Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ...

ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಂದೆಯಾಗುತ್ತಿರುವಂತಹ ವಿಚಾರವನ್ನು ಕಳೆದ ನಾಲ್ಕು ದಿನಗಳ ಹಿಂದೆ ಎಷ್ಟೇ ಫೋಟೋಶೂಟ್ ಮಾಡಿಸುವುದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಕ್ಕಿಂತ ಮುಂಚೆ ಧ್ರುವ ಸರ್ಜಾ ಅವರ ಧರ್ಮಪತ್ನಿ ಪ್ರೇರಣಾ ಅವರು ಗರ್ಭಿಣಿ ಎಂಬ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಈ ವಿಚಾರವನ್ನು ಹೆಚ್ಚು ದಿನ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲದ ಕಾರಣ ಧ್ರುವ ಸರ್ಜಾ ಅವರು ವಿಶೇಷವಾದಂತಹ ಫೋಟೋಶೂಟ್ ಮಾಡಿ ಅದರ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ನಾವಿಬ್ಬರು ತಂದೆ ತಾಯಿ ಆಗುತ್ತಿದ್ದೇವೆ ನಿಮ್ಮ ಆಶೀರ್ವಾದ ಸದಾ ನಮಗೂ ಮತ್ತು ನಮ್ಮ ಮಗುವಿನ ಮೇಲೆ ಇರಲಿ ಎಂದು ಧೃವ ಸರ್ಜಾ ಅವರು ಬರೆದುಕೊಂಡಿದ್ದರು.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಎಲ್ಲಾ ಅಭಿಮಾನಿಗಳು ಸಂತಸದಿಂದ ಈ ಜೋಡಿಗೆ ಶುಭವನ್ನು ಹಾರೈಸಿ ಹುಟ್ಟುವ ಮಗು ಆರೋಗ್ಯವಾಗಿ ಹುಟ್ಟಲಿ ಎಂದು ಶುಭಾಶಯಗಳು ಕೋರಿದರು. ಇನ್ನು ಮೊನ್ನೆಯಷ್ಟೇ ಧೃವ ಸರ್ಜಾ ಅವರ ಖಾಸಗಿ ಹೋಟೆಲ್ ಒಂದರಲ್ಲಿ ತಮ್ಮ ಹೆಂಡತಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು ಕುಟುಂಬಸ್ಥರು ಬಂದು ಮಿತ್ರರು ಸಿನಿಮಾ ರಂಗದವರು ಸೇರಿದಂತೆ ಇಡೀ ಸರ್ಜಾ ಕುಟುಂಬವೇ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಎಲ್ಲಿಯೂ ಕೂಡ ಮೇಘನಾ ರಾಜ್ ಆಗಲಿ ಪ್ರಮೀಳ ಜೇಷಾಯಿ ಆಗಲಿ ಅಥವಾ ಸುಂದರ್ ರಾಜ್ ಆಗಲಿ ಕಾಣಿಸಿಕೊಳ್ಳಲಿಲ್ಲ.

ಇವೆಲ್ಲವನ್ನೂ ನೋಡಿದಂತಹ ಕೆಲವು ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಅನುಮಾನ ಮೂಡಿರುವುದಂತೂ ಸಹಜ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಿರಂಜೀವಿ ಸರ್ಜಾ ಅವರು ಇಹಲೋಕವನ್ನು ತ್ಯಜಿಸಿದ ನಂತರ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರ ಕುಟುಂಬದಿಂದ ಸ್ವಲ್ಪ ದೂರನೇ ಉಳಿದಿದ್ದಾರೆ. ಈಗ ತಮ್ಮ ತಂದೆ ತಾಯಿಯ ಜೊತೆ ವಾಸ ಮಾಡುತ್ತಿದ್ದಾರೆ ಆದರೂ ಕೂಡ ಕೆಲವು ಕಾರ್ಯಕ್ರಮ ಅಥವಾ ಸಮಾರಂಭ ಇದ್ದಾಗ ಇಬ್ಬರು ಕುಟುಂಬದವರು ಕೂಡ ಒಟ್ಟಾಗಿ ಇದ್ದರೆ ನೋಡಿಗರಿಗೆ ಅಷ್ಟೇನೂ ಬಾಸ ವಾಗುವುದಿಲ್ಲ ಆದರೆ ಧ್ರುವ ಸರ್ಜಾ ಕುಟುಂಬದಲ್ಲಿ ನಡೆಯುವಂತಹ ಕಾರ್ಯಗಳಿಗೆ ಮೇಘನಾ ರಾಜ್ ಅವರು ಹೋಗುತ್ತಿಲ್ಲ ಹಾಗೆಯೇ ಮೇಘನಾ ರಾಜ್ ಅವರ ಮನೆಯಲ್ಲಿ ನಡೆಯುತ್ತಿರುವಂತಹ ಕಾರ್ಯಕ್ರಮಗಳಿಗೆ ಧ್ರುವ ಸರ್ಜಾ ಅವರು ಹೋಗುತ್ತಿಲ್ಲ.

ಇವೆಲ್ಲವನ್ನು ನೋಡಿದಂತಹ ನೆಟ್ಟಿಗರು ಇವರಿಬ್ಬರ ನಡುವೆ ವೈ ಮನಸು ಇರಬಹುದು, ಕುಟುಂಬದಲ್ಲಿ ಏನು ಏರುಪೇರು ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ರಾಯನ್ ರಾಜ್ಯ ಸರ್ಜಾ ಅವರ ಹುಟ್ಟುಹಬ್ಬ ಇದ್ದಾಗ ಧ್ರುವ ಸರ್ಜಾ ಆಗಲಿ ಅಥವಾ ಅವರ ಹೆಂಡತಿಯಾಗಲಿ ಅವರ ತಂದೆ ತಾಯಿಯಾಗಲಿ ಯಾರೂ ಕೂಡ ಹೋಗಿರಲಿಲ್ಲ ಇದು ಒಂದು ಕಾರಣವಾಗಿತ್ತು. ಇದೀಗ ಧೃವ ಸರ್ಜಾ ಅವರ ಹೆಂಡತಿ ಪ್ರೇರಣ ಅವರ ಸೀಮಂತ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಆಗಲಿ ಅಥವಾ ಅವರ ತಂದೆ ತಾಯಿ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ.

ಇವೆಲ್ಲವನ್ನು ನೋಡುತ್ತಿದ್ದರೆ ಎರಡು ಕುಟುಂಬದಲ್ಲಿ ಏನೋ ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಆದರೆ ಯಾವುದು ಸತ್ಯ ಯಾವುದು ಸುಳ್ಳು ಎಂಬುವುದು ಮಾತ್ರ ತಿಳಿಯುತ್ತಿಲ್ಲ. ಕೆಲವು ಮೂಲಗಳ ಪ್ರಕಾರ ಮೇಘನಾ ರಾಜ್ ಅವರು ಈ ಒಂದು ಸೀಮಂತ ಶಾಸ್ತ್ರಕ್ಕೆ ಬರದೇ ಇರಲು ಮತ್ತೊಂದು ಕಾರಣವಿದೆ ಅನ್ನುತ್ತಿದ್ದರೆ. ಹೌದು ಅದೇನೆಂದರೆ ಕಳೆದ ವಾರ ಅಷ್ಟೇ ಮೇಘನಾ ರಾಜ್ ಅವರು ಅಮೆರಿಕಾಗೆ ಹೋಗಿದ್ದಾರೆ ಅಲ್ಲಿಯೇ ವಾಸವಾಗಿದ್ದಾರೆ ಹಾಗಾಗಿ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಾನ ಅಥವಾ ಸುಳ್ಳು ಎಂಬುದು ತಿಳಿದಿಲ್ಲ ಒಟ್ಟಾರೆಯಾಗಿ ಹೇಳುವುದಾದರೆ ಚಿರಂಜೀವಿ ಸರ್ಜಾ ಅವರು ಅಗಲಿದ ನಂತರ ಇಬ್ಬರ ಕುಟುಂಬದ ನಡುವೆ ಮೊದಲಿನಷ್ಟು ಹೊಂದಾಣಿಕೆ ಇಲ್ಲ ಎಂಬುದು ಮಾತ್ರ ಕಂಡುಬರುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.