ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?

 

ಕನ್ನಡದ ಹಳೆಯ ಚಲನಚಿತ್ರಗಳಿಗೆ ಹೊಸ ರೂಪ ಕೊಟ್ಟು ಹಳೆಯದಕ್ಕಿಂತಲೂ ತುಂಬಾ ಅದ್ಭುತವಾಗಿ ತೆರೆ ಮೇಲೆ ಬರುವಂತೆ ಮಾಡುತ್ತಿರುವ ಆರ್.ಪಿ ಮುನಿರಾಜು ಅವರು ಕನ್ನಡ ಸಿನಿಮಾಗಳ ವಿತರಕರಾಗಿ ಹೆಸರುವಾಸಿಯಾಗಿದ್ದಾರೆ. ಅಣ್ಣಾವ್ರ ದಿನದಿಂದಲೂ ಕೂಡ ಸಿನಿಮಾ ರಂಗದ ಜೊತೆ ಬಹಳ ನಂಟು ಹೊಂದಿರುವ ಇವರು ಹಲವು ಹೀರೋಗಳಿಗೆ ಆತ್ಮೀಯರು.

ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಇಂತಹ ಮೇರು ನಟರುಗಳನ್ನು ಹತ್ತಿರದಿಂದ ಕಂಡಿರುವ ಇವರು ಈಗ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಹಳೆಯ ಸಿನಿಮಾಗಳಿಗೆ ಎಚ್ ಡಿ ಕಲರ್ ರೂಪ ಕೊಟ್ಟು ಮತ್ತೊಮ್ಮೆ ರಿಲೀಸ್ ಮಾಡಿ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಕನ್ನಡ ಮಾಣಿಕ್ಯ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ಕೊಟ್ಟಿರುವ ಇವರು ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ನಂಟಿನ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಮಾತುಗಳ ನಡುವೆ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರು ಸೇರದೆ ಇರುವ ರೀತಿ ತಡೆಯುತ್ತಿದ್ದ ಆ ದುಷ್ಟ ಶಕ್ತಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗು ವಿಷ್ಣುವರ್ಧನ್ ಅವರ ನಡುವೆ ತುಂಬಾ ಒಳ್ಳೆ ಅನುಬಂಧ ಇತ್ತು, ವಿಷ್ಣುವರ್ಧನ್ ಅವರನ್ನು ರಾಜಕುಮಾರ್ ಅವರು ಸ್ವಂತ ತಮ್ಮನಂತೆ ಪ್ರೀತಿಸಿ ಮುದ್ದಾಡುತ್ತಿದ್ದರು ಆದರೆ ಗಂಧದಗುಡಿ ಸಿನಿಮಾದಿಂದ ಅವರಿಬ್ಬರ ನಡುವೆ ಕಂದಕ ಏರ್ಪಟ್ಟಿತ್ತು.

ಆದರೆ ಅದಾದ ಬಳಿಕವೂ ಕೂಡ ಇಬ್ಬರು ಅದನ್ನು ಮನಸ್ಸಲ್ಲಿ ಇಟ್ಟುಕೊಳ್ಳದೆ ಒಟ್ಟೊಟ್ಟಿಗೆ ಸೇರುತ್ತಿದ್ದರು. ಅದನ್ನು ಸಹಿಸದ ಕೆಲವರು ಇಬ್ಬರು ಸೇರುವಲ್ಲಿ ತೊಂದರೆ ಕೊಟ್ಟು ಇಬ್ಬರು ಸೇರಿದಂತೆ ಮಾಡಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಹಾಳು ಮಾಡುವ ಹುನ್ನಾರದಲ್ಲಿ ಇದ್ದರು. ಅಂತಹ ಕಿಡಿಗೇಡಿಗಳಿಂದ ಅನೇಕ ಬಾರಿ ವೇದಿಕೆಗಳಲ್ಲಿ ವಿಷ್ಣುವರ್ಧನ್ ಅವರಿಗೆ ಅವಮಾನ ಆಗಿದೆ ಎಂದು ಹಳೆಯ ಘಟನೆ ಯನ್ನು ನೆನೆದು ಹೇಳಿಕೊಂಡಿದ್ದಾರೆ.

ಒಮ್ಮೆ ಮಾಗಡಿ ರೋಡ್ ನ ರೈಲ್ವೆ ಕ್ವಾಟ್ರಸ್ ಹಿಂದೆ ಮೈದಾನದಲ್ಲಿ ಚಿತ್ರರಂಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇಬ್ಬರು ಮೇರು ನಟರನ್ನು ಸಹ ವೇದಿಕೆಗೆ ಅತಿಥಿಗಳಾಗಿ ಕರೆಸಿದ್ದರು. ಇಬ್ಬರನ್ನು ನೋಡಲು ಇಬ್ಬರ ಲಕ್ಷಾಂತರ ಅಭಿಮಾನಿಗಳು ಸೇರಿ ದೊಡ್ಡ ಜನಸಂದಣಿಯೇ ಏರ್ಪಟ್ಟಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಒಂದು ಚಪ್ಪಲಿ ಬಂದು ವೇದಿಕೆ ಮೇಲೆ ಬಿತ್ತು. ಅದು ವಿಷ್ಣುವರ್ಧನ್ ಅವರಿಗೆ ತಾಗಲಿಲ್ಲ ಬದಲಾಗಿ ಅಣ್ಣಾವರನ್ನೇ ಮುಟ್ಟಿತ್ತು ಅದನ್ನು ಕಂಡು ಅಣ್ಣಾವ್ರು ತಕ್ಷಣವೇ ಎದ್ದು ಕೈ ಮುಗಿದು ಬಿಟ್ಟರು.

ನಾವೆಲ್ಲಾ ಕಲಾವಿದರು ನಾವೆಲ್ಲ ಒಂದೇ ದಯಮಾಡಿ ಎಲ್ಲಾ ಸುಮ್ಮನಿರಬೇಕು ಎಂದು ಕೇಳಿಕೊಂಡರು. ಆದರೆ ವಿಷ್ಣುವರ್ಧನ್ ಅವರಿಗೆ ಆ ಘಟನೆ ಯಿಂದ ಬಹಳ ಬೇಸರ ಆಯ್ತು ಅವರೇ ನೊಂದುಕೊಂಡು ತಕ್ಷಣವೇ ನಾನು ಇರುವುದಿಲ್ಲ ಹೋಗುತ್ತೇನೆ ಎಂದು ಹೊರಟು ಬಿಟ್ಟರು. ಅದಾದ ಮೇಲೆ ಅನೇಕ ವೇದಿಕೆಗಳಲ್ಲಿ ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಪದೇ ಪದೇ ಕಿಡಿಗೇಡಿಗಳು ಮಾಡುತ್ತಿದ್ದ ಈ ದು.ಷ್ಕ.ತ್ಯ.ದಿಂದ ಬಹಳ ಬೇಜಾರಾಗಿ ವಿಷ್ಣುವರ್ಧನ್ ಅವರು ಚೆನ್ನೈ ಹೊರಟು ಹೋದರು.

ವಿಷ್ಣುವರ್ಧನ್ ಅವರ ಜೊತೆ ದ್ವಾರಕೀಶ್ ಮತ್ತಿತರರು ಕನ್ನಡ ಸಿನಿಮಾ ಇಂಡಸ್ಟ್ರಿಯೇ ಬೇಡ ಎಂದು ಬೇಸರವಾಗಿ ಹೊರಟು ಹೋಗಿದ್ದರು. ಆಗ ಸ್ವತಃ ವಿಷ್ಣುವರ್ಧನ್ ಅವರನ್ನು ಅಣ್ಣಾವ್ರೇ ಸಮಾಧಾನಿಸಿ, ಸಂಭಾಳಿಸಿ ಮತ್ತೆ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವಂತೆ ಮಾಡಿದರು. ಇದನ್ನೆಲ್ಲಾ ನಾವು ಹತ್ತಿರದಿಂದ ಕಂಡಿದ್ದೇವೆ ಎಂದು ಆರ್.ಪಿ ಮುನಿರಾಜು ಅವರು ಹೇಳಿದ್ದಾರೆ.

Leave a Comment