ಮೀನ ರಾಶಿಯವರಿಗೆ ಈಗಾಗಲೇ ಸಾಡೇಸಾತಿ ಪ್ರಭಾವ ಕಾಡುತ್ತಿದೆ. ಆದರೂ ಇದರ ನಡುವೆ ಹೊಸ ವರ್ಷವು ಹೊಸ ರೀತಿ ಬದಲಾವಣೆ ತರಲಿದಿಯೋ ಇಲ್ಲವೋ ಎನ್ನುವ ನಿರೀಕ್ಷೆ ಖಂಡಿತಾ ಇರುತ್ತದೆ. ಸಾಡೆ ಸಾತಿ ಸಮಯವನ್ನು ಅರಗಿಸಿಕೊಂಡು ಬುದ್ಧಿ ಕಲಿತು ಜೀವನದ ಮಹತ್ವವನ್ನು ಬದುಕಿನ ಪಾವಿತ್ರತೆಯನ್ನು ಅರಿತು ಅನುಭವ ಪಡೆಯಲೇಬೇಕು, ಇದು ಪರಮಾತ್ಮ ನಿಯಮ.
ಆದರೂ ಇಷ್ಟು ಕಷ್ಟದ ಸಮಯದಲ್ಲೂ ಭರವಸೆ ಮಾಡುವಂತಹ ಒಂದಷ್ಟು ಶುಭ ವಿಚಾರಗಳು ನಡೆದರೆ ನಮ್ಮನ್ನು ಇನ್ನಷ್ಟು ದಿನಗಳು ಮುಂದೆ ನಡೆಯುವ ಹಾಗೆ ಮಾಡುತ್ತದೆ. ಅಂತಹ ಯಾವುದಾದರೂ ಶುಭ ಸಮಾಚಾರ ಕ್ರೋಧಿ ಸಂವತ್ಸರ ಆರಂಭವಾಗುತ್ತಿರುವ ಈ ಏಪ್ರಿಲ್ ತಿಂಗಳಿನಲ್ಲಿ ಇದೆಯೇ ಎಂದು ಮೀನ ರಾಶಿಯವರು ನಿರೀಕ್ಷೆ ಮಾಡುತ್ತಿದ್ದರೆ ಇದರ ಕುರಿತ ಮಾಹಿತಿ ಹೀಗಿದೆ ನೋಡಿ.
ಹೌದು ಏಪ್ರಿಲ್ ತಿಂಗಳಲ್ಲಿ ನಿಮಗೆ ಇಂತಹ ಶುಭ ಸಮಾಚಾರಗಳು ಇದೆ. ಆದರೆ ಅದಕ್ಕೂ ಮುನ್ನ ನೀವು ಬಹಳ ಕ’ಷ್ಟದ ದಿನಗಳನ್ನು ಕೂಡ ಆರಂಭದಲ್ಲಿಯೇ ಕಳೆಯಬೇಕು. ಯಾಕೆಂದರೆ ಶನಿ ಜೊತೆಗೆ ರವಿ ಹಾಗೂ ಕುಜ ಪಕ್ಕದಲ್ಲಿ ಇರುವುದರಿಂದ ಇವುಗಳ ಸಂಯೋಗವು ಅಷ್ಟೊಂದು ಶುಭ ತರುವುದಿಲ್ಲ.
ಪರಿಣಾಮವಾಗಿ ಕುಟುಂಬದ ವಿಚಾರವಾಗಿ ನೀವು ಒಂದಷ್ಟು ಭಿನ್ನಾಭಿಪ್ರಾಯಗಳನ್ನು, ನೋ’ವುಗಳನ್ನು ತಿನ್ನಲೇಬೇಕಾಗುತ್ತದೆ. ಆ ಸಮಯದಲ್ಲಿ ಶುಕ್ರನ ಸಹಕಾರದಿಂದ ನಿಮಗೆ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುತ್ತದೆ. ಆದರೆ ನೀವು ಎಚ್ಚರಿಕೆಯಿಂದ ಇರಬೇಕು.
ಆದಷ್ಟು ಜಾಗ್ರತೆಯಿಂದ ಹಣ ವಿನಿಯೋಗ ಮಾಡುವುದು ಅಥವಾ ಹೂಡಿಕೆ ಮಾಡುವುದು ಅಥವಾ ಬುದ್ಧಿವಂತಿಕೆಯಿಂದ ಕಳೆದುಕೊಂಡಿದ್ದ ಹಣವನ್ನು ಪಡೆದುಕೊಳ್ಳುವ ಮಾರ್ಗ ಹುಡುಕಿದರೆ ನಿಮ್ಮ ನಿರೀಕ್ಷಿತ ಫಲ ಸಿಗುತ್ತದೆ. ತೃತೀಯ ಭಾವ ಎಂದು ಹೇಳುವ ಸಹೋದರ ಸ್ಥಾನವು ನಿಮ್ಮ ಈ ತಿಂಗಳ ಪರಿಸ್ಥಿತಿಗೆ ವರದಾನವಾಗಿದೆ ಯಾಕೆಂದರೆ ನೀವು ನಿಮ್ಮ ಒಡಹುಟ್ಟಿದವರ ಸಹಕಾರದಿಂದ ಅನೇಕ ಕಷ್ಟಗಳಿಂದ ಹೊರ ಬರುತ್ತೀರಿ.
ಈ ಹಂತದಲ್ಲಿ ಅವರಿಂದ ಹಣಬಲ ಹಾಗೂ ಹಿತನುಡಿಗಳು ಕೂಡ ಸಿಗುತ್ತವೆ. ಅವರು ಜೊತೆಗಿದ್ದಾರೆ ಎನ್ನುವ ಧೈರ್ಯವು ನಿಮ್ಮನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಮತ್ತು ಈ ತಿಂಗಳ ಅಂತ್ಯದಲ್ಲಿ ಗುರುವಿನ ಜೊತೆಗೆ ಬುಧನು ಕೂಡ ಸೇರುತ್ತಿರುವುದರಿಂದ ಇವರಿಬ್ಬರ ಯೋಗವು ಇನ್ನು ಉತ್ತಮ ಫಲಗಳನ್ನು ನೀಡುತ್ತಿದೆ.
ಆ ಪರಿಣಾಮವಾಗಿ ನೀವೇನಾದರೂ ಒಳ್ಳೆಯ ಕೆಲಸಗಳಿಗೆ ಕೈ ಹಾಕಿದರೆ ಅಥವಾ ಯಾವುದೇ ಹೊಸ ಪ್ರಯತ್ನ ಮಾಡಿದರು ಅದು ನಡೆಯುತ್ತದೆ, ಕೈಗೂಡುತ್ತದೆ. ಆದರೆ ಇದನ್ನು ಇಷ್ಟೇ ಯಶಸ್ಸಿನಲ್ಲಿ ನಡೆಸಿಕೊಂಡು ಹೋಗಲು ನಿಮ್ಮ ಶ್ರದ್ದೆ ಆಸಕ್ತಿ ನೋಡಿ ಪರಮಾತ್ಮನು ಆಶೀರ್ವದಿಸಬೇಕಾಗುತ್ತದೆ.
ವಿದ್ಯಾರ್ಥಿಗಳಿಗೂ ಅತ್ಯಂತ ಶುಭ ಫಲಗಳು ಇವೆ. ಈ ತಿಂಗಳ ಅಂತ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಆರೋಗ್ಯದ ವಿಚಾರದಲ್ಲಿ ಕೂಡ ಅಷ್ಟೇನೂ ತೊಂದರೆ ಇರುವುದಿಲ್ಲ ಆದರೆ ಮೀನ ರಾಶಿಯವರಿಗೆ ಈ ತಿಂಗಳು ಪೂರ್ತಿ ಟೆನ್ಶನ್ ತಪ್ಪೋದಿಲ್ಲ.
ಒಟ್ಟಾರೆಯಾಗಿ ಒಂದಲ್ಲ ಒಂದು ಕಾರಣದ ಜಂಜಾಟದಲ್ಲಿಯೇ ಈ ತಿಂಗಳನ್ನು ಕಳೆಯುತ್ತೀರಿ. ಈಗ ಶುಭಗ್ರಹಗಳ ಪರಿಣಾಮ ಉತ್ತಮಗೊಳ್ಳಲು ಹಾಗೂ ಪಾಪಗ್ರಹಗಳ ಪ್ರಭಾವ ಕಡಿಮೆ ಆಗಲು ಪ್ರತಿ ಶನಿವಾರದಂದು ಶನೇಶ್ವರ ಹಾಗೂ ಆಂಜನೇಯನ ದರ್ಶನ ಮಾಡಿ ಶನಿ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಿಸಿ ನವಗ್ರಹಗಳನ್ನು ಆರಾಧನೆ ಮಾಡಿ ಎಲ್ಲರಿಗೂ ಶುಭವಾಗಲಿ.