
ಅಸಿಡಿಟಿ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ. ಹೌದು ಬಹಳ ಹಿಂದಿನ ದಿನಗಳಲ್ಲಿ ನಾವು ಯಾವುದೇ ಆಹಾರ ವನ್ನು ಸೇವನೆ ಮಾಡಿದರು ಅದರಿಂದ ನಮಗೆ ಉತ್ತಮವಾದಂತಹ ಪೌಷ್ಟಿಕಾಂಶಗಳು ಪ್ರತಿಯೊಂದು ಕೂಡ ಸಿಗುತ್ತಿತ್ತು.
ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಆಹಾರ ಪದಾರ್ಥದಲ್ಲಿಯೂ ಕೂಡ ನಮಗೆ ಅನಾರೋಗ್ಯವನ್ನು ಹೆಚ್ಚಿಸುವಂತಹ ವಿಷಕಾರಿ ಅಂಶಗಳೇ ಇರುವುದ ರಿಂದ ಅಸಿಡಿಟಿ ಸಮಸ್ಯೆ ಪ್ರತಿಯೊಬ್ಬರಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆ ಬರಬಾರದು ಎಂದರೆ ಅತಿ ಹೆಚ್ಚು ಉತ್ತಮ ವಾದಂತಹ ತರಕಾರಿಗಳು ಸೊಪ್ಪು ಮೊಳಕೆ ಕಟ್ಟಿದ ಕಾಳುಗಳು ಹೀಗೆ ಇಂತಹ ಪೌಷ್ಟಿಕಾಂಶ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಅಸಿಡಿಟಿ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಲು ಬಹಳ ಪ್ರಮುಖವಾದಂತಹ ಕಾರಣಗಳು ಏನು ಎಂದು ನೋಡುವುದಾದರೆ.
ಸಮಯಕ್ಕೆ ನಾವು ಸರಿಯಾಗಿ ಆಹಾರವನ್ನು ಸೇವನೆ ಮಾಡದೆ ಇರುವು ದರಿಂದ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೌದು ನಾವು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡಲಿಲ್ಲ ಎಂದರೆ ನಮ್ಮ ದೇಹ ದಲ್ಲಿ ಅಸಿಡಿಕ್ ಅಂಶ ಉತ್ಪತ್ತಿಯಾಗುತ್ತದೆ.
ಇದರಿಂದ ನಮಗೆ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡುವುದು. ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ದೀರ್ಘಕಾಲದವರೆಗೆ ಹಸಿದುಕೊಂಡಿದ್ದರೆ ಅಸಿಡಿಟಿ ಜಾಸ್ತಿಯಾಗುತ್ತದೆ ಕರಿದ ತಿಂಡಿಗಳು, ಎಣ್ಣೆ ಪದಾರ್ಥ ಮತ್ತು ಅತಿ ಖಾರದ ತಿನಿಸುಗಳ ಸೇವೆನೆಯೂ ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ನಿಂಬೆಹಣ್ಣು, ಹುಳಿ ಮೊಸರು ಸೇವನೆ ಯಿಂದ ಕೆಲವರಿಗೆ ಈ ಸಮಸ್ಯೆಯಾಗಬಹುದು ಒತ್ತಡ, ದೈಹಿಕ ವ್ಯಾಯಾಮದ ಕೊರತೆ ಕೂಡ ಅಸಿಡಿಟಿ ಹೆಚ್ಚಾದಾಗ ಮೈಗ್ರೇನ್ ಅಥವಾ ತಲೆನೋವು ಕಾಣಿಸಿಕೊಳ್ಳುತ್ತದೆ. ಅಸಿಡಿಟಿ ಜಾಸ್ತಿ ಯಾದಾಗಲೆಲ್ಲ ಮಾತ್ರೆ ಅಥವಾ ಔಷಧ ಸೇವನೆ ಸೂಕ್ತವಲ್ಲ. ಇದಕ್ಕೆ ಶಾಶ್ವತ ಪರಿಹಾರ ಮನೆಮದ್ದು ಹಾಗಾದರೆ ಆ ಮನೆಮದ್ದುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
* ಒಂದು ಚಮಚ ಓಂ ಕಾಳನ್ನು ಮೂರು ಚಮಚ ನಿಂಬೆ ರಸದಲ್ಲಿ ನೆನೆಸಿ. ಅದಕ್ಕೆ ಬ್ಲಾಕ್ ಸಾಲ್ಟ್ ಸೇರಿಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದಲೂ ಉದರ ಬಾಧೆ ಕಡಿಮೆಯಾಗುತ್ತದೆ.
* ಓಂ ಕಾಳು ಹೊಟ್ಟೆಯಲ್ಲಿರುವ ಗ್ಯಾಸ್ ಅನ್ನು ನಿವಾರಣೆ ಮಾಡುತ್ತದೆ ಹಾಗಾಗಿ ಸ್ವಲ್ಪ ಓಂ ಕಾಳಿಗೆ ಚಿಟಿಕೆ ಬ್ಲಾಕ್ ಸಾಲ್ಟ್ ಸೇರಿಸಿ ಜಗಿದು ನುಂಗಿದರೂ ಅಸಿಡಿಟಿ ಕಡಿಮೆಯಾಗುತ್ತದೆ.
* 3-4 ಚಮಚ ಓಂ ಕಾಳನ್ನು ಅರ್ಧ ಲೀಟರ್ ನೀರಿಗೆ ಸೇರಿಸಿ ಕಾಲು ಲೀಟರ್ ಆಗುವವರೆಗೂ ಕುದಿಸಿ ನಂತರ ಕುಡಿಯಬೇಕು.
* ಉಗುರು ಬೆಚ್ಚಗಿನ ನೀರಿಗೆ ಓಂ ಕಾಳನ್ನು ಸೇರಿಸಿ 7-10 ದಿನಗಳೂ ತಪ್ಪದೆ ಸೇವಿಸುತ್ತಾ ಬಂದರೆ ಅಸಿಡಿಟಿ ಬಹುಬೇಗ ಕಡಿಮೆಯಾಗುತ್ತದೆ.
* ಇದಲ್ಲದೆ ಓಂ ಕಾಳು ಜೀರಿಗೆ ಹಾಗೂ ಒಣ ಶುಂಠಿ ಎಲ್ಲವನ್ನೂ ಸೇರಿಸಿ ಪುಟ ಮಾಡಿ ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಚಮಚ ಪುಡಿಯನ್ನು ಸೇರಿಸಿ 5 – 10 ನಿಮಿಷ ಬಿಟ್ಟು ನಂತರ ಕುಡಿಯಬೇಕು. ಈ ರೀತಿ ವಾರಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಹಾಗೂ ಆಸಿಡಿಟಿ ಕಡಿಮೆಯಾಗುತ್ತದೆ.
* ಓಂ ಕಾಳನ್ನು ಅತಿಯಾಗಿಯೂ ಉಪಯೋಗಿಸಬಾರದು. ಔಷಧೀಯ ರೂಪದಲ್ಲಿ ದಿನಕ್ಕೆ ಅರ್ಧ ಚಮಚದಷ್ಟು ಉಪಯೋಗಿಸಬೇಕು.
* ಒಂದು ಗ್ಲಾಸ್ ನೀರಿಗೆ ಒಂದು ಚಮಚ ಸೋಂಪನ್ನು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಈ ನೀರನ್ನು ಸೇವಿಸುವುದರಿಂದ ಕೂಡ ಅಸಿಡಿಟಿ ಕಡಿಮೆಯಾಗುತ್ತದೆ.
* ಹಸಿವು ಇರುವಾಗ ಹೆಚ್ಚು ಉಪ್ಪು, ಹುಳಿ ಅಥವಾ ಖಾರದ ಪದಾರ್ಥ ಗಳನ್ನು ಸೇವನೆ ಮಾಡಬಾರದು. ಅಲ್ಲದೆ ಟೀ, ಕಾಫಿ ಹೆಚ್ಚು ಸೇವನೆ ಮಾಡಬಾರದು.
* ಬಿಸಿ ನೀರು ಕುಡಿಯುವುದರಿಂದ ಆಸಿಡಿಟಿ ಕಡಿಮೆ ಆಗುತ್ತದೆ. ಮಲಗುವ ಮುನ್ನ ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.