ದಾನ ಎನ್ನುವುದು ಪ್ರಪಂಚದ ಸರ್ವ ಶ್ರೇಷ್ಠ ಪದ ಎನ್ನಬಹುದು. ಇರುವವರು ಇಲ್ಲದಿರುವವರಿಗೆ ತಮ್ಮ ಪಾಲಿನದ್ದನ್ನು ಸಂತೋಷವಾಗಿ ಹಂಚಿಕೊಳ್ಳುವುದಕ್ಕೆ ದಾನ ಎನ್ನುತ್ತಾರೆ. ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಕೆಲವೊಮ್ಮೆ ದಾನ ಮಾಡುವುದರಿಂದ ನಮ್ಮ ದೋಷಗಳು ಕಳೆಯುತ್ತವೆ, ನಾವು ದಾನ ಮಾಡುವುದರಿಂದ ಅವಶ್ಯಕತೆ ಇರುವವರಿಗೆ ಅದು ತಲುಪಿದರೆ ಅದರ ಮೂಲಕ ಇಬ್ಬರಿಗೂ ಸಿಗುವ ಆನಂದ ಅಷ್ಟಿಷ್ಟಲ್ಲ.
ಜೊತಗೆ ದಾನ ಎನ್ನುವುದು ಬಹಳ ಅರ್ಥ ಹೊಂದಿದ್ದು ಯಾವುದನ್ನು ದಾನ ನೀಡುತ್ತಿದ್ದಾರೆ ಎನ್ನುವುದರ ಮೇಲೆ ಅದು ನಿರ್ಧಾರ ಆಗುತ್ತದೆ. ದಾನ ಎನ್ನುವುದನ್ನು ಒಬ್ಬರಿಗೆ ಅವಶ್ಯಕತೆ ಇದೆ ಎನ್ನುವುದನ್ನು ಅರಿತುಕೊಡುತ್ತಾರೆ ಅಥವಾ ಯಾರಾದರೂ ನಮ್ಮ ಬಳಿ ಬಂದು ಕೈ ಚಾಚಿ ಕೇಳಿದಾಗಲೂ ಕೂಡ ನೀಡುತ್ತಾರೆ.
ಕೆಲವೊಮ್ಮೆ ಗುರು ಹಿರಿಯರು ಸೂಚಿಸಿದ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ತಮ್ಮ ದೋಷಗಳನ್ನು ಕಡಿಮೆ ಮಾಡಿಕೊಳ್ಳಲು ಕೂಡ ನೀಡುತ್ತಾರೆ, ದಾನ ಮಾಡುವುದರಿಂದ ಮನಸ್ಸು ಸ್ವಚ್ಛವಾಗುತ್ತದೆ ಎಂದು ಹೇಳಲಾಗುತ್ತದೆ, ಮನಸ್ಸಿಗೆ ಒಂದು ರೀತಿಯ ಆನಂದ ಆಗುವುದಂತೂ ನಿಜ.
ಇದೆಲ್ಲದರ ಜೊತೆಗೆ ಕೆಲವೊಂದು ದಾನಗಳಿಗೆ ಅರ್ಥವಿತ್ತು ಅದರ ಬಗ್ಗೆ ಹಿರಿಯರು ತಿಳಿಸಿದ್ದಾರೆ ಇಂತಹ ಶ್ರೇಷ್ಠ ವಿಚಾರದ ಬಗ್ಗೆ ಕೆಲವು ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ಕೆಲ ಅಂಶಗಳನ್ನು ಇಂದು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಯಾವ ರೀತಿಯ ದಾನಗಳಿವೆ, ಯಾವ ದಾನದಿಂದ ಏನು ಫಲ ಎನ್ನುವ ಮಾಹಿತಿ ಹೀಗಿದೆ…
* ಅನ್ನದಾನ ಮಾಡಿದವರ ಮನೆಯಲ್ಲಿ ಎಂದು ಕೂಡ ಅನ್ನಕ್ಕೆ ಕಷ್ಟ ಬರುವುದಿಲ್ಲ. ಪ್ರತಿಯೊಬ್ಬರು ಶಕ್ತಿಯನುಸಾರ ಹಸಿದು ಇದ್ದವರಿಗೆ ಆಹಾರ ನೀಡಬೇಕು, ಅನ್ನದಾನ ಮಾಡುವುದರಿಂದ ದರಿದ್ರ ನಾಶವಾಗುತ್ತದೆ, ಸಾಲಗಳು ಬೇಗ ತೀರುತ್ತದೆ.
* ದಾನ ಮಾಡುವಾಗ ಅದರ ಪೂರ್ತಿ ಫಲ ಸಿಗಬೇಕು ಎಂದರೆ ಯಾರಿಗೆ ಆ ವಸ್ತುವಿನ ಅವಶ್ಯಕತೆ ಇರುತ್ತದೆಯೋ ಅವರಿಗೆ ದಾನ ಮಾಡಿದರೆ ಮಾತ್ರ ಆ ಪುಣ್ಯ ಸಿಗುವುದು ಹೀಗೆ ವಸ್ತುಗಳ ದಾನವನ್ನು ಅದರ ಅವಶ್ಯಕತೆ ಇರುವವರಿಗೆ ಮಾಡಿದರೆ ಆಯುಷ್ಯ ಹೆಚ್ಚಾಗುತ್ತದೆ.
* ಜೇನುತುಪ್ಪವನ್ನು ದಾನ ಮಾಡಿದರೆ ಪುತ್ರ ಸಂತಾನವಾಗುತ್ತದೆ ಎಂದು ಹೇಳಲಾಗುತ್ತದೆ.
* ದೀಪ ದಾನ ಮಾಡುವುದರಿಂದ ಕಣ್ಣು ದೃಷ್ಟಿ ವೃದ್ಧಿಸುತ್ತದೆ, ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತವೆ.
* ಅಕ್ಕಿ ದಾನ ಮಾಡುವುದರಿಂದ ಗೊತ್ತು ಗೊತ್ತಿರದೆ ಮಾಡಿರುವ ಅದೆಷ್ಟೋ ಪಾಪಗಳು ಕಳೆಯುತ್ತವೆ.
* ತುಪ್ಪ ದಾನ ಮಾಡುವುದರಿಂದ ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ
* ಹಾಲನ್ನು ದಾನ ಮಾಡುವುದರಿಂದ ದುಃಖ ಕಡಿಮೆ ಆಗುತ್ತದೆ.
* ಮೊಸರನ್ನ ದಾನ ಮಾಡುವುದರಿಂದ ಇಂದ್ರಿಯಗಳ ಚುರುಕುತನ ಹೆಚ್ಚಾಗುತ್ತದೆ. ಇಂದ್ರಿಯಗಳ ಆರೋಗ್ಯವು ವೃದ್ಧಿಸುತ್ತದೆ.
* ಹಣ್ಣುಗಳನ್ನು ದಾನ ಮಾಡಿದರೆ ಬುದ್ಧಿ ಸಿದ್ದಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
* ಬಂಗಾರವನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಇರುವ ಎಲ್ಲಾ ರೀತಿಯ ದೋಷಗಳು ನಿವಾರಣೆ ಆಗುತ್ತದೆ
* ಬೆಳ್ಳಿಯನ್ನು ದಾನ ಮಾಡುವುದರಿಂದ ಮಾನಸಿಕ ರೋಗಗಳು ಕಡಿಮೆ ಆಗುತ್ತದೆ, ಮನಸ್ಸಿನ ಚಿಂತೆಗಳು ದೂರವಾಗುತ್ತವೆ.
* ಹಸುವನ್ನು ದಾನ ಮಾಡುವುದರಿಂದ ಖುಷಿ, ದೇವರು, ಪಿತೃಗಳಿಂದ ವಿಮೋಚನೆ ಉಂಟಾಗುತ್ತದೆ
* ತೆಂಗಿನಕಾಯಿಯನ್ನು ದಾನ ಮಾಡುವುದರಿಂದ ಅಂದುಕೊಂಡ ಕಾರ್ಯವು ಬೇಗ ನಡೆಯುತ್ತದೆ.
* ನೆಲ್ಲಿಕಾಯಿ ದಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ಜ್ಞಾನವು ಕೂಡ ವೃದ್ಧಿಯಾಗುತ್ತದೆ.
* ಭೂಮಿಯನ್ನು ದಾನ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗುತ್ತೇವೆ, ಸಾಕ್ಷತ್ ಈಶ್ವರನ ದರ್ಶನವಾಗಿ ಆತನ ಅನುಗ್ರಹವಾಗುತ್ತದೆ ಎಂದು ಹೇಳಲಾಗುತ್ತದೆ.