ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಕಛೇರಿಗಳಲ್ಲಿ ಕಾಈಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಭರ್ತಿಗಾಗಿ ಅಧಿಕೃತವಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ಇದಕ್ಕೆ ದೇಶದಾದ್ಯಂತ ಇರುವ ಮಹಿಳಾ ಮತ್ತು ಪುರುಷ ಅರ್ಹ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಉದ್ಯೋಗ ಇದಾಗಿದ್ದು, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಇದು ಸದಾವಕಾಶವಾಗಿದೆ. ಯಾಕೆಂದರೆ ಈ ಬಾರಿ ಒಟ್ಟು 2600 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆದ್ದರಿಂದ ಅನೇಕರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಹುದ್ದೆಗಳ ಕುರಿತ ಪ್ರಮುಖ ಅಂಶಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಪೂರ್ತಿ ಮಾಹಿತಿ ತಿಳಿದುಕೊಳ್ಳಬಹುದು.
ಇಲಾಖೆ :- ಕಾರ್ಮಿಕ ಸಚಿವಾಲಯ
ಸಂಸ್ಥೆ :- ನೌಕರರ ಭವಿಷ್ಯ ನಿಧಿ
ಹುದ್ದೆ :- ಸೋಷಿಯಲ್ ಸೆಕ್ಯುರಿಟಿ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ:- 2674
ಹುದ್ದೆಗಳ ವಿವರ :-
● ಪರಿಶಿಷ್ಟ ಜಾತಿ – 359
● ಪರಿಶಿಷ್ಟ ಪಂಗಡ – 273
● ಇತರೆ ಹಿಂದುಳಿದ ವರ್ಗ – 514
● ಆರ್ಥಿಕವಾಗಿ ಹಿಂದುಳಿದವರು – 529
● ಸಾಮಾನ್ಯ ವರ್ಗ – 999
ವೇತನ ಶ್ರೇಣಿ :-
● 29,200 – 92,300 ಮಾಸಿಕವಾಗಿ…
● DA + HRA ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ಸಿಗಲಿದೆ.
ಶೈಕ್ಷಣಿಕ ವಿದ್ಯಾರ್ಹತೆ :-
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಇಂಗ್ಲೀಷ್ ಅಥವಾ ಹಿಂದಿ ಭಾಷಾ ಕಂಪ್ಯೂಟರ್ ಟೈಪಿಂಗ್ ಪ್ರಾವಿಣ್ಯತೆ ಹೊಂದಿರಬೇಕು.
ಅರ್ಜಿ ಶುಲ್ಕ :-
● ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ 700ರೂ.
● ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ :-
● ಇಂಟರ್ನೆಟ್ ಬ್ಯಾಂಕಿಂಗ್
● ಕ್ರೆಡಿಟ್ ಕಾರ್ಡ್
● ಡೆಬಿಟ್ ಕಾರ್ಡ್
ವಯೋಮಿತಿ :-
● ಕನಿಷ್ಟ 18 ವರ್ಷಗಳು ಪೂರ್ಣಗೊಂಡಿರಬೇಕು.
● ಗರಿಷ್ಠ 27 ವರ್ಷಗಳು ಮೀರಿರಬಾರದು.
ವಯೋಮಿತಿ ಸಡಿಲಿಕೆ :-
● SC,ST ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● PWD ಅಭ್ಯರ್ಥಿಗಳಿಗೆ 10 ವರ್ಷಗಳು
ಆಯ್ಕೆ ವಿಧಾನ:-
● ಸ್ಪರ್ಧಾತ್ಮಕ ಪರೀಕ್ಷೆ
● ಕಂಪ್ಯೂಟರ್ ಟೈಪಿಂಗ್ ಕೌಶಲ್ಯ ಪರೀಕ್ಷೆ
ವೆಬ್ಸೈಟ್ ವಿಳಾಸ :-
● www.epfoindia.gov.in
ಅರ್ಜಿ ಸಲ್ಲಿಸುವ ವಿಧಾನ:-
● ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
● EPFO ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು, ಅರ್ಜಿ ಫಾರಂ ಭರ್ತಿ ಮಾಡಿ, ಅಧಿಸೂಚನೆಯಲ್ಲಿ ಕೇಳಲಾದ ಪ್ರಮುಖ ದಾಖಲೆಗಳಾದ ಶೈಕ್ಷಣಿಕ ವಿದ್ಯಾರ್ಥಿ ಮತ್ತು ವಯೋಮಿತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಶುಲ್ಕ ಸಹ ಪಾವತಿ ಮಾಡಿ ರಶೀದಿ ತೆಗೆದುಕೊಳ್ಳಬೇಕು
● ಕೊನೆಯಲ್ಲಿ ಅರ್ಜಿ ಸಲ್ಲಿಕೆ ಕಂಪ್ಲೀಟ್ ಆದ ಮೇಲೆ ಭವಿಷ್ಯದ ಅನುಕೂಲಕ್ಕಾಗಿ ಅದನ್ನ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು. ಅಥವಾ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಇತ್ಯಾದಿಗಳನ್ನು ದಾಖಲಿಸಿ ಇಟ್ಟುಕೊಳ್ಳಬಹುದು.
ಪ್ರಮುಖ ದಿನಾಂಕಗಳು :-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 27.03.2023
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 26.04.2023
● ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ – 26.04.2023