ಈ ಭೂಮಿ ಮೇಲಿರುವ ಹೂವು, ಗಿಡ, ಮರ ವಸ್ತುಗಳು ಸೇರಿದಂತೆ ಎಲ್ಲಾ ಜೀವಿಗಳಿಗೂ ಕೂಡ ಒಂದು ಎಕ್ಸ್ಪರಿ ಡೇಟ್ ಎನ್ನುವುದು ಇರುತ್ತದೆ. ಹಾಗೆ ಸಂಬಂಧಗಳಿಗೆ ಕೂಡ, ಯಾವುದೇ ವ್ಯಕ್ತಿಯು ನಮ್ಮ ಜೀವನದಲ್ಲಿ ಸುಮ್ಮನೆ ಬರುವುದಿಲ್ಲ ಹಾಗೆ ಬಂದ ಕಾರಣ ಮುಗಿದ ಮೇಲೆ ಅವರ ಋಣ ತೀರಿದ ಮೇಲೆ ಬೇಕು ಎಂದರು ಕೂಡ ಉಳಿಯುವುದಿಲ್ಲ.
ನಾವೆಷ್ಟೇ ಪ್ರೀತಿ ಮಾಡುವ ವ್ಯಕ್ತಿ ಆಗಿದ್ದರು ನಮ್ಮನ್ನು ಬಿಟ್ಟು ಹೋಗುತ್ತಾರೆ ಒಂದು ವೇಳೆ ಅವರು ಇಹಲೋಕ ತ್ಯಜಿಸಿ ಹೋಗಿದ್ದರೆ ಅದು ಮರೆಯಲಾಗದ ನೋ’ವು, ಜೊತೆಗಿರದ ಜೀವ ಸದಾ ನಮ್ಮೊಳಗೆ ಜೀವಂತವಾಗಿರುತ್ತದೆ ಆದರೆ ಕೆಲವರು ಬದುಕಿರುವಾಗಲೇ ನಮ್ಮ ಸಹವಾಸವೇ ಬೇಡ ಎಂದು ನಮ್ಮಿಂದ ದೂರ ಹೋಗಿರುತ್ತಾರೆ. ನಾವು ಅವರಿಗೆ ಎಷ್ಟೇ ಪ್ರೀತಿಸಿದರು ಕೂಡ ತಾತ್ಸಾರವಾಗಿ ಕಾಣುತ್ತಾರೆ.
ಈ ರೀತಿ ಆಗುವುದು ಹೆಚ್ಚಾಗಿ ಲವ್ ಬ್ರೇ’ಕ್ ಅ’ಪ್ ಗಳಲ್ಲಿ ಅಥವಾ ಅತಿಯಾದ ಸ್ನೇಹ ಒ’ಡೆ’ದಾಗ ಮಾತ್ರ. ಅತ್ಯಂತ ಆತ್ಮೀಯರಾಗಿದ್ದವರು ಇದ್ದಕ್ಕಿದ್ದಂತೆ ಚಿಕ್ಕ ವಿಚಾರಕ್ಕೆ ದೊಡ್ಡದು ಮಾಡಿ ಸಂಬಂಧ ಕಳೆದುಕೊಳ್ಳುತ್ತಾರೆ ನಾವು ಅವರಿಗೆ ಎಷ್ಟೇ ಪ್ರೀತಿ ತೋರಿಸುತ್ತಿದ್ದರು, ಅವರಿಗಾಗಿ ಎಷ್ಟೇ ಸಮಯ ಕೊಡುತ್ತಿದ್ದರು.
ವರೊಂದಿಗೆ ಎಷ್ಟೇ ವರ್ಷಗಳಿಂದ ಜೊತೆಗಿದ್ದು ಅರ್ಥ ಮಾಡಿಕೊಂಡಿದ್ದರು ಈಗ ನಮ್ಮನ್ನು ಸಂಪೂರ್ಣವಾಗಿ ಇಗ್ನೋರ್ ಮಾಡಲು ಇಚ್ಚಿಸಿದ್ದಾರೆ ಎಂದರೆ ನಾವು ಮತ್ತೆ ಮತ್ತೆ ಅವರ ಹಿಂದೆ ಬೀಳುವುದರಲ್ಲಿ ಅರ್ಥವೇ ಇಲ್ಲ. ಅವರಿಗೆ ನಮ್ಮ ಜೀವನಕ್ಕೆ ಬಂದಿದ್ದ ಉದ್ದೇಶ ಮುಗಿಯಿತು ಎಂದುಕೊಂಡು ಸುಮ್ಮನಾಗಬೇಕು.
ಆದರೆ ಈ ರೀತಿ ನಾವಂದುಕೊಂಡರೂ ಮನಸ್ಸು ಕೇಳಬೇಕಲ್ಲ, ಪದೇ ಪದೇ ಅವರ ಯೋಚನೆ ಮಾಡುತ್ತೇವೆ. ನಮ್ಮ ವಿದ್ಯಾಭ್ಯಾಸ, ಉದ್ಯೋಗ ಇವುಗಳ ಮೇಲೆ ಆಸಕ್ತಿ ಕಳೆದುಕೊಂಡು ಡಿಪ್ರೆಶನ್ ಗೆ ಹೋಗುತ್ತೇವೆ. ಆದರೆ ಅವರು ಮಾತ್ರ ಇದ್ಯಾವುದಕ್ಕೂ ಕೇರ್ ಕೂಡ ಮಾಡುವುದಿಲ್ಲ. ಬಿಂದಾಸ್ ಆಗಿ ಅವರ ಲೈಫ್ ಎಂಜಾಯ್ ಮಾಡುತ್ತಿರುತ್ತಾರೆ.
ನಿಮ್ಮ ತಪ್ಪು ಇದ್ದರೂ ಇಲ್ಲದಿದ್ದರೂ ನೀವು ಅದನ್ನು ಒಪ್ಪಿಕೊಂಡು ಮತ್ತೊಮ್ಮೆ ಅವರನ್ನು ಮಾತನಾಡಿಸಲು, ನೋಡಲು ಪ್ರಯತ್ನಪಟ್ಟರು ಕೂಡ ಆ ವಿಷಯ ಅವರಿಗೆ ಗೊತ್ತಿದ್ದು ನಿಮ್ಮನ್ನು ದೂರ ಮಾಡುತ್ತಿದ್ದಾರೆ ಎಂದರೆ ನೀವು ದೊಡ್ಡ ಮನಸ್ಸು ಮಾಡಲೇಬೇಕು ಯಾವುದೇ ವ್ಯಕ್ತಿ ಇಲ್ಲದೆಯೂ ಕೂಡ ನಾವು ಜೀವಿಸಬಹುದ.
ನಮ್ಮನ್ನು ಬಿಟ್ಟು ನಮಗೆ ಮತ್ಯಾರು ನಮ್ಮಷ್ಟು ಮುಖ್ಯರಲ್ಲ ಎನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಮೊದಲಿಗೆ ಅವರನ್ನು ಮರೆಯಲು ಇರುವ ಆಪ್ಷನ್ಗಳನ್ನು ಹುಡುಕಬೇಕು, ಸಂಪೂರ್ಣವಾಗಿ ಅವರ ನೆನಪಿನಿಂದ ಹೊರಬರಲು ಸಮಯ ಬೇಕಾಗುತ್ತದೆ ಆದರೆ ದಿನಪೂರ್ತಿ ಅವರದ್ದೇ ದ್ಯಾನದಲ್ಲಿದ್ದರೆ ನಮ್ಮ ಜೀವನ ಅಲ್ಲಿಗೆ ನಿಂತು ಹೋಗಿ ಭವಿಷ್ಯ ನಾ’ಶವಾಗುತ್ತದೆ.
ನಾವು ಚೆನ್ನಾಗಿದ್ದರೆ ಇಂತಹ ನೂರು ಜನ ಸಿಗುತ್ತಾರೆ ಎಂದು ಕೊಳ್ಳಬೇಕು ದಿನದಲ್ಲಿ ಇಂತಿಷ್ಟು ಸಮಯ ಮಾತ್ರ ಅವರ ಬಗ್ಗೆ ಯೋಚನೆ ಮಾಡುತ್ತೇನೆ ಎಂದುಕೊಳ್ಳಬೇಕು. ಆ ಸಮಯ ಬಿಟ್ಟು ಬೇರೆ ಸಮಯದಲ್ಲಿ ಯೋಚನೆ ಬಂದಾಗ ಇದು ಅವರ ಬಗ್ಗೆ ಯೋಚಿಸುವ ಸಮಯ ಅಲ್ಲ ಎಂದು ನಿಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.
ಅವರ ಜೊತೆ ಇದ್ದಾಗ ಅನೇಕರನ್ನು ಅವರಿಗಾಗಿ ದೂರ ಮಾಡಿಕೊಂಡಿರುತ್ತೀರ ಈಗ ಅವರ ಜೊತೆ ಬೆರೆಯಲು ಪ್ರಯತ್ನಿಸಿ. ನಿಮಗೆ ಇಷ್ಟವಾದ ಸಂಗತಿಗಳಲ್ಲಿ ಸಮಯ ಕಳೆಯಿರಿ , ಆರೋಗ್ಯ ಹಾಗೂ ಸೌಂದರ್ಯದ ಕಡೆ ಗಮನ ಕೊಡಿ. ಯೋಗ, ವ್ಯಾಯಾಮ, ಸಂಗೀತ, ಓದುವುದು, ಟ್ರಕಿಂಗ್ ಇತ್ಯಾದಿಗಳಲ್ಲಿ ತೊಡಗಿಕೊಂಡು ಖುಷಿಖುಷಿಯಾಗಿರಿ.
ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಿ ಆ ವ್ಯಕ್ತಿಗಿಂತ ನೀವು ಇಟ್ಟುಕೊಂಡ ಗುರಿ ಸಾಧಿಸುವುದೇ ಮುಖ್ಯ ಎಂದು ಹಠ ತೊಟ್ಟು ಅದರ ಕಡೆ ನಡೆಯಿರಿ. ಈ ರೀತಿ ನೀವು ಮಾಡುತ್ತಿದ್ದಂತೆ ನಿಮ್ಮೊಳಗೆ ಒಂದು ವೈಬ್ರೇಶನ್ ಕ್ರಿಯೇಟ್ ಆಗಿರುತ್ತದೆ ಅದು ಅವರೇ ಪಶ್ಚಾತಾಪ ಪಟ್ಟು ನಿಮ್ಮ ಕಡೆಗೆ ಬರುವಂತೆ ಮಾಡುತ್ತದೆ.
ನೀವು 90 ದಿನಗಳ ಕಾಲ ಗಟ್ಟಿ ಮನಸ್ಸು ಮಾಡಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ನೀವು ಸಂಪೂರ್ಣವಾಗಿ ಅವರ ನೆನಪಿನಿಂದ ಆಚೆ ಬಂದಿರುತ್ತೀರಿ ಮತ್ತು ನಿಮಗೆ ಈಗ ಅವರು ಮೊದಲಿನಷ್ಟು ಮುಖ್ಯ ಎನಿಸುವುದಿಲ್ಲ. ನಿಮ್ಮ ಜೀವನ ಎಷ್ಟು ಮುಖ್ಯ ಮತ್ತೆ ಈ ಪ್ರಪಂಚ ಎಷ್ಟು ಸುಂದರವಾಗಿದೆ ನಿಮಗೆ ಯಾರು ಬೆಲೆ ಕೊಡುತ್ತಾರೆ ಎನ್ನುವುದೆಲ್ಲ ಚೆನ್ನಾಗಿ ಅರ್ಥ ಆಗಿರುತ್ತದೆ ಹಾಗಾಗಿ ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಹೆಚ್ಚು ಅಟ್ಯಾಚ್ಮೆಂಟ್ ಬೇಡ.