ಲಿ ಒಣಗಲು ಬಿಡಿ ಒಂದೆರಡು ಗಂಟೆ ಕಾಲ ಇದು ಚೆನ್ನಾಗಿ ಕ್ಲೀನ್ ಆಗಿರುತ್ತದೆ ಅಲ್ಪ ಸ್ವಲ್ಪ ಇದ್ದರೆ ಇರಲಿ ಮುಂದಿನ ಹಂತದಲ್ಲಿ ಅದು ಪೂರ್ತಿ ಕ್ಲೀನ್ ಆಗುತ್ತದೆ.
ಇದು ಒಣಗಿದ ಮೇಲೆ ನೀರಿಗೆ ಹಾಕಿ ಚೆನ್ನಾಗಿ ಉಜ್ಜಬೇಕು ನಾಲ್ಕೈದು ಬಾರಿ ನೀರು ಬದಲಾಯಿಸಿ, ಕ್ಲೀನ್ ಮಾಡಬೇಕು. ಮೊದಲೇ ಸೋಪ್ ಹಾಕಿರುವುದರಿಂದ ಮತ್ತೆ ಸೋಪ್ ಆಗಲಿ ಅಥವಾ ಡಿಟರ್ಜೆಂಟ್ ಆಗಲಿ ಹಾಕುವ ಅವಶ್ಯಕತೆ ಇರುವುದಿಲ್ಲ. ಚೆನ್ನಾಗಿ ಕೈಯಲ್ಲಿ ಉಜ್ಜಿ ನಾಲ್ಕೈದು ಬಾರಿ ನೀರು ಬದಲಾಯಿಸಿ ಜಾಲಾಡಿ ನೋಡಿ ಕಲೆ ಮಂಗಮಾಯ ಆಗಿರುತ್ತದೆ.
ಈ ಸುದ್ದಿ ಓದಿ:- ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!
ನಂತರ ಬಿಸಿಲಿನಲ್ಲಿ ಒಣಗಿಸಿದರೆ ನಿಮ್ಮ ಬಟ್ಟೆಯಲ್ಲಿ ಕಲೆ ಇತ್ತೋ ಇಲ್ಲವೋ ಎನ್ನುವ ರೀತಿ ನೀವೇ ಆಶ್ಚರ್ಯ ಪಡುತ್ತೀರಿ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತೆಯರ ಜೊತೆಗೂ ಹಂಚಿಕೊಳ್ಳಿ.