ಈ ವರ್ಷ ಶನಿ ಪರಿವರ್ತನೆ ಆಗದೆ ಇದ್ದರು ಕನ್ಯಾ ರಾಶಿಗೆ ಅದೃಷ್ಟದ ಪರಿವರ್ತನೆ ಖಂಡಿತಾ ಆಗಲಿದೆ. ಹೇಗೆಂದರೆ 2024ರ ವರ್ಷದಲ್ಲಿ ಶನಿಯು ಅಸ್ತಂಗತನಾಗುತ್ತಾರೆ ಮತ್ತು ಹಿಮ್ಮುಖವಾಗಿ ಚಲನೆ ಮಾಡುವಾಗ ವಕ್ರದೃಷ್ಟಿಯನ್ನು ಬೀರಿ ಬಹಳ ಬದಲಾವಣೆಗಳನ್ನು ಉಂಟು ಮಾಡುತ್ತಿದ್ದಾರೆ.
ದ್ವಾದಶ ರಾಶಿಗಳೆಲ್ಲದ ಮೇಲೆ ಇದರ ಪರಿಣಾಮ ಉಂಟಾಗಲಿದೆ ಅದರಲ್ಲಿ ಕನ್ಯಾ ರಾಶಿಯವರಿಗೆ ಈ ವರ್ಷದಲ್ಲಿ ಶನಿ ಫಲ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಮುಖ್ಯವಾಗಿ ಈ ವರ್ಷದಲ್ಲಿ ಎರಡು ರೀತಿಯ ಬದಲಾವಣೆಗಳು ನಿಮ್ಮ ಜೀವನದಲ್ಲಿ ನಡೆಯಲಿದೆ. ಇದು ಶುಭ ಫಲವು ಅಥವಾ ಅಶುಭ ಫಲವೋ ಎನ್ನುವುದು ನೀವು ಇದನ್ನು ಅರಿತು ಎಚ್ಚರಿಕೆಯಿಂದ ನಡೆಯುವುದರ ಮೇಲೆ ನಿರ್ಧಾರ ಆಗುತ್ತದೆ.
ಈ ಸುದ್ದಿ ಓದಿ:- ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!
ಮೊದಲನೆಯದಾಗಿ ಫೆಬ್ರವರಿ 11, 2024 ರಲ್ಲಿ ಶನಿ ಅಸ್ತಂಗತನಾಗುತ್ತಿದ್ದಾರೆ ಇದರ ಪರಿಣಾಮ ಹೇಗಿರುತ್ತದೆ ಎಂದರೆ ಶನಿ ಎಂದರೆ ಕರ್ಮಕಾರಕ. ವಿಳಂಬ, ಅಡೆತಡೆ, ಅಡ್ಡಿ, ಆತಂಕ, ಕಷ್ಟ, ಅವಮಾನ, ತೊಂದರೆ ಸೋಂಬೇರಿತನ ಅಂದುಕೊಂಡು ಬಿಟ್ಟಿರುತ್ತೇವೆ. ಆದರೆ ಇದು ಪೂರ್ತಿ ಸರಿಯಲ್ಲ ಎಲ್ಲವೂ ಕರ್ಮ ಆಧಾರಿತವಾಗಿದೆ.
ಒಂದು ವೇಳೆ ನಿಮಗೆ ಗೊತ್ತಿದ್ದೋ ಗೊತ್ತಿರದೆಯೋ ಮಾಡಿದ ತಪ್ಪಿನಿಂದ ಈಗ ಇಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದರೂ ಶನಿ ಅಸ್ತಂಗತನಾಗಿರುವ ಈ ಸಮಯದಲ್ಲಿ ನಿಮಗೆ ಇವುಗಳಿಂದ ಪ್ರಭಾವ ಕಡಿಮೆ ಎಂದು ಹೇಳಬಹುದು. ನಿಮ್ಮ ಈ ಕಷ್ಟಗಳು ಕೆಲವು ದಿನಗಳು ಕಣ್ಮರೆಯಾಗಲಿದೆ ಅದರಲ್ಲೂ ಮುಖ್ಯವಾಗಿ ಹಣಕಾಸಿಗೆ ಸಂಬಂಧಪಟ್ಟ ಹಾಗೆ ನೀವು ತೊಂದರೆಯಲ್ಲಿ ಸಿಲುಕಿಕೊಂಡಿದ್ದರೆ ಅದು ಚೇತರಿಕೆಯಾಗಿ ಸುಧಾರಿಸಿಕೊಳ್ಳುವ ಫಲಗಳನ್ನು ಪಡೆಯುತ್ತೀರಿ.
ಈ ಪ್ರಯೋಜನವು ಮಾರ್ಚ್ 18, 2024ರವರೆಗೆ ಅಂದರೆ 38 ದಿನಗಳ ಕಾಲ ಮಾತ್ರ ಇರುತ್ತದೆ ಮತ್ತೆ ಶನಿಯು ಉದಯಿಸಲಿದ್ದಾರೆ. ಆದರೆ ಆತಂಕ ಬೇಡ ಶನಿಯು ಅಸ್ತಂಗತನದ ಸಮಯದಿಂದಲೇ ನಿಮಗೆ ಶುಭ ಫಲಗಳನ್ನು ಕೊಡಲು ಶುರು ಮಾಡಿರುತ್ತಾನೆ. ನಿಮ್ಮ ಆರೋಗ್ಯ ಚೇತರಿಕೆ ಆಗುತ್ತದೆ, ಹೂಡಿಕೆಗಳ ಮೇಲಿನ ಲಾಭಗಳನ್ನು ಹಿಂಪಡೆಯುತ್ತೀರಿ.
ಈ ಸುದ್ದಿ ಓದಿ:-ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…
ವ್ಯಾಪಾರ ವ್ಯವಹಾರ ಚುರುಕುಗೊಳ್ಳುತ್ತದೆ, ವೃತ್ತಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತೀರಿ ಇಂತಹ ಇನ್ನು ಅನೇಕ ಉತ್ತಮ ಫಲಗಳನ್ನು ಪಡೆಯುತ್ತೀರಿ ಹಾಗೆಯೇ ನಂತರವೂ ಮೇ ತಿಂಗಳಿನಲ್ಲಿ ಕನ್ಯಾ ರಾಶಿಗೆ ಗುರುವು ಕೂಡ ಭಾಗ್ಯ ಸ್ಥಾನಕ್ಕೆ ಹೋಗುವುದರಿಂದ ಇನ್ನು ಹೆಚ್ಚಿನ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.
ಜನವರಿ 17, 2023 ರಿಂದಲೂ ಶನಿಯು ಕುಂಭ ರಾಶಿಯಲ್ಲಿಯೇ ಇದ್ದಾರೆ. ರಾಶಿ ಚಕ್ರದಲ್ಲಿ ಬಹಳ ಮಂದವಾಗಿ ಚಲಿಸುವ ಗ್ರಹ ಶನಿಗ್ರಹವಾಗಿದೆ. ಒಂದು ಮನೆಯಿಂದ ಮತ್ತೊಂದು ಮನೆಗೆ ಎರಡು ವರ್ಷಗಳ ಕಾಲ ತೆಗೆದುಕೊಳ್ಳುವ ಶನಿಯು ಜೂನ್ ಅಂತ್ಯದಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾರೆ, ಪರಿಣಾಮ ಶನಿಯ ವಕ್ರ ದೃಷ್ಟಿಯನ್ನು ಅನುಭವಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!
ಶನಿಯ ವಕ್ರ ದೃಷ್ಟಿ ಇದ್ದಾಗ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಸಣ್ಣಪುಟ್ಟ ಅ’ಪ’ಘಾ’ತಗಳಾಗುವ ಸಾಧ್ಯತೆ ಇರುತ್ತದೆ. ಪ್ರಯಾಣ ಮಾಡುವವರು ಅಥವಾ ವಾಹನಗಳ ಚಾಲನೆ ಮಾಡುವವರು ಜಾಗೃತಿಯಿಂದ ಇರಿ. ಇಲ್ಲವಾದಲ್ಲಿ ಚಿಕ್ಕದಾಗಿ ಆಗುವ ಸಮಸ್ಯೆಗೆ ನೀವು ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ.
ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಕೂಡ ಕಾಳಜಿ ಇರಲಿ. ಮನಸ್ಸಿಗೆ ನೋ’ವಾಗುವಂತಹ ಘಟನೆಗಳು ನಡೆಯಬಹುದು ಧೈರ್ಯದಿಂದ ಎದುರಿಸಿ ಈ ಸಮಯವು ಕಳೆದು ಹೋಗುತ್ತದೆ. ಶನಿಯ ವಕ್ರ ದೃಷ್ಟಿ ಜೂನ್ 29, 2024ರಿಂದ ನವೆಂಬರ್ 15, 2024ರವರೆಗೂ ಇರುತ್ತದೆ. ಪ್ರತಿನಿತ್ಯವೂ ಶನಿ ಸ್ತೋತ್ರ ಪಠಿಸಿ ಮತ್ತು ಪ್ರತಿ ಶನಿವಾರ ಶನೇಶ್ವರ ಹಾಗೂ ಆಂಜನೇಯನ ದೇವಸ್ಥಾನಕ್ಕೆ ಭೇಟಿ ಕೊಡಿ ಒಳ್ಳೆಯದಾಗುತ್ತದೆ.