ನಾವು ಅಡುಗೆ ಮಾಡುವಾಗ ಸಾಮಾನ್ಯವಾಗಿ ಪಾತ್ರೆಗಳು ಸೀದು ತಳ ಹಿಡಿಯುವುದು ಕಾಮನ್. ತಳ ಕಪ್ಪಾಗಿರುತ್ತದೆ ಅಥವಾ ಸೀದು ಹೋಗಿರುತ್ತದೆ, ಜಿಡ್ಡಿನಾಂಶ ಕುಕ್ಕರ್ ಒಳಗೆ ಹಾಗೂ ಹೊರಗೆ ಅಂಟಿಕೊಂಡು ಜಿಡ್ಡು ಜಿಡ್ಡಾಗಿರುತ್ತದೆ. ಪಾತ್ರೆ ಹಳೆಯದಾಗುತ್ತಾ ಹೋದಂತೆ ಪಾತ್ರೆ ಲುಕ್ ಚೇಂಜ್ ಆಗಿ ಹೋಗಿರುತ್ತದೆ.
ಇದೇ ರೀತಿ ನಿಮ್ಮ ಮನೆಯ ಪಾತ್ರೆಗಳು ಕುಕ್ಕರ್ ಗಳು ಆಗಿದ್ದರೆ ಅದನ್ನು ತಿಕ್ಕಿ ತೊಳೆಯುವುದರಲ್ಲಿ ನಿಮಗೆ ಬಹಳ ಸುಸ್ತಾಗಿರುತ್ತದೆ. ಯಾವುದೇ ಸಲ್ಯೂಷನ್ ಹಾಕಿದರೂ ರಿಸಲ್ಟ್ ಸಿಕ್ಕಿರುವುದಿಲ್ಲ. ಈ ರೀತಿ ತೊಂದರೆ ಆಗಿದ್ದರೆ ಇನ್ನು ಮುಂದೆ ಇದಕ್ಕೆಲ್ಲ ಟೆನ್ಶನ್ ಮಾಡಿಕೊಳ್ಳಬೇಡಿ. ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿರುವ ಸರಳವಾದ ಟ್ರಿಕ್ ಫಾಲೋ ಮಾಡಿ ನಿಮ್ಮ ಕುಕ್ಕರ್ 10 ವರ್ಷ ಹಳೆಯದಾಗಿದ್ದರು ಮತ್ತೆ ಫಳಫಳ ಎಂದು ಹೊಳೆಯುತ್ತದೆ.
ಇದಕ್ಕಾಗಿ ಯಾವುದೇ ದುಬಾರಿ ಕೆಮಿಕಲ್ ತಂದು ಖರ್ಚು ಮಾಡುವ ಅಗತ್ಯ ಇಲ್ಲ. ನಿಮ್ಮ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿಕೊಂಡು ಈ ರೀತಿ ನಿಮ್ಮ ಮನೆಯ ಹಳೆಯ ಪಾತ್ರೆಗಳಿಗೆ ಹೊಸ ಲುಕ್ ಕೊಡಬಹುದು. ಮೊದಲಿಗೆ ನೀವು ಯಾವ ಪಾತ್ರೆ ಕ್ಲೀನ್ ಮಾಡಬೇಕು ಅಥವಾ ಯಾವ ಕುಕ್ಕರ್ ಕ್ಲೀನ್ ಮಾಡಬೇಕು ಅದರಲ್ಲಿ ಒಂದೆರಡು ಲೋಟ ನೀರು ಇಟ್ಟು ಕುದಿಯಲು ಸಣ್ಣ ಫ್ಲೇಮ್ ಉರಿಯಲ್ಲಿ ಕಾಯಲು ಇಡಿ.
ಈ ಸುದ್ದಿ ಓದಿ:- ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ
ಇದಕ್ಕೆ ಒಂದು ಚಮಚ ವಾಷಿಂಗ್ ಪೌಡರ್, ಒಂದು ಚಮಚ ಕಲ್ಲುಪ್ಪು, ಅರ್ಧ ಚಮಚ ಅಡುಗೆ ಸೋಡಾ ಹಾಗೂ ಒಂದು ಹೋಳು ನಿಂಬೆ ರಸ ಹಿಂಡಿ ಮತ್ತು ನಿಂಬೆ ಸಿಪ್ಪೆಯನ್ನು ಬಿಸಾಕದೆ ಹಾಕಿ ಇಟ್ಟುಕೊಳ್ಳಿ, ಮುಂದಿನ ಹಂತದಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಮೂರು ನಿಮಿಷಗಳ ಕಾಲ ಹಾಗೆ ಬಿಟ್ಟರೆ ಇದು ಕುದಿಯಲು ಆರಂಭಿಸುತ್ತದೆ.
ಈಗ ಒಂದು ಅಗಲವಾದ ಪಾತ್ರೆಗೆ ಈ ಕುದಿ ಬಂದಿರುವ ಸಲ್ಯೂಷನ್ ಹಾಕಿ, ಈ ಪಾತ್ರೆಯೊಳಗಡೆಗೆ ಕಲೆ ತೆಗೆಯಬೇಕಾದ ಪಾತ್ರೆ ಅಥವಾ ಕುಕ್ಕರ್ ಹಾಕಿ ಅದನ್ನು ಸ್ಟವ್ ಮೇಲೆ ಇಡಿ. ಮತ್ತೆ ಈ ಕುಕ್ಕರ್ ಒಳಗೆ ನೀರು ಹಾಕಿ, ಮತ್ತೆ ಮೊದಲಿನ ರೀತಿ ನೀರು ವಾಷಿಂಗ್ ಪೌಡರ್ ಕಲ್ಲುಪ್ಪು ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ ಮತ್ತೆರಡು ನಿಮಿಷ ಬಿಸಿ ಮಾಡಿ ಆಫ್ ಮಾಡಿ.
ಅಗಲವಾದ ಪಾತ್ರೆಯಲ್ಲಿ ಇದ್ದ ಸೊಲ್ಯೂಷನ್ ಕುಕ್ಕರ್ ಮೇಲೆ ಸ್ಪ್ರೆಡ್ ಮಾಡಿ ನಿಂಬೆ ಸಿಪ್ಪೆಯಿಂದ ಕುಕ್ಕರ್ ಒಳಗೆ ಹೊರಗೆ ಚೆನ್ನಾಗಿ ತಿಕ್ಕಿ ನೀರಿನಿಂದ ತೊಳೆಯಿರಿ. ಇನ್ನು ಕಲೆ ಹಾಗೆ ಉಳಿದಿದ್ದರೆ ಸ್ಟೀಲ್ ಸ್ಕ್ರಬ್ಬರ್ ತೆಗೆದುಕೊಂಡು ವಿಮ್ ಜೆಲ್ ನ್ನು ಆ ಪಾತ್ರೆಯಲ್ಲಿದ್ದ ಸ್ವಲ್ಪ ಸಲ್ಯೂಷನ್ ಗೆ ಮಿಕ್ಸ್ ಮಾಡಿ ಅದನ್ನು ಕೂಡ ಸ್ಪ್ರೆಡ್ ಮಾಡಿ ಇನ್ನೊಮ್ಮೆ ತಿಕ್ಕಿ ತೊಳೆಯಿರಿ.
ಈ ಸುದ್ದಿ ಓದಿ:- ಹೀಗೆ ಮಾಡಿ ಮಕ್ಕಳು ನಿಮ್ಮ ಮಾತು ಕೇಳುತ್ತಾರೆ, ಮಕ್ಕಳು ಮಾತು ಕೇಳುವಂತೆ ಬೆಳೆಸುವ ಸರಳ ತಂತ್ರ.!
ಈ ರೀತಿ ಮಾಡಿ ನೋಡಿ ಐದು ನಿಮಿಷಗಳಲ್ಲಿ ಸುಲಭವಾಗಿ ಎಷ್ಟೇ ಹಳೇ ಜಿಡ್ಡಿನಾಂಶ ಇದ್ದರು, ಕಪ್ಪಾಗಿರುವುದು ಇದ್ದರು ಕಲೆ ಇದ್ದರೂ ಹೊರಟು ಹೋಗುತ್ತದೆ. ನಿಮ್ಮ ಪಾತ್ರೆ ಮತ್ತೆ ಹೊಸದರ ರೀತಿ ಹೊಳೆಯುತ್ತದೆ. ಯಾವುದೇ ಪಾತ್ರೆ ಬೇಕಾದರೂ ಕುಕ್ಕರ್ ಬೇಕಿದ್ದರೂ ಈ ವಿಧಾನದಲ್ಲಿ ಕ್ಲೀನ್ ಮಾಡಬಹುದು ಒಮ್ಮೆ ಟ್ರೈ ಮಾಡಿ ನೋಡಿ ಇದು ಯೂಸ್ಫುಲ್ ಅನಿಸಿದ ಮೇಲೆ ನಿಮ್ಮ ಸ್ನೇಹಿತೆಯರಿಗೂ ಕೂಡ ತಿಳಿಸಿ.