ಹಿರಿಯರು ಸಾಲ ಮಾಡಿ ಆದರೂ ತುಪ್ಪ ತಿನ್ನು ಎನ್ನುವ ಗಾದೆಯನ್ನು ಮಾಡಿದ್ದರು. ಇದರಿಂದಲೇ ತುಪ್ಪಕ್ಕೆ ಎಷ್ಟು ಆರೋಗ್ಯಕರ ಅಂಶಗಳು ಇವೆ ಎನ್ನುವುದು ಅರ್ಥ ಆಗುತ್ತದೆ. ಆಯುರ್ವೇದದಲ್ಲಿ ಕೂಡ ತಪ್ಪಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ತುಪ್ಪದಲ್ಲಿ ಮನದ ದೇಹಕ್ಕೆ ಅನುಕೂಲಕರವಾದ ಅನೇಕ ಜೀವಸತ್ವಗಳಿದ್ದು ಕ್ಯಾಲ್ಸಿಯಂ ಹಾಗೂ ಕೊಬ್ಬಿನಾಂಶ ಹೇರಳವಾಗಿದೆ.
ವಿಟಮಿನ್ ಎ, ಇ, ಡಿ ಮತ್ತು ಕೆ ಜೊತೆಗೆ ಒಮೆಗಾ 3 ಕೂಡ ಇದೆ. ಬಿಸಿ ಅನ್ನಕ್ಕೆ ತುಪ್ಪ, ಬಿಸಿ ಕಜ್ಜಾಯ ಹಾಗೂ ಹೋಳಿಗೆಗೆ ತುಪ್ಪ ಹಾಕಿಕೊಂಡು ತಿನ್ನುವ ರುಚಿಯೇ ಬೇರ,ೆ ರುಚಿ ಮಾತ್ರವಲ್ಲದೆ ಆರೋಗ್ಯದ ವಿಚಾರದಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದರ ವಿವರ ಹೀಗಿದೆ ನೋಡಿ.
* ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಂತೆ ಈ ಮೇಲೆ ತಿಳಿಸಿದ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ, ಇದರಿಂದ ಜೀವಕೋಶಗಳ ಆರೋಗ್ಯ ವೃದ್ಧಿಸುತ್ತದೆ.
* ತುಪ್ಪದ ಸೇವನೆ ದೇಹ ನಿರ್ಜಲಿಕರಣವಾಗದಂತೆ ನೋಡಿಕೊಳ್ಳುತ್ತದೆ, ಇದರಿಂದ ಚರ್ಮ ಶುಷ್ಕವಾಗಿರುತ್ತದೆ ಮತ್ತು ಚರ್ಮದ ಸುಕ್ಕು ಕಲೆ, ಗುಳ್ಳೆ ಮೊಡವೆಗಳು ಗುಣವಾಗುತ್ತವೆ.
* ಎದೆ, ಗಂಟಲು ಹಾಗೂ ಮೂಗಿಗೆ ಸಂಬಂಧಪಟ್ಟ ಸೋಂಕುಗಳು ನಿವಾರಣೆಯಾಗುತ್ತವೆ.
* ಶೀತದ ವಾತಾವರಣದಿಂದ ಬರುವ ಜ್ವರ, ಚಳಿ ಇದು ಕೂಡ ಗುಣವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ಮೆದುಳಿನ ಆರೋಗ್ಯಕ್ಕೂ ಕೂಡ ಅತ್ಯುತ್ತಮ ಆಹಾರ ತುಪ್ಪ, ತುಪ್ಪದ ಸೇವನೆ ಮಾಡುವುದರಿಂದ ಮೆದುಳಿನಲ್ಲಿರುವ ನರಕೋಶಗಳ ಕಾರ್ಯ ಚಟುವಟಿಕೆ ಉತ್ತಮವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗುತ್ತದೆ ಇದಕ್ಕೆ ಇದರಲ್ಲಿರುವ ಒಮೆಗಾ3 ಕಾರಣವಾಗಿದೆ.
* ತೂಕ ಇಳಿಸಿಕೊಳ್ಳಲು ಇಚ್ಚಿಸುವವರು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಒಂದು ಚಮಚ ತುಪ್ಪ ಸೇವನೆ ಮಾಡಬೇಕು.
* ತುಪ್ಪದ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ.
* ತುಪ್ಪದ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಟಾಕ್ಸಿನ್ ಅಂಶಗಳನ್ನು ಹೊರಹಾಕಲು ಸಹಾಯಕವಾಗುತ್ತದೆ.
* ತುಪ್ಪದ ನಿಯಮಿತ ಸೇವನೆ ದೇಹದಲ್ಲಿ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ.
* ಕಣ್ಣಿಗೆ ಸಂಬಂಧಪಟ್ಟ ದೋಷಗಳಿಗೂ ಕೂಡ ತುಪ್ಪದ ಸೇವನೆ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ.
* ಕೂದಲು ಉದುರುವುದು, ಕೂದಲು ಬೇಗ ಬೆಳ್ಳಗಾಗುವುದು, ತಲೆಹೊಟ್ಟಿನ ಸಮಸ್ಯೆ ಮುಂತಾದ ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಕೂಡ ತುಪ್ಪದ ಸೇವನೆಯಿಂದ ಪರಿಹಾರ ಸಿಗುತ್ತದೆ.
* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಿನ ನೀರಿಗೆ ಒಂದು ಚಮಚ ತುಪ್ಪ ಸೇರಿಸಿ ಮಿಕ್ಸ್ ಮಾಡಿ ಕುಡಿಯುವುದರಿಂದ ಮಲಬದ್ಧತೆ, ನಿವಾರಣೆಯಾಗುತ್ತದೆ. ಗ್ಯಾಸ್ಟ್ರಿಕ್ ಹಾಗೂ ಎದೆ ಉರಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ನಿಯಂತ್ರಣಕ್ಕೆ ಬರುತ್ತದೆ.
* ಆಹಾರದಲ್ಲಿ ಪ್ರತಿನಿತ್ಯವು ತುಪ್ಪವನ್ನು ಬಳಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
* ಅನಿಯಮಿತ ಋತುಚಕ್ರದ ಸಮಸ್ಯೆ ಎದುರಿಸುತ್ತಿರುವವರು ಪ್ರತಿನಿತ್ಯ ತುಪ್ಪದ ಸೇವನೆ ಆರಂಭಿಸಿ. ಇದು ದೇಹದಲ್ಲಾಗುವ ಹಾರ್ಮೋನ್ ವೇರಿಯೇಷನ್ ಅನ್ನು ಸಮತೋಲನದಲ್ಲಿ ಇರಿಸುತ್ತದೆ.
* ಆಯುರ್ವೇದದಲ್ಲಿ ನಶ್ಯ ಚಿಕಿತ್ಸೆ ಎಂದು ಮಾಡಲಾಗುತ್ತದೆ. ಈ ಸಮಯದಲ್ಲಿ ತುಪ್ಪವನ್ನು ಬಿಸಿ ಮಾಡಿ ಅದು ಬೆಚ್ಚಗಿರುವಾಗ ಮೂಗಿಗೆ ಎರಡು ಹನಿ ಹಾಕಲಾಗುತ್ತದೆ ಮತ್ತು ಒಕ್ಕಳಿಗೂ ಕೂಡ ಪ್ರದಕ್ಷಣೀಯ ದಿಕ್ಕಿನಲ್ಲಿ ಹಾಕಲಾಗುತ್ತದೆ. ಇದರಿಂದ ಗೊರಕೆ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ ಹಾಗೂ ಉಸಿರಾಟದ ಮತ್ತು ಕೆಮ್ಮು,ನೆಗಡಿ, ಶೀತದಂತಹ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
* ಸಾಧ್ಯವಾದಷ್ಟು ನಾಟಿ ಹಸುವಿನ ತುಪ್ಪವನ್ನು ಸೇವಿಸಿ ಇದರಿಂದ ದೇಹಕ್ಕೆ ಎಲ್ಲಾ ಪೋಷಕಾಂಶಗಳು ಸೇರುತ್ತದೆ.