ಹಣ ಎನ್ನುವುದು ಯಾರಿಗೆ ಇಷ್ಟ ಇಲ್ಲ. ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇದೆ ಮತ್ತು ಹಣ ಎಂದಿಗೂ ಕೂಡ ಸಾಕು ಎನಿಸುವುದಿಲ್ಲ. ಯಾಕೆಂದರೆ ಹಣ ಇದ್ದರೆ ಮಾತ್ರ ನಾವು ಒಂದು ಹಂತದಿಂದ ಮುಂದಿನ ಹಂತಕ್ಕೆ ಬೆಳೆಯಲು ಸಾಧ್ಯ ಹೀಗೆ ಆ ಹಂತಕ್ಕೆ ಕೊನೆ ಎನ್ನುವುದು ಇಲ್ಲದೆ ಇರುವುದರಿಂದ ಈ ಪ್ರಪಂಚದ ಎಲ್ಲಾ ರೀತಿಯ ಸೌಕರ್ಯಗಳನ್ನು ಕೂಡ ಅನುಭವಿಸಿ ನೋಡುವ ಕಾರಣಕ್ಕಾಗಿ ಪ್ರತಿಯೊಬ್ಬರೂ ತಾವು ಇರುವ ಮಟ್ಟಕ್ಕಿಂತ ಹೆಚ್ಚಿನ ಗುಣಮಟ್ಟದ ಜೀವನ ನಡೆಸಲು ಹಣ ಮಾಡಬೇಕು ಎನ್ನುವ ಗುರಿಯನ್ನು ಹೊಂದಿದ್ದಾರೆ.
ಈ ರೀತಿ ಅಂದುಕೊಳ್ಳುವುದು ಕೂಡ ತಪ್ಪಲ್ಲ ಅಂದುಕೊಂಡ ಮೇಲೆ ಅದಕ್ಕೆ ತಕ್ಕ ಹಾಗೆ ಕ’ಷ್ಟಪಟ್ಟು ಅಥವಾ ಬುದ್ಧಿವಂತಿಕೆಯಿಂದ ದುಡಿಯಬೇಕು. ಈ ರೀತಿ ಹಗಲು ರಾತ್ರಿ ಕ’ಷ್ಟಪಡುತ್ತಿದ್ದರು ಒಮ್ಮೊಮ್ಮೆ ಹಣ ಉಳಿಯುವುದೇ ಇಲ್ಲ. ಅದಕ್ಕೆ ನಮ್ಮದೇ ಆದ ಕೆಲವು ತಪ್ಪುಗಳು ಇವೆ. ಈ ರೀತಿ ನೀವು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ.
ಹಣ ಎನ್ನುವುದು ತಾಯಿ ಮಹಾಲಕ್ಷ್ಮಿಯ ಸ್ವರೂಪ ಹಣ ಬರುವಾಗ ಎಲ್ಲರೂ ಕೂಡ ಬಹಳ ಸಂತೋಷದಿಂದ ಸ್ವೀಕರಿಸುತ್ತೇವೆ. ಆ ಖುಷಿಗೆ ಪಾರವೇ ಇರುವುದಿಲ್ಲ ನಮಗೆ ಏನಾದರೂ ಅನಿರೀಕ್ಷಿತವಾಗಿ ಹಣ ಸಿಕ್ಕಿಬಿಟ್ಟರಂತೂ ಆ ಖುಷಿಗೆ ಹಸಿವು ಆಗುವುದಿಲ್ಲ ನಿದ್ದೆಯೂ ಬರುವುದಿಲ್ಲ. ಒಂದೆರಡು ದಿನ ಹಗಲು ರಾತ್ರಿ ಆ ಖುಷಿಯಲ್ಲಿ ತೇಲುತ್ತಿರುತ್ತೇವೆ.
ಆದರೆ ಹಣ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ನಮ್ಮಲ್ಲಿ ಆ ಮನಸ್ಸು ಇರುವುದಿಲ್ಲ. ಬಾಡಿಗೆ ಕಟ್ಟುವಾಗ ತೆಗೆದುಕೊಂಡ ಸಾಲಕ್ಕೆ EMI ಕಟ್ಟುವಾಗ ತರಕಾರಿ ಹಣ್ಣುಗಳನ್ನು ಕೊಂಡುಕೊಳ್ಳುವಾಗ ಅಥವಾ ನಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಾಗಲು ಕೂಡ ಬಹಳ ನೋ’ವಿನಿಂದ, ಕೋ’ಪದಿಂದ, ಬೇ’ಸ’ರದಿಂದ ಹಣವನ್ನು ಖರ್ಚು ಮಾಡುತ್ತೇವೆ.
ಇದು ನ್ಯಾಯ ಅಲ್ಲ ಹಣವನ್ನು ನಾವು ಯಾವ ರೀತಿ ಸ್ವೀಕರಿಸುವಾಗ ಗೌರವಿಸಿ ಪ್ರೀತಿಸುತ್ತೇವೆ ಈಗ ಖರ್ಚು ಮಾಡುವಾಗ ಸಹಾ ಮನಸ್ಪೂರ್ತಿಯಾಗಿ ಅಷ್ಟೇ ಸಂತೋಷದಿಂದ ಅದನ್ನು ಖರ್ಚು ಮಾಡಬೇಕು ಈ ರೀತಿ ತಪ್ಪು ಮಾಡುವುದರಿಂದ ಹಣ ನಿಮ್ಮ ಬಳಿ ಮತ್ತೆ ಬರುವುದಿಲ್ಲ.
ಇನ್ನು ಕೆಲವರಿಗೆ ತಮ್ಮ ಮೇಲೆ ಹಾಗೂ ತಮ್ಮ ಕೆಲಸ ಕಾರ್ಯಗಳ ಮೇಲೆ, ಸಾಮರ್ಥ್ಯದ ಹಾಗೂ ಅದೃಷ್ಟದ ಬಗ್ಗೆ ಬಹಳ ಅನುಮಾನ ಇರುತ್ತದೆ. ನಾನು ಇಷ್ಟು ದೊಡ್ಡ ಪಡೆದೆನಾ? ನಾನು ಇಷ್ಟು ದುಡಿಯಲು ಆಯಿತಾ? ಇಷ್ಟು ಹಣ ನನಗೆ ಬರಲು ಸಾಧ್ಯವಿದೆಯೇ ಎನ್ನುವ ಅನುಮಾನದಿಂದ ನೋಡುತ್ತಾರೆ.
ಇದು ಕೂಡ ತಪ್ಪು ನಿಮಗೆ ಹಣ ಬಂದಾಗ ನನಗೆ ಹೇಗೆ ಇಷ್ಟು ಬಂತು ನಾನು ಅಂದುಕೊಂಡೆ ಇರಲಿಲ್ಲ ಎನ್ನುವ ರೀತಿ ನೆಗೆಟಿವ್ ಆಗಿ ಭಾವಿಸಿದಾಗ ಬಂದ ಹಣ ನಿಮ್ಮ ಬಳಿ ಇರುವುದಿಲ್ಲ, ಯಾವುದಾದರೂ ಕಾರಣದಿಂದ ಖರ್ಚಾಗಿ ಹೋಗುತ್ತದೆ ಇಂತಹ ತಪ್ಪುಗಳನ್ನು ಕೂಡ ಮಾಡಬೇಡಿ.
ಅದರ ಬದಲು ಹಣ ಬಂದಾಗ ಅದನ್ನು ಗೌರವಿಸಿ ಬಹಳ ಸಂತೋಷಪಡಿ ಯಾವುದೇ ಮೂಲದಿಂದ ಹಣ ಬಂದರೂ ಕೂಡ ಅದಕ್ಕೆ ಗೌರವ ತೋರಿ ಎಲ್ಲೆಂದರಲ್ಲಿ ಅದನ್ನು ಇಡಬೇಡಿ. ಬಹಳ ಶ್ರದ್ದೆ ಭಕ್ತಿಯಿಂದ ಅದನ್ನ ಜೋಪಾನವಾಗಿ ಇಡಿ, ಅದನ್ನು ಮುಟ್ಟಿ, ಬೇರೆ ಯಾವುದೇ ಪೇಪರ್ ಗಿಂತ ಹಣದ ಪೇಪರ್ ಗೆ ಹೆಚ್ಚು ಬೆಲೆ ಇದೆ ಹಾಗಾಗಿ ಅದನ್ನು ಸ್ಪರ್ಶ ಮಾಡಿ.
ಅದರ ವಾಸನೆ ಫೀಲ್ ಮಾಡಿ ಅದರ ಬಗ್ಗೆ ಯೋಚನೆ ಮಾಡಿ ಯಾವಾಗಲೂ ಹಣದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿ ಮತ್ತು ಹಣದ ಆಕರ್ಷಣೆ ಆಗಬೇಕು ಎಂದರೆ ಯಾವಾಗಲೂ ಹಣ ಹೇಗೆ ಹೆಚ್ಚಿಗೆ ಮಾಡುವುದು ಅಥವಾ ಹಣವನ್ನು ಆಕರ್ಷಣೆ ಮಾಡುವ ಕುರಿತು ಯಾರಾದರೂ ಮಾತನಾಡುತ್ತಿದ್ದಾರೆ ಆಸಕ್ತಿಯಿಂದ ಕೇಳಿ. ಈ ರೀತಿಯಾಗಿ ನಡೆದುಕೊಳ್ಳುವುದರಿಂದ ನಿಮ್ಮ ಕಡೆ ಹಣ ಹರಿಯುತ್ತಲೇ ಇರುತ್ತದೆ.