ಸಾಮಾನ್ಯವಾಗಿ ಡಿ ಬಾಸ್ ಎಂದರೆ ಅಭಿಮಾನಿಗಳಿಗೆ ಹುಚ್ಚು ಹಾಗೆಯೇ ಡಿ ಬಾಸ್ ಅವರಿಗೆ ಅಭಿಮಾನಿಗಳೆಂದರೆ ಅಚ್ಚು ಮೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೇ ಕಾರ್ಯಕ್ರಮ ಅಥವಾ ಪ್ರೆಸ್ ಮೀಟ್ ಗಳಲ್ಲಿ ಅಭಿಮಾನಿಗಳನ್ನ ಓಲೈಸುವ ರೀತಿಯಿಂದಲೇ ತಿಳಿಯುತ್ತದೆ ಒಬ್ಬ ನಟ ಹಾಗೂ ಅಭಿಮಾನಿಗಳ ನಡುವಿನ ಅವಿನಾಭವ ಸಂಬಂಧ. ಹೌದು ಇಂದು ದರ್ಶನ್ ಅವರನ್ನು ನ್ಯೂಸ್ ಚಾನೆಲ್ ಗಳು ಕೇವಲ ಒಂದು ಕಾರಣಕ್ಕೆ ಬ್ಯಾನ್ ಮಾಡಿ ಸಿನಿಮಾ ಪ್ರಮೋಟ್ ಮಾಡದೇ ಉಳಿದಿವೆ ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಡಿ ಬಾಸ್ ಅಭಿಮಾನಿಗಳು ದರ್ಶನ್ ಅವರ ಕ್ರಾಂತಿ ಚಿತ್ರದ ಪ್ರಮೋಷನ್ ಅನ್ನು ಕ್ರಾಂತಿಕಾರಿ ಆಗಿಯೇ ಪ್ರಮೋಟ್ ಮಾಡಿ ನ್ಯೂಸ್ ಚಾನೆಲ್ ಗಳಿಗೆ ತಿರುಗೇಟು ನೀಡಿದ್ದಾರೆ.
ಈ ಒಂದು ಘಟನೆಯೇ ಸಾಕು ಡಿ ಬಾಸ್ ಹಾಗೂ ಡಿ ಬಾಸ್ ಅಭಿಮಾನಿಗಳ ನಡುವಿನ ಬಾಂಧವ್ಯ ದರ್ಶನ್ ಅವರ ಬಗ್ಗೆ ಹೇಳಬೇಕೆಂದರೆ ಇವರು ಸಿನಿಮಾ ಬ್ಯಾಕ್ ರೌಂಡ್ ಹೊಂದಿದ್ದರೂ ಸಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಮೇಲೆ ಬಂದಿರುವ ವ್ಯಕ್ತಿ. ತಂದೆ ತೂಗುದೀಪ ಶ್ರೀನಿವಾಸ್ ಅವರು ತೆರೆಯ ಮೇಲೆ ಉತ್ತಮ ಖಳ ನಾಯಕರಾಗಿ ಗುರುತಿಸಿಕೊಂಡಿದ್ದರೂ ಸಹ ತಮ್ಮ ಪುತ್ರ ದರ್ಶನ್ ಅವರು ಚಿತ್ರರಂಗಕ್ಕೆ ಬರುವುದು ಅವರಿಗೆ ಇಷ್ಟ ಇರಲಿಲ್ಲವಂತೆ, ಕೊನೆಗೂ ದರ್ಶನ್ ಅವರು ತಮ್ಮ ತಾಯಿಯ ಸಹಯೋಗದೊಂದಿಗೆ ಪ್ರಸಿದ್ಧ ನೀನಸಾಮ್ ನಲ್ಲಿ ನಟನೆಯ ತರಬೇತಿ ಪಡೆದುಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಾರೆ.
ಆದರೆ ಆರಂಭಿಕ ದಿನಗಳಲ್ಲಿ ಇವರು ಸಿನಿಮಾದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದಲ್ಲದೆ ಅಸಿಸ್ಟೆಂಟ್ ಕ್ಯಾಮೆರ ಮೆನ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದಾದ ನಂತರ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿ ಎಸ್ ನಾರಾಯಣ್ ಅವರ ನಿರ್ದೇಶನದ ಅಂಬಿಕಾ ಧಾರವಾಹಿ ಹೆಚ್ಚು ಪ್ರಸಿದ್ಧಿಗೆ ಬರುತ್ತಾರೆ. ಇದಾದ ನಂತರ 2002 ರಲ್ಲಿ ತಮ್ಮ ಚೊಚ್ಚಲ ಚಿತ್ರ ಮೆಜೆಸ್ಟಿಕ್ ನಲ್ಲಿ ಸ್ಟಾರ್ ಗಿರಿಯನ್ನು ಸಾಧಿಸಿ ತಮ್ಮ ನಟನ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. 2006 ರಲ್ಲಿ ತಮ್ಮ ಅಣ್ಣನಾದ ದಿನಕರ್ ತೂಗುದೀಪ್ ಜೊತೆಗೂಡಿ ತೂಗುದೀಪ ಪ್ರೊಡಕ್ಷನ್ ಪ್ರಾರಂಭಿಸಿ ಜೊತೆ ಜೊತೆಯಲಿ ಸಿನಿಮಾವನ್ನು ನಿರ್ಮಿಸುತ್ತಾರೆ.
ಸಿನಿ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ದರ್ಶನ್ ಅವರು ಇಂದಿಗೂ ಕೂಡ ಕೆಲವರ ಕೊಂಕು ನುಡಿಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ದರ್ಶನ್ ಅವರು ಇಂತಹ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತಮ್ಮ ಕಾಯಕದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ನಮ್ಮ ಸೆಲೆಬ್ರಿಟಿಗಳು ನನಗೆ ಮುಖ್ಯ ಆಗಿದ್ದು ನನ್ನ ಕುಟುಂಬದಂತೆಯೇ ಇವರು ನನ್ನ ಭಾಗವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನನ್ನ ಕುಟುಂಬ ಬಿಟ್ಟರು ನನ್ನ ಸೆಲೆಬ್ರಿಟಿಗಳನ್ನು ಬಿಟ್ಟು ನಾನು ಇರುವುದಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳು ಅಂತ ಕರೆಯುತ್ತಾರೆ.
ಚಂದನವನದ ಸ್ಯಾಂಡಲ್ವುಡ್ ನಲ್ಲಿ ದರ್ಶನ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದು ಅಭಿಮಾನಿಗಳು ಇವರಿಗೆ ಅಚ್ಚು ಮೆಚ್ಚು ಆಗಿದ್ದಾರೆ. ಇವರ ಪ್ರತಿಯೊಂದು ಚಿತ್ರಗಳನ್ನು ಅದು ಹಿಟ್ ಅಥವಾ ಫ್ಲಾಪ್ ಆದರೂ ಸರಿಯೇ ನಾವು ಡಿ ಬಾಸ್ ಅವರ ಅಪ್ಪಟ ಅಭಿಮಾನಿಗಳು ಎಂದು ಡಿ ಬಾಸ್ ಅವರ ಪ್ರತಿಯೊಂದು ಸಿನಿಮಾಗಳನ್ನು ಮನದಾಳದಿಂದ ಹರಸಿ ನೋಡುತ್ತಾ ಬಂದಿದ್ದಾರೆ ಡಿ ಬಾಸ್ ಅಭಿಮಾನಿಗಳು. ಸದ್ಯ ದರ್ಶನ್ ಅವರು ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಆಗಿದ್ದು ಅಭಿಮಾನಿಗಳು ಅದ್ದೂರಿಯಾಗಿಯೇ ಕ್ರಾಂತಿಕಾರಿ ಕ್ರಾಂತಿಯ ಪ್ರಚಾರವನ್ನು ಮಾಡಿ ತಮ್ಮ ಕ್ರಾಂತಿಕಾರಿ ನಾಯಕನ ಬರುವಿಕೆಗೆ ಕಾಯುತ್ತಿದ್ದಾರೆ. ನೀವು ಕೂಡ ಕ್ರಾಂತಿ ಸಿನಿಮಾದ ನಿರೀಕ್ಷೆಯಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡಿ