Sunday, June 4, 2023
HomeEntertainmentಇವಾ ಹೆಬ್ಬುಲಿ ಅಂತೆ, ನಿಜವಾದ ಹುಲಿ ಬಂದ್ರೆ ಓಡಿ ಹೋದನ್, ನಟ ಕಿಚ್ಚ ಸುದೀಪ್ ಬಗ್ಗೆ...

ಇವಾ ಹೆಬ್ಬುಲಿ ಅಂತೆ, ನಿಜವಾದ ಹುಲಿ ಬಂದ್ರೆ ಓಡಿ ಹೋದನ್, ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ವಿನಯ್ ಗುರೂಜಿ ವಿಡಿಯೋ ವೈರಲ್.

 

 

ಗೌರಿ ಗದ್ದೆಯ ಗುರೂಜಿ, ಅವಧೂತ ಹೀಗೆಲ್ಲ ಭಕ್ತಾಧಿಗಳಿಂದ ಬಿರುದು ಪಡೆದಿರುವ ವಿನಯ್ ಗುರೂಜಿ ಅವರು ನೋಡುವುದಕ್ಕೆ ಬಹಳ ಸರಳವಾಗಿ ಕಾಣುತ್ತಾರೆ. ಇನ್ನು ಎಳೆ ವಯಸ್ಸಿನ ಚಿಕ್ಕ ಹುಡುಗನಂತೆ ಇರುವ ಇವರ ಬಾಯಿಯಿಂದ ಬರುವ ಪ್ರವಚನದ ನುಡಿಗಳು ಮಾತ್ರ ಯಾವ ಮೇಧಾವಿಗಿಂತಲೂ ಕಡಿಮೆ ಇಲ್ಲ. ಈ ಕಾರಣದಿಂದಲೇ ಇವರನ್ನು ದೇವರ ಅಂಶ ಎಂದು ಜನ ನಂಬಿ ಇವರ ಆಶ್ರಮಕ್ಕೆ ಮುಗಿ ಬಿದ್ದು ಹೋಗುತ್ತಾರೆ.

ಈಗಾಗಲೇ ಕರ್ನಾಟಕದಾದ್ಯಂತ ವಿನಯ್ ಗುರೂಜಿ ಅವರ ಹೆಸರು ಸಾಕಷ್ಟು ಜನರಿಗೆ ತಿಳಿದಿದೆ. ಅದರಲ್ಲೂ ರಾಜಕಾರಣಿಗಳಿಗಂತು ವಿನಯ್ ಗುರೂಜಿ ಅವರೇ ಫೇವರಿಟ್ ಗುರೂಜಿ ಪಕ್ಷಗಳ ಬೇಧವಿಲ್ಲದೆ ಎಲ್ಲಾ ರಾಜಕೀಯ ವ್ಯಕ್ತಿಗಳು ಕೂಡ ವಿನಯ್ ಗುರೂಜಿ ಅವರನ್ನು ಮನೆಗೆ ಹಾಗೂ ಆಫೀಸಿಗೆ ಕರೆಸಿ ಪೂಜೆ ಮಾಡಿಸುತ್ತಾರೆ ಮತ್ತು ಇವರೇ ಆಶ್ರಮಕ್ಕೆ ತೆರಳಿ ಅವರ ಆಶೀರ್ವಾದ ಪಡೆದು ಬರುತ್ತಾರೆ.

ಇಷ್ಟೆಲ್ಲಾ ಫೇಮಸ್ ಆಗಿರುವ ವಿನಯ್ ಗುರೂಜಿಗೆ ರಾಜಕೀಯ ವ್ಯಕ್ತಿಗಳನ್ನು ಹೊರತುಪಡಿಸಿ ಸಾಮಾನ್ಯರು ಕೂಡ ಅನುಯಾಯಿಗಳಾಗಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಮಾತನಾಡುವ ಆಧ್ಯಾತ್ಮಿಕ ವಿಷಯ. ಇನ್ನು ಸಿನಿಮಾರಂಗದವರ ವಿಚಾರವಾಗಿ ಹೇಳುವುದಾದರೆ ವಿನಯ್ ಗುರೂಜಿ ಅವರನ್ನು ಬಹಳ ನಂಬುವ ಜನರು ಸಿನಿಮಾ ರಂಗದಲ್ಲಿ ಇದ್ದಾರೆ.

ಈಗ ಕಾಂತರಾ ಸಿನಿಮಾ ಸಕ್ಸಸ್ ಅಲ್ಲಿ ತೇಲುತ್ತಿರುವ ರಿಷಭ್ ಶೆಟ್ಟಿ ಅವರು ಕೂಡ ವಿನಯ್ ಗುರೂಜಿ ಅವರ ಭಕ್ತರೇ. ಇವರ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಅದು ಅವಾರ್ಡ್ ತಂದು ಕೊಡುತ್ತದೆ ಎಂದು ವಿನಯ್ ಗುರೂಜಿ ಭವಿಷ್ಯವನ್ನು ಕೂಡ ನುಡಿದಿದ್ದರು ಆ ವಿಷಯ ನಿಜವಾದ ಬಳಿಕ ಇವರ ಮೇಲಿದ್ದ ಭಕ್ತಿ ಇನ್ನೂ ಹೆಚ್ಚಾಗಿದೆ.

ದುನಿಯಾ ವಿಜಯ್, ಫೈಟ್ ಮಾಸ್ಟರ್ ರವಿವರ್ಮ, ಜೀ ಕನ್ನಡ ಫೇಮಸ್ ಆಂಕರ್ ಆನಂದ್ ಮತ್ತು ಆನಂದ್ ಅವರ ತಮ್ಮ ಮೀಡಿಯಾದಲ್ಲಿ ಪ್ರಚಲಿತವಾಗಿರುವ ವ್ಯಕ್ತಿ ಅರುಣ್ ಹೀಗೆ ಸಾಲು ಸಾಲು ಮಂದಿ ಸೆಲಬ್ರಿಟಿಗಳು ಅವಧೂತರ ಶಿಷ್ಯರಾಗಿದ್ದಾರೆ. ಸಿನಿಮಾ ಮಂದಿ ಜೊತೆ ಇಷ್ಟು ನಂಟು ಹೊಂದಿರುವ ವಿನಯ್ ಗುರೂಜಿ ಅವರು ಕನ್ನಡದ ಸೂಪರ್ ಸ್ಟಾರ್ ಒಬ್ಬರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದಾರೆ.

ಒಂದು ರೀತಿಯಲ್ಲಿ ಇವರನ್ನು ವಿವಾದದ ಗುರೂಜಿಯಂತಲೇ ಕರೆಯಬಹುದು. ಯಾಕೆಂದರೆ ಪದೇಪದೇ ಒಂದಲ್ಲ ಒಂದು ವಿಚಾರಕ್ಕೆ ಇವರು ಕಾಂಟ್ರವರ್ಸಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಕರ್ನಾಟಕದಲ್ಲಿ ಕಿಚ್ಚ ಹೆಬ್ಬುಲಿ ಎಂದು ಕರೆಸಿಕೊಳ್ಳುತ್ತಿರುವ ಸುದೀಪ್ ಅವರನ್ನು ಅವಮಾನ ಮಾಡುವ ರೀತಿ ಮಾತನಾಡಿರುವ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ವಿನಯ್ ಗುರೂಜಿ ಅವರು ಮಾತನಾಡಿರುವುದು ಸೆರೆ ಆಗಿದೆ ಆದರೆ ಇವರ ಅಕ್ಕಪಕ್ಕದಲ್ಲಿ ಯಾರಿದ್ದರು ಎನ್ನುವುದು ಮಾತ್ರ ತಿಳಿದಿಲ್ಲ. ರಾಜ ರೋಷವಾಗಿ ವಿನಯ್ ಗುರೂಜಿಯವರು ಸುದೀಪ್ ಅವರ ಹೆಸರನ್ನು ತೆಗೆದುಕೊಂಡೆ ಮಾತನಾಡಿದ್ದಾರೆ. ಹುಡುಗರೆಲ್ಲ ಇವನ ಸಿನಿಮಾವನ್ನು ನೋಡಿದರೆ ರೋಮಾಂಚನವಾಗುತ್ತದೆ ಎಂದು ಹೇಳುತ್ತಾರೆ ಮಾಣಿಕ್ಯ ಎಂದು ಹೇಳುತ್ತಾರೆ, ಹೆಬ್ಬುಲಿ ಎಂದು ಕರೆಯುತ್ತಾರೆ.

ಇವನು ಯಾವ ಸೀಮೆ ಹೆಬ್ಬುಲಿ ಒಂದು ನಿಜವಾದ ಹುಲಿ ಅಥವಾ ಸಿಂಹ ಬಂದರೆ ಓಡಿ ಹೋಗಿ ಬಿಡುತ್ತಾನೆ ಎಂದು ವಿನಯ್ ಗುರೂಜಿ ಅವರು ಮಾತನಾಡಿರುವುದು ಸುದೀಪ್ ಅಭಿಮಾನಿಗಳು ಗರಂ ಆಗುವಂತೆ ಮಾಡಿದೆ. ಇದೆಲ್ಲ ಆಗಿ ಬಹಳ ಸಮಯ ಕಳೆದಿದ್ದರೂ ಈಗ ರೇಣುಕಾಚಾರ್ಯರ ಅಣ್ಣನ ಮಗನ ವಿಷಯದಲ್ಲಿ ಅವಧೂತರ ಹೆಸರು ತಳಕು ಹಾಕಿಕೊಂಡಿರುವುದರಿಂದ ಇವರ ಹಳೆಯ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿವೆ.