ಪ್ರತಿಯೊಂದು ಮನೆಯಲ್ಲೂ ಕೂಡ ಕಳಶವನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಅವರ ಮನೆಗಳಲ್ಲಿ ರೂಢಿಯಿಂದ ನಡೆದುಕೊಂಡು ಬಂದಿರುವ ವಾರದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಮತ್ತು ಮನೆ ಶುಭ.ಸಮಾರಂಭಗಳ ಆರಂಭದಲ್ಲಿ ಕಳಶ ಪ್ರತಿಷ್ಠಾಪನೆ ಮಾಡಲಾಗುತ್ತದೆ ಕಳಶ ಇದ್ದರೆ ಮನೆಯಲ್ಲಿ ಒಬ್ಬ ಹಿರಿಯ ಮುತ್ತೈದೆ ಇದ್ದಷ್ಟು ನೆಮ್ಮದಿ ಸಿಗುತ್ತದೆ.
ತಾಯಿ ಮಹಾಲಕ್ಷ್ಮಿಯ ಸಂಕೇತವಾಗಿ, ತಾಯಿ ಮಹಾಗೌರಿಯ ಸಂಕೇತವಾಗಿ ದೇವರ ಕೋಣೆಯಲ್ಲಿ ಕಳಶ ಇಟ್ಟು ಪೂಜಿಸಲಾಗುತ್ತದೆ. ಈ ರೀತಿ ಕಳಶ ಇಡುವಾಗ ಅದಕ್ಕೆ ತನ್ನದೇ ಆದ ವಿಧಿ ವಿಧಾನಗಳು ಇವೆ. ಇವುಗಳಲ್ಲಿ ಅಡಚಣೆಗಳಾದಾಗ ಶಕುನ ಎಂದು ಹೇಳಲಾಗುತ್ತದೆ ಆದಷ್ಟು ಜಾಗರೂಕತೆಯಿಂದ ಭಯ ಭಕ್ತಿಯಿಂದ ಇದನ್ನು ನೋಡಿಕೊಳ್ಳಬೇಕಾಗುತ್ತದೆ.
ಕಳಶ ಇಡಲು ಬಳಸುವ ನೀರಿನಿಂದ ಹಿಡಿದು ಹೂವು, ವೀಳ್ಯದೆಲೆ ಹೀಗೆ ಎಲ್ಲಾ ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇರಬೇಕು. ಕಳಶಕ್ಕೆ ಇಡುವ ಹೂವು ಕೊಡ ಬಾಡಿರಬಾರದು, ಎಲೆ ಒಡೆದಿರಬಾರದು, ಎಲ್ಲವೂ ಮಡಿಯಾಗಿರಬೇಕು. ಈ ರೀತಿಯಾಗಿ ನಿಯಮಬದ್ದವಾಗಿ ಕಳಶವನ್ನು ಇಟ್ಟು ಪೂಜಿಸಿದಾಗ ಮಾತ್ರ ಅದರ ಫಲ ದೊರೆಯುತ್ತದೆ ಮತ್ತು ಒಮ್ಮೆ ಈ ರೀತಿ ಪೂಜಿಸಿ ನೋಡಿದಾಗ ಅದರ ಫಲಿತಾಂಶ ಏನು ಎಂದು ಗೊತ್ತಾಗುತ್ತದೆ.
ಮನೆಯ ತುಂಬಾ ಸಕಾರಾತ್ಮಕ ವಾತಾವರಣ ಪಸರಿಸುತ್ತದೆ. ನಾವು ಹೇಳಿದ್ದನ್ನು ಕೇಳುವುದಕ್ಕೆ ಯಾರೋ ಇದ್ದಾರೆ ಎನ್ನುವ ಧೈರ್ಯ ಇತ್ಯಾದಿಗಳು ಕೂಡ ಗೃಹಿಣಿಯರ ಮನಸ್ಸನ್ನಲ್ಲಿ ಶಕ್ತಿ ತುಂಬುತ್ತವೆ. ಅದೇ ಕಾರಣಕ್ಕೆ ಹೆಣ್ಣು ಮಕ್ಕಳು ಅದೆಷ್ಟೇ ಹೊತ್ತಾದರೂ ಉಪವಾಸ ಇದ್ದು ಇದನ್ನು ಮಾಡಿದ ಬಳಿಕವಷ್ಟೇ ತಮ್ಮ ದೈನಂದಿನ ಕೆಲಸ ಕಾರ್ಯ ಶುರು ಮಾಡುತ್ತಾರೆ.
ಇಷ್ಟು ಪ್ರಭಾಶಾಲಿಯಾದ ಈ ಆಚರಣೆಯಲ್ಲಿ ಈ ಮೊದಲೇ ಹೇಳಿದಂತೆ ಇಷ್ಟೊಂದು ನಿಯಮಗಳು ಇರುವುದರಿಂದ ಅಡಚಣೆಗಳಾದಾಗ ಭಯವಾಗುವುದು ಸಹಜ. ಇದನ್ನು ಶಕುನ ಎಂದು ಕೂಡ ಹೇಳುವುದರಿಂದ ಕಿಂಚಿತ್ತು ಅಚಾನಕ್ಕಾಗಿ ಹೆಚ್ಚು ಕಮ್ಮಿ ಆದರೂ ಮನೆ ಮಂದಿಯ ಮನಸ್ಸು ಕೆ’ಟ್ಟು ಹೋಗುತ್ತದೆ. ಮುಂದೆನಾದರೂ ಆ’ಪ’ತ್ತಾ’ದ’ರೆ ಎನ್ನುವ ಯೋಚನೆಯಲ್ಲಿ ಅವರು ಮುಳುಗಿರುತ್ತಾರೆ.
ಆದರೆ ಕೆಲವೊಮ್ಮೆ ಕಳಶದಲ್ಲಿ ಹಾಕುವ ಬದಲಾವಣೆಗಳು ಒಳ್ಳೆಯ ಸೂಚನೆಯನ್ನು ಕೂಡ ಕೊಡುತ್ತವೆ. ಉದಾಹರಣೆಗೆ ಕಳಶದಲ್ಲಿ ಇಟ್ಟಿರುವ ಕಾಯಿ ಒಮ್ಮೊಮ್ಮೆ ಬಿ’ರು’ಕು ಬಿಡುತ್ತದೆ, ಒಮ್ಮೊಮ್ಮೆ ಆ ಕಾಯಿಯಲ್ಲಿ ಮೊ’ಳ’ಕೆ ಕೂಡ ಮೂಡಿರುತ್ತದೆ. ವಾರಕ್ಕೊಮ್ಮೆ ಅಥವಾ ಅವರ ಅನುಕೂಲಕ್ಕೆ ತಕ್ಕ ಹಾಗೆ ಕಳಶವನ್ನು ಬದಲಾಯಿಸಿದಾಗ.
ಇದನ್ನು ಗಮನಿಸಿ ಅವರು ಇದು ಯಾವ ರೀತಿಯ ಶಕುನ ಇರಬಹುದು ಎಂದು ಸ್ಪಷ್ಟವಾಗಿ ತಿಳಿಯದೆ ಗೊಂದಲಕ್ಕೀಡಾಗುತ್ತಾರೆ ಅದಕ್ಕೆ ಸ್ಪಷ್ಟತೆಯನ್ನು ಈ ಅಂಕಣದಲ್ಲಿ ಕೊಡಲಿಚ್ಛಿಸುತ್ತಿದ್ದೇವೆ. ಹಿರಿಯರು, ಖ್ಯಾತ ಶಾಸ್ತ್ರಜ್ಞರು, ಜ್ಯೋತಿಷ್ಯಿಗಳು ಎಲ್ಲರೂ ಹೇಳಿರುವ ಪ್ರಕಾರ ಕಳಶದಲ್ಲಿ ಕಾಯಿ ಮೊಳಕೆ ಬಂದಿದ್ದರೆ ಅದು ತುಂಬಾ ಶುಭ ಸೂಚಕ. ಈ ರೀತಿ ಮೊಳಕೆ ಹೊಡೆದರೆ ಅದು ಬೆಳವಣಿಗೆ ಸಂಕೇತ.
ಆ ಮನೆಯ ಐಶ್ವರ್ಯ ಸಮೃದ್ಧಿ ಸಂತೋಷ ಏಳಿಗೆ ಆಗುತ್ತದೆ, ಮನೆಯಲ್ಲಿ ಸಂಪತ್ತು ತುಂಬುತ್ತದೆ, ಆ ಮನೆಗೆ ಒಳ್ಳೆಯದೇ ಆಗುತ್ತದೆ. ಒಂದು ವೇಳೆ ಬಿ’ರು’ಕು ಆದಾಗ ಅದು ಕೆ’ಟ್ಟ’ದ್ದು ಎಂದು ಭಯ ಪಡುವ ಅಗತ್ಯ ಇಲ್ಲ. ಯಾಕೆಂದರೆ ವಾತಾವರಣದ ವೈಪರಿತ್ಯಗಳಿಂದಲೂ ಈ ರೀತಿ ತೆಂಗಿನಕಾಯಿಯಲ್ಲಿ ಬಿ’ರು’ಕು ಬಂದಿರಬಹುದು.
ಕಳಶ ಬದಲಾಯಿಸುವ ದಿನದಂದು ಆ ತೆಂಗಿನಕಾಯಿಯನ್ನು ತೆಗೆದು ಅದರಿಂದ ಸಿಹಿ ಪದಾರ್ಥಗಳನ್ನು ಮಾಡಿ ಮಕ್ಕಳಿಗೆ, ವೃದ್ಧರಿಗೆ, ಅಸಹಾಯಕರಿಗೆ ಹೀಗೆ ಸಾಧ್ಯವಾದಷ್ಟು ಜನರಿಗೆ ಅದನ್ನು ಹಂಚಿ ಅಥವಾ ಮನೆ ಮಂದಿ ಸೇವಿಸಿ ಯಾವುದೇ ತೊಂದರೆಯಾಗುವುದಿಲ್ಲ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಇದ್ದಾಗ ಖಂಡಿತ ಫಲಿತಾಂಶ ಕೆ’ಟ್ಟದಾಗುವುದಿಲ್ಲ.