ತುಲಾ ರಾಶಿಯಿಂದ ತಕ್ಷಣ ಎಲ್ಲರ ಮನಸಿಗೂ ಬರುವುದು ತುಲಾ ರಾಶಿಯ ರಾಶಿ ಚಿಹ್ನೆ. ಹೇಗೆ ತಕ್ಕಡಿ ಎನ್ನುವುದು ಎರಡು ಭಾಗಗಳನ್ನು ಸರಿದೂಗಿಸುತ್ತದೆಯೋ ಅದೇ ರೀತಿಯಾಗಿ ತುಲಾ ರಾಶಿಯವರ ವ್ಯಕ್ತಿತ್ವ ಇರುತ್ತದೆ. ಅದರಲ್ಲೂ ಮಹಿಳೆಯರ ಬಗ್ಗೆ ಹೇಳುವುದಾದರೆ ತುಲಾ ರಾಶಿಯ ಮಹಿಳೆಯರಲ್ಲಿ ಒಂದು ವಿಶೇಷ ಚೈತನ್ಯ ಇರುತ್ತದೆ.
ನೇರ ನುಡಿ ಇದ್ದರು ಇವರ ಮಾತಿನಲ್ಲಿ ಒಂದು ಸತ್ಯ, ನ್ಯಾಯ, ಧರ್ಮ, ನಿಷ್ಠೆ ಇದ್ದೇ ಇರುತ್ತದೆ. ಹಾಗಾಗಿ ಕೇಳಿದವರು ಕರಾರುವಕ್ಕಾಗಿ ಹೌದು ಎಂದು ತಲೆ ಆಡಿಸುವಂತಹ ಮಾತುಗಳಾಗಿರುತ್ತವೆ. ಇವರ ಈ ಸ್ವಭಾವ ಕೆಲವರಿಗೆ ಕಿರಿಕಿರಿಯಾದರೆ ಅನೇಕರಿಗೆ ಸ್ಪೂರ್ತಿ, ರೋಲ್ ಮಾಡೆಲ್ ಎಲ್ಲವೂ ಆಗಿರುತ್ತದೆ.
ತುಲಾ ರಾಶಿಯವರು ಹೆಣ್ಣು ಮಕ್ಕಳಾಗಿದ್ದರೂ ಕೂಡ ಅವರ ಮನಸ್ಸಿನ ಅಳದಲ್ಲಿ ಯಾವುದೇ ಗಂಡು ಜೀವಕ್ಕಿಂತ ಕಡಿಮೆ ಇಲ್ಲದ ಗಟ್ಟಿ ಹೃದಯ ಇರುತ್ತದೆ, ದೃಢ ನಿಶ್ಚಯಗಳು ಇರುತ್ತವೆ. ಅಂದುಕೊಂಡಿದ್ದನ್ನೂ ಮಾಡಿಯೇ ತೀರುವ ಹಠಮಾರಿ ಮೊಂಡುತನ ಹುಟ್ಟಿನಿಂದಲೇ ಬಂದಿರುತ್ತದೆ, ಗಂಡು ಮಕ್ಕಳ ರೀತಿಯೇ ಮನೆಯವರೆಲ್ಲ ಇವರನ್ನು ಬೆಳೆಸಿರುತ್ತಾರೆ, ನಂಬಿರುತ್ತಾರೆ.
ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!
ತಾವಿದ್ದ ಮನೆಯಲ್ಲೇ ಆಗಲಿ, ಹೋದ ಕಾರ್ಯಕ್ರಮಗಳಲ್ಲಿ ಆಗಲಿ, ಉದ್ಯೋಗ ಮಾಡುವ ಸ್ಥಳದಲ್ಲಿ ಆಗಲಿ ಇವರು ಬಹಳ ವಿಭಿನ್ನ ಎನ್ನುವ ರೀತಿ ಎದ್ದು ಕಾಣುತ್ತಾರೆ ಸದಾ ನಗುನಗುತ ಮಾತನಾಡುವ ಇವರ ಹಸನ್ಮುಖ ಮಾತುಗಳಲ್ಲಿ ಹೊರಬೀಳುವ ಪ್ರಜ್ಞಾವಂತಿಕೆ, ತಿಳುವಳಿಕೆ, ಸ್ಪಷ್ಟತನ, ದಿಟ್ಟತನ, ವಯಸ್ಸಿಕಿಂತ ಕಿರಿಯವರಾದರು, ವಯಸ್ಸಿಗೂ ಮೀರಿದ ಗೌರವವನ್ನು ಇವರಿಗೆ ತಂದು ಕೊಟ್ಟಿರುತ್ತದೆ.
ಸದಾ ಚುರುಕಿನಿಂದ ಕುಣಿಯುವ ಇವರ ಮನಸಿಗೆ ಹೊಸತನ ಎನ್ನುವುದೇ ಅಡಿಕ್ಷನ್. ಯಾವುದೇ ಲೇಟೆಸ್ಟ್ ಟ್ರೆಂಡ್ ಫಾಲೋ ಮಾಡುವುದು, ಹೊಸ ಫಿಲಂ ಅನ್ನು ಮೊದಲ ದಿನವೇ ನೋಡುವುದು ಇವರಿಗೆ ಬಹಳ ಖುಷಿ ಕೊಡುವಂತಹ ವಿಷಯಗಳು ಒಟ್ಟಾರೆಯಾಗಿ ಹೇಳುವುದಾದರೆ ಅಪ್ಡೇಟೆಡ್ ಗರ್ಲ್ ಎಂದೇ ಹೇಳಬಹುದು.
ಹೆಣ್ಣೆಂದರೆ ಹೀಗಿರಬೇಕಪ್ಪ ಎಂದು ಎನಿಸುವಂತೆ ಸಾಹಸಗುಣ, ಧೈರ್ಯವಂತಿಕೆ, ಜಾಣ್ಮೆ ತಾಳ್ಮೆ ಒಳ್ಳೆಯ ಗುಣ ಇವರನ್ನು ತುಂಬಿಕೊಂಡಿರುತ್ತದೆ. 10 ವರ್ಷದ ಹುಡುಗಿಯಿಂದ ಹಿಡಿದು 60-70ರ ತನಕ ಕೂಡ ತನ್ನತನವನ್ನು ವಿಶೇಷವಾಗಿ ಕಟ್ಟಿಕೊಳ್ಳುವ ಇವರು ತಮ್ಮ ಅನುಭವಗಳಿಂದಲೇ ಬದುಕನ್ನು ಕಟ್ಟಿಕೊಂಡವರಾಗಿರುತ್ತಾರೆ.
ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!
ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆಯುವ ಇವರು ಕನಸನ್ನು ಬೆನ್ನತ್ತಿ ಬಹಳ ಸಂತೋಷದ ಜೀವನವನ್ನು ಕಳೆಯುತ್ತಾರೆ. ಪ್ರೀತಿ, ಮದುವೆ, ಸಂತಾನ ಇತ್ಯಾದಿ ವಿಷಯಗಳಲ್ಲಿ ಅಂತಹ ತೀರಾ ಸಮಸ್ಯೆ ಕಂಡು ಬರದೆ ಸರಾಗವಾಗಿ ಬದುಕನ್ನು ಸಾಗಿಸಿ ಕೊಂಡು ಹೋಗುತ್ತಾರೆ ಬಹುತೇಕ ತುಲಾ ರಾಶಿ ಹೆಣ್ಣು ಮಕ್ಕಳು ಪ್ರೇಮ ವಿವಾಹವನ್ನಾಗಲು ಬಯಸುತ್ತಾರೆ.
ಒಂದು ವೇಳೆ ಇವರು ಕುಟುಂಬದವರ ನಿಶಾಚಯಿಸಿದ ವಿವಾಹವನ್ನು ಒಪ್ಪುವುದಾದರೆ ಕೂಡ ವಿವಾಹ ಬಂಧನವನ್ನು ಬಹಳ ಗಟ್ಟಿಯಾಗಿ ಉಳಿಸಿಕೊಂಡು ಒಳ್ಳೆ ಗೃಹಿಣಿ ಎನಿಸಿಕೊಳ್ಳುತ್ತಾರೆ ಕೂಡ. ತಮ್ಮ ಮಕ್ಕಳ ಹಂತ ಹಂತದಲ್ಲೂ ಇದು ಹೀಗೆ ಹಾಕಬೇಕು ಎಂದು ನಿಗಾವಹಿಸಿ ಅವರ ಬದುಕನ್ನು ಕಟ್ಟಿಕೊಡುತ್ತಾರೆ.
ಒಟ್ಟಿನಲ್ಲಿ ತುಲಾ ರಾಶಿಯವರು ಮಗಳಾಗಿದ್ದರು, ಮಡದಿಯಾಗಿದ್ದರು, ಸಹೋದರಿಯಾಗಿದ್ದರು, ಸ್ನೇಹಿತೆಯಾಗಿದ್ದರು, ತಮ್ಮ ಕಂಪನಿ ಸಹೋದ್ಯೋಗಿ ಆಗಿದ್ದರು ಎಲ್ಲರಿಗೂ ಅಚ್ಚುಮೆಚ್ಚಿನವರೇ ಆಗಿರುತ್ತಾರೆ. ನೀವು ತುಲಾ ರಾಶಿಯವರು ಆಗಿದ್ದರೆ ಅಥವಾ ನಿಮ್ಮ ಸುತ್ತ ತುಲಾ ರಾಶಿಯವರು ಇದ್ದರೆ ನಾವು ಹೇಳಿರುವ ಈ ಗುಣಲಕ್ಷಣಗಳ ಗಮನಿಸಿದ್ದೇ ಆದಲ್ಲಿ ಯಾವುದು ನಿಮ್ಮ ಗಮನಕ್ಕೆ ಬಂದಿದೆ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.