ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಣ್ಣ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಎಳನೀರನ್ನು ಇಷ್ಟಪಟ್ಟು ಕುಡಿಯುತ್ತಾರೆ. ಎಳನೀರಿನಲ್ಲಿ ದೇಹವನ್ನು ತಂಪು ಮಾಡುವ ಶಕ್ತಿ ಇದೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ ಮತ್ತು ನಿಶಕ್ತಿ ಇದ್ದಾಗ ಎಳನೀರು ಕುಡಿದರೆ ನ್ಯಾಚುರಲ್ ಗ್ಲುಕೋಸ್ ಆಗಿ ದೇಶಕ್ಕೆ ಎನರ್ಜಿ ತರುತ್ತದೆ.
ಬೆಂಗಳೂರಿನಂತಹ ಮಹಾನಗರದಲ್ಲಿರುವವರಿಗೆ ಈ ಕಾರ್ಬೋನಿಕ್ ಡ್ರಿಂಕ್ ಗಳ ಸಂತೆಯೊಳಗೆ ನ್ಯಾಚುರಲ್ ಆದ ಎಳನೀರು ಕುಡಿಯಲು ಸಿಕ್ಕಿದರೆ ಆ ಸಂತೋಷಕ್ಕೆ ಪಾರವೇ ಇಲ್ಲ. ರೋಗಿಗಳಿಂದ ಹಿಡಿದು ರಸ್ತೆಯಲ್ಲಿ ಓಡಾಡುವವರು ಎಲ್ಲರೂ ಕೂಡ ಹುಡುಕಿಕೊಂಡು ಬಂದು ಎಳನೀರು ತೆಗೆದುಕೊಳ್ಳುತ್ತಾರೆ, ಹೀಗಾಗಿ ಯಾವುದೇ ಕಾರಣಕ್ಕೂ ಲಾಸ್ ಆಗದ ಬಿಸಿನೆಸ್ ಎಳನೀರು ಬಿಸಿನೆಸ್, ಪರೋಕ್ಷವಾಗಿ ರೈತನಿಗೂ ಕೂಡ ನೆರವಾದ ರೀತಿ ಆಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
ಆದರೆ ಎಳನೀರು ಮಾರುವುದು ಅಷ್ಟೊಂದು ಸುಲಭವಾದ ಮಾತಲ್ಲ. ಯಾಕೆಂದರೆ ಒಂದೋ ಎರಡೋ ಎಳನೀರು ಕೊಚ್ಚಿ ಕೊಡಬಹುದು ಆದರೆ ದಿನಪೂರ್ತಿ ಬಿಸಿಲಿನಲ್ಲಿ ನಿಂತು ಸೈಕಲ್ ನಲ್ಲಿ ಹೇರಿಕೊಂಡು ಓಡಾಡುತ್ತಾ ಅಥವಾ ಒಂದೆಡೆ ಗುಡ್ಡೆ ಹಾಕಿಕೊಂಡು ಕಾಯುತ್ತಾ 300 ರಿಂದ 500ವರೆಗೆ ಎಳನೀರು ಹೊಡೆಯಬೇಕು ಎಂದರೆ ಸಾಮಾನ್ಯನಿಂದ ಅದು ಆಗದ ಕೆಲಸ.
ಇದು ಇಷ್ಟೊಂದು ಲಾಭದಾಯಕವಾಗಿರುವುದರಿಂದ ಸಾಮಾನ್ಯವಾಗಿ ಹೆವಿ ಕಾಂಪಿಟೇಶನ್ ಇದ್ದೆ ಇರುತ್ತದೆ. ಸಂಜೆ ಹೊತ್ತು ಬೀಳುವವರೆಗೂ ಕೂಡ ಎಳನೀರಿನ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುವುದು ಮಾತ್ರವಲ್ಲದೆ ಬೆಳಗ್ಗೆ ಬೇಗ ಎದ್ದು ತಾವು ಮಾರುವುದಕ್ಕೆ ಬೇಕಾದ ಎಳನೀರನ್ನು ತಾವು ವಹಿಸಿಕೊಂಡಿರುವ ರೈತನ ತೋಟಕ್ಕೆ ಹೋಗಿ ತರಬೇಕು.
ಮರ ಹತ್ತುವುದು ಅದು ಕೂಡ ಒಂದು ಸಾಹಸವೇ, ಸಧ್ಯಕ್ಕೆ ಈಗ ಯಂತ್ರಗಳ ಅನುಕೂಲತೆ ಹಾಗೂ ಯಂತ್ರಗಳ ಮೂಲಕ ಮರ ಹತ್ತಲು ಸುರಕ್ಷತೆ ಇರುವುದರಿಂದ ಈ ವಿಚಾರಕ್ಕಾಗಿ ವಿಜ್ಞಾನಕೊಂದು ಸಲಾಂ ಹೊಡೆಯಲೇಬೇಕು ಇಲ್ಲವಾದಲ್ಲಿ ಎಳನೀರನ್ನು ಇಳಿಸುವ ಕಾರಣಕ್ಕಾಗಿ ಮರ ಹತ್ತಿ ಕಾಲು ಜಾರಿ ಸಾ’ವ’ನ’ಪ್ಪಿ’ದವರ ಸಂಖ್ಯೆ ಮತ್ತು ಆ ಮೂಲಕ ಅವರ ಕುಟುಂಬವು ಭವಿಷ್ಯ ಕಳೆದುಕೊಂಡ ಇನ್ನೆಷ್ಟೋ ಪ್ರಕರಣಗಳನ್ನು ನಾವು ಕಾಣಬೇಕಾಗಿತ್ತು.
ಇನ್ನೂ ರೈತರ ಬಳಿ ತಮಗೂ ಗಿಟ್ಟುವ, ರೈತನಿಗೂ ಅ’ನ್ಯಾ’ಯವಾಗದ ರೀತಿ ಬೆಲೆ ಮಾತಾಡಿಕೊಂಡು ಬಾಡಿಗೆಗೆ ಆಟೋಗಳನ್ನು ಟೆಂಪೋಗಳನ್ನು ಕರೆದುಕೊಂಡು ಹೋಗಿ ತುಂಬಿಸಿಕೊಂಡು ತರಬೇಕು. ಇಷ್ಟೆಲ್ಲ ತಾವು ರೆಗ್ಯುಲರ್ ಆಗಿ ಅಂಗಡಿ ತೆಗೆಯುವ ಅಷ್ಟರ ಒಳಗೆ ಮುಗಿದಿರಬೇಕು ಹಾಗೆಂದರೆ ನೀವು ಸೂರ್ಯ ಹುಟ್ಟುವ ಮುಂಚೆ ರೈತನ ಜಮೀನಿನಲ್ಲಿರಬೇಕು.
ಇದರಲ್ಲಿರುವ ಒಂದೇ ರಿಸ್ಕ್ ಏನೆಂದರೆ, ಎಳನೀರು ಖಾಲಿಯಾದೇ ಉಳಿದುಬಿಟ್ಟರೆ, ನಾಲ್ಕೈದು ದಿನ ಕಳೆದಾಗ ಹುಳಿಯಾಗಿ ಬಿಡುತ್ತದೆ ಹಾಗಾಗಿ ಆದಷ್ಟು ಬೇಗ ತಮಗೆ ತಿಳಿದಿರುವ ಬಿಸಿನೆಸ್ ಟ್ರಿಕ್ಸ್ ಮಾಡಿ ತಂದಿರುವ ಸರಕನ್ನು ಖಾಲಿ ಮಾಡಿಬಿಡಬೇಕು. ಸಾಮಾನ್ಯವಾಗಿ ಮಳೆ ಮೋಡ ಇತ್ತ ದಿನಗಳಷ್ಟೇ ಇಂತಹ ಸಮಸ್ಯೆ ಇರುತ್ತದೆ.
ನಾವೆಲ್ಲರೂ ಕೂಡ ಎಳನೀರು ಕುಡಿದೇ ಕುಡಿಯುತ್ತೇವೆ. ಆದರೆ ಅವರ ಜೀವನ ಶೈಲಿ ಹೀಗಿರುತ್ತದೆ ಎಂದು, ಒಮ್ಮೆ ಕೂಡ ಯೋಚನೆ ಮಾಡಿರುವುದಿಲ್ಲ. ಈ ಪಾಡನ್ನು ಸ್ವತಃ ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಹಾಗಾಗಿ ಯೂಟ್ಯೂಬ್ ಚಾನೆಲ್ ರವರೊಬ್ಬರು ಒಂದು ದಿನ ತಾವು ಸಹ ಎಳನೂರು ವ್ಯಾಪಾರ ಮಾಡಿದರೆ ಹೇಗಾಗುತ್ತದೆ.
ಎನ್ನುವ ಪ್ರಯೋಗ ಮಾಡಿ ಅದರಿಂದ ಬಂದ ಹಣವನ್ನು ತಮ್ಮ ಸಬ್ಸ್ಕ್ರೈಬರ್ ಗೆ ಗಿಫ್ಟ್ ಕೊಡುವ ಪ್ಲಾನ್ ಮಾಡಿ ಕೆಲಸ ಕೇಳಿಕೊಂಡು ಹೋದವರು ಈಗ ಅದರಲ್ಲಿರುವ ಲಾಭ ಕಂಡು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಕ್ಕಿಂತ ಎಳನೀರು ಅಂಗಡಿ ಹಾಕುವುದೇ ಬೆಸ್ಟ್ ಎಂದುಕೊಂಡಿದ್ದಾರೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಮಗೂ ಹಾಗೆ ಎನಿಸುತ್ತಿದೆಯೇ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.