ನಮ್ಮಲ್ಲಿ ಅನೇಕರಿಗೆ ಕಾಲಿನಲ್ಲಿ ಆಣಿಗಳಾಗುತ್ತವೆ. ಹಿರಿಯರಿಗಂತು ಈ ಸಮಸ್ಯೆ ಹೆಚ್ಚಾಗಿರುತ್ತದೆ. ಹಳ್ಳಿಗಾಡಿನವರಲ್ಲಿ ಇದು ಸರ್ವೇಸಾಮಾನ್ಯ ಎಂದು ಹೇಳಬಹುದು. ಯಾಕೆಂದರೆ ಹೆಚ್ಚಾಗಿ ಹಳ್ಳಿ ಕಡೆ ಕಲ್ಲು ಮುಳ್ಳುಗಳ ಮೇಲೆ ನಡೆಯುವುದು, ಬರಿಗಾಲಿನಲ್ಲಿ ನಡೆದಾಡುವುದು ಮಾಡುತ್ತಾರೆ ಹೀಗಾಗಿ ಇನ್ನಿತರ ಕಾರಣಗಳಿಂದಾಗಿ ಅವರಿಗೆ ಅಂಗಾಲುಗಳಲ್ಲಿ ಹಾನಿಗಳಾಗುತ್ತವೆ.
ಇದರಿಂದ ಆಗುವ ನೋ’ವು ಅಷ್ಟಿಷ್ಟಲ್ಲ. ಕಾಲಿನಲ್ಲಿ ಸಣ್ಣ ಸಣ್ಣ ಗುಳ್ಳೆಗಳ ರೀತಿ ಆಗಿ ಗಟ್ಟಿಯಾಗಿರುತ್ತವೆ. ಅವು ಹೆಜ್ಜೆ ಊರಲು ಆಗದಂತೆ ಮಾಡಿಬಿಡುತ್ತವೆ, ವಿಪರೀತವಾದ ನೋ’ವಿ’ನ ಜೊತೆಗೆ ನಡೆಯಲು ಕೂಡ ಆಗುವುದಿಲ್ಲ. ಅವರು ನೆಲದ ಮೇಲೆ ಪಾದ ಊರಲು ಆಗದೆ ಕ’ಷ್ಟಪಡುತ್ತಾರೆ ಮತ್ತು ಒಂದು ಬಾರಿ ಆಣಿ ಆದರೆ ಪದೇ ಪದೇ ಇದು ಬರುತ್ತಲೇ ಇರುತ್ತದೆ.
ಸಕ್ಕರೆ ಕಾಯಿಲೆ ಇದ್ದವರು ಈ ಬಗ್ಗೆ ಬಹಳ ಎಚ್ಚರದಲ್ಲಿ ಇರಬೇಕು ಈ ರೀತಿ ಸಮಸ್ಯೆ ಇದ್ದವರಿಗೆ ಪರಿಹಾರಕ್ಕಾಗಿ ಕೆಲವು ಸುಲಭ ಟಿಪ್ಸ್ ಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ, ಇವುಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ.
* ಸೈಂದವ ಲವಣ, ಕಾಳು ಮೆಣಸು ಇವುಗಳನ್ನು ನಿಂಬೆ ರಸದ ಜೊತೆಗೆ ಅರೆದು ಪ್ರತಿನಿತ್ಯವು ಸೇವಿಸುವುದರಿಂದ ಮತ್ತು ಇವುಗಳನ್ನೇ ಕಾಲಿನ ಆಣಿಗಳಿಗೆ ಹಚ್ಚುವುದರಿಂದ ಬಹಳ ಬೇಗ ಈ ಸಮಸ್ಯೆ ಗುಣವಾಗುತ್ತದೆ.
* ಈರುಳ್ಳಿ ರಸದಲ್ಲಿ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಮತ್ತು ಇವುಗಳನ್ನು ಕೂಡ ಆಣಿಗೆ ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ ಹಾಗೂ ಆಣೆ ಗುಣವಾಗುತ್ತದೆ.
* ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ, ಆಣಿಗಳಿಗೆ ಕಟ್ಟುವುದರಿಂದ ಕೂಡ ಆಣಿಗಳು ಗುಣವಾಗುತ್ತವೆ. ದಿನಕ್ಕೆ ಎರಡು ಬಾರಿ ಈ ಪ್ರಯೋಗವನ್ನು ಮಾಡಿದರೆ ಬಹಳ ಬೇಗ ಉತ್ತಮ ಫಲಿತಾಂಶ ಸಿಗುತ್ತದೆ.
* ಆಣಿಯಾಗಿರುವ ಕಾಲನ್ನು ಚೆನ್ನಾಗಿ ತೊಳೆದು ಗೋಡಂಬಿ ಬೀಜದ ಸಿಪ್ಪೆಯನ್ನು ಬೆಂಕಿಯಲ್ಲಿ ಸುಟ್ಟು ಬರುವ ಎಣ್ಣೆಯನ್ನು ಆಣಿಗೆ ಹಚ್ಚಿದರೆ ಆಣಿಯ ನೋ’ವು ಕಡಿಮೆ ಆಗುತ್ತದೆ ಮತ್ತು ಆಣಿಯು ಬೇಗ ವಾಸಿಯಾಗುತ್ತದೆ.
* ಎಕ್ಕದ ಹಾಲಿಗೆ ಸುಣ್ಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆಣಿ ಆಗಿರುವ ಭಾಗಕ್ಕೆ ಹಚ್ಚುವುದರಿಂದ ಕೂಡ ಆಣಿ ಗುಣವಾಗುತ್ತದೆ.
* ಆಣಿ ಆಗಬಾರದು ಎಂದು ಎಚ್ಚರಿಕೆವಹಿಸುವವರು ಕಾಲಿಗೆ ಮುಳ್ಳು ಅಥವಾ ಗಾಜು ಚುಚ್ಚಿದಾಗ ಬಹಳ ಬೇಗ ಇದನ್ನು ತೆಗಿಯಬೇಕು.
* ಯಾವಾಗಲೂ ಚಪ್ಪಲಿ ಹಾಗೂ ಶೂಗಳನ್ನು ಧರಿಸಿ ಓಡಾಡುವುದು ಬಹಳ ಉತ್ತಮ. ಆದರೆ ಆಣಿ ಆಗಿರುವವರು ಹಾಕುವ ಚಪ್ಪಲಿ ಶೂ ಗಳನ್ನು ಮತ್ತೊಬ್ಬರು ಬಳಸಬಾರದು.
* ಪಾದಗಳ ಆರೈಕೆ ಮಾಡದೆ ಇರುವುದು ಬಹಳ ಅವುಗಳನ್ನು ನಿರ್ಲಕ್ಷಿಸುವುದು ಕೂಡ ಆಣಿ ಬರುವುದಕ್ಕೆ ಕಾರಣ ಆಗಿರುತ್ತದೆ. ಈ ರೀತಿ ಮಾಡದೆ ಪಾದಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಾರದಲ್ಲಿ ಒಂದು ದಿನ ಹತ್ತು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಪಾದ ಇಟ್ಟು ನೀಟಾಗಿ ವಾಶ್ ಮಾಡಬೇಕು.
* ಕಾಲಿನ ಮೇಲೆ ಅತಿಯಾದ ಪ್ರೆಶರ್ ಬಿಡುವುದು ಕೂಡ ಆಣಿ ಆಗುವುದಕ್ಕೆ ಕಾರಣ ಹಾಗಾಗಿ ಬಹಳ ಬಿಗಿಯಾದ ಒರಟಾದ ಪಾದರಕ್ಷೆಗಳನ್ನು ಧರಿಸಬೇಡಿ. ಹಾಗೆಯೇ ಬಹಳ ಸಡಿಲವಾದ ಪಾದರಕ್ಷೆಗಳನ್ನು ಧರಿಸಬೇಡಿ.
* ಪ್ರತಿದಿನ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಕಾಲುಗಳನ್ನು ತೊಳೆದು ಅವುಗಳನ್ನು ಒರೆಸಿ ಎಳ್ಳೆಣ್ಣೆ ಅಥವಾ ಹರಳೆಣ್ಣೆ ಅಥವಾ ಸಾಸಿವೆ ಎಣ್ಣೆ ಅಥವಾ ಮಾಯಿಶ್ಚರೈಸರ್ ಇಂದ ಅಂಗಾಲುಗಳನ್ನು ತಿಕ್ಕಿ ಸಾಕ್ಸ್ ಧರಿಸಿ ಮಲಗಿಕೊಳ್ಳಿ. ಇದರಿಂದ ಚೆನ್ನಾಗಿ ನಿದ್ದೆ ಕೂಡ ಬರುತ್ತದೆ ಹಾಗೆಯೇ ಪಾದದ ಆರೋಗ್ಯ ಸಂರಕ್ಷಣೆ ಕೂಡ ಆಗುತ್ತದೆ.
https://youtu.be/-EibLcQNuao?si=05M69m7l0k7GdtGs