ಕರ್ನಾಟಕದ ಯಾವುದೇ ವ್ಯಕ್ತಿ ತಮ್ಮ ಜೀವಮಾನ ಸಾಧನೆಗೆ ಪಡೆಯುವಂತಹ ಪ್ರಶಸ್ತಿ ಎಂದರೆ ಅದು ಕರ್ನಾಟಕ ರತ್ನ ಪ್ರಶಸ್ತಿ, ಯಾವುದಾದರೂ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಿದಾಗ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು 1992 ಇಸ್ವಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರು ಕರ್ನಾಟಕ ಸರ್ಕಾರದ ವತಿಯಿಂದ ಇದನ್ನು ಶುರು ಮಾಡುತ್ತಾರೆ.
ಸದ್ಯ ಈವರೆಗೂ 10 ಜನರಿಗೆ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಮಹಾ ನಟ, ನಾನಾ ಪಾತ್ರಗಳಿಗೆ ಜೀವ ತುಂಬಿ ಜೀವಮಾನ ಸಂಪೂರ್ಣವಾಗಿ ತಮ್ಮ ಕಲೆಗೆ ಬೆಲೆ ಕೊಟ್ಟು, ಕರ್ನಾಟಕ ಜನರ ಉಸಿರಲ್ಲಿ ಬೆರೆತು ಹೋಗಿರುವಂತಹ, ಕರ್ನಾಟಕದ ಮುತ್ತುರತ್ನವಾದ ಡಾಕ್ಟರ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿಯು ಸಂದಿದೆ. ಅದೇ ರೀತಿ ಡಾಕ್ಟರ್ ರಾಜಕುಮಾರ್ ಅವರ ಪತ್ರನಾದ ಪುನೀತ್ ರಾಜಕುಮಾರರವರಿಗೂ ಕರ್ನಾಟಕ ರತ್ನ ಪ್ರಶಸ್ತಿ ದೊರೆತಿರುವುದು ವಿಶೇಷ
ಆದರೆ ಪುನೀತ್ ರವರಿಗೆ ಸಮಾಜ ಸೇವೆಯ ಕಾರಣದಿಂದಾಗಿ ಈ ಪ್ರಶಸ್ತಿ ದೊರಕಿದೆ ಎಂದರೆ ಸುಳ್ಳಲ್ಲ ಇನ್ನು ಯಾವುದಾದರೂ ಪ್ರಶಸ್ತಿಯನ್ನು ಮೊದಲು ಶುರು ಮಾಡುವಾಗ ಕರ್ನಾಟಕ ಮುಖ್ಯ ಸದಸ್ಯರ ಅನುಮತಿ ಇರಬೇಕು ಹಾಗೆ ಮೊದಲು ಕರ್ನಾಟಕ ರತ್ನ ಪ್ರಶಸ್ತಿಯು ಕೊಡಬೇಕು ಎಂದು ಶುರು ಮಾಡಿದಾಗ ಮೊದಲು ಕೇಳಿ ಬಂದ ಹೆಸರೇ ಡಾಕ್ಟರ್ ರಾಜಕುಮಾರ್ ಅವರದು ಆದರೆ ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು.
ರಾಜ್ ಕುಮಾರ್ ಅವರು ಕರ್ನಾಟಕ ವೃತ್ತ ಪ್ರಶಸ್ತಿಯನ್ನು ತಿರಸ್ಕರಿಸಲು ಕಾರಣವೇನೆಂದರೆ ಕರ್ನಾಟಕದ ಸಾಹಿತ್ಯದಲ್ಲಿ ಸಾಧನೆಯನ್ನು ಸಾಧಿಸಿದ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರಿಗೆ ನೀಡಿ ಗೌರವಿಸಬೇಕು ಎಂಬುವುದು ಡಾಕ್ಟರ್ ರಾಜಕುಮಾರ್ ಅವರ ಇಚ್ಛೆಯಾಗಿತ್ತು. ರಾಜಕುಮಾರ ಎಲ್ಲರಿಗೂ ತಿಳಿದಂತೆ ಮೊದಲನೆಯದು ಸರಳ ಹಾಗೂ ಮುಕ್ತ ಮನಸ್ಸಿನವರು ಅವರಿಗೆ ಸಾಹಿತ್ಯದಲ್ಲಿ ಪಾಂಡಿತ್ಯವನ್ನು ಪಡೆದ ವರನ್ನು ಬಹಳ ಗೌರವದಿಂದ ನೋಡುತ್ತಿದ್ದರು ಹಾಗಾಗಿ ಈ ಗೌರವೂ ತನಗಿಂತಲೂ ಮೊದಲು ಅವರಿಗೆ ಸಲ್ಲಬೇಕು ಎಂಬುವುದು ಡಾಕ್ಟರ್ ರಾಜಕುಮಾರ್ ಅವರ ಉದ್ದೇಶವಾಗಿತ್ತು.
ಕುವೆಂಪು ಅವರಿಗೆ ನೀಡಿದ ನಂತರ ಡಾಕ್ಟರ್ ರಾಜಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ತಿಳಿಸಿದ್ದರು. ಡಾಕ್ಟರ್ ರಾಜಕುಮಾರ್ ಅವರ ಆಸೆಯಂತೆ ಮೊದಲು ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪುರವರಿಗೆ ನೀಡಲಾಗಿತ್ತು ನಂತರ ಡಾಕ್ಟರ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡುತ್ತಾರೆ. ಪ್ರಶಸ್ತಿಯನ್ನು ನೀಡಿದ ನಂತರ ಡಾಕ್ಟರ್ ರಾಜಕುಮಾರ್ ಅವರು ವೇದಿಕೆ ಮೇಲೆ ಮಾತನಾಡುವ ಬೇಕೆಂದು ಕೋರಿಕೊಳ್ಳುವುದರಿಂದ ರಾಜಕುಮಾರ ಮಾತನಾಡುತ್ತಾರೆ.
ರಾಜಕುಮಾರ ಅವರ ಮಾತಿನ ನಂತರ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರು ಮಾತನಾಡಬೇಕಾಗುತ್ತದೆ. ವೇದಿಕೆಯ ಮೇಲೆ ಬಂಗಾರಪ್ಪನವರು ತಮ್ಮ ಭಾಷಣವನ್ನು ಶುರು ಮಾಡಿದಾಗ ಕೆಲವು ಕಿಡಿಗೇಡಿಗಳು ತಮ್ಮ ದುಷ್ಟತನದಿಂದ ಚಪ್ಪಲಿಯನ್ನು ಬಂಗಾರಪ್ಪನವರ ಮೇಲೆ ಎಸೆಯುತ್ತಾರೆ. ಇದರಿಂದ ಕಾರ್ಯಕ್ರಮಕ್ಕೆ ಅಡಚಣೆ ಉಂಟಾಗಿ ಈ ಸಂಗತಿಯು ಒಂದು ಕಪ್ಪು ಚುಕ್ಕಿಯಾಗಿ ಉಳಿಯುತ್ತದೆ. ಕಿಡಿಗೇಡಿಗಳು ಬಂಗಾರಪ್ಪನವರ ಮೇಲೆ ಚಪ್ಪಲಿಯನ್ನು ಎಸೆಯಲು ಕಾರಣವೇನೆಂದರೆ.
ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಲು ಕೆಲವರಿಗೇ ತಮ್ಮ ಪಕ್ಷದವರಿಗೆ ಇಷ್ಟವಿರುವುದಿಲ್ಲ. ಅಲ್ಲದೆ ರಾಜಕುಮಾರರು ಬಂಗಾರಪ್ಪನವರ ಸಂಬಂಧಿಕರು ಆಗಿದ್ದರು ಬಂಗಾರಪ್ಪನವರ ಆಪ್ತರಾಗಿರುವ ಕಾರಣ ರಾಜಕುಮಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುತ್ತಿದ್ದಾರೆ ಎಂದು ತಮಷ್ಟಕ್ಕೆ ತಾವೇ ಭಾವಿಸಿ ವೇದಿಕೆ ಮೇಲೆ ಚಪ್ಪಲಿಯನ್ನು ಬಂಗಾರಪ್ಪನವರ ಮೇಲೆ ಎಸೆಯುತ್ತಾರೆ ನಿಜಕ್ಕೂ ಕೂಡ ಇದು ಒಂದು ಅಹಿತಕರ ಘಟನೆ ಅಂತಾನೇ ಹೇಳಬಹುದು