ಹೊಟ್ಟೆಯ ಬೊಜ್ಜನ್ನು ಕರಗಿಸಲು ವ್ಯಾಯಾಮ ಮಾಡಬೇಕು, ಡಯಟ್ ಮಾಡಬೇಕು ನಿಜ. ಆದರೆ ಹೊಟ್ಟೆ ಬೊಜ್ಜು ಕರಗಿಸಲು ನೀವು ಸ್ನಾಕ್ಸ್ ತಿನ್ನಬೇಕು ಎಂದರೆ ಇದು ಆಶ್ಚರ್ಯ ಎನಿಸಬಹುದು ಮತ್ತು ಕೆಲವರಿಗೆ ಇದು ಸತ್ಯಕ್ಕೆ ದೂರ ಎನಿಸಬಹುದು ಆದರೆ ಇದರಲ್ಲಿರುವ ವಿಷಯವನ್ನು ಪೂರ್ತಿ ನೋಡಿ.
ನಮಗೆ ಹಸಿವೆ ಕಡಿಮೆ ಮಾಡುವಂತಹ ಉತ್ತಮ ಪೋಷಕಾಂಶಗಳು ಹೊಟ್ಟೆ ತುಂಬುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅದು ಕೂಡ ಒಂದು ರೀತಿಯ ಡಯಟ್ ಆಗುತ್ತದೆ. ಹಾಗಾಗಿ ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ ಪ್ರೊಟೀನ್ ಮತ್ತು ಫೈಬರ್ ವಿಟಮಿನ್ಸ್ ಮುಂತಾದ ದೇಹಕ್ಕೆ ಪೂರಕವಾದ ಪೋಷಕಾಂಶಗಳು ಹೇರಳವಾಗಿರುವ.
ಹಾಗೂ ಈಗಾಗಲೇ ದೇಹದಲ್ಲಿ ಶೇಖರಣೆ ಆಗಿರುವ ಗ್ಲುಕೋಸ್ ನಂತಹ ಅಂಶಗಳನ್ನು ಕಡಿಮೆ ಮಾಡುವ ಕೆಲಸ ಆಹಾರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನಾವು ಹೇಳುವ ವಿಧಾನದಲ್ಲಿ ಅವುಗಳನ್ನು ಸೇವಿಸಿ ತೂಕ ಇಳಿಸಿಕೊಳ್ಳಿ.
1. ಸ್ಪ್ರೌಟ್ ಚಾಟ್ / ಸಲಾಡ್ :- ಎಲ್ಲ ರೀತಿಯ ಕಾಳುಗಳನ್ನು ಮೊಳಕೆ ಕಟ್ಟಿ ಅವುಗಳನ್ನು ಕೋಸಂಬರಿ ರೀತಿ ಮಾಡಿಕೊಂಡು ತಿನ್ನಬಹುದು ಅಥವಾ ಚಾಟ್ ಮಾಡಿಕೊಂಡು ತಿನ್ನಬಹುದು. ವಿಟಮಿನ್ಸ್ ಮಿನರಲ್ಸ್ ನ್ಯೂಟ್ರಿಯೆಂಟ್ಸ್ ಗಳು ಇವುಗಳಲ್ಲಿ ಯಥೇಚ್ಛವಾಗಿವೆ, ಇವು ದೇಹಕ್ಕೆ ಪೂರಕವಾಗಿವೆ.
2. ಮಖಾನಾ ಸೀಡ್ಸ್ :- ಆಂಟಿ ಇನ್ಫ್ಲಾಮೆಂಟರಿ ಕೊಡಗು ಈ ಮಕರ ಇವುಗಳನ್ನು ತಾವರೆ ಹೂವಿನ ಬೀಜ ಎಂದು ಕೂಡ ಕರೆಯುತ್ತಾರೆ ಇದರ ಸೇವನೆಯಿಂದ ವಯಸ್ಸಾಗುವಿಕೆಯನ್ನು ನಿಯಂತ್ರಿಸಬಹುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಮತ್ತು ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಹೇರಳವಾಗಿರುತ್ತದೆ ಇದರಿಂದ ದೇಹದಲ್ಲಿರುವ ಉರಿಯುತಗಳು ಕಡಿಮೆ ಆಗುತ್ತದೆ ಇದು ಡಯಟ್ ಮಾಡುವವರಿಗೆ ಪೂರಕ ಆಹಾರ
* ಮಸಾಲ ಬೇಲ್ ಪುರಿ:- ಕ್ಯಾರೆಟ್, ಟೊಮೆಟೊ, ಸೌತೆಕಾಯಿ ಕಡಲೆಕಾಯಿ ಬೀಜ ಹಾಕಿ ಮಾಡಿದ ಈ ಬೇಲ್ ಪುರಿ ತಿನ್ನುವುದರಿಂದ ದೇಹಕ್ಕೆ ತರಕಾರಿಗಳು ಇರುವ ಪೋಷಕಾಂಶ ಸೇರುತ್ತದೆ ಮತ್ತು ಬೇಲ್ ಪುರಿ ಯು ಹಸಿವನ್ನು ಕಡಿಮೆ ಮಾಡುತ್ತದೆ ಇದರಿಂದ ಪದೇ ಪದೇ ತಿನ್ನಬೇಕು ಇಂದು ಅನಿಸುವುದು ಕಡಿಮೆ ಆಗುತ್ತದೆ
* ಉಪ್ಪಿಟ್ಟು:- ತರಕಾರಿಗಳನ್ನು ಹಾಕಿ ಮಾಡಿದ ಉಪ್ಪಿಟ್ಟಿನಲ್ಲೂ ಕೂಡ ಹೇರಳವಾದ ಪೋಷಕಾಂಶಗಳು ದೇಹ ಸೇರುತ್ತದೆ ಮತ್ತು ಉಪ್ಪಿಟ್ಟನ್ನು ತಿಂದ ಮೇಲೆ ಪದೇ ಪದೇ ಏನಾದರೂ ತಿನ್ನಬೇಕು ಎನ್ನುವುದು ಕಡಿಮೆ ಆಗುತ್ತದೆ ಸ್ವಲ್ಪ ಉಪ್ಪಿಟ್ಟು ತಿಂದರು ಹೊಟ್ಟೆ ತುಂಬುತ್ತದೆ.
* ಕಾಕ್ರ:- ಕಾಕ್ರ ಎನ್ನುವುದು ಚಪಾತಿ ರೀತಿ ಡ್ರೈ ಆಗಿ ಮಾಡಿದ ಒಂದು ಸ್ನಾಕ್ಸ್ ಆಗಿದೆ ಚಿಪ್ಸ್ ತಿನ್ನಬೇಕು ಎಂದು ಅನಿಸುವಾಗಲೆಲ್ಲ ಅದರ ಬದಲು ಈ ಕಾಕ್ರವನ್ನು ನಾವು ಬಳಸಬಹುದು.
* ಸಮೋಸ:- ಸಮೋಸ ಎಂದ ತಕ್ಷಣ ಎಣ್ಣೆಯಲ್ಲಿ ಕರಿದಿರುವುದು ಎಂದುಕೊಳ್ಳುತ್ತಾರೆ. ಆದರೆ ಆ ಸಮೋಸ ಅಲ್ಲ, ತರಕಾರಿಗಳನ್ನು ಹಾಕಿ ಕವರ್ ಮಾಡಿ ಎಣ್ಣೆಯಲ್ಲಿ ಬೇಯಿಸುವುದರ ಬದಲು ಓವೆನ್ ಅಥವಾ ಆವಿಯಲ್ಲಿ ಬೇಯಿಸಿದರೆ ಅದರಲ್ಲಿರುವ ಕ್ಯಾಲೋರಿ ಹಾಗೂ ಫ್ಯಾಟ್ ಅಂಶ ಕಡಿಮೆ ಆಗುತ್ತದೆ ಇವುಗಳನ್ನು ತಿನ್ನಬಹುದು.
* ಫ್ಯಾಟ್ ಕಡಿಮೆ ಇರುವ ಮೊಸರು ಮಜ್ಜಿಗೆ:- ಸಾಮಾನ್ಯವಾಗಿ ನಾವು ಡಯಟ್ ನಲ್ಲಿ ಇರುವಾಗಲೇ ಹೆಚ್ಚು ಹಸಿವಾಗುತ್ತದೆ. ಆಗ ಏನಾದರೂ ತಿನ್ನಬೇಕು ಅನಿಸುತ್ತದೆ ಆ ಸಮಯದಲ್ಲಿ ಮಜ್ಜಿಗೆ ಕುಡಿಯಬೇಕು ಅದರಲ್ಲೂ ಅಗಸೆ ಬೀಜ ಹಾಕಿ ಮಜ್ಜಿಗೆ ಕುಡಿದರೆ ಬಹಳ ಒಳ್ಳೆಯದು ಇದು ಪ್ರೊ ಬಯೋಟೆಕ್ ಕೂಡ.
ಈ ಮಜ್ಜಿಗೆಯನ್ನು ಕೆನೆ ತೆಗೆದ ಹಾಲಿಗೆ ಹೆಪ್ಪು ಹಾಕಿ ಮಾಡಿದರೆ ಫ್ಯಾಟ್ ಇನ್ನೂ ಕಡಿಮೆ ಇರುತ್ತದೆ ಅದು ಡಯಟ್ ಗೆ ಇನ್ನೂ ಪೂರಕ. ಇದೇ ರೀತಿಯಾಗಿ 20 ತೂಕ ಕಡಿಮೆ ಮಾಡುವ ಸ್ನಾಕ್ಸ್ ಗಳ ಪಟ್ಟಿ ಇದೆ ಅದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.