ನಾವು ತಿಂದ ಆಹಾರ ಜೀರ್ಣವಾಗಿ ಅದರಲ್ಲಿರುವ ಸತ್ವಗಳು ದೇಹಕ್ಕೆ ಸೇರಬೇಕು ಎಂದರೆ ನಮ್ಮ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ (Hcl) ಇರಲೇಬೇಕು. ಆಹಾರವನ್ನು ಕರಗಿಸುವುದಕ್ಕೆ ಮತ್ತು ಅದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಅನುಕೂಲಕರವಾಗಿರುವ ಈ ಹೈಡ್ರೋಕ್ಲೋರಿಕ್ ಆಸಿಡ್ ನ್ನು ಪಿಹೆಚ್ ಲೆವೆಲ್ (PH level) ಎಂದು ಕೂಡ ಕರೆಯುತ್ತಾರೆ.
ಇದು ಕಡಿಮೆ ಆದರೆ ಹೈಪೊ ಅಸಿಡಿಟಿ (Hypo Acidity) ಹೆಚ್ಚಾದಾಗ ಹೈಪರ್ ಅಸಿಡಿಟಿ (Hyper Acidity) ಆಗುತ್ತದೆ ಹೈಪರ್ ಅಸಿಡಿಟಿ ಆದವರಿಗೆ ಊಟ ಮಾಡುವುದು ತಡವಾದರೂ ಮತ್ತು ಊಟ ಆದಮೇಲೂ ಸ್ವಲ್ಪ ಹೊತ್ತು ಹೊಟ್ಟೆ ನೋವು ಇರುತ್ತದೆ. ಎದೆ ಉರಿ, ಹುಳಿತೇಗು, ಎದೆ ನೋವು, ಕೆಲವೊಮ್ಮೆ ಮೈ ಕೈ ನೋವು ಕೂಡ ಕಾಣಿಸಿಕೊಳ್ಳುತ್ತದೆ.
ಎಷ್ಟೋ ಜನರಿಗೆ ಇದು ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ ಆದರೆ ಅವರಿಗೆ ಇದೇ ಕಾರಣ ಎಂದು ಗೊತ್ತಿರುವುದಿಲ್ಲ ಮೈಗ್ರೇನ್ ಗೂ ಕೂಡ ಹೈಪರ್ ಅಸಿಡಿಟಿಯೇ ಕಾರಣವಾಗಿರುತ್ತದೆ. ಈ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಹೈಪರ್ ಅಸಿಡಿಟಿ ಕಾರಣದಿಂದಾಗಿ ಬೇರೆ ರೀತಿಯ ಸಮಸ್ಯೆಗಳು ಕಾಣಿಸಿಕೊಂಡು ಆತನ ಆರೋಗ್ಯವನ್ನು ಹಾಳು ಮಾಡುತ್ತವೆ. ಒಂದು ವೇಳೆ ಇದನ್ನು ತೀರ ನಿರ್ಲಕ್ಷ ಮಾಡಿದಾಗ ಅಲ್ಸರ್ ಆಗಿ ಕ್ಯಾನ್ಸರ್ ಗೆ (Ulser to Cancer) ತಿರುಗುವ ಸಾಧ್ಯತೆಗಳು ಕೂಡ ಇರುತ್ತದೆ.
ಸಾಮಾನ್ಯವಾಗಿ ಜನರು ಈ ರೀತಿ ಅಸಿಡಿಟಿ ಆಗುವುದಕ್ಕೆ ಕಾರಣ ತಡವಾಗಿ ತಿನ್ನುವುದು ಹಾಗೂ ಆಹಾರ ಪದ್ಧತಿ ಸರಿ ಇಲ್ಲದೆ ಇರುವುದು ಜೀವನ ಶೈಲಿ ಸರಿ ಇಲ್ಲದೆ ಇರುವುದು ಎಂದುಕೊಂಡಿದ್ದಾರೆ. ಇದು ಕೂಡ ಕಾರಣ ಎನ್ನುವುದರ ಜೊತೆಗೆ ಸರಿಯಾದ ಕಾರಣ ಏನೆಂದರೆ ಜಠರಕ್ಕೆ ಆಗುವ H pylori infection. ಎಂಟೋಸ್ಕೊಪಿಯಾ ಮಾಡಿಸಿದವರಲ್ಲಿ ಏರೋಶನ್ ಅಥವಾ ಎಚ್ ಪೈಲೋರಿ ಇನ್ಫೆಕ್ಷನ್ ಎಂದು ಬರೆದಿರುವುದನ್ನು ನಾವು ಕಾಣಬಹುದು.
ಇದೊಂದು ಬ್ಯಾಕ್ಟೀರಿಯಾ ವಾಗಿದ್ದು ಜಠರದ antrum ಭಾಗಕ್ಕೆ ಇದು ಇನ್ಫೆಕ್ಷನ್ ಮಾಡುತ್ತದೆ. ಅಲ್ಲಿಂದ ಪ್ರೊಡ್ಯೂಸ್ ಆಗುವ ಗ್ಯಾಸ್ಟ್ರಿನ್ (Gastrin) ಎನ್ನುವ ಹಾರ್ಮೋನ್ ಹೆಚ್ಚಾಗುತ್ತದೆ, ಅದು ಹೈಡ್ರೋಕ್ಲೋರಿಕ್ ಆಸಿಡ್ ಹೆಚ್ಚು ಉತ್ಪಾದನೆ ಆಗುವಂತೆ ಪ್ರಚೋದನೆ ನೀಡುತ್ತದೆ ಹಾಗಾಗಿ ನಮಗೆ ಹೈಪರ್ ಅಸಿಡಿಟಿ ಆಗುತ್ತದೆ.
ಇದಕ್ಕೆ ಚಿಕಿತ್ಸೆಗಳಿವೆ ಅಸಿಡಿಟಿ ಕಂಟ್ರೋಲ್ ಮಾಡುವ ಕಿಟ್ ಗಳು ಕೂಡ ಇದೆ. ಆದರೆ ಇವುಗಳನ್ನು ಬಳಸಿದಾಗ ಅಥವಾ ಆಂಟಿಬಯೋಟಿಕ್ ಬಳಸಿದಾಗ ದೇಹದ ಎಲ್ಲಾ ಬ್ಯಾಕ್ಟೀರಿಯಗಳಿಗೂ ಸಮಸ್ಯೆ ಆಗಬಹುದು ಹಾಗಾಗಿ ನ್ಯಾಚುರಲ್ ಆಗಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಉತ್ತಮ ಅದಕ್ಕಾಗಿ ಕೆಲ ಅದ್ಬುತ ಮನೆಮದ್ದುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಈ ರೀತಿ ಹೈಪರ್ ಅಸಿಡಿಟಿ ಇರುವವರು ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸುವುದರಿಂದ ಕಂಟ್ರೋಲ್ ಆಗುತ್ತದೆ.
* ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ ಊಟ ಆದ ಮೇಲೆ ದಿನಕ್ಕೆ ಒಮ್ಮೆ ಆದರೂ ಒಂದು ಚಮಚ ಜೇಷ್ಠ ಮಧು ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ 100ml ನೀರು 50ml ಆಗುವವರೆಗೂ ಕೂಡ ಕುದಿಸಿ ಆರಿಸಿ ಕುಡಿಯಬೇಕು.
* ಊಟ ಆದ ಮೇಲೆ ಶುಂಠಿ ರಸ ಸೇವಿಸುವುದರಿಂದ ಕೂಡ ಹೈಪರ್ ಅಸಿಡಿಟಿ ಪ್ರಾಬ್ಲಮ್ ಕಂಟ್ರೋಲ್ ಗೆ ಬರುತ್ತದೆ
* ರಾತ್ರಿ ಮಾಡಿದ ಅನ್ನ ಮತ್ತು ಮೊಸರು ಮುಂತಾದ ಪ್ರೊ ಬಯೋಟೆಕ್ ಗಳನ್ನು ಸೇವಿಸದಾಗ ಕೂಡ ಈ ಸಮಸ್ಯೆ ಸರಿ ಹೋಗುತ್ತದೆ
* ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳ ರಸ ಸೇವಿಸುವುದರಿಂದ ಕೂಡ ಸಮಸ್ಯೆ ಸರಿ ಹೋಗುತ್ತದೆ.
* ಸರಿಯಾದ ಸಮಯಕ್ಕೆ ಊಟ ಮಾಡುವುದು ಕೂಡ ಮುಖ್ಯ ಯಾಕೆಂದರೆ ದೇಹದಲ್ಲಿ ಬಯಾಲಜಿಕಲ್ ಕ್ಲಾಕ್ ರೆಡಿ ಆಗುತ್ತದೆ ಆ ಸಮಯಕ್ಕೆ ನೀವು ಊಟ ಕೊಡದೆ ಇದ್ದಾಗ ಹೈಪರ್ ಅಸಿಡಿಟಿ ಉಂಟಾಗುತ್ತದೆ
* ಎಲ್ಲ ರೀತಿಯ ಜಂಕ್ ಫುಡ್ ಗಳು ಸಕ್ಕರೆ ಅಂಶ ಹೆಚ್ಚಿರುವ ಸಾಫ್ಟ್ ಡ್ರಿಂಕ್ ಗಳು. ಮೈದಾ ಪದಾರ್ಥಗಳು ಇವುಗಳಿಂದ ದೂರ ಇರಬೇಕು.