ಕನ್ನಡ ಚಲನಚಿತ್ರದ ಕವಿರತ್ನ, ಸಾವಿರಾರು ಚಿತ್ರಗೀತೆಗಳ ಭಕ್ತಿಗೀತೆಗಳ ರಚನೆಕಾರ, ಸಿನಿಮಾ ನಿರ್ದೇಶಕ, ಕಲಾವಿದ ಎಲ್ಲವೂ ಆಗಿರುವ ವಿ.ನಾಗೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಯೂಟ್ಯೂಬ್ ವಾಹಿನಿ ಚಾನೆಲ್ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಕನ್ನಡ ಚಲನಚಿತ್ರರಂಗದ ಚಿತ್ರಗೀತೆ ಪರಂಪರೆ ಬಗ್ಗೆ ಮಾತನಾಡಿದ್ದಾರೆ. ಚಲನಚಿತ್ರಗಳು, ಚಿತ್ರಗೀತೆಗಳು ಮತ್ತು ನಾಯಕನಟರುಗಳು ಜನಸಾಮಾನ್ಯರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಉದಾಹರಣೆ ಸಮೇತ ಹೇಳಿದ್ದಾರೆ.
ಮೊದಲಿಗೆ ಚಲನಚಿತ್ರ ಗೀತೆಗಳ ಪ್ರಭಾವಗಳ ಬಗ್ಗೆ ಮಾತನಾಡಿದ ಅವರು ಚಲನಚಿತ್ರ ಗೀತೆಗಳು ಎಲ್ಲರನ್ನೂ ತಲುಪುತ ಮಾಧ್ಯಮ, ಹಿಂದೆ ಜನಪದ ಗೀತೆಗಳು ಜನರನ್ನು ಮುಟ್ಟುತ್ತಿದ್ದವು ಅವುಗಳನ್ನು ಬಿಟ್ಟು ಮಧ್ಯದಲ್ಲಿ ಕಥೆ, ಕಾದಂಬರಿ, ಕವನ, ಭಾವಗೀತೆ ಇವು ತಯಾರದವು ಆದರೆ ಚಿತ್ರಗೀತೆಗಳಷ್ಟು ಅವು .ಜನರನ್ನು ತಲುಪುವುದರಲ್ಲಿ ಯಾವಾಗಲೂ ಒಂದೆಜ್ಜೆ ಹಿಂದೆ ಇರುತ್ತವೆ.
ಚಿತ್ರಗೀತೆಗಳು ನಾಡಿನಾದ್ಯಂತ ದೇಶದಾದ್ಯಂತ ಅತಿ ಬೇಗ ಎಲ್ಲರನ್ನು ತಲುಪುವಂತಹ ಒಂದು ಮಾಧ್ಯಮ ಆದ್ದರಿಂದ ಇವುಗಳಲ್ಲಿ ಏನು ಸೇರಿಸುತ್ತೇವೆ ಎನ್ನುವುದು ಬಹಳ ಮುಖ್ಯ ಆಗುತ್ತದೆ. ಯಾಕೆಂದರೆ ಸಿನಿಮಾ ನಾಯಕನನ್ನು ತೆರೆ ಮೇಲೆ ಮಾತ್ರವಲ್ಲದೆ ವೈಯಕ್ತಿಕವಾಗಿ ಕೂಡ ಅವರ ಅಭಿಮಾನಿಗಳು ಅನುಸರಿಸುತ್ತಾರೆ. ಆ ಉದಾಹರಣೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ.
ಹೀಗಾಗಿ ಜನ ಹೀರೋ ಎಂದು ಒಪ್ಪಿಕೊಂಡವರ ನಡೆನುಡಿ, ಸಿನಿಮಾ ಕಥೆ, ಸಾರಾಂಶ ಮತ್ತು ಚಿತ್ರಗೀತೆಗಳಲ್ಲಿ ಸೇರಿಸುವ ಸಾಲುಗಳು ಎಲ್ಲವೂ ಒಂದು ಜವಾಬ್ದಾರಿ. ಎಲ್ಲಾ ಸಿನಿಮಾಗಳು ಜನರನ್ನು ಮುಟ್ಟದೇ ಹೋದರೂ ಎಲ್ಲ ಹಾಡುಗಳು ಖಂಡಿತವಾಗಿ ಜನರನ್ನು ಮುಟ್ಟುತ್ತವೆ.
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ನೆಚ್ಚಿನ ಹಾಡು ಎನ್ನುವುದು ಇರುತ್ತದೆ ಯಾವ ಹಾಡನ್ನು ಆತ ಹೆಚ್ಚು ಕೇಳುತ್ತಾನೋ ಅದು ಆತನ ಜೀವನದ ಅಂಶಕ್ಕೆ ಸಂಬಂಧಪಟ್ಟದಾಗಿರುತ್ತದ. ಈ ಕುರಿತು ಸಮಾಲೋಚನೆ ಮಾಡಿದಾಗ ಇದರಲ್ಲಿರುವ ಸೂಕ್ಷ್ಮ ನಮಗೆ ಅರ್ಥವಾಗುತ್ತದೆ. ಹಾಗೆಯೆ ಹಿಂದೊಮ್ಮೆ ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ರಿಲೀಸ್ ಆದಾಗ ಆ ಸಿನಿಮಾ ನೋಡಿದ ಅದೆಷ್ಟೋ ಕೃಷಿ ಬಿಟ್ಟು ಪಟ್ಟಣ ಸೇರಿದ್ದ ಯುವಕರು ಮತ್ತೆ ಮಣ್ಣಿನ ಕಡೆ ಮರಳಿ ವ್ಯವಸಾಯ ಆರಂಭಿಸಿ ಹಳ್ಳಿಯಲ್ಲಿ ಜೀವನ ಕಳೆದ ಉದಾಹರಣೆ ನೋಡಿದ್ದೇವೆ.
ಈ ಸಿನಿಮಾದ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ ಈ ಹಾಡಿನ ಪ್ರಭಾವು ಕೂಡ ಅಷ್ಟೇ ಮಟ್ಟಗಿದೆ. ಇದು ಎಲ್ಲಾ ಕಾಲದಲ್ಲಿಯೂ ಎಲ್ಲರಿಗೂ ಸ್ಪೂರ್ತಿ ತುಂಬುವಂತಹ ಹಾಡು. ಇದರಂತೆಯೇ ಇನ್ನೂ ಕೆಲವು ಹಾಡುಗಳು ಅದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಕೂಡ ಬೀರಿವೆ.
ನಾನೇ ಬರೆದ ಮುಕುಂದ ಮುರಾರಿ ಸಿನಿಮಾದ ಟೈಟಲ್ ಹಾಡು ಇಡೀ ಕರ್ನಾಟಕದ ಎಲ್ಲರ ಮನಸ್ಸನ್ನು ಕೂಡ ತಟ್ಟಿತು. ನನಗೂ ಮುಂಚೆ 1950ರ ಸಮಯದಲ್ಲಿ ಅಣ್ಣಾವ್ರು ನಟಿಸಿದ ಸಂತ ಕಬೀರ ಸಿನಿಮಾ ಕೂಡ ಇದೇ ರೀತಿ ಪ್ರಭಾವ ಬೀರಿತ್ತು ಈ ಸಿನಿಮಾದಲ್ಲಿ 13 ಹಾಡುಗಳು ಇದ್ದವು. ಕರ್ನಾಟಕದ ಹೈಕೋರ್ಟ್ ಆ ಸಮಯದಲ್ಲಿಯೇ ಡಾ.ರಾಜ್ ಕುಮಾರ್ ಅವರ ಈ ಒಂದು ಸಿನಿಮಾ ಹಾಗೂ ಹಾಡುಗಳ ಪ್ರಭಾವದಿಂದ ಕರ್ನಾಟಕದಲ್ಲಿ ಹಲವು ಕಡೆ ಕೋಮು ಗಲಭೆ ಆಗುವುದು ತಪ್ಪಿದೆ ಎಂದು ಅವರ ಜಡ್ಜ್ಮೆಂಟ್ ಕಾಪಿಯಲ್ಲಿ ಬರೆದಿದ್ದಾರೆ.
ಕನ್ನಡ ಚಲನಚಿತ್ರ ಗೀತೆಗಳು ಎಷ್ಟು ಪ್ರಭಾವ ಬೀರುತ್ತವೆ ಎನ್ನುವುದಕ್ಕೆ ಇದಕ್ಕಿಂತಲೂ ಹೆಚ್ಚಿನ ಸಾಕ್ಷಿ ಬೇಕೆ ಎಂದು ಹೇಳಿದ್ದಾರೆ. ಇವುಗಳ ಬಗ್ಗೆ ವಿವರವನ್ನು ಅವರಿಂದಲೇ ಕೇಳಲು ಈ ವಿಡಿಯೋವನ್ನು ತಪ್ಪದೆ ಪೂರ್ತಿಯಾಗಿ ನೋಡಿ.