ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಮಹಿಳೆಯರಿಗೆ ಉಚಿತ ಪ್ರಯಾಣ. ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಪಾಸ್ ಪಡೆಯಿರಿ.

 

ಮಹಿಳೆಯರ ಉಚಿತ ಬಸ್ ಪಾಸ್ ವ್ಯವಸ್ಥೆಗಾಗಿ ಅರ್ಜಿ ಆಹ್ವಾನ; ಸರ್ಕಾರದ ಹೊಸ ಯೋಜನೆಯ ಲಾಭ ಪಡೆಯಲು ಇಂದೇ ಅರ್ಜಿ ಸಲ್ಲಿಸಿ..! 2023 24 ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡನೆ ಮಾಡುವಾಗ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಹೊಸ ಘೋಷಣೆ ಒಂದನ್ನು ಮಾಡಿರುತ್ತಾರೆ. ಆ ಸಂದರ್ಭದಲ್ಲಿ ಘೋಷಣೆಯಾದ ಯೋಜನೆಯು ರಾಜ್ಯದ ಮಹಿಳೆಯರ ಹಿತಾಸಕ್ತಿಯ ದೃಷ್ಟಿಯಿಂದಲೇ ಮಾಡಿರುವುದು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವತಿಯಿಂದ ಈ ಯೋಜನೆಯ ಜಾರಿಗೆ ಬರಲಿದ್ದು, ದುಡಿಯುವ ಮಹಿಳೆಗೆ ಉಚಿತ ಬಸ್ ಪಾಸ್ ನೀಡುವ ಮುಖಾಂತರ ಹಣಕಾಸಿನ ವಿಚಾರದಲ್ಲಿ ನೆರವಾಗಲಿದೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ತಮ್ಮ ಊರಿನಿಂದ ಉದ್ಯೋಗವನ್ನು ಆಧರಿಸಿ ಪರ ಊರಿಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಮಹಿಳೆಯರ ಅಭಿವೃದ್ಧಿ ಕೇಂದ್ರೀಕೃತವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.

ಅವುಗಳಲ್ಲಿ ಕೆಲವು ಯೋಜನೆಯು ಪ್ರಾಯೋಗಿಕ ಹಂತದಲ್ಲಿದ್ದು ಇನ್ನೂ ಕೆಲವು ಅದಕ್ಕೂ ಮೀರಿ ರಾಜ್ಯದ ಅನೇಕ ಮಹಿಳೆಯರ ಪಾಲಿಗೆ ಹೆಗಲಾಗಿ ಕಾರ್ಯನಿರ್ವಹಿಸುತ್ತಿವೆ. ಪುರುಷ ಸಮಾನವಾಗಿ ಮಹಿಳೆಯರನ್ನು ಆರ್ಥಿಕ ವಿಚಾರದಲ್ಲಿ ಸ್ವಾವಲಂಬಿಗಳಾಗಿ ಮಾಡಲು, ಸಮಾಜದ ಸಾರ್ವಜನಿಕ ರಂಗಗಳಲ್ಲಿ ಮಹಿಳೆಯರು ಧೈರ್ಯವಾಗಿ ಮುನ್ನುಗ್ಗಲು ನೆರವಾಗುವಂತೆ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ವಿದ್ಯಾರ್ಥಿನಿಯರಿಗೆ ಹಾಗೂ ಗರ್ಭಿಣಿಯರಿಗೆ ಪೋಷಕಾಂಶ ಯುಕ್ತ ಆಹಾರ ಪದಾರ್ಥಗಳ ಒದಗಿಸುವುದಕ್ಕಾಗಿ, ಆರೋಗ್ಯದ ಹಿತದೃಷ್ಟಿಯಿಂದ ಔಷದೋಪಚಾರಗಳ ನೀಡುವುದಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಮಹಿಳೆಯರು ಮುಖ್ಯ ವಾಹಿನಿಗೆ ಬರುವಂತೆ ಪ್ರೇರೇಪಿಸುವ ಅನೇಕ ಯೋಜನೆಗಳನ್ನು ಹೊತ್ತು ತರುತ್ತಲೇ ಇದೆ.

ಮಹಿಳೆಯರನ್ನು ಪ್ರಗತಿಪಥದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಲು ಮತ್ತು ಅವರ ರಕ್ಷಣೆಗೆ ಅನುಗುಣವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ನೆರವು ನೀಡಲಿದೆ. ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗಾಗಿ ಅಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೆಲಸವನ್ನು ಅರಸಿಕೊಂಡು ಹೋಗುವ ಮಹಿಳೆಯರಿಗೆ ಸಹಾಯವಾಗುವಂತ ಯೋಜನೆಯನ್ನು ಈ ಬಾರಿಯ ಬಜೆಟ್ ನಲ್ಲಿ ಮಂಡನೆ ಮಾಡಿದೆ.

ಮಹಿಳೆಯರು ಕಂಪನಿಗಳಲ್ಲಿ, ಕಾರ್ಖಾನೆಗಳಲ್ಲಿ ಅಥವಾ ಮನೆ ಕೆಲಸ ಮಾಡಲು ಬೇರೆ ಊರಿಗೆ ತೆರಳುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಮತ್ತು ಅವಶ್ಯಕತೆ ಇರುವಷ್ಟು ಸಂಬಳವನ್ನು ಪಡೆಯಲು ವಿವಿಧ ಭಾಗಗಳಿಗೆ ಚಲಿಸುವಂತೆ ಆಗಿದೆ. ರಾಜ್ಯದ 30 ಲಕ್ಷ ಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳೆಯರ ಸಂಚಾರ ವ್ಯವಸ್ಥೆಯು ಸುರಕ್ಷಿತವಾಗಿರಲಿ ಮತ್ತು ಹೊರೆಯಾಗದಿರಲಿ ಎಂಬ ಕಾರಣಕ್ಕಾಗಿ, ಹೊಸ ಯೋಜನೆಯ ಮೂಲಕ ಇಂತಹ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ನೀಡುವ ಗುರಿಯನ್ನು ಸರ್ಕಾರವು ಹೊಂದಿದೆ.

ಇದರಿಂದಾಗಿ ಸಾರಿಗೆಗಾಗಿ ನೀಡುತ್ತಿದ್ದ ವೆಚ್ಚವನ್ನು ಮಹಿಳೆಯರು ಉಳಿತಾಯ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಮನೆಯ ಅವಶ್ಯಕತೆಗಳ ಖರೀದಿಯಲ್ಲಿ ಅಥವಾ ಇನ್ನಾವುದೇ ಅಗತ್ಯತೆಯ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ. ಲೇಬರ್ ಕಾರ್ಡನ್ನು ಹೊಂದಿದವರಿಗೆ ಈ ಹಿಂದೆಯೇ 45 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಲು ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಇದರ ಮಾದರಿಯಲ್ಲಿಯೇ ಇದೀಗ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ನೀಡಲು ಮುಂದಾಗಿದೆ.

2023ರ ಏಪ್ರಿಲ್ ಒಂದರ ನಂತರ ಅರ್ಜಿಯನ್ನು ಸಲ್ಲಿಸಲು ಅಧಿಕೃತವಾಗಿ ಘೋಷಣೆಯನ್ನು ಮಾಡಲಿದೆ. ಆ ಮೂಲಕವಾಗಿ ಸಂಘಟಿತ ವಲಯಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಅನೇಕ ಮಹಿಳೆಯರಿಗೆ ಸಹಾಯವಾಗಲಿದೆ. ಉಪಯುಕ್ತ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಂಡು, ಸರ್ಕಾರದ ಈ ಯೋಜನೆಯ ನೆರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಡೆಯುವಲ್ಲಿ ಸಹಕರಿಸಿ.

Leave a Comment