ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅಷ್ಟು ಜನಕ್ಕೆ ಊಟ ಹೇಗೆ ತಯಾರಾಗುತ್ತಿತ್ತು ಗೊತ್ತಾ.?

ಭಾರತ ತನ್ನ ಚರಿತ್ರೆಯಲ್ಲಿ ಅನೇಕ ಯುದ್ಧಗಳನ್ನು ಕಂಡಿವೆ ಹಾಗೂ ಎಷ್ಟೋ ರಕ್ತ ಚರಿತ್ರೆಗಳಿಗೆ ತಾನು ಮೂಕ ಸಾಕ್ಷಿಯಾಗಿದೆ ಆದರೆ ಇವುಗಳಿ ಗಿಂತ ಅತ್ಯಂತ ಘೋರ ಹಾಗೂ ಭೀಕರವಾದಂತಹ ಯುದ್ಧ ಯಾವುದು ಎಂದರೆ ಅದು ಮಹಾಭಾರತದ ಕುರುಕ್ಷೇತ್ರ ಯುದ್ಧ ಅಂತ ಪರಿಗಣಿಸ ಲಾಗುತ್ತದೆ. ಈ ಯುದ್ಧದಲ್ಲಿ ದೇಶದ ಅಸಂಖ್ಯಾತ ವೀರರು ಸೇನಾನಿ ಗಳು ಭಾಗಿಯಾಗಿದ್ದರು.

ಹಾಗಾಗಿಯೇ ಇದನ್ನು ಮಹಾಭಾರತದ ಯುದ್ಧ ಅಂತ ಇತಿಹಾಸಕಾರರು ಕರೆದಿದ್ದು. ಉಲ್ಲೇಖಿತ ಅಂಕಿ ಅಂಶಗಳ ಪ್ರಕಾರ ಈ ಯುದ್ಧದಲ್ಲಿ 50 ಲಕ್ಷಕ್ಕೂ ಅಧಿಕ ಸೈನಿಕರು ಭಾಗಿಯಾಗಿ ದ್ದರೂ ಅಂತ ಹೇಳಲಾಗುತ್ತದೆ. ಪ್ರತಿದಿನವೂ ಇಲ್ಲಿ ಉಭಯ ತಂಡಗಳ ಲಕ್ಷಾಂತರ ಸೈನಿಕರು ವೀರ ಮರಣವನ್ನಪ್ಪುತ್ತಿದ್ದರು.ಈ ಯುದ್ಧ ಒಟ್ಟು 18 ದಿನಗಳ ಕಾಲ ನಡೆಯಿತು.

ಈ ಯುದ್ಧ ಶುರುವಾಗುವ ಮೊದಲು ರಣಾಂಗಣದಲ್ಲಿ ಯುದ್ಧದಲ್ಲಿ ಹೆದರಿ ಕೈ ಚೆಲ್ಲುವಂತಹ ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆಯನ್ನು ಬೋಧನೆ ಮಾಡುತ್ತಾನೆ. ಹಾಗೂ ಅರ್ಜುನನಿಗೆ ಸಾಂಸಾರಿಕತೆ ಹಾಗೂ ಅಲೌಕಿ ಕಥೆ ಇವೆರಡರ ಪರಿಚಯವನ್ನು ಮಾಡಿಸಿದ್ದ. ಹಿಂದೂ ಮತಗಳ ಭಾಗವತದಲ್ಲಿಯೇ ಈ ಭಗವದ್ಗೀತೆಯನ್ನು ಅತ್ಯಂತ ಪುರಾತನದ ಪುಣ್ಯ ವಿಶೇಷವಾದ ಹಾಗೂ ವಿಶಾಲವಾದ ಧರ್ಮೋಪನಿಷತ್ತು ಎಂದು ಭಾವಿ ಸಲಾಗುತ್ತದೆ.

ಇದನ್ನು ಪಂಚಮವೇದ ಎಂದು ಕೂಡ ಕರೆಯುತ್ತಾರೆ. ಮಹಾಭಾರತ ಕಾವ್ಯ ಭಾರತೀಯರ ಪವಿತ್ರ ಗ್ರಂಥ ಎಂದು ಮಾನ್ಯವಾ ಗಿದೆ. ಇದು ಈ ನೆಲದ ಅತ್ಯಂತ ಪೌರಾಣಿಕ, ಚಾರಿತ್ರಿಕ, ಧಾರ್ಮಿಕ ಹಾಗೂ ದಾರ್ಶನಿಕ ಗ್ರಂಥ ಎಂದು ಹೆಸರಾಗಿದೆ. ಈ ಕೃತಿಯಲ್ಲಿ ಶ್ರೀಕೃಷ್ಣ ವೈಶಂಪನಾಯ ಮಹರ್ಷಿ ಶ್ರೀ ವೇದವ್ಯಾಸರ ಬಗ್ಗೆ ವಿವರಗಳು ಇವೆ.

ಈ ಮಹಾ ಗ್ರಂಥವನ್ನು ಗಣೇಶ ಶ್ರೀ ವೇದವ್ಯಾಸರು ಹೇಳಿದಂತೆ ಬರೆದ ಎಂದು ನಂಬಲಾಗಿದೆ. ಈ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಪ್ರಮುಖ ಅಧ್ಯಾಯ ಈ ಒಂದು ಯುದ್ಧದಲ್ಲಿ 50 ಲಕ್ಷ ಸೇನಾನಿಗಳು ಭಾಗಿಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿ ಏನು ಎಂದರೆ.

ಇಷ್ಟು ಜನರಿಗೆ ಭೋಜನದ ವ್ಯವಸ್ಥೆಯನ್ನು ಹೇಗೆ ಮಾಡಲಾಗುತ್ತಿತ್ತು ಅಷ್ಟು ಜನರಿಗೆ ಕಾಲಕಾಲಕ್ಕೆ ಹೇಗೆ ಆಹಾರವನ್ನು ಪೂರೈಕೆ ಮಾಡಲಾಗುತ್ತಿತ್ತು? ಇಷ್ಟು ಆಹಾರವನ್ನು ತಯಾರು ಮಾಡುತ್ತಿದ್ದವರು ಯಾರು? ಹಾಗೂ ಎಲ್ಲಿ ಪ್ರತಿದಿನ ಸಂಜೆ ಯುದ್ಧ ಮುಗಿದ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಅನೇಕರು ಸಾವನ್ನಪ್ಪಿ ತಂಡಗಳಲ್ಲಿ ಸೇನೆಯ ಪ್ರಮಾಣ ಕುಸಿದಾಗ ಸರಿಯಾಗಿ ಅಷ್ಟು ಜನಕ್ಕೆ ರಾತ್ರಿ ಅಡುಗೆಯನ್ನು ಹೇಗೆ ನಿರ್ಧರಿಸಲಾಗುತ್ತಿತ್ತು.

ಇದರ ಬಗ್ಗೆ ಗ್ರಂಥದಲ್ಲಿ ಏನೆಲ್ಲ ಉಲ್ಲೇಖ ಮತ್ತು ಮಾಹಿತಿ ಇದೆ ಎನ್ನುವುದನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ. ಮಹಾಭಾರತದ ಯುದ್ಧದಲ್ಲಿ ಎಲ್ಲವೂ ಕೂಡ ಅತ್ಯಂತ ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ಯೋಜಿತವಾಗುತ್ತಿತ್ತು. ಅದರಲ್ಲಿ ಸೈನಿಕರಿಗೆ ಭೋಜನದ ವ್ಯವಸ್ಥೆ ಕೂಡ ಒಂದು. ಸೈನಿಕರಿಗೆ ಅಂತ ತಯಾರಾಗುವ ಆಹಾರವು ಯಾವ ಕಾರಣ ಕ್ಕೂ ವ್ಯರ್ಥವಾಗುವುದಾಗಲಿ ಅಥವಾ ಕೆಡುವುದಾಗಲಿ ಆಗದ ಹಾಗೆ ಎಚ್ಚರಿಕೆಯನ್ನು ವಹಿಸಲಾಗುತ್ತಿತ್ತು.

ಮಹಾಭಾರತದ ಸೇನೆಗೆ ಅಡುಗೆ ಮಾಡುವಂತಹ ಹೊಣೆ ಉಡುಪಿಯ ಅರಸನದಾಗಿತ್ತು. ಈತ ಪಾಕ ಕಾರ್ಯದಲ್ಲಿ ಅತ್ಯಂತ ನಿಪುಣನಾಗಿದ್ದು ಯುದ್ಧದಲ್ಲಿ ಭಾಗಿಯಾಗಿ ದ್ದಂತಹ ಅಸಂಖ್ಯಾತ ಜನರಿಗೆ ಆಹಾರವನ್ನು ಪುರೈಕೆ ಮಾಡುವಂತಹ ಬಾಧ್ಯತೆಯನ್ನು ವಹಿಸಿಕೊಂಡಿದ್ದ. ಈತನ ಉಸ್ತುವಾರಿಯಲ್ಲಿ ಆಹಾರ ವೂ ಸ್ವಲ್ಪವೂ ಕೂಡ ವ್ಯರ್ಥವಾಗುತ್ತಿರಲಿಲ್ಲ. ಪ್ರತಿದಿನ ಆತ ಯುದ್ಧ ಮುಗಿದಾಗ ಎಷ್ಟು ಜನ ಇರುತ್ತಿದ್ದರೋ ಅಷ್ಟು ಜನರಿಗೆ ಅಡುಗೆ ಮಾಡುವಲ್ಲಿ ನಿಸ್ಸೀಮನಾಗಿದ್ದ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment