ಸರ್ಕಾರದಿಂದ ಆಗಾಗ ರಸ್ತೆ ಸಂಚಾರ ಕುರಿತಂತೆ ಹೊಸ ಹೊಸ ನಿಯಮಗಳು ಜಾರಿಗೆ ಆಗುತ್ತಲೇ ಇರುತ್ತವೆ. ಅದರಲ್ಲೂ ರಸ್ತೆ ಸಾರಿಗೆ ಕುರಿತಂತೆ ಈಗಾಗಲೇ ಸಾಕಷ್ಟು ಅಪ್ಡೇಟ್ಗಳು ಆಗಿದ್ದು, ಆಗಾಗ ಅವುಗಳನ್ನು ಪರೀಷ್ಕೃತಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ರಸ್ತೆ ಸಾರಿಗೆ ನಿಯಮ ಕುರಿತಂತೆ ಮತ್ತೊಂದು ಹೊಸ ಕಾನೂನನ್ನು ಜಾರಿಗೆ ತಂದಿದೆ. ಹೊಸ ನಿಯಮ ಪ್ರತಿ ಬಾರಿ ಜಾರಿಗೆ ಆದಾಗ ಮತ್ತೊಂದು ತಲೆನೋವು ಎಂದು ಬೇಸರ ಮಾಡಿಕೊಳ್ಳುತ್ತಿದ್ದ ಜನ ಸರ್ಕಾರ ಸೂಚಿಸಿರುವ ಈ ನಿಯಮದಿಂದ ಸಮಾಧಾನ ಪಟ್ಟುಕೊಂಡಿದ್ದಾರೆ.
ಅಷ್ಟಕ್ಕೂ ಈ ವಿಷಯ ಏನೆಂದರೆ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಾವುದೇ ರೀತಿಯ ಪರೀಕ್ಷೆ ಎದುರಿಸುವ ಅಗತ್ಯ ಇಲ್ಲ, ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಇದು ನಿಮಗೆ ಆಶ್ಚರ್ಯ ಅನ್ನಿಸಬಹುದು ಆದರೆ ಸರ್ಕಾರ ಈ ರೀತಿಯ ನಿಯಮವನ್ನು ಯಾರಿಗಾಗಿ ಜಾರಿಗೆ ತಂದಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅದರ ಬಗ್ಗೆ ಮಾಹಿತಿಗಾಗಿ ಅಂಕಣವನ್ನು ಪೂರ್ತಿಯಾಗಿ ಓದಿ.
ಹಿಂದೆಲ್ಲಾ ಡ್ರೈವಿಂಗ್ ಲೈಸನ್ಸ್ ಗಳನ್ನು ಪಡೆಯಲು ಕೆಲ ಕಠಿಣ ನಿಯಮಗಳು ಇತ್ತು. 18 ವರ್ಷ ಪೂರೈಸಿರಬೇಕು ಎನ್ನುವುದರ ಜೊತೆಗೆ RTO ಕಛೇರಿಗಳಲ್ಲಿ ಅರ್ಜಿ ಸಲ್ಲಿಸಿ ಸೂಚಿಸುವ ದಿನಾಂಕದಂದು ಹೋಗಿ ಅಧಿಕಾರಗಳ ಎದುರಿಗೆ ಪರೀಕ್ಷೆ ಎದುರಿಸಿ ನಂತರ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕಿತ್ತು. ಆದರೆ DL ಗೂ ಮೊದಲು LL ಅಂದರೆ ಲರ್ನಿಂಗ್ ಲೈಸೆನ್ಸ್ ಎನ್ನು ಕೊಡುತ್ತಿದ್ದರು.
ಅದಾದ ಬಳಿಕ ಕೆಳ ತಿಂಗಳು ಆದಮೇಲೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪರೀಕ್ಷೆ ಎದುರಿಸಿ ನೀವು ಪಡೆದುಕೊಳ್ಳಬಹುದಿತ್ತು. ಆದರೆ ಈಗ ಈ ಒಂದು ನಿಯಮದಲ್ಲಿ ಬಾರಿ ದೊಡ್ಡ ಬದಲಾವಣೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಡಿದೆ. ನೀವೇನಾದರೂ 16 ವರ್ಷದಿಂದ 18ನೇ ವರ್ಷದವರಾಗಿದ್ದರೆ ಡ್ರೈವಿಂಗ್ ಮಾಡಲು ಲೈಸೆನ್ಸ್ ಅನ್ನು ಪಡೆಯಲು ನೀವು ಬಯಸಿದರೆ ಅದನ್ನು ಪಡೆಯಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧ ಪಟ್ಟ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ರೀತಿ ನೀವು ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆದ ಮೇಲೆ ಗೇರ್ ಇಲ್ಲದ ಯಾವುದೇ ವಾಹನಗಳನ್ನಾದರೂ ಬೇಕಾದರೂ ನೀವು ಚಲಾಯಿಸಬಹುದು. ಆದರೆ ನೀವು ಗೇರ್ ವಾಹನ ಚಲಾಯಿಸಬೇಕು ಎಂದರೆ RTO ಕಛೇರಿಯಿಂದ ಲೈಸೆನ್ಸ್ ಪಡೆಯಲೇ ಬೇಕಾಗುತ್ತದೆ. ಅದಕ್ಕೆ ಕಡ್ಡಾಯವಾಗಿ RTO ಕಛೇರಿಯಲ್ಲಿ ನೋಂದಾಯಿಸಿ ಅಧಿಕಾರಿಗಳು ನೀಡುವ ಪರೀಕ್ಷೆ ಎದುರಿಸಬೇಕಾಗುತ್ತದೆ. ಒಂದು ವೇಳೆ ನೀವು 16 ರಿಂದ 18 ವರ್ಷದವರಾಗಿದ್ದು ಗೇರ್ ಇಲ್ಲದ ವಾಹನಗಳನ್ನು ಚಲಾಯಿಸಲು ಇಚ್ಚಿಸುವುದಾದರೆ ಇದಕ್ಕಾಗಿ ಪಡೆಯುವ ಲರ್ನಿಂಗ್ ಲೈಸೆನ್ಸ್ ಗೆ ಯಾವುದೇ ಪರೀಕ್ಷೆ ಎದುರಿಸುವ ಅಗತ್ಯ ಇಲ್ಲ ಎನ್ನುವುದನ್ನು ಸಚಿವಾಲಯ ತಿಳಿಸಿದೆ.
ಕಲಿಕಾ ಪರವಾನಗಿ ಆಗಿರುವ LL ಅನ್ನು ಪಡೆಯಲು ಇನ್ನು ಮುಂದೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆಯಬಹುದು. ಆದರೆ ಯಾವುದೇ ಕಾರಣಕ್ಕೂ ಅದನ್ನು ಗೇರ್ ವಾಹನ ಚಲಾಯಿಸಲು ಲೈಸನ್ಸ್ ಎಂದು ತಿಳಿದುಕೊಳ್ಳುವಂತಿಲ್ಲ, ಒಂದು ವೇಳೆ ನೀವು ಗೇರ್ ವಾಹನ ಚಲಾಯಿಸಲೇಬೇಕು ಎನ್ನುವುದಾದರೆ 18 ವರ್ಷ ಪೂರೈಸಿರಬೇಕು ಮತ್ತು RTO ಕಚೇರಿಯಿಂದ DL ಲೈಸೆನ್ಸ್ ಪಡೆದಿರಲೇಬೇಕು.